ಒನ್‌ಪ್ಲಸ್ 6 ಹೇಗಿದೆ ಎಂಬ ಕುತೂಹಲ ಇದ್ಯಾ..? ಇಲ್ಲಿದೆ ನೋಡಿ ವಿಡಿಯೋ..!

|

ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿಗಳಲ್ಲಿ ಒನ್ ಪ್ಲಸ್ ಪ್ರಮುಖ ಸ್ಥಾನವನ್ನು ಅಲಂಕರಿಸಿದೆ. ಈಗಾಗಲೇ ಒನ್‌ಪ್ಲಸ್ ಕಂಪನಿಯೂ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನವ ಮಾಹಿತಿಯೂ ಲಭ್ಯವಾಗಿದ್ದು, ನೂತನ ಸ್ಮಾರ್ಟ್‌ಫೋನ್ ಕುರಿತು ಕಂಪನಿ ಬಿಡುಗಡೆ ಮಾಡಿರುವ ವಿಡಿಯೋಗಳು ಒನ್‌ಪ್ಲಸ್ 6 ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತಿವೆ.

ಒನ್‌ಪ್ಲಸ್ 6 ಹೇಗಿದೆ ಎಂಬ ಕುತೂಹಲ ಇದ್ಯಾ..? ಇಲ್ಲಿದೆ ನೋಡಿ ವಿಡಿಯೋ..!

ಟಾಪ್ ಎಂಡ್ ವಿಶೇಷತೆಗಳನ್ನು ಒಳಗೊಂಡಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್, ಮಾರುಕಟ್ಟೆಯಲ್ಲಿರುವ ಎಲ್ಲಾ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೂ ಸ್ಪರ್ಧೆಯನ್ನು ನೀಡಲಿದೆ. ವೇಗದ ಕಾರ್ಯಚರಣೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎನ್ನುವ ಮಾತುಗಳು ಮಾರುಕಟ್ಟೆ ವಿಶ್ಲೇಷಕರಿಂದ ಕೇಳಿ ಬಂದಿದ್ದು, ಕಂಪನಿಯೂ ಬಿಡುಗಡೆ ಮಾಡಿರುವ ವಿಡಿಯೋಗಳು ಅದನ್ನು ಫುಷ್ಠಿಕರಿಸುತ್ತಿವೆ.

ಅತ್ಯುತ್ತಮ ಡಿಸೈನ್:

ಈಗಾಗಲೇ ಟ್ವಿಟರ್ ನಲ್ಲಿ ಒನ್‌ಪ್ಲಸ್ 6 ಕುರಿತ ಸಣ್ಣ-ಸಣ್ಣ ವಿಡಿಯೋಗಳನ್ನು ಹಾಕಿದ್ದು, ಇದೆ ಮಾದರಿಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ವಿನ್ಯಾಸದ ಬಗ್ಗೆಯೂ ವಿಡಿಯೋ ಕಾಣಿಸಿಕೊಂಡಿದೆ. ಬಳಕೆದಾರರಿಗೆ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್ ಅನ್ನು ಒನ್‌ಪ್ಲಸ್ ಕೈಗೆ ನೀಡುತ್ತಿದೆ. ತುಂಬ ತೆಳುವಾಗಿದ್ದು, 3.5mm ಇಯರ್ ಫೋನ್ ಜಾಕ್ ಅನ್ನು ಈ ಸ್ಮಾರ್ಟ್ ಫೋನ್ ಅನ್ನು ಕಾಣಬಹುದಾಗಿದ್ದು, ಕೈನಲ್ಲಿ ಹಿಡಿದುಕೊಳ್ಳುವ ಅನುಭವನ್ನು ಉತ್ತಮವಾಗಿದೆ ಎಂಬುದು ವಿಡಿಯೋದಿಂದ ತಿಳಿಯಲಿದೆ.

ಕೃತಕ ಬುದ್ದಿಮತ್ತೆ:

ಕೃತಕ ಬುದ್ದಿಮತ್ತೆಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತಿದ್ದು, ಬಳಕೆದಾರರಿಗೆ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯವನ್ನು ಮಾಡಲಿದೆ. ಇದು ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ನಡುವೆ ಸರಿಯಾದ ಸಂಪರ್ಕವನ್ನು ಸಾಧಿಸಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ.

ಹೊಸ ಆಯ್ಕೆಗಳು:

ಇದುವರೆಗೂ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರದಂತಹ ಗೆಸ್ಟ್ಚರ್ ಗಳನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ನೀಡುವ ಸಾಧ್ಯತೆಯಿದ್ದು, ಒನ್‌ಪ್ಲಸ್ ಬಿಡುಗಡೆ ಮಾಡಿದರುವ ಟ್ವಿಟ್ಟರ್ ವಿಡಿಯೋದಲ್ಲಿ ಇದನ್ನು ಸಹ ಕಾಣಬಹುದಾಗಿದೆ. ಇದು ಸ್ಮಾರ್ಟ್‌ಫೋನ್ ಬಳಕೆಯ ವಿಧಾನವನ್ನು ಬದಲಾಯಿಸಲಿದೆ.

ಹೆಚ್ಚಿನ ಪ್ರಮಾಣದ ಡಿಸ್‌ಪ್ಲೇ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಹೊಸ ಮಾದರಿಯ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಿಗಿತಂಲೂ ಹೆಚ್ಚು ಅಗಲವಾದ ಡಿಸ್‌ಪ್ಲೇಯೂ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದು ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತೆ ಇದೆ. ಐಫೋನ್ X ಮಾದರಿಯ ನೋಚ್ ಅನ್ನು ಫೋನಿನಲ್ಲಿ ಕಾಣಬಹುದಾಗಿದೆ.

ವಾಟರ್ ರೆಜಿಸ್ಟೆಂಟ್:

ಇದಲ್ಲದೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಹೊಸ ಆಯ್ಕೆಗಳನ್ನು ನೀಡಿರುವ ಒನ್‌ಪ್ಲಸ್, ಮೊದಲ ಬಾರಿಗೆ ವಾಟರ್ ರೆಜಿಸ್ಟೆಂಟ್ ತಂತ್ರಜ್ಞಾನವನ್ನು ಅಳವಡಿಸಿದ್ದು, ಬಳಕೆದಾರರ ಸ್ಮಾರ್ಟ್‌ಫೋನ್‌ ಮಿಸ್ ಆಗಿ ನೀರಿಗೆ ಬಿದ್ದರು ಯಾವುದೇ ತೊಂದರೆಯಾಗದ ರೀತಿಯಲ್ಲಿ ವಿನ್ಯಾಸವನ್ನು ಮಾಡಿದೆ.

ಅತ್ಯುತ್ತಮ ವೇಗ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಹಾರ್ಡ್‌ವೇರ್ ಅನ್ನು ಕಾಣಬಹುದಾಗಿದ್ದು, ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ. ಅಲ್ಲದೇ 6GB/8GB RAM ನೊಂದಿಗೆ ದೊರೆಯಲಿದ್ದು, ಜೊತೆಗೆ ಸ್ನಾಪ್‌ಡ್ರಾಗನ್ 845 ಚಿಪ್‌ಸೆಟ್‌ನೊಂದಿಗೆ ಕಾಣಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅತ್ಯತ್ತಮ ವೇಗವನ್ನು ಹೊಂದಿದರಲಿದೆ ಎನ್ನಲಾಗಿದೆ.

ಉತ್ತಮವಾದ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾವನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಕಾಣಬಹುದಾಗಿದ್ದು, ಇದು ಬಳಕೆದಾರರಿಗೆ ಉತ್ತಮ ಚಿತ್ರಗಳನ್ನು ಕ್ಲಿಕಿಸಲು ಸಹಾಯವನ್ನು ಮಾಡಲಿದೆ. ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಉತ್ತಮವಾದ ಕ್ಯಾಮೆರಾವನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಕಾಣಬಹುದಾಗಿದೆ.

ಅವೆಂಜರ್ ಥೀಮ್:

ಸದ್ಯ ತೆರೆಯ ಮೇಲೆ ಸದ್ದು ಮಾಡುತ್ತಿರುವ ಅವೆಂಜರ್ ಸಿನಿಮಾ ಥೀಮ್‌ ನಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದ್ದು, ಈ ಹಿಂದೆ ಸ್ಮಾರ್ಟ್‌ಫೋನ್‌ಗಳು ಇದೇ ಮಾದರಿಯಲ್ಲಿ ಕಾಣಿಸಿಕೊಂಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಶೀಘ್ರವೇ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ.

ಓದಿರಿ: ಏಪ್ರಿಲ್ 24ಕ್ಕೆ ಮಾರುಕಟ್ಟೆಗೆ 40MP ಟ್ರಿಪಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌..! ಬೆಲೆ ಎಷ್ಟು..?

Best Mobiles in India

English summary
OnePlus 6 new teaser video gets us pumped for their new flagship smartphone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X