ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅಧಿಕೃತ ಟೀಸರ್ ಬಿಡುಗಡೆ...!

|

ಒನ್‌ಪ್ಲಸ್ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಸೆಳೆದುಕೊಂಡಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ ಬಿಡುಗಡೆ ಮಾಡಲಿದೆ ಎನ್ನುವ ಸ್ಮಾರ್ಟ್‌ಫೋನ್ ಕುರಿತು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳು ಹೊಂದಿರುತ್ತಾರೆ. ಇದೇ ಮಾದರಿಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಕುರಿತು ದಿನಕ್ಕೊಂದು ರೂಮರ್ ಗಳು ಬರುತ್ತಿರುವುದು ಇದಕ್ಕೆ ಸಾಕ್ಷಿ. ಮಾರುಕಟ್ಟೆಯಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಲಭ್ಯವಿಲ್ಲದ ಹಿನ್ನಲೆಯಲ್ಲಿ ಒನ್‌ಪ್ಲಸ್ 6 ಶೀಘ್ರವೇ ಕಾಣಿಸಿಕೊಳ್ಳಲಿದೆ ಎಂಬ ವಿಷಯ ಸಾಕಷ್ಟು ಪ್ರಚಲಿತದಲ್ಲಿದೆ.

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅಧಿಕೃತ ಟೀಸರ್ ಬಿಡುಗಡೆ...!

ಅಭಿಮಾನಿಗಳ ಕಾಯುವಿಕೆಯನ್ನು ತಣಿಸುವ ಸಲುವಾಗಿ ಒನ್‌ಪ್ಲಸ್ ತನ್ನ ಮುಂದಿನ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 6 ಕುರಿತ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಅಧಿಕೃತ ಟೀಸರ್ ನಲ್ಲಿ ಒನ್‌ಪ್ಲಸ್ 6 ಶೀಘ್ರವೇ ಲಾಂಚ್ ಆಗಲಿದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದು, ವೇಗದ ಫೋನ್ ಎಂಬುದನ್ನು ನೀಡಿದ್ದಾರೆ. 'ದಿ ಸ್ಪೀಡ್ ಯೂ ನೀಡ್' ಎನ್ನುವ ಟ್ಯಾಗ್‌ ನೊಂದಿಗೆ ಟೀಸರ್ ಸದ್ದು ಮಾಡುತ್ತಿದೆ.

ಓದಿರಿ: ಲೀಕ್ ಮಾಹಿತಿಯ ಮೂಲಕವೇ ಅಬ್ಬರಿಸಿದ ನೋಕಿಯಾ 9: 41 MP ತ್ರಿಪಲ್ ಕ್ಯಾಮೆರಾ, 8GB RAM..!

ಈ ಟೀಸರ್ ಒನ್‌ಪ್ಲಸ್ 6 ಬರುವಿಕೆಯನ್ನು ಖಚಿತಪಡಿಸಲಿದ್ದು, ಶೀಘ್ರವೇ ಲಾಂಚ್ ಆಗುವ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಅಲ್ಲದೇ ಒನ್‌ಪ್ಲಸ್ 6 ರೆಡಿಯಾಗಿದೆ ಎನ್ನುವ ಮಾಹಿತಿಯನ್ನು ಅಧಿಕೃತವಾಗಿ ಟ್ವಿಟರ್ ನಲ್ಲಿ ಘೋಷಿಸಿದ್ದು, ಅಭಿಮಾನಿಗಳನ್ನು ಹೊಸ ಸ್ಮಾರ್ಟ್‌ಫೋನ್ ಆಗಮನಕ್ಕೆ ಸಿದ್ಧಪಡಿಸಲು ಮುಂದಾಗಿದೆ.

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ 6.28 ಇಂಚಿನ FHD+ ಅಮೊಲೈಡ್ ಡಿಸ್‌ಪ್ಲೇಯನ್ನು ಅಳವಡಿಲಾಗಿದೆ. ಇದು FHD+ ಗುಣಮಟ್ಟ 19:9 ಅನುಪಾತದ ಡಿಸ್‌ಪ್ಲೇ ಆಗಿರಲಿದೆ. ಒನ್‌ಪ್ಲಸ್ 5T ಮಾದರಿಯಲ್ಲಿ ಹಿಂಬದಿಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿಯೂ ಕಾಣಬಹುದಾಗಿದೆ.

ಇದರೊಂದಿಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. 16MP + 20MP ಲೈನ್ಸ್ ಗಳನ್ನು ಅಳವಡಿಸಲಾಗಿದ್ದು, ಜೊತೆಗೆ ಡ್ಯುಯಲ್ LED ಫ್ಲಾಷ್ ಲೈಟ್ ಅನ್ನು ಸಹ ಕಾಣುವ ಸಾಧ್ಯತೆ ಇದೆ. 3450mAh ಬ್ಯಾಟರಿಯನ್ನು ನೀಡುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ ವೇಗದ ಚಾರ್ಜಿಂಗ್‌ಗಾಗಿ ಡ್ಯಾಷ್ ಚಾರ್ಜರ್ ಅನ್ನು ನೀಡಲಿದೆ.

ಇದಲ್ಲದೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಆಕ್ಟಾಕೋರ್ ಕ್ವಾಲ್ಕಮ್ ಸ್ಪಾಪ್‌ಡ್ರಾಗನ್ 845 ಪ್ರೋಸೆಸರ್ ಇರುವ ಸಾಧ್ಯತೆ ಇದ್ದು, 6GB RAM ಮತ್ತು 128GB ಇಂಟೆರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಇದರೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಒನ್‌ಪ್ಲಸ್ ನೀಡಲಿದೆ. ಇದು ಕ್ಯಾಮೆರಾಗಾಗಿ ಮತ್ತು ಪ್ರೋಸೆಸರ್‌ಗಾಗಿ ಸ್ಮಾರ್ಟ್‌ಫೋನಿನಲ್ಲಿ ಬಳಕೆಯಾಗಲಿದೆ.

Best Mobiles in India

English summary
OnePlus 6 official teaser. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X