5G ಸೇರಿದಂತೆ ಈ ಸ್ಪೆಷಲ್ ಫೀಚರ್ಸ್ ಹೊತ್ತು ಬರುತ್ತಿದೆ 'ಒನ್‌ಪ್ಲಸ್ 7'!

|

ಈಗಾಗಲೇ ತನ್ನ ವಿಶಿಷ್ಟ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಕಂಪನಿಯು ಇದೀಗ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ಕೊಡುವ ಮೂನ್ಸುಚನೆ ಹೊರಹಾಕಿದೆ. ಹೌದು, ಈ ವರ್ಷ 2019 ರಲ್ಲಿ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ವಿನೂತನ ಫೀಚರ್ಸ್‌ಗಳನ್ನು ಅಳವಡಿಸುವುದಾಗಿ ಕಂಪನಿಯು ಘೋಷಿಸಿದೆ.

5G ಸೇರಿದಂತೆ ಈ ಸ್ಪೆಷಲ್ ಫೀಚರ್ಸ್ ಹೊತ್ತು ಬರುತ್ತಿದೆ 'ಒನ್‌ಪ್ಲಸ್ 7'!

ಇತ್ತೀಚಿಗೆ ಕಂಪನಿಯ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ತನ್ನ ವಿಶೇಷ ಫೀಚರ್ಸ್‌ಗಳಿಂದ ಮತ್ತು ಅತ್ಯುತ್ತಮ ಕ್ಯಾಮೆರಾ ಸಾಮರ್ಥ್ಯದಿಂದ ಗ್ರಾಹಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದು, ಅದೇ ಮಾದರಿಯಲ್ಲಿ ಕಂಪನಿ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲಿದೆ. ಬರುವ ಹೊಸ ಸ್ಮಾರ್ಟ್‌ಫೋನ್‌ ನಲ್ಲಿ ಅತೀ ನೂತನ ಫೀಚರ್ಸ್‌ಗಳನ್ನು ಗ್ರಾಹಕರು ನಿರೀಕ್ಷಿಸಬಹುದಾಗಿದೆ ಎಂದು ಕಂಪನಿ ಹೇಳಿದೆ.

5G ಸೇರಿದಂತೆ ಈ ಸ್ಪೆಷಲ್ ಫೀಚರ್ಸ್ ಹೊತ್ತು ಬರುತ್ತಿದೆ 'ಒನ್‌ಪ್ಲಸ್ 7'!

ಒನ್‌ಪ್ಲಸ್ ಕಂಪನಿಯ ಮುಂಬರಲಿರುವ ಪ್ರಮುಖ ಹೊಸ ಸ್ಮಾರ್ಟ್‌ಫೋನ್‌ನಗಳು ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳಲ್ಲಿರುವ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಕ್ಯಾಮೆರಾ ಸಹ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿರಲಿದೆ. ಇದರೊಂದಿಗೆ ಒನ್‌ಪ್ಲಸ್ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸಲಿರುವ ಕೆಲವು ಪ್ರಮುಖ ಫೀಚರ್ಸ್‌ಗಳ ಮಾಹಿತಿ ತಿಳಿಯಲು ಮುಂದೆ ಓದಿರಿ.

ಹೊಸ ಸ್ಕ್ರೀನ್

ಹೊಸ ಸ್ಕ್ರೀನ್

ಕಂಪನಿ ಈಗಾಗಲೇ ತನ್ನ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನಲ್ಲಿ ನಾಚ್ ಡಿಸ್‌ಪ್ಲೇಯನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಹೊಸ ಒನ್‌ಪ್ಲಸ್ 7' ಸ್ಮಾರ್ಟ್‌ಫೋನಿನಲ್ಲಿ ವಾಟರ್ ಡ್ರಾಪ್ ನಾಚ್ ಹೊಂದಿರುವ ಸ್ಕ್ರೀನ್ ಪರಿಚಯಿಸಲಿದೆ. ಇದು ಸ್ಮಾರ್ಟ್‌ಪೋನ್ ಡಿಸ್‌ಪ್ಲೇಗೆ ಅಂದ ತಂದುಕೊಡಲಿದ್ದು, ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಲಾಗುತ್ತಿದೆ.

ಸೆಲ್ಫಿ ಕ್ಯಾಮೆರಾ ಡಿಸೈನ್

ಸೆಲ್ಫಿ ಕ್ಯಾಮೆರಾ ಡಿಸೈನ್

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಮೂಲಕ ಕಂಪನಿ ಮೊದಲ ಬಾರಿಗೆ 'ಪೊಪ್ ಅಪ್ ಸೆಲ್ಫಿ ಕ್ಯಾಮೆರಾ' ವನ್ನು ಪರಿಚಯಿಸುತ್ತಿದ್ದು, ಪೊಪ್ ಅಪ್ ಕ್ಯಾಮೆರಾದ ವಿಶೇಷವೆಂದರೇ, ಸೆಲ್ಫಿ ಕ್ಯಾಮೆರಾ ಡಿಸ್‌ಪ್ಲೇ ಮರೆಯಲ್ಲಿರುತ್ತದೆ ಮತ್ತು ಪೋಟೋ ಸೆರೆಹಿಡಿಯುವ ಸಮಯದಲ್ಲಿ ಮಾತ್ರ ಕ್ಯಾಮೆರಾ ಕಾಣಿಸಿಕೊಳ್ಳುತ್ತದೆ. ಪೊಪ್ ಅಪ್ ಸೆಲ್ಫಿ ಕ್ಯಾಮೆರಾಗಳನ್ನು ಈಗಾಗಲೇ ವೀವೊ ಮತ್ತು ಹಾನರ್ ಕಂಪನಿಗಳು ಸಹ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸುವುದಾಗಿ ಹೇಳಿವೆ.

ಎಚ್‌ಡಿಆರ್ ಸ್ಟ್ರೀಮಿಂಗ್

ಎಚ್‌ಡಿಆರ್ ಸ್ಟ್ರೀಮಿಂಗ್

ಗ್ರಾಹಕರ ನಿರೀಕ್ಷೆಯಂತೆ ಒನ್‌ಪ್ಲಸ್ ಕಂಪನಿಯು ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಎಚ್‌ಡಿಆರ್ ಸ್ಟ್ರೀಮಿಂಗ್ ಪರಿಚಯಿಸಲಿದ್ದು, ಇದು ಸ್ಮಾರ್ಟ್‌ಫೋನ್‌ನಲ್ಲಿ ಹೈ ಕ್ವಾಲಿಟಿಯ ಅತ್ಯುತ್ತಮ ಸ್ಟ್ರೀಮಿಂಗ್ ಅನುಭವ ಪಡೆಯಬಹುದು. ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಎಚ್‌ಆರ್‌ಡಿ ಸ್ಟ್ರೀಮಿಂಗ್ ಬೆಂಬಲ ನೀಡಲಿವೆ ಎಂದು ಹೇಳಲಾಗುತ್ತಿದೆ.

ವಾರ್ಪ ಚಾರ್ಜ್ 30

ವಾರ್ಪ ಚಾರ್ಜ್ 30

ಸ್ಮಾರ್ಟ್‌ಫೋನ್‌ಗಳು ಬೇಗನ ಚಾರ್ಜ್ ಆಗಬೇಕು ಎಂದು ಬಹುತೇಕ ಪ್ರಮುಖ ಮೊಬೈಲ್ ಕಂಪನಿಗಳು ಕ್ವಿಕ್ ಚಾರ್ಜರ್ ಪರಿಚಯಿಸುತ್ತವೆ. ಆದರೆ ಒನ್‌ಪ್ಲಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅತೀ ವೇಗದ ಚಾರ್ಜರ್ ಅನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. 'ವಾರ್ಪ್ ಚಾರ್ಜ್ 30' ವೇಗದ ಚಾರ್ಜರ್ ಅನ್ನು ತನ್ನ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ನೀಡಲಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ ಕಂಪನಿಯು ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಬಳಸುತ್ತಿದ್ದು, ಇದೀಗ ಹೊಸ ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ಸೋನಿಯ ಉನ್ನತ IMX586 ಸೆನ್ಸಾರ್ ಅಳವಡಿಸಲಿದೆ ಎಂದು ತಿಳಿದುಬಂದಿದೆ. 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಕೆಲಸಮಾಡಲಿದೆ. ಸೋನಿಯ IMX586 ಸೆನ್ಸಾರ್ ಅನ್ನು ಹಾನರ್ ವೀವ್ 20 ಸಹ ಬಳಸಿದೆ.

 5G

5G

ಒನ್‌ಪ್ಲಸ್ ಕಂಪನಿ ಈ ಮೊದಲೆ ಹೇಳಿರುವಂತೆ ಈ ವರ್ಷ ಅಂದರೇ 2019 ರಲ್ಲಿ ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳು 5G ಸೌಲಭ್ಯ ಬೆಂಬಲಿಸಲಿವೆ. ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್ ಸಹ 5G ನೆಟವರ್ಕ್ ಸೌಲಭ್ಯ ಹೊಂದಿರಲಿದ್ದು, ಆ ಮೂಲಕ ಒನ್‌ಪ್ಲಸ್ 5G ನೆಟವರ್ಕ್ ಫೀಚರ್ ಪರಿಚಯಿಸಿದ ಕೀರ್ತಿ ಪಡೆಯಲಿದೆ.

Best Mobiles in India

English summary
The OnePlus 6T successor is expected to come with 5G support and improved camera sensors. Here’s what to expect from the next OnePlus flagship phone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X