ಒನ್‌ಪ್ಲಸ್ 8 ಮತ್ತು ಒನ್‌ಪ್ಲಸ್ 8 ಪ್ರೊ ಫೋನ್‌ಗಳ ನಡುವಿನ ಭಿನ್ನತೆಗಳು!
ಜನಪ್ರಿಯ ಒನ್‌ಪ್ಲಸ್ ಮೊಬೈಲ್ ಸಂಸ್ಥೆಯ ತನ್ನ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸಾದಗಿ 'ಒನ್‌ಪ್ಲಸ್ 8' ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಒನ್‌ಪ್ಲಸ್ 8 ಮತ್ತು ಒನ್‌ಪ್ಲಸ್ 8 ಪ್ರೊ ಎರಡು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳಿದ್ದು, 48ಎಂಪಿ ಸೆನ್ಸಾರ್, ಅಧಿಕ ಬ್ಯಾಟರಿ ಹಾಗೂ ವೇಗದ ಪ್ರೊಸೆಸರ್ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿವೆ.

ಕೊರೊನಾ ಸಾಂಕ್ರಾಮಿಕ ಇರುವ ಕಾರಣದಿಂದಾಗಿ ಆನ್‌ಲೈನ್ ಸ್ಟ್ರೀಮಿಂಗ್ ಮೂಲಕವೇ ಒನ್‌ಪ್ಲಸ್ ಸಂಸ್ಥೆಯು ಜಾಗತಿಕವಾಗಿ ಒನ್‌ಪ್ಲಸ್ 8 ಮತ್ತು ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಹಾಗೆಯೇ ಶೀಘ್ರದಲ್ಲೇ ಭಾರತದಲ್ಲಿಯೂ ಈ ಫೋನ್‌ಗಳು ಲಭ್ಯವಾಗಲಿವೆ. ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 10 ಓಎಸ್ ಸಫೋರ್ಟ್ ಸೌಲಭ್ಯಗಳನ್ನು ಒಳಗೊಂಡಿದೆ. ಬ್ಲೂ, ಬ್ಲ್ಯಾಕ್, ಗ್ರೀನ್ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ. ಹಾಗಾದರೆ ಒನ್‌ಪ್ಲಸ್ 8 ಮತ್ತು ಒನ್‌ಪ್ಲಸ್ 8 ಪ್ರೊ ನಡುವಿನ ಭಿನ್ನತೆಗಳೆನು ಮತ್ತು ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್ ಹೇಗಿದೆ
ಒನ್‌ಪ್ಲಸ್ 8 ಸ್ಮಾರ್ಟ್‌ಫೋನ್ 6.55 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್ ಸಹ ಪಡೆದುಕೊಂಡಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಒಳಗೊಂಡಿದ್ದು, 90Hz ಸ್ಕ್ರೀನ್ ರೀಫ್ರೇಶ್ ರೇಟ್ ಹೊಂದಿದೆ. ಅದೇ ರೀತಿ ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.8:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್ ಜೊತೆಗೆ QHD+ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಇನ್ನು ಈ ಫೋನ್ 120Hz ಸ್ಕ್ರೀನ್ ರೀಫ್ರೇಶ್ ರೇಟ್ ಹೊಂದಿದೆ. ಒನ್‌ಪ್ಲಸ್ 8ಗಿಂತ ಒನ್‌ಪ್ಲಸ್ 8 ಪ್ರೊ ಡಿಸ್‌ಪ್ಲೇ ರೀಪ್ರೇಶ್ ರೇಟ್ ಹಾಗೂ ರೆಸಲ್ಯೂಶನ್ ಗುಣಮಟ್ಟದಲ್ಲಿ ಭಿನ್ನತೆಗಳಿವೆ.

ಪ್ರೊಸೆಸರ್ ಸಾಮರ್ಥ್ಯದ ಭಿನ್ನತೆ ಏನು
ಪ್ರೊಸೆಸರ್ ಫೀಚರ್ ಬಗ್ಗೆ ನೋಡುವುದಾರೇ ಒನ್‌ಪ್ಲಸ್ 8 ಮತ್ತು ಒನ್‌ಪ್ಲಸ್ 8 ಪ್ರೊ ಎರಡು ಸ್ಮಾರ್ಟ್‌ಫೋನ್ ಗಳು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್ ಅನ್ನು ಹೊಂದಿವೆ. ಅದರೊಂದಿಗೆ Adreno 650 GPU ಸೌಲಭ್ಯವನ್ನು ಪಡೆದಿವೆ. ಹಾಗೆಯೇ ಪ್ರೊಸೆಸರ್ ಆಂಡ್ರಾಯ್ಡ್ 10 ಓಎಸ್ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಎರಡು ಫೋನ್‌ಗಳು ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB/12GB RAM ಮತ್ತು 128GB/256GB ಆಗಿವೆ.

ಕ್ಯಾಮೆರಾ ಭಿನ್ನತೆಗಳೆನು
ಒನ್‌ಪ್ಲಸ್ 8 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 16ಎಂಪಿ ಹಾಗೂ ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ ಹಾಗೂ ಸೆಕೆಂಡರಿ ಕ್ಯಾಮೆರಾ ಎರಡು 48ಎಂಪಿ ಸೆನ್ಸಾರ್ನಲ್ಲಿವೆ. ಹಾಗೆಯೇ ಇನ್ನುಳಿದೆರಡು ಕ್ಯಾಮೆರಾಗಳು 8ಎಂಪಿ ಮತ್ತು 5ಎಂಪಿ ಸೆನ್ಸಾರ್ ಪಡೆದಿವೆ. ಈ ಫೋನ್ ಸಹ ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಪಡೆದಿದೆ. ಕ್ಯಾಮೆರಾ ವಿಷಯದಲ್ಲಿ ಒನ್‌ಪ್ಲಸ್ ಹೆಚ್ಚು ಅಟ್ರ್ಯಾಕ್ಟಿವ್ ಆಗಿದೆ. ಡಬಲ್ 48ಎಂಪಿ ಕ್ಯಾಮೆರಾ ಇರುವುದು ಪ್ಲಸ್ ಪಾಯಿಂಟ್ ಆಗಿದೆ.

ಬ್ಯಾಟರಿ ಲೈಫ್ ಭಿನ್ನತೆ
ಒನ್‌ಪ್ಲಸ್ 8 ಸ್ಮಾರ್ಟ್‌ಫೋನ್ 4,300mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದರೊಂದಿಗೆ 30W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ 4,510mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಈ ಫೋನ್ ಸಹ 30W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹೀಗಾಗಿ ಬ್ಯಾಟರಿ ವಿಭಾಗದಲ್ಲಿ ಹೆಚ್ಚಿನ ಭಿನ್ನತೆಗಳು ಇಲ್ಲ ಎನ್ನಬಹುದಾಗಿದೆ.

ಪ್ರೈಸ್‌ಟ್ಯಾಗ್
ಒನ್‌ಪ್ಲಸ್ 8 ಸ್ಮಾರ್ಟ್‌ಫೋನ್ 8GB/12GB RAM ಸ್ಟೋರೇಜ್‌ನ ಬೇಸ್ ವೇರಿಯಂಟ್ ಬೆಲೆಯು $699 ಆಗಿದೆ(ಭಾರತದಲ್ಲಿ ಅಂದಾಜು 53,090ರೂ). ಹಾಗೆಯೇ ಹೈ ವೇರಿಯಂಟ್ 12GB RAM + 256GB ಬೆಲೆಯು $799ಆಗಿದೆ (ಭಾರತದಲ್ಲಿ ಅಂದಾಜು 60,690ರೂ). ಅದೇ ರೀತಿ 8GB/12GB RAM ಸ್ಟೋರೇಜ್‌ನ ಆರಂಭಿಕ ಒನ್‌ಪ್ಲಸ್ 8 ಪ್ರೊ ಬೆಲೆಯು $899 (ಭಾರತದಲ್ಲಿ ಅಂದಾಜು 68,280ರೂ) ಇನ್ನು 8GB/12GB RAM ವೇರಿಯಂಟ್ ಬೆಲೆಯು $999 (ಭಾರತದಲ್ಲಿ ಅಂದಾಜು 75,880ರೂ) ಎನ್ನಲಾಗಿದೆ. ಸಂಸ್ಥೆಯು ಇದೇ ಏಪ್ರಿಲ್ 29ರಂದು ಯುಎಸ್‌ನಲ್ಲಿ ಫಸ್ಟ್ ಸೇಲ್ ಆರಂಭಿಸಲಿದೆ. ಆದರೆ ಭಾರತದಲ್ಲಿ ಯಾವಾಗ ಸೇಲ್ ಎನ್ನುವ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.


Click it and Unblock the Notifications








