Home
ಮೊಬೈಲ್

ಭಾರತದಲ್ಲಿ ಮಿಡ್‌ ಫ್ಲ್ಯಾಗ್‌ಶಿಪ್ OnePlus 15R ಬಿಡುಗಡೆ ಯಾವಾಗ?..ಸಿಹಿಸುದ್ದಿ!

ಭಾರತದಲ್ಲಿ ನೆನ್ನೆಯಷ್ಟೇ ಬಹುನಿರೀಕ್ಷಿತ OnePlus 15 ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಬಿಡುಗಡೆಯಾದ ನಂತರ, ಈಗ OnePlus 15R ಬಗ್ಗೆ ದೇಶದ ಬಳಕೆದಾರರಲ್ಲಿ ಹೊಸ ಕುತೂಹಲ ಮೂಡಿದೆ. ಈ ಬಾರಿ OnePlus ಕಂಪೆನಿ 15R ಅನ್ನು ವೇದಿಕೆಯಲ್ಲಿ ಪ್ರದರ್ಶಿಸದಿದ್ದರೂ, "ಶೀಘ್ರದಲ್ಲೇ ಬರಲಿದೆ" ಎಂಬ ಸ್ಪಷ್ಟ ಸೂಚನೆ ನೀಡಿರುವುದರಿಂದ ಈ ಫೋನ್ ಬಗ್ಗೆ ನಿರೀಕ್ಷೆಗಳು ಮತ್ತಷ್ಟು ಹೆಚ್ಚಿವೆ. ಮಧ್ಯಮ ಫ್ಲಾಗ್‌ಶಿಪ್ ಸೆಗ್ಮೆಂಟ್‌ನಲ್ಲಿ ಲಾಂಚ್ ಆಗಲಿರುವ OnePlus 15R ಯಾವ ವೈಶಿಷ್ಟ್ಯಗಳೊಂದಿಗೆ ಬರಬಹುದು? ಹಾಗೂ ಭಾರತದಲ್ಲಿ ಇದನ್ನು ಯಾವಾಗ ಬಿಡುಗಡೆ ಮಾಡುವ ಸಾಧ್ಯತೆ ಇದೆ? ಎಂಬುದನ್ನು ನೋಡೋಣ ಬನ್ನಿ.

OnePlus 15R: ಭಾರತ ನಿರೀಕ್ಷಿತ ಸಮಯ
ದೇಶದಲ್ಲಿ ನೆನ್ನೆ OnePlus 15 ಅನ್ನು ಬಿಡುಗಡೆ ಮಾಡಲಾಯಿತು. ಈ ಬಿಡುಗಡೆ ಸಮಾರಂಭದಲ್ಲಿ ಕಂಪನಿಯ ವಕ್ತಾರರು ಮುಂಬರುವ ಬಿಡುಗಡೆಯ ಬಗ್ಗೆ ಸುಳಿವು ನೀಡುತ್ತಾ, "OnePlus 15R ಗಾಗಿ ಕಾಯುತ್ತಿರುವವರಿಗೆ, ಟ್ಯೂನ್ ಆಗಿರಿ" ಎಂದು ಹೇಳಿದರು. ಈ ದೃಢೀಕರಣದೊಂದಿಗೆ, ನಿರೀಕ್ಷಿತ OnePlus 15R ಭಾರತದಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. OnePlus ಅಧಿಕೃತ ದಿನಾಂಕ ನೀಡದಿದ್ದರೂ ಉದ್ಯಮ ಮೂಲಗಳ ಪ್ರಕಾರ, OnePlus 15R ಅನ್ನು 2026ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮತ್ತು ಇದು OnePlus Ace 6 ಆಗಿರಬಹುದು ಎಂದು ವರದಿಗಳು ಸೂಚಿಸಿವೆ.

ಭಾರತದಲ್ಲಿ ಮಿಡ್‌ ಫ್ಲ್ಯಾಗ್‌ಶಿಪ್ OnePlus 15R ಬಿಡುಗಡೆ ಯಾವಾಗ?..ಸಿಹಿಸುದ್ದಿ!

ಕಳೆದ ತಿಂಗಳು ಚೀನಾದಲ್ಲಿ ಫ್ಲ್ಯಾಗ್‌ಶಿಪ್ OnePlus 15 ಜೊತೆಗೆ ಮಧ್ಯಮ ಪ್ರೀಮಿಯಂ OnePlus Ace 6 ಸ್ಮಾರ್ಟ್‌ಫೋನನ್ನು ಸಹ ಬಿಡುಗಡೆ ಮಾಡಲಾಗಿತ್ತು. ಸಾಮಾನ್ಯವಾಗಿ OnePlus ಕಂಪೆನಿಯು ಇದೇ ಮಾದರಿಯ ಫೋನ್‌ಗಳನ್ನು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ OnePlus 15 ಸರಣಿಯಾಗಿ ಪರಿಚಯಿಸುತ್ತದೆ. ಇದರಿಂದ ದೇಶದಲ್ಲಿ ಬಿಡುಗಡೆಯಾಗಲಿರುವ ಮುಂಬರುವ OnePlus 15R ಕೂಡ OnePlus Ace 6 ರೀಬ್ರ್ಯಾಂಡ್ ಆಗಿರುತ್ತದೆ ಎಂದು ಊಹಿಸಲಾಗಿದೆ. ಹಾಗಾದರೆ, ಚೀನಾದಲ್ಲಿ ಬಿಡುಗಡೆಯಾಗಿದ್ದ OnePlus Ace 6 ಸ್ಮಾರ್ಟ್‌ಫೋನ್ ಹೇಗಿತ್ತು?, ಬೆಲೆ ಎಷ್ಟು ಎಂಬುದನ್ನು ಸಹ ನೊಡೋಣ.

OnePlus Ace 6: ಪ್ರಮುಖ ವೈಶಿಷ್ಟ್ಯಗಳು
OnePlus Ace 6 ಫೋನ್ 6.83 ಇಂಚಿನ 1.5K AMOLED ಡಿಸ್‌ಪ್ಲೇ ಹೊಂದಿದ್ದು, 165Hz ರಿಫ್ರೆಶ್ ರೇಟ್ ಮತ್ತು 5,000 ನಿಟ್ಸ್ ಪೀಕ್ ಬ್ರೈಟ್ನೆಸ್ ಅನ್ನು ಒದಗಿಸುತ್ತದೆ. ಕಣ್ಣಿನ ರಕ್ಷಣೆಗಾಗಿ ಐ ಕಂಫರ್ಟ್ ಮೋಡ್ ಹಾಗೂ 3D ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಲಭ್ಯವಿದೆ. ವಿನ್ಯಾಸದ ದೃಷ್ಟಿಯಿಂದ, OnePlus Ace 6 ಮೆಟಲ್ ಫ್ರೇಮ್ ಹೊಂದಿದ್ದು, IP66, IP68, IP69 ಮತ್ತು IP69K ಪ್ರಮಾಣೀಕರಣಗಳೊಂದಿಗೆ ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುತ್ತದೆ. ಫೋನ್‌ನ ತೂಕ ಸುಮಾರು 213 ಗ್ರಾಂ ಆಗಿದೆ.

ಕಾರ್ಯಕ್ಷಮತೆ ವಿಬಾಗದಲ್ಲಿ, OnePlus Ace 6 ಫೋನ್‌ನಲ್ಲಿ ಶಕ್ತಿಶಾಲಿ Snapdragon 8 Elite ಚಿಪ್‌ಸೆಟ್ ಇದ್ದು, ಇದನ್ನು ಗರಿಷ್ಠ 16GB LPDDR5X RAM, ಮತ್ತು 512GB UFS 4.1 ಸ್ಟೋರೇಜ್ನೊಂದಿಗೆ ಸಂಯೋಜಿಸಲಾಗಿದೆ. ಜೊತೆಗೆ, ಅತ್ಯುತ್ತಮ ಗೇಮಿಂಗ್‌ ಒದಗಿಸುವ ಸಲುವಾಗೊ G2 ಗ್ರಾಫಿಕ್ಸ್ ಚಿಪ್ ಸಹ ಅಳವಡಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ, OnePlus Ace 6 ನಲ್ಲಿ 50MP ಪ್ರಾಥಮಿಕ ಕ್ಯಾಮೆರಾ (OIS ಸಹಿತ) ಮತ್ತು 8MP ಅಲ್ಟ್ರಾ-ವೈಡ್ ಸೆನ್ಸರ್ ನೀಡಲಾಗಿದೆ. ಸೆಲ್ಫಿ ಮತ್ತು ವೀಡಿಯೋ ಕಾಲ್‌ಗಾಗಿ 16MP ಫ್ರಂಟ್ ಕ್ಯಾಮೆರಾ ಇದೆ.

ಈ OnePlus Ace 6 ಫೋನಿನ ಪ್ರಮುಖ ಅಂಶಗಳಲ್ಲಿ ಬ್ಯಾಟರಿ ಸಾಮರ್ಥ್ಯವೂ ಕೂಡ ಒಂದು. ಈ ಸ್ಮಾರ್ಟ್‌ಫೋನ್ 7,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ ಮತ್ತು 120W Super Flash Charge ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇನ್ನು ಈ OnePlus Ace 6 ಫೋನ್ ಹೊಸ Plus Key ಬಟನ್ ಹೊಂದಿದ್ದು, ಇದರ ಸಹಾಯದಿಂದ ಕ್ಯಾಮೆರಾ ತೆರೆಯಲು, ಟ್ರಾನ್ಸ್ಲೇಟರ್ ಪ್ರಾರಂಭಿಸಲು, ಫ್ಲ್ಯಾಶ್‌ಲೈಟ್ ಆನ್ ಮಾಡಲು ಅಥವಾ AI Plus Mind Space ಸೇರಿದಂತೆ ಹಲವಾರು ಕಾರ್ಯಗಳಿಗೆ ಶೀಘ್ರ ಪ್ರವೇಶಕ್ಕೆ ಕಸ್ಟಮೈಸ್ ಮಾಡಬಹುದು.

OnePlus Ace 6: ಬೆಲೆ ಮತ್ತು ಲಭ್ಯತೆ
ಈ OnePlus Ace 6 ಫೋನ್ ಅನ್ನು ಚೀನಾದಲ್ಲಿ ಪ್ರಾರಂಭಿಕ ಬೆಲೆ CNY 2,599 (ಸುಮಾರು ₹32,300) ಬೆಲೆಯಲ್ಲಿ ಬಿಡುಗಡೆಯಾಗಿದೆ. ವರದಿಗಳ ಪ್ರಕಾರ, ಭಾರತದಲ್ಲಿ OnePlus 15R ಬೆಲೆ ₹45,000 - ₹50,000 ನಡುವೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಹಿಂದಿನ OnePlus 13R (₹42,999) ಗಿಂತ ಸ್ವಲ್ಪ ಹೆಚ್ಚಿನ ಬೆಲೆ ಶ್ರೇಣಿಯಾಗಬಹುದು.

ನಾವು ಗಮನಿಸುವುದಾದರೆ, OnePlus 15 ನಂತೆ OnePlus Ace 6 ಫೋನ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿಲ್ಲ. ಆದರೆ, ಈ OnePlus Ace 6 ಫೋನ್ ತನ್ನ ವಿಭಾಗದಲ್ಲಿ ಪರ್ಫಾರ್ಮೆನ್ಸ್, ಬ್ಯಾಟರಿ ಮತ್ತು ವಿನ್ಯಾಸದ ದೃಷ್ಟಿಯಿಂದ ಹೊಸ ಮಾನದಂಡ ಸ್ಥಾಪಿಸುವ ಮಧ್ಯಮ ಪ್ರೀಮಿಯಂ ಶಕ್ತಿಶಾಲಿ ಫೋನ್ ಆಗಿ ಕಾಣುತ್ತಿದೆ. ಇದರಲ್ಲಿ ಶಕ್ತಿಶಾಲಿ Snapdragon 8 Elite ಪ್ರೊಸೆಸರ್, 7,800mAh ಬ್ಯಾಟರಿ ಮತ್ತು 165Hz ಡಿಸ್‌ಪ್ಲೇಯು ಇದು ಮಧ್ಯಮ-ಪ್ರಿಮಿಯಂ ವಿಭಾಗದಲ್ಲಿ ಭಾರೀ ಸ್ಪರ್ಧೆಯನ್ನೆ ನೀಡಬಹುದು.

Best Mobiles in India

English summary
The OnePlus 15 was launched in the country yesterday. At the launch event, a company spokesperson gave a hint about the upcoming launch and said, "For those waiting for the OnePlus 15R, stay tuned." With this confirmation, the much-anticipated OnePlus 15R is certain to be launched in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+