ಅಮೆಜಾನ್ ನಲ್ಲಿ ಓನ್‌ಪ್ಲಸ್ ಫೋನ್ ಗಳ ಮೇಲೆ ರೂ.5000 ಕಡಿತ
ಓನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವ ಪ್ಲಾನ್ ಮಾಡುತ್ತಿರುವವರಿಗೆ ಇದು ಸುಸಂದರ್ಭವಾಗಿದ್ದು, ಓನ್‌ಪ್ಲಸ್ 3T ಮತ್ತು ನೂತನ ಓನ್‌ಪ್ಲಸ್ 5 ಸ್ಮಾರ್ಟ್‌ಫೋನ್‌ಗಳು ಆಫರ್ ಬೆಲೆಯಲ್ಲಿ ದೊರೆಯುತ್ತಿದೆ.
ಚೀನಾ ಮೂಲದ ಓನ್‌ಪ್ಲಸ್ ಕಂಪನಿ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿಗಳಾದ ಅಪಲ್ ಮತ್ತು ಸ್ಯಾಮ್‌ಸಂಗ್‌ಗೆ ಸೆಡ್ಡು ಹೊಡೆಯುವಂತಹ ಫೋನ್ ಗಳನ್ನು ಲಾಂಚ್ ಮಾಡುತ್ತಿದ್ದು, ಸದ್ಯ ಅಮೆಜಾನ್‌ನಲ್ಲಿ ನಡೆಯುತ್ತಿರುವ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಭರ್ಜರಿ ಆಫರ್ ಬೆಲೆಯಲ್ಲಿ ಮಾರಾಟವಾಗುತ್ತಿವೆ.

ಓದಿರಿ: ಪ್ರಯಾಣಿಕರಿಗೆ ಬರೆ ಎಳೆದ ಸರಕಾರದ ನಿರ್ಧಾರ: ಓಲಾ-ಉಬರ್ ದರ ಡಬ್ಬಲ್
ಓನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವ ಪ್ಲಾನ್ ಮಾಡುತ್ತಿರುವವರಿಗೆ ಇದು ಸುಸಂದರ್ಭವಾಗಿದ್ದು, ಓನ್‌ಪ್ಲಸ್ 3T ಮತ್ತು ನೂತನ ಓನ್‌ಪ್ಲಸ್ 5 ಸ್ಮಾರ್ಟ್‌ಫೋನ್‌ಗಳು ಆಫರ್ ಬೆಲೆಯಲ್ಲಿ ದೊರೆಯುತ್ತಿದೆ. ಈ ಆಫರ್ ಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಓನ್‌ಪ್ಲಸ್ 3T:
2016ರಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಓನ್‌ಪ್ಲಸ್ 3T ಸ್ಮಾರ್ಟ್‌ಫೋನ್ ಬಳಕೆದಾರರ ಪ್ರೀತಿಗೆ ಪಾತ್ರವಾಗಿತ್ತು. ಈಗಲೂ ತನ್ನ ಬೇಡಿಕೆಯನ್ನು ಉಳಿಸಿಕೊಂಡಿರುವ ಓನ್‌ಪ್ಲಸ್ 3T ರೂ. 5000 ಕಡಿತಗೊಂಡು ರೂ.24,999ಕ್ಕೆ ದೊರೆಯುತ್ತಿದೆ.

ಓನ್‌ಪ್ಲಸ್ 5:
ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಓನ್‌ಪ್ಲಸ್ ಟಾಪ್ ಎಂಡ್ ಫೋನ್ ಓನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಮೇಲೆಯೂ ಅಮೆಜಾನ್‌ನಲ್ಲಿ ಆಫರ್ ಕಾಣಬಹುದಾಗಿದ್ದು, ರೂ. 1500 ಕಡಿತದೊಂದಿಗೆ ರೂ.3000ದ ವರೆಗೂ ಎಕ್ಸ್ ಚೇಂಜ್ ಆಫರ್ ಸಹ ದೊರೆಯುತ್ತಿದೆ.

ಇನ್ನು ಇದೇ:
ಕೇವಲ ಓನ್ ಪ್ಲಸ್ ಫೋನ್‌ಗಳಲ್ಲದೇ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೇಲೆಯೂ ಅಮೆಜಾನ್‌ನಲ್ಲಿ ಆಫರ್ ಕಾಣಬಹುದಾಗಿದೆ. ವಿವಿಧ ಶ್ರೇಣಿಯ ಫೋನ್‌ಗಳ ಮೇಲೆ ಭಾರೀ ಕಡಿತವನ್ನು ಘೋಷಿಸಲಾಗಿದೆ.


Click it and Unblock the Notifications








