ಸ್ಯಾಮ್‌ಸಂಗ್‌ಗೆ ಪೆಟ್ಟು ಕೊಟ್ಟ ಒನ್‌ಪ್ಲಸ್‌ಗೆ ಮಾರುಕಟ್ಟೆಯಲ್ಲಿ ನಂಬರ್ ಒನ್ ಪಟ್ಟ...!

|

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಮೆರೆದ ದಕ್ಷಿಯಾ ಕೋರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿ, ಇಂದು ತನ್ನ ಉಳಿವಿಗೆ ಪರದಾಡುವ ಸ್ಥಿತಿಯನ್ನು ತಲುಪಿದೆ ಎನ್ನಲಾಗಿದೆ. ಕಾರಣ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳ ಹವಾ ಜೋರಾಗಿದ್ದು, ಈ ಕಂಪನಿಗಳ ದಾಳಿಗೆ ಸಿಲುಕಿ ಎಲ್ಲಾ ಮಾದರಿಯಲ್ಲಿ ಸ್ಮಾರ್ಟ್‌ಫೋನ್‌ ವಿಭಾಗಗಳಲ್ಲಿಯ ತನ್ನ ಸ್ಥಾನವನ್ನು ಸ್ಯಾಮ್‌ ಸಂಗ್ ಕಳೆದುಕೊಳ್ಳುತ್ತಿದೆ.

ಸ್ಯಾಮ್‌ಸಂಗ್‌ಗೆ ಪೆಟ್ಟು ಕೊಟ್ಟ ಒನ್‌ಪ್ಲಸ್‌ಗೆ ಮಾರುಕಟ್ಟೆಯಲ್ಲಿ ನಂಬರ್ ಒನ್ ಪಟ್ಟ

ಓದಿರಿ: ರೂ.75ಕ್ಕೆ ಏರ್‌ಟೆಲ್ ನಿಂದ ನಂಬಲು ಅಸಾಧ್ಯವಾದ ಆಫರ್...!

ಚೀನಾ ಮೂಲದ ಶಿಯೋಮಿ ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಪಟ್ಟವನ್ನು ಪಡೆಯುವ ಮೂಲಕ ಸ್ಯಾಮ್‌ಸಂಗ್ ಅನ್ನು ಆ ಸ್ಥಾನದಿಂದ ಕೆಳಗೆ ನೂಕಿದೆ. ಬಜೆಟ್ ಮತ್ತು ಮಧ್ಯಮ ಬೆಲೆಯಲ್ಲಿ ಶಿಯೋಮಿ ಬೇಡಿಕೆಯನ್ನು ಉಳಿಸಿಕೊಂಡಿದೆ. ಇದೇ ಮಾದರಿಯಲ್ಲಿ ಸದ್ಯದ ವರದಿಗಳ ಪ್ರಕಾರ ಪ್ರೀಮಿಯಮ್ ಫೋನ್‌ ಮಾರುಕಟ್ಟೆಯಲ್ಲಿಯೂ ಸ್ಯಾಮ್‌ಸಂಗ್ ತನ್ನ ಹಿಡಿತವನ್ನು ಬಿಟ್ಟುಕೊಟ್ಟಿದೆ ಎನ್ನಲಾಗಿದೆ, ಇಲ್ಲಿ ಮತ್ತೊಂದು ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಯಾದ ಒನ್‌ಪ್ಲಸ್ ಕಾಣಿಸಿಕೊಂಡಿದೆ.

ಶೇ.40%ರಷ್ಟು ಪಾಲು:

ಶೇ.40%ರಷ್ಟು ಪಾಲು:

ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಮೊಸ್ಟ್ ಆಫೋರ್ಡಬಲ್ ಸ್ಮಾರ್ಟ್‌ಪೋನ್ ಮೇಕರ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಮೂಲಕ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇ.40%ರಷ್ಟು ಪಾಲನ್ನು ಪಡೆದುಕೊಳ್ಳುವ ಮೂಲಕ ಸ್ಯಾಮ್‌ ಸಂಗ್ ಅನ್ನು ಹಿಂದಿಕ್ಕುವ ಕಾರ್ಯವನ್ನು ಮಾಡಿದೆ. ಕಾರಣ ಕಡಿಮೆ ಬೆಲೆಗೆ ಉತ್ತಮ ಫೋನ್ ಅನ್ನು ನೀಡುತ್ತಿರುವುದು ಎನ್ನಲಾಗಿದೆ.

 ಪ್ರೀಮಿಯಮ್ ವಿಭಾಗ:

ಪ್ರೀಮಿಯಮ್ ವಿಭಾಗ:

ಕಳೆದ ಹಲವು ವರ್ಷಗಳಿಂದ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಪ್ರೀಮಿಯಮ್ ವಿಭಾಗದಲ್ಲಿ ಸ್ಯಾಮ್‌ಸಂಗ್ ಫೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತಿತ್ತು. ಆದರೆ ಈ ಸ್ಥಾನದಲ್ಲಿ ಒನ್‌ಪ್ಲಸ್ ಕಾಣಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಒನ್‌ಪ್ಲಸ್ 5, ಒನ್‌ಪ್ಲಸ್ 5T ಮತ್ತು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವುದೇ ಕಾರಣ ಎನ್ನಲಾಗಿದೆ.

ಆಪಲ್‌ ಮತ್ತು ಸ್ಯಾಮ್‌ಸಂಗ್ ಗೆ ಹೊಡೆತ:

ಆಪಲ್‌ ಮತ್ತು ಸ್ಯಾಮ್‌ಸಂಗ್ ಗೆ ಹೊಡೆತ:

ಆಪಲ್‌ ಮತ್ತು ಸ್ಯಾಮ್‌ಸಂಗ್ ಎರಡು ಕಂಪನಿಗಳಿಗೂ ಒನ್‌ಪ್ಲಸ್ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹೊಡೆತವನ್ನು ನೀಡಿದೆ. ಕಾರಣ ರೂ.35,000ದ ಅಸುಪಾಸಿನಲ್ಲಿ ಉತ್ತಮ ಗುಣಮಟ್ಟದ ಫೋನ್‌ಗಳನ್ನು ಒನ್‌ಪ್ಲಸ್ ಲಾಂಚ್ ಮಾಡುತ್ತಿದೆ. ಇದೇ ವಿಶೇಷತೆಗಳು ಇರುವ ಫೋನ್ ಆಪಲ್‌ ಮತ್ತು ಸ್ಯಾಮ್‌ಸಂಗ್ ನಲ್ಲಿ ಇನ್ನು ಹೆಚ್ಚಿನ ಮೊತ್ತಕ್ಕೆ ಸೇಲ್‌ ಆಗುತ್ತಿದೆ. ಇದರಿಂದಾಗಿ ಬಳಕೆದಾರರು ಒನ್‌ಪ್ಲಸ್ ಕಡೆಗೆ ಮುಖ ಮಾಡುತ್ತಿದ್ದಾರೆ.

ಒನ್ ಪ್ಲಸ್ ನಂಬರ್ ಒನ್:

ಒನ್ ಪ್ಲಸ್ ನಂಬರ್ ಒನ್:

ಒನ್ ಪ್ಲಸ್ ಮಾರುಕಟ್ಟೆಯಲ್ಲಿ ಶೇ.40ರಷ್ಟು ಪಾಲು ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಸ್ಯಾಮ್‌ಸಂಗ್ ಕೇವಲ ಶೇ.34%ರಷ್ಟು ಪಾಲನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಆಪಲ್‌ ಮಾರುಕಟ್ಟೆಯಲ್ಲಿ ಶೇ.14% ರಷ್ಟು ಕೊಡುಗೆಯನ್ನು ಹೊಂದಿದೆ. ಇದರಿಂದಾಗಿ ಒನ್‌ಪ್ಲಸ್ ಆಪಲ್‌ ಮತ್ತು ಸ್ಯಾಮ್‌ಸಂಗ್ ಎರಡಕ್ಕೂ ಹೊಡೆತವನ್ನು ನೀಡಿದೆ.

ಉತ್ತಮ ಪೋನ್:

ಉತ್ತಮ ಪೋನ್:

ಒನ್‌ಪ್ಲಸ್ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಗುಣಮಟ್ಟದ ಮೆಟಿರಿಯಲ್ ಬಳಸುವುದರೊಂದಿಗೆ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಳ್ಳುವ ವಿನ್ಯಾಸವನ್ನು ನೀಡುತ್ತಿದೆ. ಅಲ್ಲದೇ ಬೆಸ್ಟ್ ಚಿಪ್ ಸೆಟ್, ವೇಗದ RAM, ಡ್ಯಾಷ್ ಚಾರ್ಜಿಂಗ್ ಸೇರಿದಂತೆ ಹಲವು ಆಯ್ಕೆಗಳನ್ನು ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ. ಆದರೆ ಇದು ಆಪಲ್‌ ಮತ್ತು ಸ್ಯಾಮ್‌ಸಂಗ್ ಗಳಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಬೆಲೆಯೂ ಅಧಿಕವಾಗಿರುವುದು ಈ ಕಂಪನಿಗಳಿಗೆ ಮಾರಕವಾಗುತ್ತಿದೆ.

Best Mobiles in India

English summary
OnePlus is the No 1 premium smartphone brand in India with 40% market share, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X