ರೂ.75ಕ್ಕೆ ಏರ್‌ಟೆಲ್ ನಿಂದ ನಂಬಲು ಅಸಾಧ್ಯವಾದ ಆಫರ್...!
ಮಾರುಕಟ್ಟೆಯಲ್ಲಿ ಜಿಯೋಗೆ ಸೆಡ್ಡು ಹೊಡೆಲು ಮುಂದಾಗಿರುವ ಏರ್‌ಟೆಲ್ ತನ್ನ ಬಳಕೆದಾರರಿಗೆ ದಿನಕ್ಕೊಂದು ಹೊಸ ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಿರುವ ವಿಚಾರದ ಬಗ್ಗೆ ಹಲವು ಬಾರಿ ನಿಮಗೆ ಮಾಹಿತಿಯನ್ನು ನೀಡಿದ್ದೇವೆ. ಇದೇ ಮಾದರಿಯಲ್ಲಿ ಮತ್ತೊಂದು ಹೊಸ ಪ್ಲಾನ್ ಅನ್ನು ಏರ್‌ಟೆಲ್ ಲಾಂಚ್ ಮಾಡಿದೆ ಈ ಕುರಿತ ಮಾಹಿತಿಯೂ ಮುಂದಿದೆ.

ಓದಿರಿ: ಆಮೆಜಾನ್-ಫ್ಲಿಪ್‌ಕಾರ್ಟಿಗೆ ಸೆಡ್ಡು: ಗಣಪತಿ ಹಬ್ಬಕ್ಕೆ ಅಂಬಾನಿಯಿಂದ ಭರ್ಜರಿ ಆಫರ್..!
ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಪರ್ಧೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಳಕೆದಾರರಿಗೆ ಸಾಕಷ್ಟು ಲಾಭವಾಗುತ್ತಿದೆ. ಬಳಕೆದಾರರು ಬುದ್ದಿ ವಂತಿಕೆಯಿಂದ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಂಡರೆ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಇದೇ ಮಾದರಿಯಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ಮಾಡಿಕೊಡುಂತಹ ಪ್ಲಾನ್ ವೊಂದನ್ನು ಏರ್‌ಟೆಲ್ ಲಾಂಚ್ ಮಾಡಿದೆ.

ಕಡಿಮೆ ಬೆಲೆಯ ಪ್ಲಾನ್:
ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರು ಕಡಿಮೆ ಬೆಲೆಗೆ ಹೆಚ್ಚಿನ ಲಾಭ ನೀಡುವ ಪ್ಲಾನ್ ಗಳ ಕಡೆಗೆ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಡೇಟಾ ಮತ್ತು ಕರೆ ಮಾಡುವ ಅವಕಾಶವನ್ನು ಟೆಲಿಕಾಂ ಕಂಪನಿಗಳು ನೀಡುತ್ತಿವೆ. ಈ ಮಾದರಿಯಲ್ಲಿ ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಯ ಡೇಟಾ ಮತ್ತು ಕರೆಯ ಕಾಂಬೋ ಪ್ಯಾಕ್ ವೊಂದನ್ನು ಏರ್‌ಟೆಲ್ ಲಾಂಚ್ ಮಾಡಿದೆ.

ಐಡಿಯಾ ಮಾದರಿಯ ಪ್ಲಾನ್:
ಇತ್ತೀಚೆಗೆ ಐಡಿಯಾ ಲಾಂಚ್ ಮಾಡಿದ ರೂ.75 ರಿಚಾರ್ಜ್ ಪ್ಲಾನ್ ಕಾಪಿ ಮಾಡಿರುವ ಮಾದರಿಯಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ ರೂ.75ರ ಪ್ಲಾನ್ ಅನ್ನು ನೀಡಲು ಮಾಡಲು ಮುಂದಾಗಿದೆ. ಇದರಲ್ಲಿ ಬಳಕೆದಾರರಿಗೆ ಉಚಿತ ಕರೆ ಮಾಡುವ ಅವಕಾಶ ಹಾಗೂ ಡೇಟಾ ಬಳಕೆಗೆ ದೊರೆಯಲಿದ್ದು ಇದರೊಂದಿಗೆ 28 ದಿನಗಳ ವ್ಯಾಲಿಡಿಟಿಯನ್ನು ಕಾಣಬಹುದಾಗಿದೆ.

ರೂ.75ರ ಪ್ಲಾನ್:
ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಜಾರಿಯಲ್ಲಿ ಇಡುವ ಕಾರಣದಿಂದಾಗಿ ಏರ್‌ಟೆಲ್ ನೂತನವಾಗಿ ಲಾಂಚ್ ಮಾಡಿರುವ ರೂ.75ರ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಇದರಿಂದಾಗಿ ಗ್ರಾಹಕರು ಕಡಿಮೆ ಬೆಲೆಗೆ ಒಂದು ತಿಂಗಳ ವ್ಯಾಲಿಡಿಟಿಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಡೇಟಾ-ಕರೆ ಇದರೊಂದಿಗೆ ದೊರೆಯುತ್ತಿರುವುದರಿಂದಾಗಿ ಹೆಚ್ಚಿನ ಲಾಭ ಲಭ್ಯ.

1 GB ಡೇಟಾ:
ಇಷ್ಟು ಮಾತ್ರವಲ್ಲದೇ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 1 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರಿಂದಾಗಿ ಡೇಟಾ ಕಡಿಮೆ ಸಿಕ್ಕರು ಸರಿ ಒಂದು ತಿಂಗಳು ವ್ಯಾಲಿಡಿಟಿಯೊಂದಿಗೆ ಉಚಿತವಾಗಿ ಕರೆ ಮಾಡುವ ಅವಕಾಶವೂ ದೊರೆತರೆ ಸಾಕು ಎನ್ನುವವರಿಗೆ, ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನು ಬಳಕೆ ಮಾಡಿಕೊಳ್ಳದವರಿಗೆ ಹೇಳಿ ಮಾಡಿಸಿದ ಪ್ಲಾನ್ ಇದಾಗಿದೆ.

ಉಚಿತ ಕರೆಯೂ ಲಭ್ಯ:
ಈ ಪ್ಲಾನ್ ವ್ಯಾಲಿಡಿಟಿಯೊಂದಿಗೆ ಬಳಕೆದಾರರು 300 ನಿಮಿಷಗಳ ಉಚಿತ ಕರೆಯನ್ನು ಮಾಡಬಹುದಾದ ಅವಕಾಶವನ್ನು ಏರ್‌ಟೆಲ್ ನೀಡಿದೆ. ಇದರೊಂದಿಗೆ 100 SMS ಗಳನ್ನು ಉಚಿತವಾಗಿ ಪಡೆದುಕೊಳ್ಳಲಿದ್ದಾರೆ. ಇದರಿಂದಾಗಿ ಎಲ್ಲಾ ಮಾದರಿಯಲ್ಲಿಯೂ ಈ ಪ್ಲಾನ್ ಬೆಸ್ಟ್ ಎನ್ನಬಹುದಾಗಿದೆ. ಹೆಚ್ಚಿನ ಖರ್ಚು ಇಲ್ಲದೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಪಡೆದುಕೊಳ್ಳಹುದಾಗಿದೆ.

ಐಡಿಯಾ ಪ್ಲಾನ್:
ಇದೇ ಮಾದರಿಯಲ್ಲಿ ಐಡಿಯಾ ಪ್ಲಾನ್ ಸಹ ಲಭ್ಯವಿದೆ. ರೂ.75ಕ್ಕೆ ಐಡಿಯಾ ನೀಡುವ ಪ್ಲಾನ್‌ನಲ್ಲಿ ಬಳಕೆದಾರರಿಗೆ 1 GB ಡೇಟಾ ದೊರೆಯುತ್ತಿದೆ. ಇದರೊಂದಿಗೆ 300ನಿಮಿಷಗಳ ಉಚಿತ ಕರೆಯು ಲಭ್ಯವಿದೆ ಮತ್ತು 28 ದಿನಗಳ ವ್ಯಾಲಿಡಿಯೂ ದೊರೆಯುತ್ತಿದೆ.


Click it and Unblock the Notifications








