Home
ಮೊಬೈಲ್

ಒನ್‌ಪ್ಲಸ್ 5 ಬೆಳಕಿನ ಹಬ್ಬಕ್ಕೆ ಭರ್ಜರಿ ಗಿಫ್ಟ್

ಈಗಾಗಲೇ ನೂರಾರು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಆದರೆ ಒನ್‌ಪ್ಲಸ್ 5 ಇವೆಲ್ಲವೂಗಳಿಗಿಂತಲೂ ಉತ್ತಮ ಫೋನ್ ಎನ್ನಲಾಗಿದೆ.

By Srinidhi

ಒನ್‌ಪ್ಲಸ್ 5 ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಹಬ್ಬದ ಸಂಭ್ರಮವನ್ನು ಸೆರೆಹಿಡಿಯಲು ಉತ್ತಮ ಫೋನ್ ಇದು ಎನ್ನಲಾಗಿದೆ. ದೀಪಾವಳಿ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಒನ್‌ಪ್ಲಸ್ ಡಿಮ್ಯಾಂಡ್ ಹೆಚ್ಚಾಗಿದ್ದು, ದೀಪಾವಳಿಯ ಬೆಳಕನ್ನು ಸೆರೆಹಿಡಿಯಲು ಇದು ಉತ್ತಮ ಫೋನ್ ಆಗಿದೆ ಎನ್ನುವುದು ಹಲವರ ವಾದವಾಗಿದೆ.

 ಒನ್‌ಪ್ಲಸ್ 5 ಬೆಳಕಿನ ಹಬ್ಬಕ್ಕೆ ಭರ್ಜರಿ ಗಿಫ್ಟ್

ಓದಿರಿ: ಹೇಗಿದೆ ಜಿಯೋ ಫೋನ್: ಕನ್ನಡದಲ್ಲೇ ಮೊದಲ ವಿಡಿಯೋ..!

ಈಗಾಗಲೇ ನೂರಾರು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಆದರೆ ಒನ್‌ಪ್ಲಸ್ 5 ಇವೆಲ್ಲವೂಗಳಿಗಿಂತಲೂ ಉತ್ತಮ ಫೋನ್ ಎನ್ನಲಾಗಿದ್ದು, ನಿಮ್ಮ ಕ್ರಿಯೆಟಿವಿಟಿಗೆ ಸರಿ ಹೊಂದುವಂತಹ ಫೋಟೋಗಳನ್ನು ಸೆರೆಹಿಡಿಯಲು ಮತ್ತು ವಿಡಿಯೋಗಳನ್ನು ಮಾಡಲು ಓನ್‌ಪ್ಲಸ್ ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಡ್ಯುಯಲ್ ಕ್ಯಾಮೆರಾ ನಿಮ್ಮನ್ನು ಹೆಚ್ಚು ಖುಷಿಪಡಿಸಲಿದೆ.

ಒನ್‌ಪ್ಲಸ್ ದೀಪಾವಳಿ ವಿಡಿಯೋ:

ಒನ್‌ಪ್ಲಸ್ ದೀಪಾವಳಿ ವಿಡಿಯೋ:

ಈ ಹಿಂದೆ ಒನ್‌ಪ್ಲಸ್ ದೀಪಾವಳಿ ಕ್ಯಾಮ್ಪೆನಿಂಗ್ ಹೆಚ್ಚು ಸೆಕ್ಸಸ್ ಆಗಿತ್ತು. ಈ ಹಿನ್ನಲೆಯಲ್ಲಿ ಈ ಬಾರಿಯೂ ದೀಪಾವಳಿ ವಿಡಿಯೋವನ್ನು ಮಾಡಲು ತನ್ನ ಬಳಕೆದಾರರಿಗೆ ಪ್ರೋತ್ಸಾಹಿಸುತ್ತಿದೆ. ದೀಪಾವಲಿ ಅಂಗವಾಗಿ ಹೊಸ ಹೊಸ ಆಫರ್ ಗಳನ್ನು ಯೋಜನೆಗಳನ್ನು ತನ್ನಗ್ರಾಹಕರಿಗೆ ನೀಡುತ್ತಿದ್ದು, ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡಲು ಅತ್ಯುತ್ತಮ ಆಯ್ಕೆ ಇದಾಗಿದ ಎಂದರೆ ತಪ್ಪಾಗುವುದಿಲ್ಲ.

ಒನ್‌ಪ್ಲಸ್ ಉತ್ತಮ ಬ್ರಾಂಡ್:

ಒನ್‌ಪ್ಲಸ್ ಉತ್ತಮ ಬ್ರಾಂಡ್:

ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ನಂಬಿಕೆಯನ್ನು ಗಳಿಸಿಕೊಂಡಿರುವ ಒನ್ ಪ್ಲಸ್ ಕಂಪನಿಯೂ ಉತ್ತಮ ಫೋನ್‌ಗಳನ್ನೇ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದರಲ್ಲಿಯೂ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಫೋನ್ ಗಳನ್ನು ಕಡಿಮೆ ಬೆಲೆಗೆ ನೀಡುತ್ತಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳುತ್ತಿಲ್ಲ ಎನ್ನಲಾಗಿದೆ.

ಆಂಡ್ರಾಯ್ಡ್‌ನಲ್ಲೇ ಅತ್ಯುತ್ತಮ ಫೋನ್ ಒನ್‌ಪ್ಲಸ್ 5:

ಆಂಡ್ರಾಯ್ಡ್‌ನಲ್ಲೇ ಅತ್ಯುತ್ತಮ ಫೋನ್ ಒನ್‌ಪ್ಲಸ್ 5:

ಒನ್‌ಪ್ಲಸ್ ಬಿಡುಗಡೆ ಮಾಡಿರುವ ಟಾಪ್ ಎಂಡ್ ಫೋನ್‌ ಓನ್‌ಪ್ಲಸ್ 5 ಆಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಆಂಡ್ರಾಯ್ಡ್ ಫೋನ್ ಇದು ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ. ಇದರಲ್ಲಿ ಹೈ-ಎಂಡ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಕಾಣಬಹುದಾಗಿದೆ. ಅಲ್ಲದೇ ಇದು 8GB RAM ಹೊಂದಿದ್ದು, ಬೇರೆ ಯಾವುದೇ ಫೋನ್‌ಗಳು 8GB RAM ನೀಡಿಲ್ಲ ಎನ್ನಬಹುದಾಗಿದೆ.

ಉತ್ತಮ ಡ್ಯುಯಲ್ ಕ್ಯಾಮೆರಾ

ಉತ್ತಮ ಡ್ಯುಯಲ್ ಕ್ಯಾಮೆರಾ

ಇದಲ್ಲದೇ ಈ ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಇದು ಉತ್ತಮ ಫೋಟೋಗಳನ್ನು ತೆಗೆಯಲು ಸಹಾಯಕಾರಿಯಾಗಿದೆ. 16 MP + 16 MPಯ ಎರಡು ಕ್ಯಾಮೆರಾಗಳನ್ನು ನಿಡಲಾಗಿದ್ದು, ಇದರಲ್ಲಿ ಒಂದು ಟೆಲಿ ಫೋಟೋ ಮತ್ತು ವೈಡ್ ಆಂಗಲ್ ಫೋಟೋವನ್ನು ತೆಗೆಯಲು ಸಹಾಯವಾಗುವಂತೆ ನಿರ್ಮಿಸಲಿದೆ. ಬೇರೆ ಯಾವುದೇ ಫೋನಿನಲ್ಲಿ ಈ ಮಾದರಿಯ ಕ್ಯಾಮೆರಾವನ್ನು ನೋಡಲು ಸಾಧ್ಯವೇ ಇಲ್ಲ ಎನ್ನಬಹುದು.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ಇದಲ್ಲದೇ ಈ ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 64GB ಮತ್ತು 128GB ಮಾದರಿಯಲ್ಲಿ ದೊರೆಯಲಿದೆ. ಇದರಲ್ಲಿ 3,300mAh ಬ್ಯಾಟರಿಯನ್ನು ಸಹ ನೀಡಲಾಗಿದೆ. ಅಲ್ಲದೇ ಡ್ಯಾಷ್ ಚಾರ್ಜಿಂಗ್ ಸಪೋರ್ಟ್ ಮಾಡಲಿದ್ದು, ಉತ್ತಮ ಬ್ಯಾಟರಿ ಪ್ಯಾಕಪ್ ಹೊಂದಿರುವುದಲ್ಲದೇ ಬಹು ಬೇಗನೇ ಚಾರ್ಜ್ ಆಗಲು ಸಹ ಶಕ್ತವಾಗಿದೆ ಎನ್ನಲಾಗಿದೆ.

ಈ ದೀಪಾವಳಿಗೆ ಒನ್‌ಪ್ಲಸ್ 5 ಉಡುಗೊರೆ:

ಈ ದೀಪಾವಳಿಗೆ ಒನ್‌ಪ್ಲಸ್ 5 ಉಡುಗೊರೆ:

ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಉತ್ತಮ ಗುಣಮಟ್ಟದ ಟಾಪ್ ಎಂಡ್ ಫೋನ್ ಅದುವೇ ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯುತ್ತಿರುವುದು ಎಂದರೆ ಅದು ಒನ್ ಪ್ಲಸ್ ಮಾತ್ರವೇ. ಆನ್‌ಲೈನ್ ಶಾಪಿಂಗ್ ತಾಣವಾದ ಅಮೆಜಾನ್ ಮತ್ತು ಒನ್ ಪ್ಲಸ್ ಸ್ಟೋರ್ ನಲ್ಲಿ ಈ ಫೋನ್ ಲಭ್ಯವಿದೆ.

Best Mobiles in India

English summary
With the festive season just around the corner, the brands across the categories are prepared to unleash their share of schemes and offers on their top selling products.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+