Home
ಮೊಬೈಲ್

Flipkart: ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದ ಫೋನ್‌ಗಳಿವು! ಅಗ್ಗದ ಬೆಲೆ, ಬೊಂಬಾಟ್‌ ಫೀಚರ್ಸ್‌

ಹೊಸ ಸ್ಮಾರ್ಟ್‌ಫೋನ್‌ಗೆ (smartphone) ಅಪ್‌ಗ್ರೇಡ್‌ ಆಗುವುದು ಸಾಕಷ್ಟು ಜನರ ಆಸೆ. ಈ ನಡುವೆ ಮಾರುಕಟ್ಟೆಯಲ್ಲಿ ಅಗಾದವಾದ ಸ್ಮಾರ್ಟ್‌ಫೋನ್‌ಗಳು ಕಂಡುಬರುವುದರಿಂದ ಸಾಕಷ್ಟು ಜನರಿಗೆ ಯಾವ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಅನ್ನೋದೆ ತಿಳಿಯುವುದಿಲ್ಲ. ಆದರೆ, ಸ್ಮಾರ್ಟ್‌ಫೋನ್ ಖರೀದಿ ವೇಳೆ ರೇಟಿಂಗ್‌ ಪ್ರಮುಖ ಪಾತ್ರ ವಹಿಸುತ್ತದೆ.

ಹೌದು, ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುವ ಮುನ್ನ ಈಗಾಗಲೇ ಖರೀದಿ ಮಾಡಿದ ಗ್ರಾಹಕರ ಅಭಿಪ್ರಾಯ ಮುಖ್ಯವಾಗುತ್ತದೆ. ಅದರಂತೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಸ್ಮಾರ್ಟ್‌ಫೋನ್‌ ಖರೀದಿ ಮಾಡಿದ ಎಲ್ಲಾ ಗ್ರಾಹಕರು ಅವರಿಗೆ ಅನಿಸಿದ ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಈ ಮೂಲಕ ಇತರರು ಹೊಸ ಫೋನ್‌ ಖರೀದಿ ಮಾಡಲು ಅನುಕೂಲ ಆಗುತ್ತದೆ. ಅದರಂತೆ ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯುತ್ತಮ ಅಂದರೆ ನಾಲ್ಕಕ್ಕೂ ಅಧಿಕ ರೇಟಿಂಗ್‌ ಪಡೆದ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ ನೋಡಿ.

ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದ ಫೋನ್‌ಗಳಿವು! ಅಗ್ಗದ ಬೆಲೆ...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13: ಈ ಸ್ಮಾರ್ಟ್‌ಫೋನ್‌ (Samsung Galaxy F13) ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಬೆಲೆ 8,199 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್‌ ಹೆಚ್‌ಡಿ + ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಎಕ್ಸಿನೋಸ್ 850 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 4 GB RAM ಹಾಗೂ 64 GB ಇಂಟರ್‌ ಸ್ಟೋರೇಜ್‌ ಆಯ್ಕೆ ಇದ್ದು, 50MP + 5MP + 2MP ರಿಯರ್ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾ ಮೂಲಕ ಕಾಣಿಸಿಕೊಂಡಿದೆ. ಜೊತೆಗೆ 6000 mAh ಸಾಮರ್ಥ್ಯದ ಬ್ಯಾಟರಿ ಈ ಫೋನ್‌ನಲ್ಲಿದೆ. ಈ ಫೋನ್‌ಗೆ 4.31,86,070 ರೇಟಿಂಗ್‌ಗಳು ಮತ್ತು 10,628 ವಿಮರ್ಶೆಗಳು ಬಂದಿವೆ.

ಮೊಟೊರೊಲಾ ಎಡ್ಜ್ 40 ನಿಯೋ: ಈ ಸ್ಮಾರ್ಟ್‌ಫೋನ್‌ (Motorola Edge 40 Neo) ಅನ್ನು ನೀವು 22,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಇದು 6.55 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಡೈಮೆನ್ಸಿಟಿ 7030 ಪ್ರೊಸೆಸರ್ ಬಲದೊಂದಿಗೆ 8 GB RAM ಹಾಗೂ 128 GB ಇಂಟರ್‌ ಸ್ಟೋರೇಜ್‌ನೊಂದಿಗೆ ಈ ಫೋನ್‌ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಹಾಗೆಯೇ 50MP + 13MP ರಿಯರ್‌ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಈ ಫೋನ್‌ನಲ್ಲಿ ಇದ್ದು, 5000 mAh ಸಾಮಥ್ಯದ ಬ್ಯಾಟರಿ ಮೂಲಕ ಪ್ಯಾಕ್‌ ಆಗಿದೆ. ಉಳಿದಂತೆ ಈ ಫೋನ್ 4.411,816 ರೇಟಿಂಗ್‌ಗಳು ಮತ್ತು 1,775 ವಿಮರ್ಶೆಗಳನ್ನು ಪಡೆದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದ ಫೋನ್‌ಗಳಿವು! ಅಗ್ಗದ ಬೆಲೆ...

ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G: ಈ ಸ್ಮಾರ್ಟ್‌ಫೋನ್ (OnePlus Nord CE 2 Lite 5G) 16,876 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದು 6.59 ಇಂಚಿನ ಡಿಸ್ಪ್ಲೇ ಆಯ್ಕೆ ಪಡೆದಿದ್ದು, 6 GB RAM ಹಾಗೂ 128 GB ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ ಈ ಫೋನ್‌ ಕಾಣಿಸಿಕೊಂಡಿದೆ. ಹಾಗೆಯೇ 64MP ರಿಯರ್‌ ಕ್ಯಾಮರಾ ಹಾಗೂ 16MP ಸೆಲ್ಫಿ ಕ್ಯಾಮೆರಾ ಈ ಫೋನ್‌ನಲ್ಲಿ ಇದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಮೂಲಕ ಉತ್ತಮ ಬ್ಯಾಕಪ್‌ ನೀಡಲಿದೆ. ಜೊತೆಗೆ ಈ ಫೋನ್ 4.41,36,800 ರೇಟಿಂಗ್‌ಗಳು ಮತ್ತು 9,530 ವಿಮರ್ಶೆಗಳನ್ನು ಹೊಂದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದ ಫೋನ್‌ಗಳಿವು! ಅಗ್ಗದ ಬೆಲೆ...

ಪೊಕೊ M6 ಪ್ರೊ 5G : ಈ ಫೋನ್‌ (Poco M6 Pro 5G) ಅನ್ನು ನೀವು ಕೇವಲ 11,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು 6.79 ಇಂಚಿನ ಫುಲ್‌ ಹೆಚ್‌ಡಿ + ಡಿಸ್ಪ್ಲೇ ಆಯ್ಕೆ ಪಡೆದಿದ್ದು, ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 6 GB RAM ಹಾಗೂ 128 GB ಇಂಟರ್‌ ಸ್ಟೋರೇಜ್‌ ಹೊಂದಿದ್ದು, 1 TB ವರೆಗೆ ಸ್ಟೋರೇಜ್‌ ವಿಸ್ತರಣೆ ಮಾಡಲು ಅವಕಾಶ ಕಲ್ಪಿಸಿದೆ. ಜೊತೆಗೆ 50MP + 2MP ರಿಯರ್‌ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾ ಈ ಫೋನ್‌ನಲ್ಲಿದೆ. ಇದರೊಂದಿಗೆ 4.346,552 ರೇಟಿಂಗ್‌ಗಳು ಮತ್ತು 3,050 ವಿಮರ್ಶೆಗಳ ಮೂಲಕ ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ.

Best Mobiles in India

English summary
Many smartphones are get best rating on Flipkart including Samsung Galaxy F13, Motorola Edge 40 Neo, OnePlus Nord CE 2 Lite 5G, Poco M6 Pro 5G.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+