Home
ಮೊಬೈಲ್

smartphones: ಕ್ಷಣ ಮಾತ್ರದಲ್ಲಿ ಚಾರ್ಜಿಂಗ್‌, ದೀರ್ಘ ಬ್ಯಾಕಪ್‌! ಈ ಫೋನ್‌ಗಳಿಗೆ ಭರ್ಜರಿ ಬೇಡಿಕೆ

ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ಈಗಾಗಲೇ ನೀವು ಭಿನ್ನ ಫೀಚರ್ಸ್‌ ಆಯ್ಕೆಯ ಫೋನ್‌ಗಳ ಬಗ್ಗೆ ತಿಳಿದುಕೊಂಡಿರಬಹುದು. ಜೊತೆಗೆ ನಿಮ್ಮ ಚಿರಪರಿಚಿತರಿಗೆ ಖರೀದಿ ಮಾಡಲು ತಿಳಿಸಿರಬಹುದು. ಅದರಂತೆ ಈಗ ಬೇಗನೇ ಚಾರ್ಜಿಂಗ್‌ ಆಗುವ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಬೇಡಿಕೆ ಇದೆ.

ಹೌದು, ಸ್ಮಾರ್ಟ್‌ಫೋನ್‌ಗಳನ್ನು ಕ್ಷಣ ಮಾತ್ರವೂ ಬಿಟ್ಟಿರಲಾರದ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಈ ನಡುವೆ ಚಾರ್ಜಿಂಗ್‌ ಆಗುವಾಗಲೂ ಸಹ ಅಪಾಯ ಎಂದು ಗೊತ್ತಿದ್ದರೂ ಫೋನ್‌ಗಳನ್ನು ಬಳಕೆ ಮಾಡುತ್ತಾರೆ. ಆದರೆ, ಈ ಫೋನ್ ಬಳಕೆ ಮಾಡಿದ್ರೆ ಈ ಸಮಸ್ಯೆ ನಿಮಗೆ ಖಂಡಿತಾ ಬರುವುದಿಲ್ಲ. ಯಾಕೆಂದರೆ ಬೇಗನೇ ಚಾರ್ಜ್ ಆಗುತ್ತವೇ ಹಾಗೂ ದೀರ್ಘ ಬ್ಯಾಕಪ್‌ ನೀಡುತ್ತವೆ. ಹಾಗಿದ್ರೆ, ವೇಗದ ಚಾರ್ಜಿಂಗ್‌ ಆಯ್ಕೆ ಇರುವ ಹಾಗೂ ಇತ್ತೀಚಿಗೆ ಲಾಂಚ್‌ ಆದ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಕ್ಷಣ ಮಾತ್ರದಲ್ಲಿ ಚಾರ್ಜಿಂಗ್‌, ದೀರ್ಘ ಬ್ಯಾಕಪ್‌! ಈ ಫೋನ್‌ಗಳಿಗೆ ಭರ್ಜರಿ ಬೇಡಿಕೆ

ಒನ್‌ಪ್ಲಸ್‌ ನಾರ್ಡ್‌ CE 3 5G : ಈ ಸ್ಮಾರ್ಟ್‌ಫೋನ್‌ (OnePlus Nord CE 3 5G) ಅನ್ನು ನೀವು 24,970ರೂ.ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್ 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಜೊತೆಗೆ ಸ್ನಾಪ್‌ಡ್ರಾಗನ್ 782G ಪ್ರೊಸೆಸರ್‌ ಬಲ ಪಡೆಡೆದಿದ್ದು, 50 MP + 8 MP + 2 MP ಟ್ರಿಪಲ್ ರಿಯರ್ ಹಾಗೂ 16 MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ಶಿಯೋಮಿ ರೆಡ್ಮಿ 12 5G: ಈ ಫೋನ್‌ (Xiaomi Redmi 12 5G) ಅನ್ನು 12,700ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಈ ಫೋನ್ 6.79 ಇಂಚಿನ 1080 x 2460  ಪಿಕ್ಸೆಲ್‌ ಸ್ಕ್ರೀನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ ಬಲದೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ 50 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಮೂಲಕ ಈ ಬೆಲೆಗೆ ತಕ್ಕ ಅತ್ಯುತ್ತಮ ಫೀಚರ್ಸ್‌ ಅನ್ನು ಈ ಫೋನ್‌ ಹೊಂದಿದೆ.

ಕ್ಷಣ ಮಾತ್ರದಲ್ಲಿ ಚಾರ್ಜಿಂಗ್‌, ದೀರ್ಘ ಬ್ಯಾಕಪ್‌! ಈ ಫೋನ್‌ಗಳಿಗೆ ಭರ್ಜರಿ ಬೇಡಿಕೆ

ಮೊಟೊರೊಲಾ ಮೊಟೊ G54 5G: ಈ ಫೋನ್‌ (Motorola Moto G54 5G) ಸಹ ಆನ್‌ಲೈನ್‌ನಲ್ಲಿ 13,999 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. 33W ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ 6000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 6.5 ಇಂಚಿನ ಡಿಸ್‌ಪ್ಲೇಯೊಂದಿಗೆ 1080 x 2400  ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಡೈಮೆನ್ಸಿಟಿ 7020 ಪ್ರೊಸೆಸರ್‌ ಬಲ ಹಾಗೂ 50 MP + 8 MP ಡ್ಯುಯಲ್ ರಿಯರ್ ಮತ್ತು 16 MP ಸೆಲ್ಫಿ ಕ್ಯಾಮೆರಾ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ.

ವಿವೋ V29: ಈ ಫೋನ್‌ಗೆ (Vivo V29) 31,520 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದು 4600 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಉಳಿದಂತೆ ಈ ಫೋನ್ 6.78 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 1260 x 2800 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, 50 MP + 8 MP + 2 MP ಟ್ರಿಪಲ್ ರಿಯರ್ ಹಾಗೂ 50 MP ಸೆಲ್ಫಿ ಕ್ಯಾಮೆರಾದ ಮೂಲಕ ಆಕರ್ಷಕ ಶೈಲಿಯನ್ನು ಪಡೆದುಕೊಂಡಿದೆ.

ಕ್ಷಣ ಮಾತ್ರದಲ್ಲಿ ಚಾರ್ಜಿಂಗ್‌, ದೀರ್ಘ ಬ್ಯಾಕಪ್‌! ಈ ಫೋನ್‌ಗಳಿಗೆ ಭರ್ಜರಿ ಬೇಡಿಕೆ

ವಿವೋ V27: ವಿವೋದ ಮತ್ತೊಂದು ಫೋನ್‌ (Vivo V27) ಆದ ಇದನ್ನು ನೀವು 24,749ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 4600 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 66W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದು 6.78 ಇಂಚಿನ ಡಿಸ್‌ಪ್ಲೇ ಯೊಂದಿಗೆ 1080 x 2400  ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಪಡೆದಿದ್ದು, ಡೈಮೆನ್ಸಿಟಿ 7200 ಪ್ರೊಸೆಸರ್ ಬಲ ಹೊಂದಿದೆ. ಇದರೊಂದಿಗೆ 50 MP + 8 MP + 2 MP ಟ್ರಿಪಲ್ ರಿಯರ್ ಹಾಗೂ 50 MP ಸೆಲ್ಫಿ ಕ್ಯಾಮೆರಾದ ಮೂಲಕ ಕಾಣಿಸಿಕೊಂಡಿದ್ದು, ಕ್ಯಾಮೆರಾ ಪ್ರಿಯರ ನೆಚ್ಚಿನ ಫೋನ್‌ ಆಗಿ ಗುರುತಿಸಿಕೊಂಡಿದೆ.

Best Mobiles in India

English summary
Many smartphones including OnePlus Nord CE 3 5G, Xiaomi Redmi 12 5G, Motorola Moto G54 5G, Vivo V29, Vivo V27 have got fast charging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+