Home
ಮೊಬೈಲ್

ಮಸ್ತ್ ಆಫರ್.. OnePlusನ ಹೊಸ ಫೋನ್‌ ಸೇಲ್ ಆರಂಭ: 20,000 ರೂ.ಗೆ ಸಿಗುತ್ತೆ!

ಒನ್‌ಪ್ಲಸ್‌ ಕಂಪನಿಯು ಸಾಕಷ್ಟು ಹೊಸ ಫೀಚರ್ಸ್‌, ಸುದೀರ್ಘ ಬಾಳಿಕೆಯ ಭರವಸೆಯೊಂದಿಗೆ ಹೊಸ OnePlus Nord CE 4 Lite ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಮೊಬೈಲ್ ಸ್ಟೈಲಿಶ್‌ ಲುಕ್‌, ಬೆಲೆ ಹಾಗೂ ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರನ್ನ ಆಕರ್ಷಿಸಿತ್ತು. ಈ ಮೊಬೈಲ್ ಇಂದಿನಿಂದ ಅಧಿಕೃತವಾಗಿ ಮಾರಾಟ ಆರಂಭಿಸಿದೆ. ಈ ನೂತನ ಫೋನ್ ಭರಪೂರ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 20 ಸಾವಿರ ರೂ. ಒಳಗೆ ಒನ್‌ಪ್ಲಸ್‌ ಫೋನ್‌ ಹುಡುಕುವವರಿಗೆ ಇದು ಪರ್ಫೆಕ್ಟ್ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಈ ಮೊಬೈಲ್ ಖರೀದಿಸಲು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದಾರೆ.

ಹೌದು, ಒನ್‌ಪ್ಲಸ್ ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಪಡೆದಿವೆ. ತನ್ನ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರನ್ನು ಆಕರ್ಷಿಸುವಲ್ಲಿ ಸಕ್ಸಸ್ ಕಂಡಿವೆ. ಗ್ರಾಹಕರು ಒನ್‌ಪ್ಲಸ್ ಮೊಬೈಲ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಖರೀದಿಸುತ್ತಾರೆ. ಇದೀಗ, ಒನ್‌ಪ್ಲಸ್‌ನ ನೂತನ OnePlus Nord CE 4 Lite ಮೊಬೈಲ್ ಸೇಲ್ ಆರಂಭಿಸಲು ಸಜ್ಜಾಗಿದೆ. ಇದು 128GB ಮತ್ತು 256GB ಸ್ಟೋರೇಜ್ ರೂಪಾಂತರದಲ್ಲಿ 20,000 ರೂ.ನ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಮಸ್ತ್ ಆಫರ್.. OnePlusನ ಹೊಸ ಫೋನ್‌ ಸೇಲ್ ಆರಂಭ: 20,000 ರೂ.ಗೆ ಸಿಗುತ್ತೆ!

ಪ್ರಮುಖ ಅಂಶಗಳು

  • OnePlus Nord CE 3 Lite ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ - ನೀಲಿ, ಬೆಳ್ಳಿ ಮತ್ತು ಕಿತ್ತಳೆ
  • ಈ ಹೊಸ ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಆಗಿದೆ - 8GB RAM+128GB ಮತ್ತು 8GB RAM+256GB ಸ್ಟೋರೇಜ್
  • ಒನ್‌ಪ್ಲಸ್ ನೋರ್ಡ್ CE 3 Lite ಆರಂಭಿಕ ಬೆಲೆ 19,999 ರೂ.

ಒನ್‌ಪ್ಲಸ್ ನೋರ್ಡ್ CE4 Lite 5G ಫೋನ್ AMOLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ದರ ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50MP ಮುಖ್ಯ ಕ್ಯಾಮೆರಾ (Sony LYT-600), 80W ವೇಗದ ವೈರ್ಡ್ ಚಾರ್ಜಿಂಗ್‌ ಬೆಂಬಲದೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಲ್ಲದೆ, ಇದು ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಮೊಬೈಲ್ ಭಾರತದಲ್ಲಿ ಇಂದು (ಜೂನ್ 27) ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗಲಿದೆ.

ಎರಡು ಸ್ಟೋರೇಜ್‌ ಆಯ್ಕೆ, ಬೆಲೆ 19,999 ರೂ.!

ಈ ಹೊಸ ಒನ್‌ಪ್ಲಸ್ ನೋರ್ಡ್ CE4 Lite ಫೋನ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಮೂಲ ಮಾದರಿಯು 8GB LPDDR4x RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌ ಹೊಂದಿದೆ. ಇದರ ಬೆಲೆ 19,999 ರೂ. ಇದೆ. ಎರಡನೇ ರೂಪಾಂತರವು 8GB LPDDR4x RAM ಮತ್ತು 256GB ಸ್ಟೋರೇಜ್‌ ಹೊಂದಿದೆ. ಈ ಮಾದರಿಯು 22,999 ರೂ. ಇದೆ. ಸೂಪರ್ ಸಿಲ್ವರ್, ಮೆಗಾ ಬ್ಲೂ ಮತ್ತು ಅಲ್ಟ್ರಾ ಆರೆಂಜ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಮೊದಲ ದಿನವೇ ಮಸ್ತ್ ಆಫರ್

ಬಿಡುಗಡೆಯ ಅಂಗವಾಗಿ ಒನ್‌ಪ್ಲಸ್ ವಿಶೇಷ ಆಫರ್‌ಗಳನ್ನು ಘೋಷಿಸಿದೆ. EMI ಖರೀದಿಗಳಿಗಾಗಿ ICICI ಬ್ಯಾಂಕ್ ಮತ್ತು OneCard ಕ್ರೆಡಿಟ್ ಕಾರ್ಡ್‌ಗಳ ಮೇಲೆ 1,000 ರೂ. ಡಿಸ್ಕೌಂಟ್‌ ಪಡೆಯಬಹುದು. ಜೊತೆಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ 3 ತಿಂಗಳ No Cost EMI ಆಯ್ಕೆಯನ್ನು ಪಡೆಯಬಹುದು. ವಿದ್ಯಾರ್ಥಿಗಳು ಹೆಚ್ಚುವರಿಯಾಗಿ 250 ರೂ. ಡಿಸ್ಕೌಂಟ್‌ ಪಡೆಯಬಹುದು. ಹೊಸ Jio ಪೋಸ್ಟ್‌ಪೇಯ್ಡ್ ಗ್ರಾಹಕರು 2,250 ರೂ.ವರೆಗಿನ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು.

ಈ ಫೋನ್ ಎಲ್ಲಿ ಖರೀದಿಸಬಹುದು?

ಹೆಚ್ಚುವರಿಯಾಗಿ, ಗ್ರಾಹಕರು ಬಜಾಜ್ ಫಿನ್‌ಸರ್ವ್, ICICI ಬ್ಯಾಂಕ್ ಕನ್ಸ್ಯೂಮರ್ ಫೈನಾನ್ಸ್ ಮತ್ತು HDBFS ಗ್ರಾಹಕ ಸಾಲಗಳ ಮೂಲಕ 6 ತಿಂಗಳ ನೋ-ಕಾಸ್ಟ್ EMI ಯೋಜನೆಯನ್ನು ಆಯ್ಕೆ ಮಾಡಬಹುದು. ಆಸಕ್ತ ಗ್ರಾಹಕರು OnePlus ಸ್ಟೋರ್ ಅಪ್ಲಿಕೇಶನ್, OnePlus Experience ಸ್ಟೋರ್‌, Amazon.in, Reliance Digital, Croma ಮತ್ತು ಇತರ ಆಫ್‌ಲೈನ್ ಪಾಲುದಾರ ಅಂಗಡಿಗಳ ಮೂಲಕ ಈ ಫೋನ್‌ ಖರೀದಿಸಬಹುದು. ಅಲ್ಟ್ರಾ ಆರೆಂಜ್ ರೂಪಾಂತರವು ಮುಂಬರುವ ದಿನಗಳಲ್ಲಿ ಲಭ್ಯವಿರುತ್ತದೆ.

ಮಸ್ತ್ ಆಫರ್.. OnePlusನ ಹೊಸ ಫೋನ್‌ ಸೇಲ್ ಆರಂಭ: 20,000 ರೂ.ಗೆ ಸಿಗುತ್ತೆ!

OnePlus Nord CE4 Lite ಸಂಪೂರ್ಣ ಫೀಚರ್ಸ್‌ಗಳು

  • ಅಳತೆ: 162.9×75.6×8.1mm
  • ತೂಕ: 191 ಗ್ರಾಂ
  • ಬಣ್ಣಗಳು: ಮೆಗಾ ಬ್ಲೂ, ಸೂಪರ್ ಸಿಲ್ವರ್, ಅಲ್ಟ್ರಾ ಆರೆಂಜ್
  • ಬೆಲೆ: 19,999 ರೂ. (8GB + 128GB) ಮತ್ತು 22,999 ರೂ. (8GB + 256GB)
  • AI ಫೀಚರ್ಸ್: AI ಸ್ಮಾರ್ಟ್ ಕಟೌಟ್
  • ಪ್ರೊಸೆಸರ್: Qualcomm Snapdragon 695 6nm 5G SoC ಜೊತೆಗೆ Adreno 619 GPU
  • OS: Android 14 ಜೊತೆಗೆ OxygenOS 14
  • ಡಿಸ್ಲ್ಪೇ: 6.67-ಇಂಚಿನ (2400 × 1080 ಪಿಕ್ಸೆಲ್‌ಗಳು) ಪೂರ್ಣ HD+ OLED ಡಿಸ್‌ಪ್ಲೇ.
  • ರಿಫ್ರೆಶ್ ರೇಟ್: 120Hz ರಿಫ್ರೆಶ್ ದರ, 2100 nits ಗರಿಷ್ಠ ಬ್ರೈಟ್‌ನೆಸ್‌
  • ಸ್ಟೋರೇಜ್: 8GB RAM + 128GB ಮತ್ತು 8GB RAM + 256GB ಸ್ಟೋರೇಜ್, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
  • ಸಿಮ್: ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)
  • ಕ್ಯಾಮೆರಾ: 50MP ಮುಖ್ಯ ಕ್ಯಾಮರಾ (ಸೋನಿ LYT-600 ಕ್ಯಾಮೆರಾ) ಜೊತೆಗೆ OIS + 2MP ಡೆಪ್ತ್ ಸೆನ್ಸಾರ್
  • ಫ್ರಂಟ್ ಕ್ಯಾಮೆರಾ: 16MP
  • ಕನೆಕ್ಟಿವಿಟಿ ಆಯ್ಕೆಗಳು: 5G SA/ NSA, ಡ್ಯುಯಲ್ 4G VoLTE, Wi-Fi 6 802.11 ac (2.4GHz + 5GHz), ಬ್ಲೂಟೂತ್ 5.2, GPS/GLONASS/Beidou, USB ಟೈಪ್-C
  • ಬ್ಯಾಟರಿ: 5500mAh ಬ್ಯಾಟರಿ (20 ನಿಮಿಷಗಳಲ್ಲಿ 100% ವರೆಗೆ ಚಾರ್ಜ್ ಆಗುತ್ತದೆ)
  • ಚಾರ್ಜಿಂಗ್: 80W SuperVOOC ವೈರ್ಡ್, ರಿವರ್ಸ್ ಚಾರ್ಜಿಂಗ್
  • ಆಡಿಯೊ ಜಾಕ್: ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ, 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು
  • ರಕ್ಷಣೆ: ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP54)
Best Mobiles in India

English summary
OnePlus Nord CE4 Lite 5G goes on sale at 12 pm. will be available online on the company's India website, Store app, and e-commerce platform Amazon India and offline at select retail stores: Price, introductory offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+