ಮತ್ತೆ ಧೂಳೆಬ್ಬಿಸಿದ OnePlus: ಹೊಸ ಫೋನ್ ಲಾಂಚ್: ಬೆಲೆ 19,999 ರೂ..! ಗ್ರಾಹಕರು ಫಿದಾ
ದಿ ವೇಟ್ ಈಸ್ ಓವರ್..! ಇದುವೇ ನೋಡಿ ಒನ್‌ಪ್ಲಸ್ ಪ್ರಿಯರ ಹಾರ್ಟ್ ಫೇವರಿಟ್ ಫೋನ್. ಅಂತೂ ಇಂತೂ ಸ್ಮಾರ್ಟ್‌ಫೋನ್‌ಗಳ ಕಿಂಗ್ ಭಾರತೀಯ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಈ ಮೊಬೈಲ್‌ನ ಸ್ಟೈಲಿಶ್ ಲುಕ್, ಅದ್ಭುತ ಕ್ಯಾಮೆರಾ, ಅತ್ಯಾಕರ್ಷಕ ಫೀಚರ್ಸ್‌ಗಳು ಮೊಬೈಲ್ ಪ್ರಿಯರ ಕಣ್ಣು ಕುಕ್ಕುತ್ತಿವೆ. ಹೌದು, ನಾವು ಹೇಳುತ್ತಿರುವುದು ಒನ್‌ಪ್ಲಸ್‌ನ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಬಗ್ಗೆ. ಒನ್‌ಪ್ಲಸ್ ತನ್ನ ಬಹುನಿರೀಕ್ಷಿತ 5G ಸ್ಮಾರ್ಟ್‌ಫೋನ್ OnePlus Nord CE 4 Lite ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು AMOLED ಡಿಸ್ಪ್ಲೇ, ಎರಡು ಸ್ಟೋರೇಜ್ ವೇರಿಯಂಟ್, 5500 mAh ಬ್ಯಾಟರಿ ಮತ್ತು 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ.
ಪ್ರಮುಖ ಅಂಶಗಳು
- OnePlus Nord CE4 Lite ಆರಂಭಿಕ ಬೆಲೆ 19,999 ರೂ.
- OnePlus Nord CE4 Lite ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ - 128GB ಮತ್ತು 256GB
- OnePlus Nord CE 3 Lite ಮೂರು ಬಣ್ಣ ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ - ನೀಲಿ, ಬೆಳ್ಳಿ ಮತ್ತು ಕಿತ್ತಳೆ
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿದೆ. ತನ್ನ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಮೊಬೈಲ್ ಪ್ರಿಯರು ಒನ್‌ಪ್ಲಸ್ ಮೊಬೈಲ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಖರೀದಿಸುತ್ತಾರೆ. ಇದೀಗ, ಒನ್‌ಪ್ಲಸ್‌ನ ನೂತನ OnePlus Nord CE 4 Lite ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು 128GB ಮತ್ತು 256GB ಸ್ಟೋರೇಜ್ ರೂಪಾಂತರದಲ್ಲಿ 20,000 ರೂ.ನ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

OnePlus Nord CE4 Lite 5G ಬೆಲೆ ಎಷ್ಟು?
ಈ ಹೊಸ OnePlus Nord CE4 Lite ಅನ್ನು ಎರಡು ರೂಪಾಂತರಗಳಲ್ಲಿ ಲಾಂಚ್ ಮಾಡಲಾಗಿದೆ. ಮೂಲ ಮಾದರಿಯು 8GB LPDDR4x RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದರ ಬೆಲೆ 19,999 ರೂ. ಇದೆ. ಟಾಪ್ ಎಂಡ್ (ಎರಡನೇ ಮಾದರಿ) ವೇರಿಯಂಟ್ 8GB LPDDR4x RAM ಜೊತೆಗೆ 256GB ಸ್ಟೋರೇಜ್ ಅನ್ನು ಹೊಂದಿದೆ. ಈ ಮಾದರಿಯ ಬೆಲೆ 22,999 ರೂ. ಇದೆ.
ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯ
ಈ ಫೋನ್ ಮೂರು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಸೂಪರ್ ಸಿಲ್ವರ್, ಮೆಗಾ ಬ್ಲೂ ಮತ್ತು ಅಲ್ಟ್ರಾ ಆರೆಂಜ್ ಕಲರ್‌ನಲ್ಲಿ ಲಭ್ಯವಿದೆ. OnePlus Nord CE4 Lite ಭಾರತದಲ್ಲಿ ಜೂನ್ 27 ರಂದು ಗುರುವಾರ ಮಧ್ಯಾಹ್ನ 12 ಗಂಟೆಗೆ ಸೂಪರ್ ಸಿಲ್ವರ್ ಮತ್ತು ಮೆಗಾ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಅಲ್ಟ್ರಾ ಆರೆಂಜ್ ರೂಪಾಂತರವು ಮುಂಬರುವ ದಿನಗಳಲ್ಲಿ ಲಭ್ಯವಿರುತ್ತದೆ.
ಭರ್ಜರಿ ಲಾಂಚ್ ಆಫರ್‌ಗಳು
ಆಸಕ್ತ ಗ್ರಾಹಕರು OnePlus ಸ್ಟೋರ್ ಅಪ್ಲಿಕೇಶನ್, OnePlus Experience ಸ್ಟೋರ್, Amazon.in, Reliance Digital, Croma ಮತ್ತು ಇತರ ಆಫ್‌ಲೈನ್ ಪಾಲುದಾರ ಅಂಗಡಿಗಳ ಮೂಲಕ ಈ ಫೋನ್ ಖರೀದಿಸಬಹುದು. ಬಿಡುಗಡೆಯ ಅಂಗವಾಗಿ, OnePlus ವಿಶೇಷ ಆಫರ್‌ಗಳನ್ನು ಸಹ ನೀಡುತ್ತಿದೆ. EMI ಖರೀದಿಗಳಿಗಾಗಿ ICICI ಬ್ಯಾಂಕ್ ಮತ್ತು OneCard ಕ್ರೆಡಿಟ್ ಕಾರ್ಡ್‌ಗಳ ಮೇಲೆ 1,000 ರೂ. ಡಿಸ್ಕೌಂಟ್ ಪಡೆಯಬಹುದು. ಜೊತೆಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ 3 ತಿಂಗಳ No Cost EMI ಆಯ್ಕೆಯನ್ನು ಪಡೆಯಬಹುದು.
ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಡಿಸ್ಕೌಂಟ್
oneplus.in ಮತ್ತು OnePlus ಸ್ಟೋರ್ ಆ್ಯಪ್ ಮೂಲಕ ಖರೀದಿಸುವ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ 250 ರೂ. ಡಿಸ್ಕೌಂಟ್ ಪಡೆಯಬಹುದು. OnePlus Nord CE4 Lite 5G ಅನ್ನು ಖರೀದಿಸುವಾಗ ಹೊಸ Jio ಪೋಸ್ಟ್‌ಪೇಯ್ಡ್ ಗ್ರಾಹಕರು 2,250 ರೂ.ವರೆಗಿನ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಗ್ರಾಹಕರು ಬಜಾಜ್ ಫಿನ್‌ಸರ್ವ್, ICICI ಬ್ಯಾಂಕ್ ಕನ್ಸ್ಯೂಮರ್ ಫೈನಾನ್ಸ್ ಮತ್ತು HDBFS ಗ್ರಾಹಕ ಸಾಲಗಳ ಮೂಲಕ 6 ತಿಂಗಳ ನೋ-ಕಾಸ್ಟ್ EMI ಯೋಜನೆಯನ್ನು ಆಯ್ಕೆ ಮಾಡಬಹುದು.
OnePlus Nord CE4 Lite ಸಂಪೂರ್ಣ ಫೀಚರ್ಸ್‌ಗಳು
- ಡಿಸ್ಲ್ಪೇ: 6.67-ಇಂಚಿನ (2400 × 1080 ಪಿಕ್ಸೆಲ್‌ಗಳು) ಪೂರ್ಣ HD+ OLED ಡಿಸ್‌ಪ್ಲೇ, 120Hz ರಿಫ್ರೆಶ್ ದರ, 240Hz ಸ್ಪರ್ಶ ಮಾದರಿ ದರ, 2100 nits ವರೆಗೆ ಭಾಗಶಃ ಗರಿಷ್ಠ ಬ್ರೈಟ್‌ನೆಸ್, 1200 nits ವರೆಗೆ ಜಾಗತಿಕ ಗರಿಷ್ಠ ಬ್ರೈಟ್‌ನೆಸ್
- ಪ್ರೊಸೆಸರ್: Qualcomm Snapdragon 695 6nm 5G SoC ಜೊತೆಗೆ Adreno 619 GPU
- ಸ್ಟೋರೇಜ್: 8GB LPDDR4x RAM, 128GB / 256GB (UFS 2.2) ಸ್ಟೋರೇಜ್, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
- OS: Android 14 ಜೊತೆಗೆ OxygenOS 14 (2 ಪ್ರಮುಖ Android ನವೀಕರಣಗಳು + 3 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ)
- AI ಫೀಚರ್ಸ್: AI ಸ್ಮಾರ್ಟ್ ಕಟೌಟ್
- ಸಿಮ್: ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)
- ಕ್ಯಾಮೆರಾ: 50MP ಮುಖ್ಯ ಕ್ಯಾಮರಾ (ಸೋನಿ LYT-600 ಕ್ಯಾಮೆರಾ) ಜೊತೆಗೆ 1/1.95″ Sony LYT-600 ಸಂವೇದಕ, f/1.8 ದ್ಯುತಿರಂಧ್ರ, OIS, f/2.4 ದ್ಯುತಿರಂಧ್ರದೊಂದಿಗೆ 2MP ಡೆಪ್ತ್ ಸೆನ್ಸಾರ್, LED ಫ್ಲಾಶ್ f/2.4 ದ್ಯುತಿರಂಧ್ರದೊಂದಿಗೆ 16MP ಫ್ರಂಟ್ ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ, 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು
- ರಕ್ಷಣೆ: ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP54)
- ಅಳತೆ: 162.9×75.6×8.1mm, ತೂಕ: 191 ಗ್ರಾಂ
- ಕನೆಕ್ಟಿವಿಟಿ ಆಯ್ಕೆಗಳು: 5G SA/ NSA, ಡ್ಯುಯಲ್ 4G VoLTE, Wi-Fi 6 802.11 ac (2.4GHz + 5GHz), ಬ್ಲೂಟೂತ್ 5.2, GPS/GLONASS/Beidou, USB ಟೈಪ್-C
- ಬ್ಯಾಟರಿ: 80W SuperVOOC ವೇಗದ ಚಾರ್ಜಿಂಗ್ ಜೊತೆಗೆ 5500mAh ಸಾಮರ್ಥ್ಯದ (ವಿಶಿಷ್ಟ) ಬ್ಯಾಟರಿ (20 ನಿಮಿಷಗಳಲ್ಲಿ 100% ವರೆಗೆ ಚಾರ್ಜ್ ಆಗುತ್ತದೆ)
- ಬೆಲೆ: 19,999 ರೂ. (8GB + 128GB), 22,999 ರೂ. (8GB + 256GB)


Click it and Unblock the Notifications








