OnePlus: ಲಾಚ್ ಆಗುವ ಮುನ್ನವೇ ಒನ್‌ಪ್ಲಸ್ ನಾರ್ಡ್ CE4 ಸ್ಟೋರೇಜ್ ವಿವರ ಬಹಿರಂಗ!
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus smartphone) ಹೆಚ್ಚಿನ ಕ್ರೇಜ್ ಸೃಷ್ಟಿ ಮಾಡುತ್ತವೆ. ಅದರಂತೆ ಈಗ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿರುವ ಒನ್‌ಪ್ಲಸ್ ನಾರ್ಡ್ CE4 (OnePlus Nord CE4) ಫೋನ್ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳು ಲೀಕ್ ಆಗುತ್ತಿದ್ದವು. ಆದರೆ, ಇವು ಅಧಿಕೃತ ಆಗಿರಲಿಲ್ಲ. ಈಗ ಈ ಫೋನ್‌ನ ಸ್ಟೋರೇಜ್ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಲಾಗಿದೆ.
ಹೌದು, ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್ ಅನ್ನು ಏಪ್ರಿಲ್ 1 ಅನಾವರಣ ಮಾಡಲಾಗುತ್ತಿದ್ದು, ಈ ಫೋನ್ ಲಾಂಚ್ ಆಗುವ ಮುನ್ನವೇ ಭಾರೀ ಸಂಚಲನ ಉಂಟು ಮಾಡಿದೆ. ಈ ಸ್ಮಾರ್ಟ್‌ಫೋನ್ ಮಿಡ್ ರೇಂಜ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಹಾಗಿದ್ರೆ, ಈಗ ಅಧಿಕೃತ ಆಗಿರುವ ಸ್ಟೋರೇಜ್ ಮಾಹಿತಿ ಮತ್ತು ಇತರೆ ನಿರೀಕ್ಷಿತ ಫೀಚರ್ಸ್ ಏನು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ ನಾರ್ಡ್ CE4: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್ ಬಲದಲ್ಲಿ ಕಾಣಿಸಿಕೊಳ್ಳಲಿದ್ದು, 8GB RAM ಮತ್ತು 256GB ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಲಭ್ಯ ಇರಲಿದೆ. ಜೊತೆಗೆ ಇದು ಐಸ್ ಬ್ಲೂ ಬಣ್ಣ ಮತ್ತು ಕ್ಲಾಸಿಕ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯ ಇರಬಹುದು ಎಂದು ತಿಳಿದುಬಂದಿದೆ.
ಇನ್ನು ಒನ್‌ಪ್ಲಸ್ ಇಂಡಿಯಾದ ಅಧಿಕೃತ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಾರ್ಡ್ CE 4ನ ಪ್ರಮುಖ ಫೀಚರ್ಸ್ ಅನ್ನು ಬಹಿರಂಗಪಡಿಸಲಾಗಿದೆ. ಈ ಮಾಹಿತಿಯಂತೆ ಈ ಡಿವೈಸ್ 1TB ವರೆಗಿನ ಸ್ಟೋರೇಜ್‌ಗೆ ಅವಕಾಶ ನೀಡಲಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ 8GB LPDDR4X RAM ಹಾಗೂ ಹೆಚ್ಚುವರಿ 8GB ಯ ವರ್ಚುವಲ್ ಸ್ಟೋರೇಜ್ ಆಯ್ಕೆಯನ್ನು ಪಡೆದಿರಲಿದೆ.

ಹಾಗೆಯೇ ನಾರ್ಡ್ CE 4 UFS 3.1 ನ 256GB ಇಂಟರ್ ಸ್ಟೋರೇಜ್ ಆಯ್ಕೆ ಕಾಣಬಹುದಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ 128GB ಸ್ಟೋರೇಜ್ ಆಯ್ಕೆಯ ಮೂಲ ರೂಪಾಂತರದ ಫೋನ್ ಸಹ ಲಭ್ಯ ಇರಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಈ ಮೊದಲು ಈ ಫೋನ್‌ನ ವಿನ್ಯಾಸ ಮತ್ತು ಇತರ ಕೆಲವು ಫೀಚರ್ಸ್‌ಗಳನ್ನು ಮೀಸಲಾದ ಮೈಕ್ರೋಸೈಟ್ ಮೂಲಕ ಲೇವಡಿ ಮಾಡಿ ಸದ್ದು ಮಾಡಿತ್ತು. ಅದರಂತೆ ಈ ಫೋನ್ ಸೆಲಡಾನ್ ಮಾರ್ಬಲ್ ಮತ್ತು ಡಾರ್ಕ್ ಕ್ರೋಮ್ ಬಣ್ಣ ಆಯ್ಕೆಗಳಲ್ಲಿ ಕಾಣಿಸಿಕೊಳ್ಳಲಿದೆ ಅನ್ನೋ ಮಾಹಿತಿಯನ್ನು ತಿಳಿದುಬಂದಿತ್ತು. ಪೋಸ್ಟ್ ಮಾಡಲಾದ ಚಿತ್ರಗಳನ್ನು ಗಮನಿಸಿದ್ರೆ ಈ ಫೋನ್ ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿರಲಿದ್ದು, ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿರುತ್ತದೆ ಎಂದು ಊಹಿಸಲಾಗಿತ್ತು.

ಇದರ ಜೊತೆಗೆ 120Hz ನ ರಿಫ್ರೆಶ್ ರೇಟ್ ಆಯ್ಕೆಯ ಜೊತೆಗೆ 6.7ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಪ್ರಮುಖವಾಗಿ ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಉಳಿದಂತೆ ಈ ಫೋನ್ 5,000mAh ಬ್ಯಾಟರಿ ಆಯ್ಕೆ ಪಡೆಯಲಿದೆ ಎನ್ನಲಾಗಿದ್ದು, 80W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ ಎಂದು ತಿಳಿದುಬಂದಿದೆ.
ಒನ್‌ಪ್ಲಸ್ ನಾರ್ಡ್ CE 4 ಬೆಲೆ ವಿವರ: ಈ ಫೋನ್ 30,000 ರೂ.ಗಳ ಬೆಲೆಯ ಆಸುಪಾಸಿನಲ್ಲಿ ಲಭ್ಯವಾಗಬಹುದು ಎನ್ನಲಾಗಿದೆ. ಅದಾಗ್ಯೂ ಈ ಬೆಲೆಯ ವಿಚಾರದಲ್ಲಿ ಯಾವುದೇ ಮಾಹಿತಿ ಲೀಕ್ ಆಗಿಲ್ಲ. ಇನ್ನು ನಾರ್ಡ್ CE 3 ಅನ್ನು ಕಳೆದ ವರ್ಷ 26,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಾಂಚ್ ಮಾಡಲಾಗಿದ್ದು, ಅದರಂತೆ ಈ ಹೊಸ ಫೋನ್ ಇದೇ ಬೆಲೆಯನ್ನು ಅಥವಾ ಇದಕ್ಕಿಂತ ಕೊಂಚ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
ಒನ್‌ಪ್ಲಸ್ ಏಸ್ 3V : ಈ ನಡುವೆ ಮುಂದಿನ ವಾರ ಲಾಂಚ್ ಆಗುವ ಈ ಫೋನ್ (OnePlus Ace 3V) ಬಗ್ಗೆಯೂ ಕೆಲವು ಮಾಹಿತಿಗಳು ತಿಳಿದುಬಂದಿವೆ. ಈ ಫೋನ್ 16 GB LPDDR5X RAM ಮತ್ತು 512 GB UFS 4.0 ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಈ ಫೋನ್ ಎಐ ಆಧಾರಿತ ಫೀಚರ್ಸ್ ಹೊಂದಿರಲಿದೆ ಎಂದು ಟೀಸರ್‌ನಿಂದ ತಿಳಿದುಬಂದಿದೆ.


Click it and Unblock the Notifications








