Home
ಮೊಬೈಲ್

ನಿಮ್ಮ ನಿರೀಕ್ಷೆಯ ಫೀಚರ್ಸ್ ಹೇಳಿ ಸ್ಮಾರ್ಟ್‌ಫೋನ್‌ ಗೆಲ್ಲಿ.! ಒನ್‌ಪ್ಲಸ್‌ನ #PMChallenge.!!

ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ ಕಂಪನಿಗಳು ತಮ್ಮ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಿಲ್ಲೊಂದು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೆ ಇರುತ್ತವೆ. ಆದರೆ ಗ್ರಾಹಕರಿಗೆ ನಿಮ್ಮಗೆ ಯಾವ ಫೀಚರ್ಸ್‌ಇರಬೇಕು ಎಂದು ಕೇಳಿದರೆ? ಗ್ರಾಹಕರನ್ನು ಯಾರು ಕೇಳಿ ಸ್ಮಾರ್ಟ್‌ಫೋನ್‌ ತಯಾರಿಸುತ್ತರೇ ಅಂತೀರಾ. ಹಾಗಂದುಕೊಂಡಿದ್ದರೇ ನಿಮ್ಮ ಊಹೆ ತಪ್ಪು. ಏಕೆಂದರೇ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್ ಇರಬೇಕು ಎಂದು ಗ್ರಾಹಕರಿಗೆ ಕೇಳುತ್ತಿದೆ.!

 ಫೀಚರ್ಸ್ ಹೇಳಿ ಸ್ಮಾರ್ಟ್‌ಫೋನ್‌ ಗೆಲ್ಲಿ.! ಒನ್‌ಪ್ಲಸ್‌ನ #PMChallenge.!!

ಅಚ್ಚರಿ ಎನಿಸಿದರೂ ಇದು ಸತ್ಯ. ಒನ್‌ಪ್ಲಸ್‌ ಕಂಪನಿ ಆಕ್ಸಿಜನ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್‌ಫೋನ್‌ ಒಂದನ್ನು ತಯಾರಿಸುವ ಸೂಚನೆ ಬಹಿರಂಗ ಪಡೆಸಿದ್ದು, ಬರಲಿದುವ ಹೊಸ ಆಕ್ಸಿಜನ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್‌ಫೋನಿನಲ್ಲಿ ಯಾವೆಲ್ಲಾ ಹೊಸ ಫೀಚರ್ಸ್‌ಗಳನ್ನು ನಿರೀಕ್ಷಿಸುತ್ತಿರಿ ಎಂದು ಗ್ರಾಹಕರನ್ನೇ ಕೇಳುತ್ತಿದೆ. ಫೀಚರ್ಸ್‌ಗಳ ಬಗ್ಗೆ ಸರಿಯಾಗಿ ವಿವರಣೆ ನೀಡಿದ ಗ್ರಾಹಕರನ್ನು ವಿಜೇತರನ್ನಾಗಿ ಆಯ್ಕೆ ಸಹ ಮಾಡಲಿದೆ ಎಂದು ಕಂಪನಿ ತಿಳಿಸಿದೆ.

 ಫೀಚರ್ಸ್ ಹೇಳಿ ಸ್ಮಾರ್ಟ್‌ಫೋನ್‌ ಗೆಲ್ಲಿ.! ಒನ್‌ಪ್ಲಸ್‌ನ #PMChallenge.!!

ಇಂಥಹದೊಂದು ವಿಶೇಷ ಆಲೋಚನೆಯನ್ನು ಒನ್‌ಪ್ಲಸ್‌ ಕಂಪನಿ ಮಾಡಿದ್ದು, ಇದರಿಂದ ಗ್ರಾಹಕರ ನಿರೀಕ್ಷಡಗಳನ್ನು ತಿಳಿದುಕೊಳ್ಳುವ ಉದ್ದೇಶವಾಗಿದೆ. ಈ ಕಂಟೆಸ್ಟನಲ್ಲಿ ಭಾಗವಹಿಸುವ ಗ್ರಾಹಕರಿಗೆ ಕಂಪನಿ ಕೆಲವು ಪ್ರಶ್ನೇಗಳನ್ನು ಕೇಳುತ್ತದೆ ಇವುಗಳಿಗೂ ಸೂಕ್ತ ಉತ್ತರ ನೀಡುವ ಮೂಲಕ ಗ್ರಾಹಕರು ತಮ್ಮ ಫೀಚರ್ಸ್‌ಗಳನ್ನು ಸಹ ವಿವರಣಾತ್ಮಕವಾಗಿ PRD ಡಾಕ್ಯುಮೆಂಟ್ ಮಾದರಿಯಲ್ಲಿ ಒನ್‌ಪ್ಲಸ್‌ ಟೆಕ್‌ ವಿಭಾಗದಲ್ಲಿ ಹ್ಯಾಶ್‌ಟ್ಯಾಗ್‌ #PMChallenge ಹೆಸರಿನಲ್ಲಿ ಪೋಸ್ಟ್‌ ಮಾಡಬೇಕು.

 ಫೀಚರ್ಸ್ ಹೇಳಿ ಸ್ಮಾರ್ಟ್‌ಫೋನ್‌ ಗೆಲ್ಲಿ.! ಒನ್‌ಪ್ಲಸ್‌ನ #PMChallenge.!!

ಒನ್‌ಪ್ಲಸ್‌ ಕಂಪನಿ ನಡೆಸುತ್ತಿರುವ ಈ ಕಂಟೆಸ್ಟ್‌ನಲ್ಲಿ ಭಾಗವಹಿಸಲು ಇಚ್ಛಿಸುವ ಗ್ರಾಹಕರು ತಮ್ಮ ನಿರೀಕ್ಷೆಯ ಫೀಚರ್ಸ್‌ಗಳ ಯಾವವು ಎಂದು ಸ್ಪಷ್ಟವಾಗಿ ಮತ್ತು ವಿವರಣಾತ್ಮಕವಾಗಿ ತಿಳಿಸಬೇಕು. ಅಲ್ಲದೇ ನೀವು ತಿಳಿಸುವ ಫೀಚರ್ಸ್‌ಗಳ ಹಿಂದಿರುವ ತರ್ಕವೆನು ಎಂಬುದನ್ನು ಸಹ ಹೇಳಬೇಕು. ನಿಮ್ಮ ಸಂಪೂರ್ಣ ಮಾಹಿತಿಯನ್ನು ಇದೇ ಫೆಬ್ರುವರಿ 22ರ ಒಳಗಾಗಿ ಸಲ್ಲಿಸಬಹುದು. ಈ ಕಂಟೆಸ್ಟ್‌ನಲ್ಲಿ ವಿಜೇತರಾದವರನ್ನು ಮಾರ್ಚ್‌ನಲ್ಲಿ ತಿಂಗಳಲ್ಲಿ ಘೋಷಿಸಲಾಗುವುದು.

ಇನ್ನೂ ಒನ್‌ಪ್ಲಸ್‌ ಕಂಪನಿಯ ಆಕ್ಸಿಜನ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್‌ಫೋನ್‌ ಬಿಡುಗಡೆ ಕಾರ್ಯಕ್ರಮದಲ್ಲಿ ವಿಜೇತರನ್ನು VIP ಸ್ಥಾನ ನೀಡಿ ಅವರಿಗೆ ಆಹ್ವಾನ ನೀಡಲಾಗುತ್ತದೆ ಮತ್ತು ಗ್ರಾಹಕರ ನಿರೀಕ್ಷೆಯಂತೆ ಫೀಚರ್ಸ್‌ಗಳನ್ನು ಒಳಗೊಂಡು ಬಿಡುಗಡೆ ಆಗುವ ಒನ್‌ಪ್ಲಸ್‌ನ ಹೊಸ ಆಕ್ಸಿಜನ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್‌ಫೋನ್‌ ಒಂದನ್ನು ಸಹ ವಿಜೇತರಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ಕಂಪನಿ ಹೇಳುತ್ತಿದೆ.

Best Mobiles in India

English summary
The user has to explain the feature in detail, answer various important questions so as to convince OnePlus that the idea will be good for implementation and also provide sketches with feature flow on a phone.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+