OnePlus 15 ಬಿಡುಗಡೆ ಮೊದಲೇ OnePlus 13 ಬೆಲೆಯಲ್ಲಿ ಭಾರೀ ಇಳಿಕೆ!
ಭಾರತದ ಮೊಬೈಲ್ ಮಾರುಕಟ್ಟೆಗೆ ಬಹುನಿರೀಕ್ಷಿತ OnePlus 15 ಸ್ಮಾರ್ಟ್‌ಫೋನ್ ಬಿಡಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿಸಿವೆ. ಈ ಬಿಡುಗಡೆಗೂ ಮೊದಲೇ OnePlus ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್ OnePlus 13 ಮೇಲೆ ಭಾರೀ ಬೆಲೆ ಇಳಿಕೆ ಘೋಷಿಸಿದೆ. ಮೊದಲು ₹69,999 ಆರಂಭಿಕ ಬೆಲೆಗೆ ಬಿಡುಗಡೆಯಾದ ಈ ಫೋನ್ ಈಗ ₹6,000 ರಿಯಾಯಿತಿಯ ನಂತರ ಕೇವಲ ₹63,999 ಕ್ಕೆ ಲಭ್ಯವಾಗುತ್ತಿದೆ. ಜೊತೆಗೆ ₹3,199 ಹೆಚ್ಚುವರಿ ಕ್ಯಾಶ್‌ಬ್ಯಾಕ್ ಸಹ ದೊರೆಯುತ್ತಿದೆ. ಹಾಗಾದರೆ, ಹೊಸ ಕೊಡುಗೆ ಹೇಗಿದೆ?, ಈಗ OnePlus 13 ಫೋನ್ ಖರೀಸಬಹುದು ಎಂಬುದನ್ನು ಸಹ ನೋಡೋಣ ಬನ್ನಿ.
OnePlus 13 ಈಗ ಹೆಚ್ಚು ಲಾಭದಾಯಕ ಬೆಲೆಯಲ್ಲಿ
ಪ್ರಸ್ತುತ OnePlus 13 ಫೋನ್ Amazon ಮತ್ತು ಕಂಪನಿಯ ಅಧಿಕೃತ ಎರಡೂ ತಾಣಗಳಲ್ಲಿ ಕಡಿತವಾಗಿರುವ ಹೊಸ ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿ, 12GB + 256GB ಫೋನ್ ಮಾದರಿಯು ₹63,999 ರೂ.ಬೆಲೆ ಹೊಂದಿದೆ (ಹಿಂದಿನ ಬೆಲೆ ₹69,999). ಹಾಗೆಯೇ, 16GB + 512GB ಮಾದರಿಯು ₹70,999 ರೂ.ಬೆಲೆ ಹೊಂದಿದೆ (ಹಿಂದಿನ ಬೆಲೆ ₹76,999). ಇದರೊಂದಿಗೆ, ICICI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ₹3,199 ಹೆಚ್ಚುವರಿ ಕ್ಯಾಶ್‌ಬ್ಯಾಕ್ ಸಿಗಲಿದೆ. ಅಂದರೆ ಒಟ್ಟು ಬೆಲೆ ₹60,000 ಕ್ಕಿಂತಲೂ ಕಡಿಮೆಯಾಗುತ್ತದೆ. ಆದರೆ, ಉನ್ನತ 24GB + 1TB ಮಾದರಿಯು ಪ್ರಸ್ತುತ ಸ್ಟಾಕ್‌ನಲ್ಲಿಲ್ಲ.

OnePlus 13: ಈಗ ಖರೀದಿಸುವುದು ಯೋಗ್ಯವೇ?
OnePlus 13 ಮೇಲೆ ಬೆಲೆ ಇಳಿಕೆ ಘೋಷಿಸಿರುವುದು ಸಂತೋಷದ ವಿಷಯ. ಆದರೆ, ಈ ಆಫರ್ OnePlus 15 ಬಿಡುಗಡೆಗೆ ಮುನ್ನ ಬಂದಿರುವುದರಿಂದ, ಈಗ ಅನೇಕರು 'ಇದನ್ನು ಖರೀದಿಸಬೇಕಾ ಅಥವಾ ಹೊಸ ಮಾದರಿಯನ್ನು ಕಾಯಬೇಕಾ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಹೀಗಿದೆ, ನಿಮಗೆ ಹೊಸ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಸ್ಪೆಕ್ಸ್ ಬೇಕಾದರೆ, OnePlus 15 ಕಾದು ನೋಡುವುದು ಉತ್ತಮ ಆಯ್ಕೆ. ಆದರೆ, ಈಗಿನ ರಿಯಾಯಿತಿಯೊಂದಿಗೆ OnePlus 13 ಇನ್ನೂ ಅತ್ಯುತ್ತಮ ಮೌಲ್ಯ ನೀಡುವ ಫೋನ್ ಆಗಿದೆ.ಈ OnePlus 13 ಫೋನ್‌ನಲ್ಲಿ Snapdragon 8 Elite ಚಿಪ್‌ಸೆಟ್, 2K 8T LTPO OLED ಡಿಸ್ಪ್ಲೇ, ಮತ್ತು Hasselblad ಕ್ಯಾಮೆರಾ ಟ್ಯೂನಿಂಗ್ ಇದೆ. ಇವು ಕೂಡ ಪ್ರೀಮಿಯಂ ಪರ್ಫಾರ್ಮೆನ್ಸ್ ನೀಡುತ್ತವೆ. ಆದರೆ, ನಮ್ಮ ಗಮನವು OnePlus 15 ಬೆಲೆ ಮೇಲಿದೆ.
OnePlus 15 ಬಿಡುಗಡೆ ದಿನಾಂಕ ದೃಢವಾಗಿದೆ.
ಬಹುನಿರೀಕ್ಷಿತ ಹೊಸ OnePlus 15 ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ನವೆಂಬರ್ 13 ರಂದು ಸಂಜೆ 7 ಗಂಟೆಗೆ ಬಿಡುಗಡೆಯಾಗುತ್ತಿದೆ. ಅಲ್ಲದೆ ಈ ಫೋನ್ ಅದೇ ದಿನ ರಾತ್ರಿ 8 ಗಂಟೆಯಿಂದ Amazon ಹಾಗೂ OnePlus ಅಧಿಕೃತ ತಾಣದಲ್ಲಿ ಮಾರಾಟಕ್ಕೆ ಬರಲಿದೆ. ಈಗಾಗಲೇ ನಾವು ತಿಳಿದಿರುವಂತೆ, ಹೊಸOnePlus 15 ಪೋನಿನಲ್ಲಿ Snapdragon 8 Elite Gen 5 ಪ್ರೊಸೆಸರ್, 165Hz ರಿಫ್ರೆಶ್ ರೇಟ್ ಡಿಸ್ಪ್ಲೇ, ಮತ್ತು 7,300mAh ಬ್ಯಾಟರಿ ಜೊತೆಗೆ 120W ಫಾಸ್ಟ್ ಚಾರ್ಜಿಂಗ್ ಹಾಗೂ 50W ವೈರ್‌ಲೆಸ್ ಚಾರ್ಜಿಂಗ್ ನಂತಹ ಅತ್ಯಾಕರ್ಷಕ ಫೀಚರ್ಸ್ ಲಭ್ಯವಿರಲಿವೆ. ಈ ಹೊಸ ಮಾದರಿಯ ಬೆಲೆ ಸುಮಾರು ₹70,000 ರಿಂದ ಆರಂಭವಾಗುವ ನಿರೀಕ್ಷೆ ಇದೆ. ಹಾಗಾಗಿ, ಹೊಸ ತಂತ್ರಜ್ಞಾನ ಅನುಭವಿಸಲು ಬಯಸುವವರು OnePlus 15 ಕಾದರೆ ಒಳಿತು. ಆದರೆ, ಕಡಿಮೆ ಬೆಲೆಗೆ ಶಕ್ತಿಯುತ ಫ್ಲ್ಯಾಗ್‌ಶಿಪ್ ಹುಡುಕುವವರಿಗೆ OnePlus 13 ಈಗ ಖರೀದಿಸಲು ಸೂಕ್ತ ಸಮಯ ಎನ್ನಬಹುದು.
ಭಾರತಕ್ಕೆ ಇದೇ ನವೆಂಬರ್ 13 ರಂದು ಸಂಜೆ 7 ಗಂಟೆಗೆ ಆಗಮಿಸುತ್ತಿರುವ OnePlus 15 ಬಿಡುಗಡೆ ಕುರಿತ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








