ಕೇವಲ 7,500 ರೂ.! ಕಮ್ಮಿ ಬೆಲೆಗೆ Oppo A3 ಮತ್ತು A3x ಬಿಡುಗಡೆ; ವಿಶೇಷತೆಗಳೇನು?
ಒಪ್ಪೋ ಪ್ರಿಯರಿಗೆ ಎರಡು ಅಚ್ಚರಿ ಗಿಫ್ಟ್. ಸದ್ದಿಲ್ಲದೇ, ಎರಡು ಹೊಚ್ಚ ಹೊಸ ಫೋನ್ ಮಾರುಕಟ್ಟೆಗೆ ಎಂಟ್ರಿ. ಹೌದು, ಒಪ್ಪೋ (Oppo) ಕಂಪನಿಯು Oppo A3 ಮತ್ತು A3x ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕಂಪನಿಯು ತನ್ನ A3 ಸರಣಿಯನ್ನು ವಿಸ್ತರಿಸಿದೆ. ನೀವು 10,000 ರೂ.ಗಳಿಗಿಂತ ಕಡಿಮೆ ಬಜೆಟ್‌ನಲ್ಲಿ ಹೊಸ ಫೋನ್ ಖರೀದಿಸುವ ಮನಸ್ಸು ಮಾಡಿದ್ದರೆ, ಈ ಒಪ್ಪೋ ಮೊಬೈಲ್ ಉತ್ತಮ ಆಯ್ಕೆಯಾಗಿದೆ. ಬನ್ನಿ, Oppo A3 ಮತ್ತು A3x ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಹೌದು, Oppo A3 ಮತ್ತು Oppo A3x ಎರಡು 4G ಫೋನ್‌ಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ. ಎರಡೂ ಫೋನ್‌ಗಳು 6.67 ಇಂಚಿನ HD ಪ್ಲಸ್ ಡಿಸ್ಪ್ಲೇ ಹೊಂದಿವೆ. ಸ್ನಾಪ್‌ಡ್ರಾಗನ್ 6S Gen 1 ಚಿಪ್‌ಸೆಟ್, 8GB RAM ಮತ್ತು 256GB ಸ್ಟೋರೇಜ್ ಒಳಗೊಂಡಿದೆ. 45W ವೇಗದ ಚಾರ್ಜಿಂಗ್‌ನೊಂದಿಗೆ 5000mAh ದೊಡ್ಡ ಬ್ಯಾಟರಿ, ಉತ್ತಮ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿವೆ.

Oppo A3 ಮತ್ತು A3x 4G ಬೆಲೆ
- 4GB RAM + 64GB ಸ್ಟೋರೇಜ್ ಬೆಲೆ - 7,500 ರೂ.
- 4GB RAM + 128GB ಸ್ಟೋರೇಜ್ ಬೆಲೆ - 9,500 ರೂ.
- 6GB RAM + 128GB ಸ್ಟೋರೇಜ್ ಬೆಲೆ - 11,200 ರೂ.
ಮಲೇಷ್ಯಾ ಗ್ಲೋಬಲ್ ಸೈಟ್‌ನಲ್ಲಿ Oppo A3X ಫೋನಿನ 4GB RAM ಮತ್ತು 128GB ಸ್ಟೋರೇಜ್ RM499 ನಲ್ಲಿ ಪಟ್ಟಿಮಾಡಲಾಗಿದೆ. ಇದು ಸ್ಪಾರ್ಕಲ್ ಬ್ಲಾಕ್, ಸ್ಟಾರ್ರಿ ಪರ್ಪಲ್, ಸ್ಟಾರ್‌ಲೈಟ್ ವೈಟ್ ಬಣ್ಣಗಳಲ್ಲಿ ಬರುತ್ತದೆ. Oppo A3 ಫೋನನ್ನು ಜಾಗತಿಕ ವೆಬ್‌ಸೈಟ್‌ನಲ್ಲಿ ಮಾತ್ರ ಪಟ್ಟಿ ಮಾಡಲಾಗಿದೆ. ಇದರ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಇದು ನೆಬ್ಯುಲಾ ರೆಡ್ ಮತ್ತು ಓಷನ್ ಬ್ಲೂ ಬಣ್ಣಗಳಲ್ಲಿ ಲಭ್ಯವಿರುತ್ತದೆ.
Oppo A3 ಮತ್ತು A3x 4G ಫೀಚರ್ಸ್
ಡಿಸ್ಲ್ಪೇ: Oppo A3 ಮತ್ತು Oppo A3x 4G ಮೊಬೈಲ್‌ಗಳು 6.67 ಇಂಚಿನ LCD HD Plus ಡಿಸ್ಪ್ಲೇಯನ್ನು ಹೊಂದಿವೆ. ಈ ಡಿಸ್ಲ್ಪೇಯಲ್ಲಿ 90Hz ರಿಫ್ರೆಶ್ ದರ ಮತ್ತು 1000nits ಗರಿಷ್ಠ ಬ್ರೈಟ್‌ನೆಸ್ ಒದಗಿಸಲಾಗಿದೆ.
ಪ್ರೊಸೆಸರ್: ಎರಡೂ ಸ್ನಾಪ್‌ಡ್ರಾಗನ್ 6S Gen 1 ಚಿಪ್‌ಸೆಟ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ Adreno 610 GPU ಅನ್ನು ಒಳಗೊಂಡಿದೆ. ಇದು 8GB ವರೆಗೆ LPDDR4X RAM, ವರ್ಚುವಲ್ RAM ತಂತ್ರಜ್ಞಾನ ಮತ್ತು 256GB ವರೆಗಿನ eMMC 5.1 ಇಂಟರ್ನಲ್ ಸ್ಟೋರೇಜ್ ಮತ್ತು ಮೈಕ್ರೋ SD ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ.
ಸಾಫ್ಟ್‌ವೇರ್: Oppo A3 ಮತ್ತು Oppo A3x ಎರಡೂ ಫೋನ್‌ಗಳು Android 14 ಆಧಾರಿತ Color OS 14.0 ನಲ್ಲಿ ಕಾರ್ಯನಿರ್ವಹಿಸುತ್ತವೆ.

ಕ್ಯಾಮೆರಾ: Oppo A3 4G ಫೋನ್ 50 ಮೆಗಾಪಿಕ್ಸೆಲ್ AF ಮುಖ್ಯ ಸಂವೇದಕ ಮತ್ತು ಫ್ಲಿಕರ್ ಸಂವೇದಕವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. Oppo A3x 4G ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: Oppo A3 ಮತ್ತು A3x 4G ಫೋನ್ 5100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಎರಡೂ 45W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿವೆ. ಇದರ ಸಹಾಯದಿಂದ ಲಾಂಗ್ ಬ್ಯಾಕಪ್ ಹಾಗೂ ತ್ವರಿತ ಚಾರ್ಜಿಂಗ್ ಸೌಲಭ್ಯ ಲಭ್ಯವಿದೆ.
ಇತರೆ ಫೀಚರ್ಸ್: Oppo A3 ಮತ್ತು A3x 4G ಫೋನ್ NFC, Bluetooth 5.0, 4G Wi-Fi 5, USB ಟೈಪ್ C-ಪೋರ್ಟ್, 3.5mm ಹೆಡ್‌ಫೋನ್ ಜ್ಯಾಕ್, ಮಿಲಿಟರಿ ದರ್ಜೆಯ ಆಘಾತ ಪ್ರತಿರೋಧ ಮತ್ತು ನೀರಿನ ಪ್ರತಿರೋಧ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








