ಬಿಡುಗಡೆಗೆ ಮುನ್ನವೇ ಒಪ್ಪೊ A83 ಸ್ಮಾರ್ಟ್‌ಫೋನ್ ಹೇಗಿದೆ ನೋಡಿ.! ಸ್ಮಾರ್ಟ್ ಸೆಲ್ಪಿ-ಫುಲ್‌ಸ್ಕ್ರಿನ್ ಡಿಸ್‌ಪ್ಲೇ..!
ಸೆಲ್ಪಿ ಕ್ರೇಜ್ ಇರುವ ಯುವ ಜನತೆಗೆ ಸರಿಯಾಗುವಂತಹ ಸ್ಮಾರ್ಟ್‌ಫೋನ್ ಅನ್ನು ಒಪ್ಪೋ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಜನವರಿ 20ರಿಂದ ಆನ್‌ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಮಾರಾಟವಾಗಲಿರುವ ಒಪ್ಪೊ A83 ಸ್ಮಾರ್ಟ್‌ಫೋನ್ ಈಗಾಗಲೇ ಟ್ರೆಂಡ್ ಹುಟ್ಟಿಹಾಕಿದೆ. ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಸಖತ್ ಸದ್ದು ಮಾಡುತ್ತಿದೆ. ಶೀಘ್ರವೇ ನಮ್ಮ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಲಿದೆ.

ಸ್ಮಾರ್ಟ್ ಸೆಲ್ಫಿ ವಿಶೇಷತೆಯನ್ನು ಹೊಂದಿರುವ ಒಪ್ಪೊ A83 ಪೋನಿನಲ್ಲಿ 13MP ಹಿಂಭಾಗದ ಕ್ಯಾಮೆರಾ ಮತ್ತು 8MP ಕ್ಯಾಮೆರಾವನ್ನು ಸೆಲ್ಫಿ ನೀಡಲಾಗಿದ್ದು, ಇದರೊಂದಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಅತ್ಯದ್ಬುತ ಚಿತ್ರಗಳನ್ನು ಸೆರೆಹಿಡಿಯಲಿದೆ.
ಓದಿರಿ: ಬಜೆಟ್ ಬೆಲೆಯಲ್ಲಿ ಶಿಯೋಮಿ Mi TV 4A ಆಂಡ್ರಾಯ್ಡ್ ಟಿವಿ ಲಾಂಚ್: ಬೆಲೆ ಕೇಳಿ ಬೆಚ್ಚಿಬಿದ್ದ ಮಾರುಕಟ್ಟೆ..!
ವಿಡಿಯೋ ನೋಡಿ:
ಒಪ್ಪೊ A83 ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಹೇಗಿದೆ ಎನ್ನುವ ವಿಡಿಯೋವನ್ನು ಕನ್ನಡಲ್ಲಿಯೇ ನೋಡಿರಿ. ಅತ್ಯುತ್ತಮ ಫೀಚರ್ಸ್‌ಗಳಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ ಎನ್ನಲಾಗಿದೆ.

3GB RAM/32GB ಇಂಟರ್ನಲ್ ಮೆಮೊರಿ:
ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿ 2.5GHz ಮೀಡಿಯಾ ಟೆಕ್ MT6763T SoC ಆಕ್ಟಕೋರ್ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 3GB RAM/32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ 7.1 ಮೂಲಕ ಕಾರ್ಯನಿರ್ವಹಿಸಲಿದೆ.


FHD ಫುಲ್ ಸ್ಕ್ರೀನ್ ಡಿಸ್‌ಪ್ಲೇ:
ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿ 5.7 ಇಂಚಿನ FHD ಗುಣಮಟ್ಟದ ಫುಲ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 18:9 ಅನುಪಾತದಿಂದ ಕೂಡಿದೆ. ವಿಡಿಯೋಗಳನ್ನು ನೋಡಲು ಇದು ಉತ್ತಮವಾಗಿದೆ ಎನ್ನಲಾಗಿದೆ.

ಸೆಲ್ಫಿ ಸಹ ಉತ್ತಮವಾಗಿದೆ:
ಒಪ್ಪೊ A83ಯನ್ನು ಸ್ಮಾರ್ಟ್ ಸೆಲ್ಫಿ ವಿಶೇಷತೆಯನ್ನು ಕಾಣಬಹುದಾಗಿದೆ. ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಫೋಟೋಗಳನ್ನು ಉತ್ತಮವಾಗಿ ಸೆರೆಹಿಡಿಯಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.


Click it and Unblock the Notifications








