ಬಜೆಟ್ ಬೆಲೆಯಲ್ಲಿ ಶಿಯೋಮಿ Mi TV 4A ಆಂಡ್ರಾಯ್ಡ್ ಟಿವಿ ಲಾಂಚ್: ಬೆಲೆ ಕೇಳಿ ಬೆಚ್ಚಿಬಿದ್ದ ಮಾರುಕಟ್ಟೆ..!

Written By:

ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿರುವ ಶಿಯೋಮಿ ಸದ್ಯ ಚೀನಾ ಮಾರುಕಟ್ಟೆಯಲ್ಲಿ ಬೊಂಟಾಟ್ ಎನ್ನುವ ಸ್ಮಾರ್ಟ್‌ ಟಿವಿಯೊಂದನ್ನು ಲಾಂಚ್ ಮಾಡಿದ್ದು, ಈ ಟಿವಿಯನ್ನು ಭಾರತೀಯ ಮಾರುಕಟ್ಟೆಗೂ ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್‌ ಟಿವಿ ಲಾಂಚ್ ಆಗಿದ್ದು, ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸುವ ಸಾಧ್ಯತೆ ಇದೆ.

ಬಜೆಟ್ ಬೆಲೆಯಲ್ಲಿ ಶಿಯೋಮಿ Mi TV 4A ಆಂಡ್ರಾಯ್ಡ್ ಟಿವಿ ಲಾಂಚ್:

ಈಗಾಗಲೇ ಹಲವು ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಶಿಯೋಮಿ, ಈ ಹೊಸ Mi TV 4A ಸ್ಮಾರ್ಟ್‌ಟಿವಿಯ ಮೂಲಕ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ. ಈಗಾಗಲೇ ಈ ಸ್ಮಾರ್ಟ್‌ ಟಿವಿಯ ಮೇಲೆ ಭಾರೀ ನಿರೀಕ್ಷೆಗಳು ನಿರ್ಮಾಣವಾಗಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಟಿವಿ ಕುರಿತ ಮಾಹಿತಿಯೂ ಇಲ್ಲಿದೆ ಎನ್ನಲಾಗಿದೆ.

ಓದಿರಿ: ರೂ.2000ಕ್ಕೆ ನೋಕಿಯಾ 1 ಆಂಡ್ರಾಯ್ಡ್‌ ಫೋನ್‌: ಬಿಡುಗಡೆಗೆ ಮೂಹುರ್ತ ಫಿಕ್ಸ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ಟಿವಿ:

ಆಂಡ್ರಾಯ್ಡ್ ಟಿವಿ:

Mi TV 4A ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದೊಂದಿಗೆ ಕೃತಕ ಬುದ್ದಿಮತ್ತೆಯನ್ನು ಒಳಗೊಂಡಿದೆ. ಈ ಕೃತಕ ಬುದ್ದಿಮತ್ತೆಯೂ ವಿಡಿಯೋ ಕ್ವಾಲಿಟಿಯನ್ನು ಹೆಚ್ಚು ಮಾಡಲಿದೆ. ಇದರಿಂದಾಗಿ ಈ ಟಿವಿಯಲ್ಲಿ ಪ್ಲೇ ಆಗುವ ವಿಡಿಯೋಗಳು ಉತ್ತಮ ಬಣ್ಙವನ್ನು ಹೊಂದಿರಲಿದೆ.

4K ಗುಣಮಟ್ಟದ ಸ್ಮಾರ್ಟ್‌ ಟಿವಿ:

4K ಗುಣಮಟ್ಟದ ಸ್ಮಾರ್ಟ್‌ ಟಿವಿ:

Mi TV 4A 50 ಇಂಚಿನದ್ದಾಗಿದ್ದು, 4K ಗುಣಮಟ್ಟದಾಗಿದ್ದು, HDR 10+ ನಿಂದ ಕೂಡಿದ್ದು, ಅದ್ಬುತವಾಗಿ ವಿಡಿಯೋಗಳನ್ನು ಪ್ಲೇ ಮಾಡಲಿದೆ. ಇದು ಟಿವಿ ನೋಡುವ ವಿಧಾನವನ್ನು ಬದಲಾವಣೆ ಮಾಡಲಿದೆ ಎನ್ನಲಾಗಿದೆ. ಇದು ಉತ್ತಮವಾದ ಸೌಂಡ್ ಕ್ವಾಲಿಟಿಯನ್ನು ಹೊಂದಿದೆ.

10 ಸ್ಪೀಕರ್ ಗಳು:

10 ಸ್ಪೀಕರ್ ಗಳು:

Mi TV 4A ಸ್ಮಾರ್ಟ್‌ಟಿವಿಯಲ್ಲಿ Mi TV ಸೌಂಡ್‌ ಬಾರ್ ಕಾಣಬಹುದಾಗಿದ್ದು, ಇದು ಒಟ್ಟು 10 ಸ್ಪೀಕರ್ ಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಇದರೊಂದಿಗೆ ಎರಡು ವೈರ್ ಲೈಸ್ ಸ್ಪೀಕರ್ ಸಹ ನೀಡಲಾಗುತ್ತಿದ್ದು, ಉತ್ತಮವಾದ ಸೌಂಡ್ ಕ್ವಾಲಿಟಿಯನ್ನು ಈ ಟಿವಿಯಲ್ಲಿ ಕೇಳಬಹುದು. ರಿಮೋಟ್ ಕೂಡ ಉತ್ತಮವಾಗಿದೆ.

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
ಬೆಲೆ:

ಬೆಲೆ:

ಚೀನಾ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಟಿವಿ ರೂ.25,000ದ ಆಸುಪಾಸಿನಲ್ಲಿ ಲಾಂಚ್ ಆಗಿದ್ದು, ಭಾರತಕ್ಕೆ ಬಂದರೆ ಇದರ ಬೆಲೆಯಲ್ಲಿ ಮತ್ತಷ್ಟು ಇಳಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ, ಶೀಘ್ರವೇ ಮಾರುಕಟ್ಟೆಯಲ್ಲಿ ಈ ಟಿವಿ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi Mi TV 4A 50-Inch Variant 4K HDR TV Launched. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot