ಯುವಸಮೂಹವನ್ನು ಸೆಳೆಯಲು ಬರುತ್ತಿದೆ 'ರೆನೋ' ಸ್ಮಾರ್ಟ್‌ಫೋನ್ ಬ್ರ್ಯಾಂಡ್..!!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒಪ್ಪೊ ಇತ್ತೀಚಿಗೆ ತನ್ನ ಹೊಸ 'ಎಫ್‌11 ಪ್ರೊ' ಸ್ಮಾರ್ಟ್‌ಫೋನ್ ಮೂಲಕ ಭಾರೀ ಸುದ್ದಿ ಮಾಡಿದ್ದು. ರೈಸಿಂಗ್‌ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸುವ ಮೂಲಕ ಸೆಲ್ಫಿ ಪ್ರಿಯರ ಗಮನಸೆಳೆದಿದೆ. ಆದರೆ ಇದೀಗ ಕಂಪನಿಯೂ ಗ್ರಾಹಕರಿಗೆ ಮತ್ತೆ ಒಂದು ಸರ್‌ಪ್ರೈಸ್‌ ಕೊಡಲು ಮುಂದಾಗಿದ್ದು, ಆದರೆ ಅದು ಒಪ್ಪೊ ಕಂಪನಿ ಅಲ್ಲ, ಬದಲಿಗೆ ರೆನೋ.!?

ಯುವಸಮೂಹವನ್ನು ಸೆಳೆಯಲು ಬರುತ್ತಿದೆ 'ರೆನೋ' ಸ್ಮಾರ್ಟ್‌ಫೋನ್ ಬ್ರ್ಯಾಂಡ್..!!

ಹೌದು, ಒಪ್ಪೊ 'ರೆನೋ' ಹೆಸರಿನ ಉಪ ಬ್ರ್ಯಾಂಡ್‌ ಅನ್ನು ಪರಿಚಯಿಸಿದ್ದು, ಈ ಹೊಸ ಬ್ರ್ಯಾಂಡ್‌ ಮೂಲಕ ಪ್ರತ್ಯಕವಾಗಿ ಸ್ಮಾರ್ಟ್‌ಫೋನ್‌ಗಳನ್ನು ಹೊರತರಲಿದೆ ಎಂದು ಒಪ್ಪೊ ಕಂಪನಿಯ ಉಪಾಧ್ಯಕ್ಷರಾದ ಶೆನ್ ಯೈರ್ನ್ ಅವರು ಹೇಳಿದ್ದಾರೆ. ಇದೇ ಏಪ್ರಿಲ್ 10 ರಂದು ಚೀನಾದಲ್ಲಿ ಅಧಿಕೃತವಾಗಿ ರೆನೋ ಬ್ರ್ಯಾಂಡ್‌ ಮೊದಲ ಸ್ಮಾರ್ಟ್‌ಫೋನ್‌ ಅನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಯುವಸಮೂಹವನ್ನು ಸೆಳೆಯಲು ಬರುತ್ತಿದೆ 'ರೆನೋ' ಸ್ಮಾರ್ಟ್‌ಫೋನ್ ಬ್ರ್ಯಾಂಡ್..!!

ಈಗಾಗಲೇ ರೆನೋದ ಲೋಗೋವನ್ನು ಸಹ ಬಿಡುಗಡೆ ಮಾಡಿದ್ದು, ಇದು ಒಪ್ಪೊ ಸ್ಮಾರ್ಟ್‌ಫೋನ್‌ ಡಿಸೈನ್‌ಗಿಂತ ಭಿನ್ನ ಡಿಸೈನ್‌ನಲ್ಲಿ ಬರಲಿದ್ದು, ಯುವಸಮೂಹವನ್ನು ಸೆಳೆಯಲು ತಯಾರಾಗಿದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾ ಮತ್ತು ಪ್ರೊಸೆಸರ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿದು ಬಂದಿದೆ. ಹಾಗಾದರೇ ಒಪ್ಪೊ ಕಂಪನಿಯ ಉಪ ಬ್ರ್ಯಾಂಡ್‌ 'ರೆನೋ' ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಪ್ರೊಸೆಸರ್‌

ಪ್ರೊಸೆಸರ್‌

ಒಪ್ಪೊ ಕಂಪನಿಯ ಬರಲಿರುವ ರೆನೋ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಸ್ತುತ ಚಾಲ್ತಿ ಇರುವ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಅನ್ನು ಕಾಣಬಹುದಾಗಿದ್ದು, ಈ ಉನ್ನತ ಪ್ರೊಸೆಸರ್‌ನಲ್ಲಿ ಸ್ಮಾರ್ಟ್‌ಫೋನ್‌ ಕಾರ್ಯದಕ್ಷತೆ ಅದ್ಬುತವಾಗಿರಲಿದೆ. ಅತ್ಯುತ್ತಮ ಪ್ರೊಸೆಸರ್‌ ಸ್ಮಾರ್ಟ್‌ಫೋನ್ ಕಾರ್ಯದ ವೇಗವನ್ನು ಹೆಚ್ಚಿಸುತ್ತದೆ ಹಾಗೂ ಗೇಮ್ಸ್‌ಗೆ ಪೂರಕವಾಗಿರಲಿದೆ.

ಕ್ಯಾಮೆರಾ

ಕ್ಯಾಮೆರಾ

ಬರಲಿರುವ ರೆನೋ ಸ್ಮಾರ್ಟ್‌ಫೋನ್‌ ಕ್ಯಾಮೆರಾಗಳಲ್ಲಿ 10x ಆಪ್ಟಿಕಲ್ ಝೂಮ್‌ ಆಯ್ಕೆಯನ್ನು ನೀಡುವ ಸಾಧತ್ಯಗಳಿವೆ ಎನ್ನಲಾಗುತ್ತಿದ್ದು, ಇತ್ತೀಚಿಗೆ ಮುಕ್ತಾಯವಾದ 2019ರ ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ ಮೇಳದಲ್ಲಿ ಆಪ್ಟಿಕಲ್ ಝೂಮ್‌ ಪ್ರದರ್ಶಿಸಲಾಗಿತ್ತು. ತಯವ ಸಮೂಹ ಕ್ಯಾಮೆರಾದತ್ತ ಹೆಚ್ಚು ಒಲವು ಹೊಂದಿರುವುದರಿಂದ ಹೈ ರೆಸಲ್ಯೂಶನ್ ಕ್ಯಾಮೆರಾ ಒದಗಿಸಲಾಗುವ ನಿರೀಕ್ಷೆಗಳಿವೆ.

ಬ್ಯಾಟರಿ

ಬ್ಯಾಟರಿ

ಮೊದಲಿನಿಂದಲೂ ಅಧಿಕ ಸಾಮರ್ಥ್ಯದ ಬ್ಯಾಟರಿಯನ್ನು ಪರಿಚಯಿಸುತ್ತಿರುವ ಒಪ್ಪೊ ತನ್ನ ಹೊಸ ಸಬ್‌ ಬ್ರ್ಯಾಂಡ್‌ ರೆನೋ ಸ್ಮಾರ್ಟ್‌ಫೋನ್‌ ನಲ್ಲಿ 4,065mAh ಸಾಮರ್ಥ್ಯದ ಬ್ಯಾಟರಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಫಾಸ್ಟ್ ಚಾರ್ಜರ್‌ ಅನ್ನು ಒದಗಿಸಲಾಗುವುದು ಎನ್ನಲಾಗುತ್ತಿದೆ.

Best Mobiles in India

English summary
Oppo’s Vice President Shen Yiren has announced a new sub-brand for smartphones — Oppo Reno.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X