'ಓಪ್ಪೊ ಎಫ್11 ಪ್ರೋ' ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಗಣನೆ.!
ಪ್ರಸ್ತುತ ಮೊಬೈಲ್ ಮಾರುಕಟ್ಟೆಯಲ್ಲಿ 'ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ' ಫೀಚರ್ ಹವಾ ಜೋರಾಗಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಎಲ್ಲ ಸ್ಮಾರ್ಟ್‌ಫೋನ್ ಕಂಪನಿಗಳು ಪಾಪ್‌ಅಪ್ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಲು ಮುಂದಾಗುತ್ತಿದ್ದು, ಇವುಗಳಲ್ಲಿ ಓಪ್ಪೊ ಕಂಪನಿ ಕೂಡಾ ಒಂದು. ಹೌದು, ಓಪ್ಪೊ F11 ಪ್ರೋ ಸ್ಮಾರ್ಟ್‌ಫೋನಿನ ಮೂಲಕ 'ಪಾಪ್ಅಪ್ ಸೆಲ್ಫಿ ಕ್ಯಾಮೆರಾ' ಪರಿಚಯಿಸಲಿದ್ದು, ಅದೀಗ ಬಿಡುಗಡೆಗೆ ಸಜ್ಜಾಗಿದೆ.

ಓಪ್ಪೊ ಕಂಪನಿಯ ಬಹುನಿರೀಕ್ಷಿತ F11 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಇದೇ ಮಾರ್ಚ 5 ರಂದು ಮುಂಬೈಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಿಲೀಸ್ ಮಾಡಲಿದೆ. ಓಪ್ಪೊದ ಈ ಸ್ಮಾರ್ಟ್‌ಫೋನ್ 32 ಮೆಗಾಪಿಕ್ಸಲ್ ಸಾಮರ್ಥ್ಯದ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಈ ಮೂಲಕ ಮೊಟ್ಟ ಮೊದಲ ಹೈ ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಎಂದು ಗುರುತಿಸಿಕೊಳ್ಳಲಿದೆ.

ಪಾಪ್ಅಪ್ ಸೆಲ್ಫಿ ಕ್ಯಾಮೆರಾ ಮೂಲಕ 'ಓಪ್ಪೊ ಸೆಲ್ಫಿ ಎಕ್ಸ್‌ಪರ್ಟ್' ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಲಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನಿನ ಹಿಂಬದಿ 48 ಮೆಗಾಪಿಕ್ಸಲ್ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ನೀಡಿರುವುದು ಇದರ ವೈಶೀಷ್ಟತೆಯನ್ನು ಮತ್ತಷ್ಟು ಹೆಚ್ಚಿಸಿದೆ. 6GB ಸಾಮರ್ಥ್ಯದ RAM ಅನ್ನು ಹೊಂದಿರಲಿದೆ. ಇದರೊಂದಿಗೆ ಇನ್ನು ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪಾಪ್‌ಅಪ್ ಟ್ರೆಂಡ್
ಸ್ಮಾರ್ಟ್‌ಫೋನ್‌ಗಳಲ್ಲಿಗ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾದ ಟ್ರೆಂಡ್ ಶುರುವಾಗಿದ್ದು, ಓಪ್ಪೊ ಕಂಪನಿ ಮೊದಲಿನಿಂದಲೂ ಸೆಲ್ಫಿ ಕ್ಯಾಮೆರಾಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದ್ದು, ಇದೀಗ ತನ್ನ ಹೊಸ F11 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ 32MP ಪಾಪ್‌ಅಪ್ ಸೆಲ್ಫಿ ಕ್ಯಾಮೆರಾವನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಮಾಡಲಿದೆ. ಈಗಾಗಲೇ ಪಾಪ್ಅಪ್ ಸೆಲ್ಫಿ ಕ್ಯಾಮೆರಾವನ್ನು ವೀವೊ ತನ್ನ ವಿ15 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ ಪರಿಚಯಿಸಿದೆ.

ಡಿಸೈನ್
ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಸುತ್ತಲೂ ಅತ್ಯಂತ ಕಡಿಮೆ ಅಂಚನ್ನು ನೀಡಲಾಗಿದ್ದು, ಸಂಪೂರ್ಣ ಗ್ರೇಡಿಯಂಟ್ ಶೈನಿಂಗ್ ಡಿಸೈನ್ ಹೊಂದಿದೆ. ಹಿಂಭಾಗದಲ್ಲಿ ಒಂದು ಪಟ್ಟಿಯನ್ನು ನೀಡಲಾಗಿದ್ದು, ಆ ಪಟ್ಟಿಯಲ್ಲಿ ಎರಡು ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್ ಲೈಟ್ ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಪಾಪ್ ಆಪ್ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದೆ.

ಡಿಸ್‌ಪ್ಲೇ ಹೇಗಿರಲಿದೆ
ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಇದರ ಡಿಸ್‌ಪ್ಲೇಯ ಪಿಕ್ಸಲ್ ಇಂಚಿನ ಅನುಪಾತವು 396(PPI) ಆಗಿದೆ.

ಪ್ರೊಸೆಸರ್
ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಆಕ್ಟಾಕೋರ್ ಮೀಡಿಯಾ ಟೆಕ್ SoC, ಸ್ನ್ಯಾಪ್‌ಡ್ರಾಗನ್ 855 ಸಾಮರ್ಥ್ಯದ ಪ್ರೊಸೆಸರ್ ಹೊಂದಿರಲಿದ್ದು, ಇದರೊಂದಿಗೆ 6GB ಸಾಮರ್ಥ್ಯದ RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಹಾಗೂ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

48 ಮೆಗಾಪಿಕ್ಸಲ್ ಕ್ಯಾಮೆರಾ
ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಅದರಲ್ಲಿನ ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ ಮತ್ತು ಸೆಕೆಂಡರಿ ಕ್ಯಾಮೆರಾವು 12 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಎನ್ನಲಾಗುತ್ತಿದೆ.

ಸೆಲ್ಫೀ ಎಕ್ಸ್‌ಪರ್ಟ್
ಸೆಲ್ಫೀ ಎಕ್ಸ್‌ಪರ್ಟ್ ಎಂದೇ ಬಿಂಬಿತವಾಗಿರುವ ಒಪ್ಪೊ ಕಂಪನಿ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫೀಗಾಗಿ ಉತ್ತಮ ಕ್ಯಾಮೆರಾ ನೀಡುತ್ತಾ ಬಂದಿದೆ. ಹಾಗೆಯೇ ಈ ಹೊಸ ಒಪ್ಪೊ ಎಫ್11 ಸ್ಮಾರ್ಟ್‌ಫೋನ್‌ನಲ್ಲಿಯೂ 32 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾವನ್ನು ನೀಡುತ್ತಿರುವುದು ಸೆಲ್ಫೀ ಪ್ರಿಯ ಗ್ರಾಹಕರಿಗೆ ಖುಷಿ ತಂದಿದೆ ಎನ್ನಬಹುದು.

ಬ್ಯಾಟರಿ
ಒಪ್ಪೊ ಬಿಡುಗಡೆ ಮಾಡುತ್ತಿರುವ ಹೊಸ ಎಫ್11 ಸ್ಮಾರ್ಟ್‌ಫೋನ್‌ನಲ್ಲಿ 4500mAh ಸಾಮರ್ಥ್ಯದ ದೀರ್ಘಕಾಲ ಬಾಳುವ ಬ್ಯಾಟರಿಯನ್ನು ನೀಡಲಾಗುತ್ತಿದ್ದು, ಇದರೊಂದಿಗೆ VOOC 3.0 ವೇಗದಲ್ಲಿ ಫಾಸ್ಟ್ ಚಾರ್ಜರ್ ಅನ್ನು ಸಹ ನೀಡಲಾಗುತ್ತಿದ್ದು, ಫಾಸ್ಟ್ ಚಾರ್ಜರ್ ನೆರವಿನಿಂದ ಸ್ಮಾರ್ಟ್‌ಫೋನ್ ಅತೀ ವೇಗವಾಗಿ ಚಾರ್ಜ್ ಆಗುತ್ತದೆ. C ಪೋರ್ಟ್ ಮಾದರಿಯ ಯುಎಸ್‌ಬಿ ಇರಲಿದೆ.


Click it and Unblock the Notifications








