ಕಮಾಲ್ ಮಾಡಲಿದೆ 'ಒಪ್ಪೊ ಎಫ್‌11 ಪ್ರೋ' ಸ್ಮಾರ್ಟ್‌ಫೋನ್ .!!

|

ಮೊಬೈಲ್ ಮಾರುಕಟ್ಟೆಯಲ್ಲಿ 'ಸೆಲ್ಫಿ ಕ್ಯಾಮೆರಾ ಎಕ್ಸ್‌ಪರ್ಟ್'‌ ಎಂದು ಗುರುತಿಸಿಕೊಂಡಿರುವ 'ಓಪ್ಪೊ' ಕಂಪನಿಯು ಈಗಾಗಲೇ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಹತ್ತು ಹಲವು ವಿಶೇಷತೆಗಳಿಂದ ಗಮನಸೆಳೆದಿದ್ದು, ಇದೀಗ ಕಂಪನಿ ಮತ್ತೊಂದು ಅದ್ಭುತ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿ ಅಚ್ಚರಿ ಮೂಡಿಸಿದೆ. ಸಂಪೂರ್ಣ ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಹೊಸ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆ ಕ್ಯಾಮೆರಾ ಆಗಿದೆ.

ಕಮಾಲ್ ಮಾಡಲಿದೆ 'ಒಪ್ಪೊ ಎಫ್‌11 ಪ್ರೋ' ಸ್ಮಾರ್ಟ್‌ಫೋನ್ .!!

ಹೌದು, ಒಪ್ಪೊ 'ಎಫ್‌11 ಪ್ರೋ' ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ರಿಲೀಸ್‌ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಕಂಪನಿಯ ಪ್ರೀಮಿಯಮ್‌ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿದೆ. ಕ್ಯಾಮೆರಾ ಸೇರಿದಂತೆ, ಡಿಸ್‌ಪ್ಲೇ, ಪ್ರೊಸೆಸರ್, ಡಿಸೈನ್‌ ಮತ್ತು ವೇಗದ ಕಾರ್ಯದಕ್ಷತೆಗಳಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರುವ ಓಪ್ಪೊ ಎಫ್‌11 ಪ್ರೋ ಸ್ಮಾರ್ಟ್‌ಫೋನ್‌ ಬೆಲೆಯು ಕೇವಲ 24,990ರೂ.ಗಳು ಆಗಿದ್ದು, ಇದೇ ಮಾರ್ಚ್‌ 15 ರಿಂದ ಇ ಕಾಮರ್ಸ್‌ ತಾಣಗಳಲ್ಲಿ ಸೇಲ್‌ ಆರಂಭ ಆಗಲಿದೆ.

ಕಮಾಲ್ ಮಾಡಲಿದೆ 'ಒಪ್ಪೊ ಎಫ್‌11 ಪ್ರೋ' ಸ್ಮಾರ್ಟ್‌ಫೋನ್ .!!

ಓಪ್ಪೊ'ಎಫ್‌11 ಪ್ರೋ' ಸ್ಮಾರ್ಟ್‌ಫೋನ್ ಪೂರ್ಣ ಡಿಸ್ಲೇ ವೀಕ್ಷಣೆಯ ಅನುಭವ ನೀಡಲಿದ್ದು, ಮೊದಲ ಬಾರಿಗೆ ಹೊಸ ರೈಸಿಂಗ್ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿದೆ. ಪವರ್‌ಫುಲ್‌ ಬ್ಯಾಟರಿ ಬಾಳಿಕೆಯನ್ನು ಹೊಂದಿರುವ ಜೊತೆಗೆ ವೇಗದ ಚಾರ್ಜಿಂಗ್‌ಗಾಗಿ VOOC 3.0 ಟೆಕ್ನಾಲಜಿಯನ್ನು ನೀಡಲಾಗಿದೆ. ಹಾಗಾದರೇ ಒಪ್ಪೊ 'ಎಫ್‌11 ಪ್ರೋ' ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಅದ್ಭುತ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹೈ ರೆಸಲ್ಯೂಶನ್ 48 ಮೆಗಾಪಿಕ್ಸಲ್

ಹೈ ರೆಸಲ್ಯೂಶನ್ 48 ಮೆಗಾಪಿಕ್ಸಲ್

ಒಪ್ಪೊ ಎಫ್‌11 ಪ್ರೋ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಅತ್ಯುತ್ತಮ ಮತ್ತು ಹೈ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ ಕ್ಯಾಮೆರಾವನ್ನು ಪರಿಚಯಿಸಿದ್ದು, ಪ್ರಮುಖ ಕ್ಯಾಮೆರಾ 48 ಮೆಗಾಪಿಕ್ಸಲ್ ಪ್ರಖರ ಬೆಳಕಿನಲ್ಲಿಯೂ ಉತ್ತಮ ಫೋಟೋ ಮೂಡಿಬರಲು ಅಲ್ಟ್ರಾ ಕ್ಲಿಯರ್‌ ಇಂಜಿನ್ ತಂತ್ರಜ್ಞಾನ ಒಳಗೊಂಡಿದೆ. ಇನ್ನೂ ಎರಡನೇ ಕ್ಯಾಮೆರಾವು 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುವ ಜೊತೆಗೆ ಡೆಪ್ತ ಸೆನ್ಸಾರ್‌ ಹೊಂದಿದೆ. ಮೀಡಿಯಾ ಟೆಕ್‌ ಹಿಲಿಯೋ ಪಿ70 ಪ್ರೊಸೆಸರ್‌ ಇದ್ದು, ಇದು IA ಕೃತಕ ಬುದ್ಧಿಮತ್ತೆ ಮತ್ತು ಸೀನ್ಸ್‌ ಗುರುತಿಸುವ ಅಲ್ಟ್ರಾ ಕ್ಲಿಯರ್‌ ಇಂಜಿನ್ ತಂತ್ರಜ್ಞಾನದಿಂದ ಫೋಟೋ ಅತ್ಯುತ್ತಮವಾಗಿ ಸೆರೆಹಿಡಿಯಲು ಬೆಂಬಲ ನೀಡುತ್ತದೆ.

ಅಲ್ಟ್ರಾ ನೈಟ್‌ ಮೋಡ್‌

ಅಲ್ಟ್ರಾ ನೈಟ್‌ ಮೋಡ್‌

ಒಪ್ಪೊ ಎಫ್‌11 ಪ್ರೋ ಸ್ಮಾರ್ಟ್‌ಫೋನ್ ಅಲ್ಟ್ರಾ ನೈಟ್‌ ಮೋಡ್‌ ಆಯ್ಕೆ ಇದ್ದು, ರಾತ್ರಿ ವೇಳೆ ಫೋಟೋಗ್ರಾಫಿಗೆ ಇದೊಂದು ಬೆಸ್ಟ್‌ ಫೀಚರ್ ಎನಿಸಿಕೊಂಡಿದೆ. ಅಲ್ಟ್ರಾ ಕ್ಲಿಯರ್‌ ಇಂಜಿನ್ ತಂತ್ರಜ್ಞಾನವು ಆಟೋಮ್ಯಾಟಿಕ್ ಆಗಿ ಸೀನ್‌ಗಳನ್ನು ತನ್ನ ಕೃತಕ ಬುದ್ಧಿಮತ್ತೆಯಿಂದ ಗುರುತಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಮಂದಬೆಳಕಿನಲ್ಲೂ ಫೋಟೊಗಳು ಅತ್ಯುತ್ತಮವಾಗಿ ಮೂಡಿಬರಲು ಸೆರವಾಗುತ್ತದೆ.

ರೈಸಿಂಗ್ ಸೆಲ್ಫಿ ಕ್ಯಾಮೆರಾ

ರೈಸಿಂಗ್ ಸೆಲ್ಫಿ ಕ್ಯಾಮೆರಾ

ಒಪ್ಪೊ ಮೊದಲ ಬಾರಿಗೆ 'ರೈಸಿಂಗ್ ಸೆಲ್ಫಿ' ಕ್ಯಾಮೆರಾವನ್ನು ಎಫ್‌11 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಪರಿಚಯಿಸಿದ್ದು, ಸೆಲ್ಫಿ ಸೆರೆಹಿಡಿಯುವ ವೇಳೆ ಮಾತ್ರ ಕ್ಯಾಮೆರಾ ಫೋನಿನ ಅಂಚಿನಿಂದ ಮೇಲೆ ಬರುತ್ತದೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳ ಸೆಲ್ಫಿ ಕ್ಯಾಮೆರಾದಲ್ಲಿಯೇ ಇದೊಂದು ಹೊಸತನವಾಗಿದೆ. ಈ ಕ್ಯಾಮೆರಾ ಕೃತಕ ಬುದ್ಧಿಮತ್ತೆಯನ್ನು ಹೊಂದಿದ್ದು, ಫೇಸ್‌ ಸ್ಮೈಲಿಂಗ್ ಮತ್ತು ಸ್ಮಾರ್ಟ್‌ ಬ್ಯೂಟಿ ಆಯ್ಕೆಯನ್ನು ನೀಡಿದ್ದಾರೆ. ಸೆಲ್ಫಿ ಕ್ಯಾಮೆರಾದಲ್ಲಿ ಸೆರೆಹಿಡಿದ ಫೋಟೋಗಳನ್ನು ನೇರವಾಗಿ ಸಾಮಾಜಿಕ ಜಾಲತಾಣಗಳಿಗೆ ಜೋಡಿಸುವ ಆಯ್ಕೆ ಸಹ ಇದೆ.

ದಕ್ಷ ಪ್ರೊಸೆಸರ್‌

ದಕ್ಷ ಪ್ರೊಸೆಸರ್‌

ಒಪ್ಪೊ ಎಫ್‌11 ಪ್ರೋ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ ಹಿಲಿಯೋ ಪಿ 70 ಆಕ್ಟಾಕೋರ್‌ ಚಿಪ್‌ ಸೆಟ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, ಕೃತಕ ಬುದ್ದಿಮತ್ತೆಯ ಶಕ್ತಿಯನ್ನು ಒಳಗೊಂಡಿದೆ. ಕ್ಯಾಮೆರಾ ಮತ್ತು ಗೇಮಿಂಗ್‌ ಫೀಚರ್ಸ್‌ಗಳು ಅತ್ಯುನ್ನತ ಕಾರ್ಯನಿರ್ವಹಿಸಲು ಈ ಪ್ರೊಸೆಸರ್‌ ಬೆಂಬಲ ನೀಡುತ್ತದೆ. ಸುಮಾರು 20 ಆಪ್ಸ್‌ ರನ್ನಿಂಗ್‌ನಲ್ಲಿದ್ದರೂ ಅಧಿಕ ಗ್ರಾಫಿಕ್ಸ್ ಇರುವ ಗೇಮ್ಸ್‌ಗಳನ್ನು ಸುಲಲಿತವಾಗಿ ಆಡಬಹುದಾಗಿದೆ.

ಹೈಪರ್‌ ಬೂಸ್ಟ್‌

ಹೈಪರ್‌ ಬೂಸ್ಟ್‌

ಈ ಎಫ್‌11 ಪ್ರೋ ಸ್ಮಾರ್ಟ್‌ಫೋನಿನ ಇನ್ನೊಂದು ಅತ್ಯುನ್ನತ ಟೆಕ್ನಾಲಜಿ ಎಂದರೇ ಹೈಪರ್‌ಬೂಸ್ಟ್‌ ಆಗಿದ್ದು, ಈ ತಂತ್ರಜ್ಞಾನವನ್ನು ಒಪ್ಪೊ ಕಂಪನಿ ನಿರ್ಮಿಸಿದೆ. ಅಪ್ಲಿಕೇಶನ್, ಪ್ರೊಸೆಸರ್, ಗೇಮ್ಸ್‌ ಹೀಗೆ ಸ್ಮಾರ್ಟ್‌ಫೋನಿನ ಪ್ರತಿ ಫೀಚರ್ಸ್‌ಗಳಿಗೂ ಶಕ್ತಿ ತುಂಬಿ ಮುನ್ನಡೆಸುವ ಕೆಲಸವನ್ನು ಹೈಪರ್‌ಬೂಸ್ಟ್‌ ಟೆಕ್ನಾಲಜಿಸ್‌ ಮಾಡುತ್ತದೆ. ಇದರ 'ಸಿಸ್ಟಮ್‌ ಬೂಸ್ಟ್‌' ಆಯ್ಕೆಯು ಬ್ಯಾಟರಿ ಬಾಳಿಕೆಯನ್ನು ವೂದ್ಧಿಸುತ್ತದೆ ಮತ್ತು ನೆಟವರ್ಕ್‌ ಕವರೇಜ್‌ಗಳಿಗೆ ಸಹಕರಿಸುತ್ತದೆ.

ಪೂರ್ಣ ಡಿಸ್‌ಪ್ಲೇ

ಪೂರ್ಣ ಡಿಸ್‌ಪ್ಲೇ

ಒಪ್ಪೊ ಎಫ್‌11 ಪ್ರೋ ಸ್ಮಾರ್ಟ್‌ಫೋನ್ 6.5 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಫೋನಿನ ಬಾಹ್ಯ ಬಾಡಿ ಮತ್ತು ಡಿಸ್‌ಪ್ಲೇ ನಡುವಿನ ಅನುಪಾತವು ಶೇ. 90.90% ಆಗಿದೆ. ಸಂಪೂರ್ಣ ಅಂಚು ರಹಿತ ಡಿಸ್‌ಪ್ಲೇಯನ್ನು ಹೊಂದಿರುವುದರಿಂದ ವೀಕ್ಷಣೆಯ ಅನುಭವ ಅದ್ಭುತವಾಗಿದೆ. ವಿಡಿಯೋ ನೋಡುವಾಗ ಮತ್ತು ಗೇಮ್ಸ್‌ ಆಡುವಾಗ ಫುಲ್‌ ಸ್ಕ್ರೀನ್ ಆಯ್ಕೆ ಮಾಡಬಹುದಾಗಿದ್ದು, ರೋಚಕ ಅನಭವ ನೀಡಲಿದೆ.

ಪವರ್‌ಫುಲ್‌ ಬ್ಯಾಟರಿ

ಪವರ್‌ಫುಲ್‌ ಬ್ಯಾಟರಿ

ಒಪ್ಪೊ ಎಫ್‌11 ಪ್ರೋ ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ದೀರ್ಘಕಾಲ ಬಾಳಿಕೆಯ ಬ್ಯಾಟರಿಯನ್ನು ಹೊಂದಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಇರುವುದರಿಂದ ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿ ಬಳಕೆ ಪ್ರಕ್ರಿಯೇ ಮಿತಿಯಲ್ಲಿ ಬಳಕೆ ಆಗಲಿದೆ. VOOC 3.0 ವೇಗದ ಚಾರ್ಜರ್‌ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಸ್ಮಾರ್ಟ್‌ಫೋನಿಗೆ ಅತೀ ಬೇಗನೆ ಚಾರ್ಜ ಒದಗಿಸುತ್ತದೆ. ಬ್ಯಾಟರಿಯನ್ನು ಒಂದು ಬಾರಿ ಸಂಪೂರ್ಣ ಚಾರ್ಜ ಮಾಡಿದರೇ ಸುಮಾರು ಎರಡು ದಿನಗಳ ವರೆಗೂ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ.

ಕೊನೆಯ ಮಾತು

ಕೊನೆಯ ಮಾತು

ಸೆಲ್ಫಿ ಎಕ್ಸ್‌ಪರ್ಟ್‌ ಒಪ್ಪೊ ತನ್ನ ಎಫ್‌11 ಪ್ರೋ ಸ್ಮಾರ್ಟ್‌ಫೋನ್‌ ಮೂಲಕ ಕಮಾಲ್ ಮಾಡಿದ್ದು, ಇದರ ಕ್ಯಾಮೆರಾ ಮತ್ತು ಪ್ರೊಸೆಸರ್ ಫೀಚರ್ಸ್‌ಗಳ ಅತ್ಯುತ್ತಮ ಆಗಿದ್ದು, ಇದರೊಂದಿಗೆ ಹೊಸತನದ ರೈಸಿಂಗ್ ಸೆಲ್ಫಿ ಕ್ಯಾಮೆರಾ ಪರಿಚಯಿಸಿರುವುದು ಸ್ಮಾರ್ಟ್‌ಫೋನ್‌ ಗಮನಸೆಳೆಯುತ್ತದೆ. ಈ ಸ್ಮಾರ್ಟ್‌ಫೋನಿನ ವಿಶಾಲ ಡಿಸ್‌ಪ್ಲೇಯು ಗೇಮಿಂಗ್ ಮತ್ತು ವಿಡಿಯೋ ವೀಕ್ಷಣೆ ಮಾಡಲು ಉತ್ತಮವೆನಿಸುತ್ತದೆ.

Best Mobiles in India

English summary
OPPO F11 Pro brings a full-screen experience, Rising selfie camera, 48MP +5 MP dual rear camera, VOOC 3.0 and HyperBoost technology to masses at just Rs. 24,990.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X