Home
ಮೊಬೈಲ್

ಒಪ್ಪೊ ಎಫ್‌ 11ಪ್ರೋ ; ಬಜೆಟ್‌ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್

ಪ್ರಸ್ತುತ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗುವುದನ್ನು ಕಾಣುತ್ತಿದ್ದೆವೆ. ಇದೀಗ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿರುವ ಫೀಚರ್ಸ್‌ಗಳು, ಮೀಡ್‌ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗುತ್ತಿದೆ. ಕಡಿಮೆ ಬೆಲೆಗೆ ಹಲವು ಕಂಪನಿಗಳ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಒಪ್ಪೊ ಎಫ್‌ 11 ಪ್ರೋ ಸ್ಮಾರ್ಟ್‌ಫೋನ್ ತನ್ನ ವಿಶೇಷ ಫೀಚರ್ಸ್‌ಗಳಿಂದ ಭಿನ್ನವಾಗಿ ಗುರುತಿಸಿಕೊಂಡಿದೆ.

ಒಪ್ಪೊ ಎಫ್‌ 11ಪ್ರೋ ; ಬಜೆಟ್‌ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್

ಸಾಮಾನ್ಯವಾಗಿ ಮೀಡ್‌ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಅಂಚು ರಹಿತ ಪೂರ್ಣ ಡಿಸ್‌ಪ್ಲೇ, ಹೈ ಮೆಗಾಪಿಕ್ಸಲ್ ಕ್ಯಾಮೆರಾ ಸೆನ್ಸಾರ್‌, ಅತ್ಯುತ್ತಮ ಪ್ರೊಸೆಸರ್‌ನಂತಹ ಫೀಚರ್ಸಗಳನ್ನು ಒಳಗೊಂಡಿರುತ್ತವೆ. ಆದರೆ ಒಪ್ಪೊ ಎಫ್ 11 ಪ್ರೋ ಇತರೆ ಕಂಪನಿಗಳಿಗಿಂತ ಒಂದು ಹೆಜ್ಜೆ ಮುಂದೆ ಹಾಕಿದ್ದು, ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 48 ಮೆಗಾಪಿಕ್ಸಲ್ ರೇರ್‌ ಕ್ಯಾಮೆರಾವನ್ನು ಮತ್ತು 16 ಮೆಗಾಪಿಕ್ಸಲ್ ರೈಸಿಂಗ್ ಸೆಲ್ಫಿ ಕ್ಯಾಮೆರಾ ಪರಿಚಯಿಸಿದೆ. ಕೇವಲ 24,990ರೂ.ಗಳಿಗೆ ಲಭ್ಯವಾಗಲಿದೆ.
ಒಪ್ಪೊ ಎಫ್‌ 11ಪ್ರೋ ; ಬಜೆಟ್‌ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್

ಸೆಲ್ಫಿ ಕ್ಯಾಮೆರಾ ಆಯ್ಕೆಯಿಂದ ಜನಪ್ರಿಯ ಆಗಿರುವ ಒಪ್ಪೊ ಕಂಪನಿಯ ಈ ಹೊಸ ಸ್ಮಾರ್ಟ್‌ಫೋನ್ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಗ್ರಾಹಕರು ನಿರೀಕ್ಷಿಸುವ ಕ್ಯಾಮೆರಾ, ಡಿಸ್‌ಪ್ಲೇ, ಬ್ಯಾಟರಿ ಸೇರಿದಂತೆ ಹಲವು ನೂತನ ಬಗೆಯ ಫೀಚರ್ಸ್‌ಗಳನ್ನು ಕಂಪನಿ ಪರಿಚಯಿಸಿದೆ. ಯುವಕರ ಗಮನಸೆಳೆಯುವ ರಚನೆಯನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ ಹುಟ್ಟುಹಾಕಲಿದೆ. ಹಾಗಾದರೇ ಒಪ್ಪೊ ಎಫ್ 11 ಪ್ರೋ ಸ್ಮಾರ್ಟ್‌ಫೋನ್ ಹೊಂದಿರುವ ವಿಶೇಷ ಫೀಚರ್ಸ್‌ಗಳನ್ನು ಮುಂದೆ ನೋಡೋಣ ಬನ್ನಿರಿ.

ರೈಸಿಂಗ್ ಸೆಲ್ಫಿ ಕ್ಯಾಮೆರಾ

ರೈಸಿಂಗ್ ಸೆಲ್ಫಿ ಕ್ಯಾಮೆರಾ

ಒಪ್ಪೊ ಮೊದಲಿನಿಂದಲೂ ಸೆಲ್ಫಿ ಎಕ್ಸ್‌ಪರ್ಟ್‌ ಎಂದು ಗುರುತಿಸಿಕೊಂಡಿದ್ದು, ಇದೀಗ ಸೆಲ್ಫಿಗಾಗಿಯೇ ಹೊಸದಾಗಿ ರೈಸಿಂಗ್ ಕ್ಯಾಮೆರಾವನ್ನು ಪರಿಚಯಿಸಿದೆ. ಫೋನಿನ್ ಬಾಹ್ಯಬಾಡಿ ರಚನೆಯ ಮಧ್ಯಭಾಗದಲ್ಲಿ ಮರೆಯಾಗಿರುತ್ತದೆ, ಸೆಲ್ಫಿ ಸೆರೆಹಿಡಿಯುವಾಗ ಕ್ಯಾಮೆರಾ ರೈಸ್‌ ಆಗುತ್ತದೆ. ಈ ಸೆಲ್ಫಿ ಕ್ಯಾಮೆರಾವು 16 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದ್ದು, ಸೆಲ್ಫಿ ಪ್ರಿಯರಿಗೆ ಹೊಸ ಅನುಭವ ನೀಡಲಿದೆ. ರೈಸಿಂಗ್ ಕ್ಯಾಮೆರಾ ಅತ್ಯುತ್ತಮ ಡಿಸೈನ್‌ ಹೊಂದಿರುವ ಜೊತೆಗೆ ಕ್ಯಾಮೆರಾಗೆ ಉತ್ತಮ ಸೆನ್ಸಾರ್‌ ಅನ್ನು ಹೊಂದಿದ್ದು, ದಕ್ಕೆಯಾಗದಂತಹ ರಚನೆಯ ಪಡೆದಿದೆ.

ಹೊಸ ಆಯ್ಕೆಗಳು

ಹೊಸ ಆಯ್ಕೆಗಳು

ಒಪ್ಪೊ ಎಫ್‌ 11 ಪ್ರೋ ಸ್ಮಾರ್ಟ್‌ಫೋನಿನ 16 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾದಲ್ಲಿ ಫೋಟೋಗಳು ಅತ್ಯುತ್ತಮವಾಗಿ ಮೂಡಿಬರಲಿದ್ದು, ಫೇಸ್‌ಸ್ಮೈಲಿಂಗ್, ಸ್ಮಾರ್ಟ್‌ರ್‌ ಬ್ಯುಟಿಫಿಕೇಶನ್ ಮೋಡ್ ಆಯ್ಕೆಗಳು ಫೋಟೋಗಳ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ. ಬ್ಯುಟಿಫಿಕೇಶನ್ ಮೋಡ್ ಆಯ್ಕೆಯು ಮಹಿಳೆ, ಪುರುಷರ ಮತ್ತು ಮಕ್ಕಳು ಉತ್ತಮ ಎನಿಸುವ ಫೋಟೋ ಪೊಸ್ ಆಯ್ಕಗಳನ್ನು ಸಹ ಸೂಚಿಸುವ ಸಾಮರ್ಥ್ಯವನ್ನು ಹೊಂದಿದೆ.

ಬೆಸ್ಟ್ ಮಲ್ಟಿಮೀಡಿಯಾ

ಬೆಸ್ಟ್ ಮಲ್ಟಿಮೀಡಿಯಾ

ಅಂಚುರಹಿತ ವಿಶಾಲವಾದ ಪೂರ್ಣ ಡಿಸ್‌ಪ್ಲೇಯು ವಿಡಿಯೊ ವೀಕ್ಷಣೆ ಮತ್ತು ಗೇಮ್ಸ್‌ ಆಡಲು ಅತ್ಯುತ್ತಮ ಅನುಭೂತಿ ನೀಡಲಿದ್ದು, ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತ ಶೇ.90.9% ಆಗಿದೆ. ಹೈ ರೆಸಲ್ಯೂಶನ್‌ ಪೂರ್ಣ ಡಿಸ್‌ಪ್ಲೇಯ ಎಡ್ಜ್ ಟು ಎಡ್ಜ್ ಸಹ ಬಳಕೆಯಾಗಲಿದ್ದು, ಇ ಪುಸ್ತಕ ಓದಲು, ನೆಟ್ ಬ್ರೌಸಿಂಗ್, ವಿಡಿಯೊ ಸ್ಟ್ರೀಮಿಂಗ್ , ಗೇಮ್ಸ್‌ಗಳು ಹೆಚ್ಚು ರೋಚಕವೆನಿಸಲಿದೆ.

48 ಮೆಗಾಪಿಕ್ಸಲ್ ಕ್ಯಾಮೆರಾ

48 ಮೆಗಾಪಿಕ್ಸಲ್ ಕ್ಯಾಮೆರಾ

ಸ್ಮಾರ್ಟ್‌ಫೋನಿನ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿದ್ದು, ಹಿಂಬದಿಯಲ್ಲಿ 48 ಮೆಗಾಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದ್ದು, ಫೋಟೋಗಳು ಹೆಚ್ಚು ಪ್ರಖರವಾಗಿ ಮೂಡಿಬರಲಿವೆ. ಇದರೊಂದಿಗೆ ಸೆಕೆಂಡರಿ ಕ್ಯಾಮೆರಾವು 5 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಡೆಪ್ತ್ ಸೆನ್ಸಾರ್‌ ಅನ್ನು ಹೊಂದಿದೆ. AI ಅಲ್ಟ್ರಾ ಕ್ಲಿಯರ್ ಇಂಜಿನ್ ತಂತ್ರಜ್ಞಾನ ಇದರಲ್ಲಿದ್ದು, ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೊ ಮೂಡಿಬರಲು ನೆರವಾಗಲಿದೆ. ಹಲವು ಬೆಸ್ಟ್ ಫೀಚರ್ಸ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಬಜೆಟ್‌ ಬೆಲೆಯಲ್ಲಿ ಅತ್ಯುತ್ತಮ ಕ್ಯಾಮೆರಾ ಆಯ್ಕೆ ಎನ್ನಬಹುದಾಗಿದೆ.

ಬಲಶಾಲಿ ಕಾರ್ಯವೈಖರಿ

ಬಲಶಾಲಿ ಕಾರ್ಯವೈಖರಿ

ಒಪ್ಪೊ ಎಫ್‌11 ಪ್ರೋ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ P70 ಪ್ರೊಸೆಸರ್ ಅನ್ನು ಹೊಂದಿದ್ದು, ಆಕ್ಟಾಕೋರ್ CPU ಇದರ ಕೆಲಸದ ವೇಗವನ್ನು ಹೆಚ್ಚಿಸಲು ನೆರವಾಗಲಿದೆ. ಪ್ರೊಸೆಸರ್ ಹೈಪರ್‌ಬೂಸ್ಟ್‌ ತಂತ್ರಜ್ಞಾನ ಇದ್ದು, ಆಪ್‌ ತೆರೆಯುವಾಗ, ಬ್ರೌಸಿಂಗ್ ಮಾಡುವಾಗ ಮತ್ತು ಸ್ಮಾರ್ಟ್‌ಫೋನಿನ ಒಟ್ಟಾರೆ ಕಾರ್ಯದಕ್ಷತೆಯ ಸ್ಪೀಡ್‌ಗೆ ಮತ್ತಷ್ಟು ಬಲ ತುಂಬಲಿದೆ. ಡಾಟಾ ಟ್ರಾನ್ಸ್‌ಫರ್‌ ಅನ್ನು ಸಹ ಫಾಸ್ಟ್‌ ಆಗಿ ಮಾಡಲಿದ್ದು, ಗೇಮಿಂಗ್ ಪ್ರೊಸೆಸ್‌ ಅನ್ನು ಸರಳವಾಗಿಸುತ್ತದೆ. ಈ ಫೋನ್ 4GB RAM ಅನ್ನು ಹೊಂದಿದ್ದು, ಆದರೆ ಇತರೆ 6GB RAM ಇರುವ ಸ್ಮಾರ್ಟ್‌ಫೋನ್‌ಗಳಿಗಿಂತ ಅತ್ಯುತ್ತಮವಾಗಿದೆ.

VOOC ಬ್ಯಾಟರಿ ಶಕ್ತಿ

VOOC ಬ್ಯಾಟರಿ ಶಕ್ತಿ

ಒಪ್ಪೊ ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ದೀರ್ಘಕಾಲದವರೆಗೂ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ VOOC 3.0 ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡಲಾಗಿದ್ದು, ಇದು ಸ್ಮಾರ್ಟ್‌ಫೋನ್‌ಗೆ ಪವರ್‌ಹೌಸ್‌ ತರಹ ಕೆಲಸ ಮಾಡಲಿದೆ. ಸ್ಮಾರ್ಟ್‌ಫೋನಿಗೆ ಬೇಗನೆ ಚಾರ್ಜ್‌ ಪೂರೈಸುವ ಶಕ್ತಿಯನ್ನು ಹೊಂದಿರುವ ಈ ಫಾಸ್ಟ್‌ ಚಾರ್ಜರ್‌, ಕೇವಲ 30 ನಿಮಿಷದ ಚಾರ್ಜಿಂಗ್‌ನಲ್ಲಿ ಸ್ಮಾರ್ಟ್‌ಫೋನಿಗೆ ಶೇ. 80% ನಷ್ಟು ಚಾರ್ಜ್‌ ಒದಗಿಸಲಿದೆ.

Best Mobiles in India

English summary
OPPO F11 Pro brings a revolutionary Rising selfie-camera, full-screen display, Hyperboost tech and a lot more.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+