'ಒಪ್ಪೊ F11 ಪ್ರೋ' ಸ್ಮಾರ್ಟ್‌ಫೋನ್ ಎಂಟ್ರಿಗೆ ದಿನಾಂಕ ಫಿಕ್ಸ್.! ವೀವೊಗೆ ಶುರುವಾಗಲಿದೆ ತಲೆಬಿಸಿ!!
ಸೆಲ್ಫೀ ಎಕ್ಸ್‌ಪರ್ಟ್ ಒಪ್ಪೊ ಕಂಪನಿಯು ಅತ್ಯುತ್ತಮ ಸೆಲ್ಫಿ ಕ್ಯಾಮೆರಾವನ್ನು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸಿ ಮೊಬೈಲ್ ಪ್ರಿಯರ ನೆಚ್ಚಿನ ಸ್ಮಾರ್ಟ್‌ಪೋನ್ ಕಂಪನಿ ಎಂದೆನಿಸಿಕೊಂಡಿದೆ. ಇದೀಗ ಒಪ್ಪೊ ತನ್ನ 'ಎಫ್11 ಪ್ರೋ' ಸ್ಮಾರ್ಟ್‌ಫೋನ ಬಿಡುಗಡಗೆ ದಿನಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ರಿಲೀಸ್ ಆಗಿರುವ 'ವೀವೊ ವಿ15 ಪ್ರೋ' ಸ್ಮಾರ್ಟ್‌ಫೋನಿಗೆ ಭರ್ಜರಿ ಟಾಂಗ್ ನೀಡಲಿದೆ.

ಹೌದು, ಒಪ್ಪೊ ತನ್ನ ಬಹುನಿರೀಕ್ಷಿತ 'ಎಫ್11 ಪ್ರೋ' ಸ್ಮಾರ್ಟ್‌ಫೋನ್ ಅನ್ನು ಇದೇ ಮಾರ್ಚ 5 ರಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿದು ಬಂದಿದೆ. ಈ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯೆಂದರೇ '32 ಮೆಗಾಪಿಕ್ಸಲ್' ಸಾಮರ್ಥ್ಯದ 'ಪಾಪ್‌ಅಪ್ ಸೆಲ್ಫಿ' ಕ್ಯಾಮೆರಾ ಆಗಿದ್ದು, ಜತೆಗೆ 48 ಮೆಗಾಪಿಕ್ಸಲ್ ಹಿಂಬದಿ ಕ್ಯಾಮೆರಾವನ್ನು ಒಳಗೊಂಡ ಹೈ ಎಂಡ್ ಫೀಚರ್ಸ್ ಸ್ಮಾರ್ಟ್‌ಫೋನ್ ಆಗಿದೆ.

ಮಲ್ಟಿಟಾಸ್ಕ್ ಕೆಲಸಗಳನ್ನು ವೇಗವಾಗಿ ನಿರ್ವಹಿಸಲು 6GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸಂಗ್ರಹವನ್ನು ಒದಗಿಸಲಾಗಿದ್ದು, ಇದರೊಟ್ಟಿಗೆ 4,000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದೆ. ಹಾಗಾದರೇ 'ಒಪ್ಪೊ ಎಫ್11 ಪ್ರೋ' ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹೊಸ ಟ್ರೆಂಡ್
ಸ್ಮಾರ್ಟ್‌ಫೋನಗಳಲ್ಲಿಗ ಹೈ ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾಗಳನ್ನು ಪರಿಚಯಿಸುವ ಹೊಸ ಟ್ರೆಂಡ್ ಶುರುವಾಗಿದೆ. ಇದರೊಂದಿಗೆ ರೈಸಿಂಗ್ ಸೆಲ್ಫಿ ಕ್ಯಾಮೆರಾ ನೂತನ ಟ್ರೆಂಡ್ ಆಗಿದೆ. ಈಗಾಗಲೇ ಪ್ರಮುಖ ಮೊಬೈಲ್ ಕಂಪನಿಗಳು 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಫೀಚರ್ ಅನ್ನು ಪರಿಚಯಿಸುವುದಾಗಿ ಘೋಷಿಸಿವೆ. ಅವುಗಳಲ್ಲಿ ಈಗ ಒಪ್ಪೊ ಎಫ್11 ಪ್ರೋ ಸಹ ಸೇರಿದೆ.

ಡಿಸೈನ್
ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯ ಸುತ್ತಲೂ ಅತ್ಯಂತ ಕಡಿಮೆ ಅಂಚಿನಿಂದ ರಚಿತವಾಗಿದ್ದು, ಹಿಂಭಾಗ ಶೈನಿಂಗ್ ಡಿಸೈನ್ ಹೊಂದಿದೆ. ಫೋನ್ ಹಿಂಬದಿಯಲ್ಲಿ ಒಂದು ಪಟ್ಟಿಯನ್ನು ನೀಡಿದ್ದು, ಆ ಪಟ್ಟಿಯಲ್ಲಿ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್ ಲೈಟ್ ಸಹ ಅಳವಡಿಸಲಾಗಿದೆ. ಅದರ ಕೆಳಭಾಗದಲ್ಲಿ ವೃತ್ತಾಕಾರದ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ನೀಡಲಾಗಿದೆ.

ಡಿಸ್‌ಪ್ಲೇ
ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇಯ ಪಿಕ್ಸಲ್ ಪರ್ ಇಂಚಿನ ಅನುಪಾತವು 396(PPI) ಆಗಿದೆ. ವಿಶಾಲವಾದ ಪನೋರಮಾ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಸ್ಕ್ರೀನ್ ವೀಕ್ಷಣೆಯ ಅನುಭವ ದೊರೆಯಲಿದೆ.

ಪ್ರೊಸೆಸರ್
'ಆಕ್ಟಾಕೋರ್ ಮೀಡಿಯಾ ಟೆಕ್ SoC, ಸ್ನ್ಯಾಪ್‌ಡ್ರಾಗನ್ 855' ಸಾಮರ್ಥ್ಯದ ಪ್ರೊಸೆಸರ್ ಹೊಂದಿರಲಿದ್ದು, ಇದರೊಂದಿಗೆ 6 GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

48 ಮೆಗಾಪಿಕ್ಸಲ್ ಕ್ಯಾಮೆರಾ
ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಅದರಲ್ಲಿನ ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ ಮತ್ತು ಸೆಕೆಂಡರಿ ಕ್ಯಾಮೆರಾವು 12 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಎನ್ನಲಾಗುತ್ತಿದೆ. ಈ ಹೈ ಕ್ಯಾಮೆರಾದಲ್ಲಿ ಫೋಟೋಗಳು ಕ್ಲಿಯರ್ ಆಗಿ ಮೂಡಿಬರಲಿವೆ.

ಸೆಲ್ಫೀ ಎಕ್ಸ್‌ಪರ್ಟ್!
ಸೆಲ್ಫೀ ಎಕ್ಸ್‌ಪರ್ಟ್ ಎಂದೇ ಬಿಂಬಿತವಾಗಿರುವ ಒಪ್ಪೊ ಕಂಪನಿ ತನ್ನ ಹೊಸ 'ಒಪ್ಪೊ ಎಫ್11' ಸ್ಮಾರ್ಟ್‌ಫೋನ್‌ನಲ್ಲಿ '32 ಮೆಗಾಪಿಕ್ಸಲ್' ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾವನ್ನು ನೀಡಲಿದ್ದು, ಇದು ಒಪ್ಪೊದ ಮೊದಲ ಹೈ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಆಗಿರಲಿದೆ. ಇದರೊಂದಿಗೆ ಮೊದಲ ಬಾರಿಗೆ ರೈಸಿಂಗ್(ಪಾಪ್‌ಅಪ್) ಸೆಲ್ಫೀ ಕ್ಯಾಮೆರಾವನ್ನು ಪರಿಚಯಿಸುತ್ತದೆ.

ಬ್ಯಾಟರಿ
ಒಪ್ಪೊ ಬಿಡುಗಡೆ ಮಾಡುತ್ತಿರುವ ಹೊಸ ಎಫ್11 ಸ್ಮಾರ್ಟ್‌ಫೋನ್‌ನಲ್ಲಿ 4,000mAh ಸಾಮರ್ಥ್ಯದ ದೀರ್ಘಕಾಲ ಬಾಳುವ ಬ್ಯಾಟರಿಯನ್ನು ನೀಡಲಾಗುತ್ತಿದ್ದು, ಇದರೊಂದಿಗೆ VOOC 3.0 ತಂತ್ರಜ್ಞಾನದ ಫಾಸ್ಟ್ ಚಾರ್ಜರ್ ಅನ್ನು ಸಹ ನೀಡಲಾಗುತ್ತಿದೆ. ಫಾಸ್ಟ್ ಚಾರ್ಜರ್‌ನಿಂದ ಸ್ಮಾರ್ಟ್‌ಫೋನ್ ಅತೀ ವೇಗವಾಗಿ ಚಾರ್ಜ್ ಆಗುತ್ತದೆ. C ಪೋರ್ಟ್ ಮಾದರಿಯ ಯುಎಸ್‌ಬಿ ಇರಲಿದೆ.


Click it and Unblock the Notifications








