ಗ್ರ್ಯಾಂಡ್ ಎಂಟ್ರಿ ಕೊಡಲಿದೆ 'ಒಪ್ಪೊ' 32MP ಸೆಲ್ಫೀ ಕ್ಯಾಮೆರಾ ಸ್ಮಾರ್ಟ್‌ಫೋನ್.!

|

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೈ ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾಗಳನ್ನು ಪರಿಚಯಿಸುವ ಹೊಸ ಟ್ರೆಂಡ್ ಆರಂಭವಾಗಿದ್ದು, ಈಗಾಗಲೇ ಹಾನರ್ ವ್ಯೂ 20, ರೆಡ್ಮಿ ನೋಟ 7, ಮತ್ತು ವೀವೊ ವಿ15 ಪ್ರೋ ಸ್ಮಾರ್ಟ್‌ಫೋನ್‌ಗಳು 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಇರುವುದಾಗಿ ಘೋಷಿಸಿವೆ. ಅವುಗಳಿಗೆ ಸಾಲಿಗಿಗ ಹೊಸ ಸೇರ್ಪಡೆ ಓಪ್ಪೊ ಕಂಪನಿ. ಹೌದು, ಒಪ್ಪೊ ಕಂಪನಿ ಸಹ ಅತ್ಯುನ್ನತ ಸಾಮರ್ಥ್ಯದ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಒಂದನ್ನು ಪರಿಚಯಿಸಲಿದೆ.

ಗ್ರ್ಯಾಂಡ್ ಎಂಟ್ರಿ ಕೊಡಲಿದೆ 'ಒಪ್ಪೊ' 32MP ಸೆಲ್ಫೀ ಕ್ಯಾಮೆರಾ ಸ್ಮಾರ್ಟ್‌ಫೋನ್.!

ಸೆಲ್ಫೀ ಎಕ್ಸ್‌ಪರ್ಟ್ ಒಪ್ಪೊ ಕಂಪನಿಯು 'ಒಪ್ಪೊ ಎಫ್11 ಪ್ರೋ' ಹೆಸರಿನ ಸ್ಮಾರ್ಟ್‌ಫೋನ್‌ವೊಂದನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಕಂಪನಿಯ ಜನಪ್ರಿಯ 'ಎಫ್' ಸರಣಿಯಲ್ಲಿಯೇ ಹೊರಬರಲಿರುವ ಈ ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿರಲಿದೆ. ಆ ಮೂಲಕ 'ಒಪ್ಪೊ ಎಫ್11 ಪ್ರೋ' ಸ್ಮಾರ್ಟ್‌ಫೋನ್ ಶಿಯೋಮಿಯ ರೆಡ್ಮಿ ನೋಟ 7, ಮತ್ತು ವೀವೊ ವಿ15 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಸೆಣೆಸಲು ಸಿದ್ಧವಾಗಿಯೇ ಬರುತ್ತಿದೆ ಎನ್ನಲಾಗುತ್ತಿದೆ.

ಗ್ರ್ಯಾಂಡ್ ಎಂಟ್ರಿ ಕೊಡಲಿದೆ 'ಒಪ್ಪೊ' 32MP ಸೆಲ್ಫೀ ಕ್ಯಾಮೆರಾ ಸ್ಮಾರ್ಟ್‌ಫೋನ್.!

ಮೊದಲಿನಿಂದಲೂ ಸೆಲ್ಫೀಗಾಗಿ ವಿಶೇಷ ಗಮನವನ್ನು ನೀಡುತ್ತಿರುವ ಒಪ್ಪೊ ಇದೀಗ ತನ್ನ ಹೊಸ 'ಒಪ್ಪೊ ಎಫ್11 ಪ್ರೋ' ಸ್ಮಾರ್ಟ್‌ಫೋನಿನಲ್ಲೂ ಸಹ 32 ಮೆಗಾಪಿಕ್ಸಲ್ ಸಾಮರ್ಥ್ಯದ ಹೈ ಕ್ಯಾಮೆರಾವನ್ನು ನೀಡಲಿದೆ. ಇದರೊಂದಿಗೆ ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನ್‌ ಇತರೆ ಕಂಪನಿಗಳನ್ನು ಎದುರಿಸಲು ಹೇಗೆ ಸಜ್ಜಾಗಿದೆ ಮತ್ತು ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹೊಸ ಟ್ರೆಂಡ್

ಹೊಸ ಟ್ರೆಂಡ್

ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಭಾರೀ ಬದಲಾವಣೆಗಳಾಗುತ್ತಿದ್ದು, ಕಂಪನಿಗಳು ಹೊಸ ಹೊಸ ಫೀಚರ್ಸ್‌ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿವೆ. ಅವುಗಳಲ್ಲಿ ಉನ್ನತ ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾಗಳನ್ನು ಪರಿಚಯಿಸುತ್ತಿರುವುದು ಇದೀಗ ಹೊಸ ಟ್ರೆಂಡ್ ಶುರುವಾಗಿದೆ. ಈಗಾಗಲೇ ಪ್ರಮುಖ ಮೊಬೈಲ್ ಕಂಪನಿಗಳು 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಫೀಚರ್ ಅನ್ನು ಪರಿಚಯಿಸುವುದಾಗಿ ಘೋಷಿಸಿವೆ. ಅವುಗಳಲ್ಲಿ ಈಗ ಒಪ್ಪೊ ಎಫ್11 ಪ್ರೋ ಸಹ ಸೇರಿದೆ.

ಡಿಸೈನ್

ಡಿಸೈನ್

ಈ ಸ್ಮಾರ್ಟ್‌ಫೋನ್‌ ತನ್ನ ಸುತ್ತಲೂ ಅತ್ಯಂತ ಕಡಿಮೆ ಅಂಚಿನಿಂದ ಕೂಡಿದ್ದು, ಶೈನಿಂಗ್ ಡಿಸೈನ್ ಹೊಂದಿದೆ. ಹಿಂಭಾಗದಲ್ಲಿ ಒಂದು ಪಟ್ಟಿಯನ್ನು ನೀಡಿದ್ದು, ಆ ಪಟ್ಟಿಯಲ್ಲಿ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್ ಲೈಟ್ ಸಹ ಅಳವಡಿಸಲಾಗಿದೆ. ಅದರ ಕೆಳಭಾಗದಲ್ಲಿ ವೃತ್ತಾಕಾರದ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ನೀಡಲಾಗಿದೆ.

ಡಿಸ್‌ಪ್ಲೇ ಹೇಗಿದೆ?

ಡಿಸ್‌ಪ್ಲೇ ಹೇಗಿದೆ?

ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇಯ ಪಿಕ್ಸಲ್ ಪರ್ ಇಂಚಿನ ಅನುಪಾತವು 396(PPI) ಆಗಿದೆ.

ಪ್ರೊಸೆಸರ್

ಪ್ರೊಸೆಸರ್

ಆಕ್ಟಾಕೋರ್ ಮೀಡಿಯಾ ಟೆಕ್‌ SoC, ಸ್ನ್ಯಾಪ್‌ಡ್ರಾಗನ್ 855 ಸಾಮರ್ಥ್ಯದ ಪ್ರೊಸೆಸರ್ ಹೊಂದಿರಲಿದ್ದು, ಇದರೊಂದಿಗೆ 6 GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

48 ಮೆಗಾಪಿಕ್ಸಲ್ ಕ್ಯಾಮೆರಾ

48 ಮೆಗಾಪಿಕ್ಸಲ್ ಕ್ಯಾಮೆರಾ

ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಅದರಲ್ಲಿನ ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ ಮತ್ತು ಸೆಕೆಂಡರಿ ಕ್ಯಾಮೆರಾವು 12 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಎನ್ನಲಾಗುತ್ತಿದೆ.

ಸೆಲ್ಫೀ ಎಕ್ಸ್‌ಪರ್ಟ್!

ಸೆಲ್ಫೀ ಎಕ್ಸ್‌ಪರ್ಟ್!

ಸೆಲ್ಫೀ ಎಕ್ಸ್‌ಪರ್ಟ್ ಎಂದೇ ಬಿಂಬಿತವಾಗಿರುವ ಒಪ್ಪೊ ಕಂಪನಿ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫೀಗಾಗಿ ಉತ್ತಮ ಕ್ಯಾಮೆರಾ ನೀಡುತ್ತಾ ಬಂದಿದೆ. ಹಾಗೆಯೇ ಈ ಹೊಸ ಒಪ್ಪೊ ಎಫ್11 ಸ್ಮಾರ್ಟ್‌ಫೋನ್‌ನಲ್ಲಿಯೂ 32 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾವನ್ನು ನೀಡುತ್ತಿರುವುದು ಸೆಲ್ಫೀ ಪ್ರಿಯ ಗ್ರಾಹಕರಿಗೆ ಖುಷಿ ತಂದಿದೆ ಎನ್ನಬಹುದು.

ಬ್ಯಾಟರಿ

ಬ್ಯಾಟರಿ

ಒಪ್ಪೊ ಬಿಡುಗಡೆ ಮಾಡುತ್ತಿರುವ ಹೊಸ ಎಫ್11 ಸ್ಮಾರ್ಟ್‌ಫೋನ್‌ನಲ್ಲಿ 4500mAh ಸಾಮರ್ಥ್ಯದ ದೀರ್ಘಕಾಲ ಬಾಳುವ ಬ್ಯಾಟರಿಯನ್ನು ನೀಡಲಾಗುತ್ತಿದ್ದು, ಇದರೊಂದಿಗೆ ಫಾಸ್ಟ್‌ ಚಾರ್ಜರ್ ಅನ್ನು ಸಹ ನೀಡಲಾಗುತ್ತದೆ. ಫಾಸ್ಟ್‌ ಚಾರ್ಜರ್‌ನಿಂದ ಸ್ಮಾರ್ಟ್‌ಫೋನ್ ಅತೀ ವೇಗವಾಗಿ ಚಾರ್ಜ್ ಆಗುತ್ತದೆ. C ಪೋರ್ಟ್‌ ಮಾದರಿಯ ಯುಎಸ್‌ಬಿ ಇರಲಿದೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಹೊಂದಿರಲಿರುವ ಬಹುನಿರೀಕ್ಷತ ಒಪ್ಪೊ ಎಫ್11 ಸ್ಮಾರ್ಟ್‌ಫೋನ್‌ ಇದೇ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆ ಪ್ರವೇಶಿಸುವುದು ಪಕ್ಕಾ ಎನ್ನಲಾಗುತ್ತಿದೆ. ಇನ್ನೂ ಇದರ ಬೆಲೆಯ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ 25,000ರೂ.ಗಳು ಇರಲಿವೆ ಎಂದು ಊಹಿಸಲಾಗಿದೆ.

Best Mobiles in India

English summary
OPPO’s upcoming F series smartphone, the OPPO F11 Pro, has been the subject of a number of leaks and reports lately. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X