OPPO F27 5G ಬೆಲೆ ಇಳಿಕೆ! 2,000 ರೂ. ಅಗ್ಗ.. ಹೊಸ ಬೆಲೆ ಎಷ್ಟು?
ದಸರಾ, ದೀಪಾವಳಿ ಹಬ್ಬಕ್ಕೂ ಮುನ್ನ ಒಪ್ಪೋ ತನ್ನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಕಂಪನಿಯು ಒಪ್ಪೋ F27 5G (OPPO F27 5G) ಫೋನಿನ ಬೆಲೆಯನ್ನು 2,000 ರೂಪಾಯಿ ಕಡಿಮೆ ಮಾಡಿದೆ. ಬೆಲೆ ಇಳಿಕೆಯ ಬಳಿಕ, ಪ್ರಸ್ತುತ ಈ ಫೋನನ್ನು 20,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನೀವು, ಈ ಒಪ್ಪೋ F27 5G ಮೊಬೈಲ್ ಅನ್ನು 8GB RAM+128GB ಹಾಗೂ 8GB+256GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು.
ಕಂಪನಿಯು ಭಾರತದಲ್ಲಿ ಒಪ್ಪೋ F27 5G ಸ್ಮಾರ್ಟ್‌ಫೋನ್ ಅನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿತ್ತು. ಕೇವಲ ಒಂದೂವರೆ ತಿಂಗಳೊಳಗೆ ಈ ಫೋನಿನ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಈ ಫೋನ್ ಒಪ್ಪೋ F25 5G ಸರಣಿಯ ಉತ್ತರಾಧಿಕಾರಿಯಾಗಿ ಬರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 5,000mAh ಬ್ಯಾಟರಿ, 50 ಮೆಗಾಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ, 32 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಒಪ್ಪೋ F27 5G ಬೆಲೆ ಮತ್ತು ಆಫರ್‌ಗಳು
8GB+128GB ಸ್ಟೋರೇಜ್ ಬೆಲೆ = 22,999 ರೂ.
8GB+256GB ಸ್ಟೋರೇಜ್ ಬೆಲೆ = 24,999 ರೂ.
ಕಂಪನಿಯು ಒಪ್ಪೋ F27 5G ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. 8GB RAM ಜೊತೆಗೆ 128GB ಸ್ಟೋರೇಜ್ ಮತ್ತು 8GB RAM ಜೊತೆಗೆ 256GB ಸ್ಟೋರೇಜ್. 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 22,999 ರೂ. ಇದೆ. 2,000 ರೂ.ಗಳ ಬೆಲೆ ಕಡಿತದ ನಂತರ, ಪ್ರಸ್ತುತ 20,999 ರೂ.ಗೆ ಲಭ್ಯವಿದೆ. 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು 24,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಬೆಲೆ ಕಡಿತದ ನಂತರ, ಈ ಫೋನ್ 22,999 ರೂ.ಗೆ ಲಭ್ಯವಿದೆ.
ಒಪ್ಪೋ F27 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಒಪ್ಪೋ F27 5G ಮೊಬೈಲ್ 6.67 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 2400×1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, ಅಕ್ವಾ ಡೈನಾಮಿಕ್ಸ್, 240Hz ಟಚ್ ಸ್ಯಾಂಪ್ಲಿಂಗ್ ದರ, 394 PPI, 100% DCI P3 ಬಣ್ಣದ ಹರವು ಆಯ್ಕೆಗಳನ್ನು ಪಡೆದಿದೆ. 2,100 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಸಹ ಹೊಂದಿದೆ.
ಪ್ರೊಸೆಸರ್: ಒಪ್ಪೋ F27 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಮಾಲಿ G57 MP2 GPU ಸಪೋರ್ಟ್ ಸಹ ಇದೆ. ಇದು ಕಲರ್ ಓಎಸ್ 14 ಜೊತೆಗೆ ಆಂಡ್ರಾಯ್ಡ್ 14 ನಲ್ಲಿ ರನ್ ಆಗಲಿದೆ. ಈ ಫೋನ್ 8GB RAM + 128GB ಹಾಗೂ 8GB + 256GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. 2TB ವರೆಗೆ ವಿಸ್ತರಣೆಗೆ ಬೆಂಬಲದೊಂದಿಗೆ ಮೈಕ್ರೊ SD ಕಾರ್ಡ್ ಸ್ಲಾಟ್ ಆಯ್ಕೆಯೂ ಲಭ್ಯವಿದೆ.
ಈ ಸುದ್ದಿ ಓದಿದ್ದೀರಾ?: Tecno: ಈ 5G ಫೋನ್ ಬೆಲೆ 14,000 ಇಳಿಕೆ; 512GB ಸ್ಟೋರೇಜ್, 108MP ಕ್ಯಾಮೆರಾ.. ಯಾವುದು?
ಕ್ಯಾಮೆರಾ: ಒಪ್ಪೋ F27 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ, 2 ಮೆಗಾಪಿಕ್ಸೆಲ್ ಕ್ಯಾಮೆರಾ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಒಪ್ಪೋ F27 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು 45W SuperVOOC ಚಾರ್ಜಿಂಗ್ ಸಪೋರ್ಟ್ ಒದಗಿಸಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್-ಸಿಮ್, 5G, WiFi 5, ಬ್ಲೂಟೂತ್ 5.3, ಯುಎಸ್‌ಬಿ 2.0, ಜಿಪಿಎಸ್, GLONASS, ಗೆಲಿಲಿಯೋ, BeiDou ಮತ್ತು QZSS ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








