'ಸೆಲ್ಫಿ ಇತಿಹಾಸವನ್ನು ಬದಲಾಯಿಸಲು ಬಂದಿದೆ AI ಟೆಕ್ನಾಲಾಜಿಯ ಒಪ್ಪೊ F5'

ಒಪ್ಪೋ F5 ಸ್ಮಾರ್ಟ್‌ಫೋನಿನಲ್ಲಿ ಇದೇ ಮೊದಲ ಬಾರಿಗೆ ಮಿಷಿನ್ ಲರ್ನಿಂಗ್ (ಯಂತ್ರಿಕ ಕಲಿಕೆ) ತಂತ್ರಜ್ಞಾನವನ್ನು ಸೆಲ್ಪಿ ಕ್ಯಾಮೆರಾದಲ್ಲಿ ಅಳವಡಿಸಿದ್ದು, ಇದು ನೀವು ತೆಗೆಯುವಂತ ಫೋಟೋಗಳನ್ನು ಮತ್ತಷ್ಟು ಸುಂದರಗೊಳಿಸುವುದಲ್ಲದೇ,

|

ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪೋ ಸದ್ದು ಮಾಡುತ್ತಿರುವುದು ತನ್ನ ಸೆಲ್ಫಿ ಸ್ಮಾರ್ಟ್‌ಫೋನ್‌ಗಳಿಂದ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ F3 ನಂತರದಲ್ಲಿ ಮತ್ತೊಂದು ಸೆಲ್ಫಿ ಕೇಂದ್ರಿತ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಮುಂದಾಗಿದೆ. ಇದೇ ಒಪ್ಪೋ F5 ಸ್ಮಾರ್ಟ್‌ಫೋನ್. ಈ ಹಿಂದಿನ ಎಲ್ಲಾ ಸೆಲ್ಫಿ ಫೋನ್‌ಗಳಿಂತಲೂ ಈ ಫೋನ್ ವಿಭಿನ್ನ ಮತ್ತು ವಿಶೇಷವಾಗಿದೆ ಎನ್ನಲಾಗಿದೆ.

'ಸೆಲ್ಫಿ ಇತಿಹಾಸವನ್ನು ಬದಲಾಯಿಸಲು ಬಂದಿದೆ AI ಟೆಕ್ನಾಲಾಜಿಯ ಒಪ್ಪೊ F5'

ಓದಿರಿ: ಬೆಂಗಳೂರಿನ ಟ್ರಾಫಿಕ್‌ನಲ್ಲಿ ಕ್ರಿಕೆಟ್ ದೇವರು ಸಚಿನ್ ಕಂಡದ್ದು, ಮೆಚ್ಚುಗೆ ಸೂಚಿಸಿದ್ದು..!

ಒಪ್ಪೋ F5 ಸ್ಮಾರ್ಟ್‌ಫೋನಿನಲ್ಲಿ ಇದೇ ಮೊದಲ ಬಾರಿಗೆ ಮಿಷಿನ್ ಲರ್ನಿಂಗ್ (ಯಂತ್ರಿಕ ಕಲಿಕೆ) ತಂತ್ರಜ್ಞಾನವನ್ನು ಸೆಲ್ಪಿ ಕ್ಯಾಮೆರಾದಲ್ಲಿ ಅಳವಡಸಿದ್ದು, ಇದು ನೀವು ತೆಗೆಯುವಂತ ಫೋಟೋಗಳನ್ನು ಮತ್ತಷ್ಟು ಸುಂದರಗೊಳಿಸುವುದಲ್ಲದೇ, ಅತ್ಯುತ್ತಮ ಕ್ವಾಲಿಟಿಯನ್ನು ಹೊಂದಿರಲಿದೆ. ಇದಲ್ಲದೇ ಈ ಫೋನಿನಲ್ಲಿ 18:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 6 ಇಂಚಿನ ಡಿಸ್‌ಪ್ಲೇಯನ್ನು ಇದು ಹೊಂದಿದೆ.

ಒಪ್ಪೋ F5 ಸ್ಮಾರ್ಟ್‌ಫೋನಿನಲ್ಲಿ FHD+ ಡಿಸ್‌ಪ್ಲೇ:

ಒಪ್ಪೋ F5 ಸ್ಮಾರ್ಟ್‌ಫೋನಿನಲ್ಲಿ FHD+ ಡಿಸ್‌ಪ್ಲೇ:

ಒಪ್ಪೋ F5 ಸ್ಮಾರ್ಟ್‌ಫೋನಿನಲ್ಲಿ 6 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ನೋಡಬಹುದಾಗಿದೆ. ಅಲ್ಲದೇ ಇದು ಬ್ರಜಿಲ್ ಲೈಸ್ ವಿನ್ಯಾಸವನ್ನು ಹೊಂದಿದೆ. ಜೊತೆಗೆ 18:9 ಅನುಪಾತದಿಂದ ಕೂಡಿದೆ. ಇದು ವೆಬ್ ಬ್ರೌಸಿಂಗ್, ಗೇಮಿಂಗ್ ಮತ್ತು ವಿಡಿಯೋ ನೋಡಲು ಹೇಳಿ ಮಾಡಿಸಿದಂತಿದೆ. ಒಂದು ಕೈನಲ್ಲಿ ಬಳಕೆ ಮಾಡಿಕೊಳ್ಳುವ ಅನುಭವವು ಉತ್ತಮವಾಗಿದೆ.

ಹೊಸ ಮಾದರಿಯ ಸೆಲ್ಪಿ ಕ್ಯಾಮೆರಾ:

ಹೊಸ ಮಾದರಿಯ ಸೆಲ್ಪಿ ಕ್ಯಾಮೆರಾ:

ಒಪ್ಪೋ F5 ಸ್ಮಾರ್ಟ್‌ಫೋನಿನಲ್ಲಿ ಹೊಸ ಮಾದರಿಯ ಸೆಲ್ಫಿ ಕ್ಯಾಮೆರಾಗಳನ್ನು ಕಾಣಬಹುದಾಗಿದೆ. ಅಲ್ಲದೇ ಇದಕ್ಕಾಗಿ 20 MP ಸೆಲ್ಪಿ ಕ್ಯಾಮೆರಾವನ್ನು ಹೊಂದಿದೆ. ಇದು AI (ಕೃತಕ ಬುದ್ದಿಮತ್ತೆ)ಯಲ್ಲಿ ಕಾರ್ಯನಿರ್ವಹಿಸಲಿದ ಎನ್ನಲಾಗಿದೆ. ಇದಲ್ಲದೇ ಬ್ಯೂಟಿಫೈ ಮೋಡ್ ಗಳನ್ನು ನೀಡಲಾಗಿದೆ. ಇದು ನೀವು ತೆಗೆಯುಚಿತ್ರವನ್ನು ಉತ್ತಮವಾಗಿ ಮೂಡಿ ಬರುವಂತೆ ಮಾಡಲಿದೆ. ಇದು ಸೆಲ್ಫಿ ಕ್ಯಾಮೆರಾ ಇತಿಹಾಸವನ್ನು ಬದಲಿಸಲಿದೆ.

ಉತ್ತಮ ಬ್ಯಾಟರಿ:

ಉತ್ತಮ ಬ್ಯಾಟರಿ:

ಇದಲ್ಲದೇ ಒಪ್ಪೋ F5 ಸ್ಮಾರ್ಟ್‌ಫೋನಿನಲ್ಲಿ 3,200 mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಇದು ಹೆಚ್ಚಿನ ಕಾರ್ಯದಕ್ಷತೆಯನ್ನು ಹೊಂದಿದೆ. ಇದಲ್ಲದೇ ಚಾರ್ಜಿಂಗ್ ವೇಗವಾಗಿ ಆಗುವಂತೆ ಮಾಡಲು ಹೊಸ ಟೆಕ್ನಾಲಜಿಯನ್ನು ನೀಡಲಾಗಿದೆ. ಉತ್ತಮ ಬ್ಯಾಕಪ್ ಹೊಂದಿದೆ.

ಆಂಡ್ರಾಯ್ಡ್ 7.1.1:

ಆಂಡ್ರಾಯ್ಡ್ 7.1.1:

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಂಡ್ರಾಯ್ಡ್ ನ್ಯಾಗ 7.1.1 ನಲ್ಲಿ ಒಪ್ಪೋ F5 ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಕಲರ್ ಓಎಸ್ V3.2 ಸಹ ನೀಡಲಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್ ಬಳಕೆ ಮಾಡಿಕೊಳ್ಳುವ ವಿಧಾನವನ್ನು ಬದಲಾಯಿಸಲಿದೆ.

ಉತ್ತಮ ಕಾರ್ಯಚರಣ ವ್ಯವಸ್ಥೆ:

ಉತ್ತಮ ಕಾರ್ಯಚರಣ ವ್ಯವಸ್ಥೆ:

ಒಪ್ಪೋ F5 ಸ್ಮಾರ್ಟ್‌ಫೋನಿನಲ್ಲಿ ಮಿಡಿಯಾ ಟೆಕ್ MT6763T ಆಕ್ಟಾ ಕೋರ್ 2.5 GHz ವೇಗದ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದಲ್ಲದೇ 4GB/6GB RAM ಜೊತೆಗೆ 256 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದು ಉತ್ತಮ ಗ್ರಾಫಿಕ್ಸ್ ಗೇಮ್ ಗಳನ್ನು ಆಡಲು ಬೇವವಾಗಿ ಬ್ರೌಸ್ ಮಾಡಲು ಸಹಾಯವಾಗಲಿದೆ.

ಬೆಲೆ:

ಬೆಲೆ:

ಒಪ್ಪೋ F5 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗಿದೆ. 4GB RAM ಫೋನಿನ ಬೆಲೆ ರೂ. 19,990 ಆಗಲಿದೆ. ಇದೇ ಮಾದರಿಯಲ್ಲಿ 6GB RAM ಫೋನಿನ ಬೆಲೆ ರೂ. 24,990 ಆಗಲಿದೆ. ನವೆಂಬರ್ 2ರಿಂದ 8ರ ವರೆಗೆ ಪ್ರಿ ಬುಕಿಂಗ್ ಲಭ್ಯವಿದ್ದು, ಫಸ್ಟ್ ಸೇಲ್ ನವೆಂಬರ್ 9ಕ್ಕೆ ನಡೆಯಲಿದ್ದು ಸ್ಟೋರ್ ಗಳಲ್ಲಿ ಡಿಸೆಂಬರ್ 9 ರ ನಂತರದಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
OPPO F5: AI enabled Selfie Expert for perfect Selfies and vivid multimedia experience. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X