ಬೆಂಗಳೂರಿನ ಟ್ರಾಫಿಕ್‌ನಲ್ಲಿ ಕ್ರಿಕೆಟ್ ದೇವರು ಸಚಿನ್ ಕಂಡದ್ದು, ಮೆಚ್ಚುಗೆ ಸೂಚಿಸಿದ್ದು..!
ಇದೇ ಒಂದು ದಿನದ ಹಿಂದೆ ಕೇರಳದಲ್ಲಿದ್ದ ಸಚಿನ್, ರಸ್ತೆಯಲ್ಲಿ ಸಾಗುತ್ತಿದ್ದ ಯುವಕರಿಗೆ ಹೆಲ್ಮೆಟ್ ಹಾಕಿಕೊಳ್ಳಿ ಎಂದು ತಿಳಿಸಿದ್ದಲ್ಲದೇ, ಜೀವ ಅಮೂಲ್ಯ ಎನ್ನುವ ಸಂದೇಶವನ್ನು ಸಾರುವಂತಹ ವಿಡಿಯೋವನ್ನು ಟ್ವಿಟ್ ಮಾಡಿದ್ದರು. ಇಂದು ಬೆಂಗಳೂರಿನಲ್ಲಿ
ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮುಂದಾಗಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಬೆಂಗಳೂರಿನ ಬಗ್ಗೆ ತಮ್ಮ ಟ್ವಿಟ್ ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರಿಗೆ ಆಗಮಿಸಿರುವ ಸಚಿನ್, ಕಾರಿನಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಮತ್ತು ಮುಂಬದಿ ಸವಾರರು ಹೆಲ್ಮೆಟ್ ಹಾಕಿರುವುದನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ.
ಇದೇ ಒಂದು ದಿನದ ಹಿಂದೆ ಕೇರಳದಲ್ಲಿದ್ದ ಸಚಿನ್, ರಸ್ತೆಯಲ್ಲಿ ಸಾಗುತ್ತಿದ್ದ ಯುವಕರಿಗೆ ಹೆಲ್ಮೆಟ್ ಹಾಕಿಕೊಳ್ಳಿ ಎಂದು ತಿಳಿಸಿದ್ದಲ್ಲದೇ, ಜೀವ ಅಮೂಲ್ಯ ಎನ್ನುವ ಸಂದೇಶವನ್ನು ಸಾರುವಂತಹ ವಿಡಿಯೋವನ್ನು ಟ್ವಿಟ್ ಮಾಡಿದ್ದರು. ಇಂದು ಬೆಂಗಳೂರಿನಲ್ಲಿ ಸವಾರು ಹೆಲ್ಮೆಟ್ ಹಾಕಿಕೊಂಡಿರುವುದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ದಿ ಪವರ್ ಆಫ್ ಟು! ಗ್ರೇಟ್ ಗೊಯಿಂಗ್ ಬೆಂಗಳೂರು ಎಂದು ಟ್ವಿಟ್ ಮಾಡಿರುವ ಸಚಿನ್, ರಸ್ತೆ ಸುರಕ್ಷತೆಯ ಬಗ್ಗೆ ಗಮನ ಸೆಳೆಯಲು ಮುಂದಾಗಿದ್ದಾರೆ. ಅಲ್ಲದೇ ಹೆಲ್ಮೆಟ್ ಧರಿಸಿ ನಿಮ್ಮ ಅಮೂಲ್ಯ ಜೀವನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಓದಿರಿ: ದುಬಾರಿ ಐಫೋನ್ X ಒಳಗೆ ಏನೇನಿದೆ..? ನೀವು ನೋಡಬೇಕಾ..?
ಇನ್ನೊಂದು ವಿಶೇಷತೆ ಎಂದರೆ ಸಚಿನ್ ಕ್ಲಿಕ್ಕಿಸಿರುವ ಚಿತ್ರದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ತಮ್ಮ ಚಿತ್ರವನ್ನು ಕ್ರಿಕೆಟ್ ದೇವರು ಸಚಿನ್ ತೆಗೆಯುತ್ತಿದ್ದಾರೆ ಎನ್ನುವ ಸಣ್ಣ ಸುಳಿವು ದೊರೆತಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಈ ಸವಾರರಿಂದ ಬೆಂಗಳೂರಿಗೆ ಖ್ಯಾತಿ ಬಂದಿರುವುದಂತು ಸುಳ್ಳಲ್ಲ.


Click it and Unblock the Notifications








