ಒಪ್ಪೋದಿಂದ ಹೊಸ ಫೋನ್ ಲಾಂಚ್: ಮೂರು ಆವೃತ್ತಿಯಲ್ಲಿ ಲಭ್ಯ
ಫಿಲಿಫೈನ್‌ನಲ್ಲಿ ಕಾಣಿಸಿಕೊಂಡಿರುವ ಒಪ್ಪೋ F5 ಸ್ಮಾರ್ಟ್‌ಫೋನ್ ಸಹ ಸೆಲ್ಫಿ ಎಕ್ಸ್‌ಪರ್ಟ್ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕೃತಕ ಬುದ್ದಿ ಮತ್ತೆಯನ್ನು ಇದರಲ್ಲಿ ಕಾರಣಬಹುದಾಗಿದೆ. ಅಲ್ಲದೇ ಉತ್ತಮ ಸೆಲ್ಫಿ ಪೋಟ್‌ರೆಟ್ ತೆಗೆಯಲಿದೆ.
ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ ಹೊಸ ಸ್ಮಾರ್ಟ್‌ಫೊನ್ ಲಾಂಚ್ ಮಾಡಿದ್ದು, ಮೂರು ಆವೃತ್ತಿಯಲ್ಲಿ F5 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈಗಾಗಲೇ ಈ ಫೋನ್ ಥೈಲ್ಯಾಂಡ್ ನಲ್ಲಿ ಪ್ರೀ ಆರ್ಡರ್‌ಗೆ ಲಭ್ಯವಿದೆ ಎನ್ನಲಾಗಿದೆ.

ಓದಿರಿ: ಗೂಗಲ್ ಇನ್ಸ್‌ಟೆಂಟ್ ಆಪ್ ಪ್ಲೇ ಸ್ಟೋರಿನಲ್ಲಿ ಲಭ್ಯ: ವಿಶೇಷತೆ ಏನು..?
ಫಿಲಿಫೈನ್‌ನಲ್ಲಿ ಕಾಣಿಸಿಕೊಂಡಿರುವ ಒಪ್ಪೋ F5 ಸ್ಮಾರ್ಟ್‌ಫೋನ್ ಸಹ ಸೆಲ್ಫಿ ಎಕ್ಸ್‌ಪರ್ಟ್ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕೃತಕ ಬುದ್ದಿ ಮತ್ತೆಯನ್ನು ಇದರಲ್ಲಿ ಕಾರಣಬಹುದಾಗಿದೆ. ಅಲ್ಲದೇ ಉತ್ತಮ ಸೆಲ್ಫಿ ಪೋಟ್‌ರೆಟ್ ತೆಗೆಯಲಿದೆ.

ಮೂರು ಆವೃತ್ತಿಯಲ್ಲಿ ಲಭ್ಯವಿದೆ:
ಒಪ್ಪೋ F5, ಒಪ್ಪೋ F5 6GB ಮತ್ತು ಒಪ್ಪೋ F5 ಯೂತ್ ಎಂಬ ಮೂರು ಆವೃತ್ತಿಯಲ್ಲಿ ಈ ಫೋನ್ ದೊರೆಯಲಿದೆ ಎನ್ನಲಾಗಿದೆ. ಮೂರು ಸಹ ಒಂದಕ್ಕೊಂದು ವ್ಯತ್ಯಾಸವನ್ನು ಹೊಂದಿವೆ.

ಡ್ಯುಯಲ್ ಲೈನ್ಸ್ ಕ್ಯಾಮೆರಾ:
ಒಪ್ಪೋ F5, ಒಪ್ಪೋ F5 6GB ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದಾಗಿದೆ. ಒಪ್ಪೋ F5 ಯೂತ್ ಬೆಲೆಯೂ ಕಡಿಮೆ ಇದ್ದು, ಈ ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ ಸಿಂಗಲ್ ಕ್ಯಾಮೆರಾವನ್ನು ನೀಡಲಾಗಿದೆ.

ಒಪ್ಪೋ F5, ಒಪ್ಪೋ F5 6GB:
ಒಪ್ಪೋ F5, ಒಪ್ಪೋ F5 6GB ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 20 MP ಕ್ಯಾಮೆರಾವನ್ನು ನೀಡಲಾಗಿದೆ ಹಾಗೂ F5 ಯೂತ್ 16 MP ಡ್ಯುಯಲ್ ಕ್ಯಾಮೆರಾ ನೀಡಲಾಗಿದೆ.

FHD ಸ್ಕ್ರಿನ್ ಇದರಲ್ಲಿದೆ:
ಒಪ್ಪೋ F5 ಸ್ಮಾರ್ಟ್‌ಫೋನ್‌ನಲ್ಲಿ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ ಉತ್ತಮ ವಿಡಿಯೋಗಳನ್ನು ನೋಡಲು ಇದು ಸಹಾಯ ಮಾಡಲಿದೆ ಎನ್ನಲಾಗಿದೆ. ಇದು 1080x2160 ರೆಸಲ್ಯೂಶನ್ ಅನ್ನು ಹೊಂದಿದೆ.

6 ಇಂಚಿನ ಡಿಸ್‌ಪ್ಲೇ ಇದೆ:
ಒಪ್ಪೋ F5 ಸ್ಮಾರ್ಟ್‌ಫೋನ್ ನಲ್ಲಿ 6 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ, ಇದು ದೊಡ್ಡ ಪ್ರಮಾಣದಲ್ಲಿದ್ದು, ಗೇಮ್ ಆಡಲು ಉತ್ತಮವಾದ ಅನುಭವನ್ನು ನೀಡಲಿದೆ.

4GB/6GB RAM:
ಒಪ್ಪೋ F5 ಸ್ಮಾರ್ಟ್‌ಫೋನ್ ನಲ್ಲಿ 4GB ಮತ್ತು ಒಪ್ಪೋ F5 6GB ಸ್ಮಾರ್ಟ್‌ಫೋನಿನಲ್ಲಿ 6GB RAM ಅನ್ನು ನೀಡಲಾಗಿದೆ ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಮೂಲಕ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.


Click it and Unblock the Notifications








