ಅಚ್ಚರಿಯ ಫೀಚರ್‌ಗಳೊಂದಿಗೆ ಲಾಂಚ್ ಆಗಲಿದೆ ಒಪ್ಪೊ 'ಫೈಂಡ್ ಎಕ್ಸ್ 2'!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ಒಪ್ಪೊ ಮೊಬೈಲ್ ಪ್ರಿಯರಿಗೆ ಮತ್ತೊಂದು ಸುಹಿಸುದ್ದಿಯೊಂದನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದೆ. ಇತ್ತೀಚಿಗಷ್ಟೇ ಒಪ್ಪೊ ಬಿಡುಗಡೆಗೊಳಿಸಿದ್ದ ಫೈಂಡ್ ಎಕ್ಸ್‌ ಸರಣಿಯ ಮುಂದುವರೆದ ಸ್ಮಾರ್ಟ್‌ಪೋನ್ ಅನ್ನು ಪರಿಚಯಿಸಲು ಒಪ್ಪೊ ಕಂಪೆನಿ ಮುಂದಾಗಿದ್ದು, ಇದೀಗ 'ಫೈಂಡ್ ಎಕ್ಸ್‌ 2' ಹೆಸರಿನ ಸ್ಮಾರ್ಟ್‌ಫೋನ್‌ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಕಲ ಸಿದ್ದತೆ ನಡೆಸಿದೆ.

ಅಚ್ಚರಿಯ ಫೀಚರ್‌ಗಳೊಂದಿಗೆ ಲಾಂಚ್ ಆಗಲಿದೆ ಒಪ್ಪೊ 'ಫೈಂಡ್ ಎಕ್ಸ್ 2'!

ಪ್ರತಿ ಬಾರಿ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೆ ಬಂದಿರುವ ಒಪ್ಪೊ ಇದೀಗ 'ಫೈಂಡ್ ಎಕ್ಸ್‌ 2' ಸ್ಮಾರ್ಟ್‌ಫೋನಿನಲ್ಲಿ ಅತೀ ಸ್ಪೆಷಲ್ ಫೀಚರ್‌ಗಳನ್ನು ಪರಿಚಯಿಸಲು ಸಜ್ಜಾಗಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ ಸಂಪೂರ್ಣ ಬೆಜಲ್‌ ಲೆಸ್‌ ಡಿಸ್‌ಪ್ಲೇ ಹೊಂದಿರಲಿದ್ದು, ಅದರೊಂದಿಗೆ ಮುಂಭಾಗದ ಹೋಲ್ ಕ್ಯಾಮೆರಾ ಮತ್ತು 3D ಫೇಸ್‌ ಅನ್‌ಲಾಕ್‌ ನಂತಹ ಸ್ಪೆಷಲ್ ಫೀವರ್ಸ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ.

ಅಚ್ಚರಿಯ ಫೀಚರ್‌ಗಳೊಂದಿಗೆ ಲಾಂಚ್ ಆಗಲಿದೆ ಒಪ್ಪೊ 'ಫೈಂಡ್ ಎಕ್ಸ್ 2'!

ಒನ್‌ಪ್ಲಸ್ ಮತ್ತು ಆಪಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯುವಂತಹ ವಿನೂತನ ಫೀಚರ್ಸ್‌ಗಳನ್ನು ಹೊಂದಿ ಮಾರುಕಟ್ಟೆಗೆ ಬರಲಿರುವ ಒಪ್ಪೊ ಸಂಸ್ಥೆಯ ಹೊಸ 'ಫೈಂಡ್ ಎಕ್ಸ್‌ 2' ಸ್ಮಾರ್ಟ್‌ಫೋನ್‌ ಈಗಾಗಲೇ ಗ್ರಾಹಕರಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ. ಹಾಗಾದರೇ ಒಪ್ಪೊ ಕಂಪನಿಯ ನೂತನ ಸ್ಮಾರ್ಟ್‌ಫೋನ್ 'ಫೈಂಡ್ ಎಕ್ಸ್‌ 2' ಏನೇಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಬಹುದು ಎಂಬುದನ್ನು ಮುಂದೆ ನೋಡೋಣ.

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ಒಪ್ಪೊದ ಹೊಸ ಫೈಂಡ್ ಎಕ್ಸ್ 2 ಸ್ಮಾರ್ಟ್‌ಫೋನ್‌ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ ಎಂದು ಹೇಳಲಾಗಿದೆ. ಇದರ ಡಿಸ್‌ಪ್ಲೇ ಸಂಪೂರ್ಣ ಬೆಜಲ್ ಲೆಸ್ ನಿಂದ ಕೂಡಿರಲಿದ್ದು, ಬೆಜಲ್ ಲೆಸ್ ಲುಕ್‌ ಫೋನಿನ ಅಂದವನ್ನು ಹೆಚ್ಚಿಸುವುದು. ಇದರೊಂದಿಗೆ ಫುಲ್ ಹೆಚ್‌ಡಿ ರೆಸಲ್ಯೂಶನ್ ಡಿಸ್‌ಪ್ಲೇಯಲ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ನೀಡಲಾಗುವುದು ಎಂದು ತಿಳಿದುಬಂದಿದೆ.

ಕ್ಯಾಮೆರಾ ಸ್ಪೆಷಲ್

ಕ್ಯಾಮೆರಾ ಸ್ಪೆಷಲ್

ಕ್ಯಾಮೆರಾದ ಫೀಚರ್ ಕುರಿತು ಗ್ರಾಹಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಒಪ್ಪೊ ಫೈಂಡ್ ಎಕ್ಸ್ 2 ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ ಹೋಲ್ ಇನ್ ಡಿಸ್‌ಪ್ಲೇ ಡಿಸೈನ್ ಹೊಂದಿರಲಿದೆ. ಇದು ಫೋಟೋದ ಕ್ಲಿಯರಿಟಿ ಅದ್ಬುತವಾಗಿ ಮೂಡಿಬರಲು ಸಹಕಾರಿಯಾಗಿರಲಿದೆ. ಇದರೊಂದಿಗೆ ಹಿಂಭಾಗದ ಕ್ಯಾಮೆರಾದಲ್ಲಿ ಹೆಚ್ಚಿನ ಮೆಗಾಪಿಕ್ಸಲ್ ಮತ್ತು 10x ಆಪ್ಟಿಕಲ್ ಝೂಮ್ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಸೂಪರ್ VOOC ಚಾರ್ಜರ್

ಸೂಪರ್ VOOC ಚಾರ್ಜರ್

ಒಪ್ಪೊ ಫೈಂಡ್ ಎಕ್ಸ್ 2 ಸ್ಮಾರ್ಟ್‌ಫೋನಿನಲ್ಲಿ ಅತ್ಯುತ್ತಮ 3400mAh ಶಕ್ತಿ ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗುವುದು ಮತ್ತು ಇದರೊಂದಿಗೆ ಸೂಪರ್ VOOC ಕ್ವಿಕ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಿದೆ. ಈ ಸೂಪರ್ VOOC ಚಾರ್ಜಿಂಗ್ ನಿಂದ ಬ್ಯಾಟರಿಯನ್ನು ಕೆವಲ 35 ನಿಮಿಷದಲ್ಲಿ ಫೋನ್ ಚಾರ್ಜಿಂಗ್ ಸಂಪೂರ್ಣವಾಗಿಸುತ್ತದೆ ಎಂದು ಹೇಳಲಾಗುತ್ತಿದೆ.

3D ಫೇಸ್‌ ಅನ್‌ಲಾಕ್

3D ಫೇಸ್‌ ಅನ್‌ಲಾಕ್

ಮೊಟ್ಟ ಮೊದಲ ಬಾರಿಗೆ ಒಪ್ಪೊ 3D ಫೇಸ್‌ ಅನ್‌ಲಾಕ್ ಫೀಚರ್ ಅನ್ನು ಪರಿಚಯಿಸಲಿದೆ ಎಂದು ಹೇಳಲಾಗಿದೆ. ಇದರಿಂದ ಬಳಕೆದಾರರ ಫೇಸ್‌ ಸ್ಕ್ಯಾನ್ ಈಗ ಸ್ಮಾರ್ಟ್‌ ಅನ್‌ಲಾಕ್ ವ್ಯವಸ್ಥೆಯನ್ನು ಹೊಂದಲಿದೆ ಎಂದು ಹೇಳಲಾಗಿದೆ. ಇನ್ನು ಅನ್‌ಲಾಕ್ ಸ್ಕ್ಯಾನಿಂಗಗೆ ಎರಡು ಫಿಂಗರ್ ಬಳಸಿಲು ಅವಕಾಶ ಇದ್ದು, ಜತೆಗೆ ಇನ್ ಬಿಲ್ಟ್ ವಾಟರ್‌ಪ್ರೂಫ್ ಸಹ ಹೊಂದಿರಲಿದೆ ಎನ್ನಲಾಗುತ್ತಿದೆ.

ಲಭ್ಯತೆ ಮತ್ತು ಬೆಲೆ

ಲಭ್ಯತೆ ಮತ್ತು ಬೆಲೆ

ಅತೀ ವಿನೂತನ ಫೀಚರ್‌ಗಳನ್ನು ಒಳಗೊಂಡಿರುವ ಬಹುನಿರೀಕ್ಷಿತ ಒಪ್ಪೊ ಫೈಂಡ್ ಎಕ್ಸ್ 2 ಸ್ಮಾರ್ಟ್‌ಫೋನ್‌ ವಿಶ್ವ ಮಾರುಕಟ್ಟೆಗೆ ಎಂಟ್ರಿ ನೀಡಲು ತುದಿಗಾಲಿನಲ್ಲಿ ನಿಂತಿದೆ. ಆದರೆ, ಭಾರತದ ಮಾರುಕಟ್ಟೆಗೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಮಾಹಿತಿ ಇನ್ನೂ ಲಭ್ಯವಿಲ್ಲ. ಇನ್ನು ಇದರ ಬೆಲೆ ಸುಮಾರು 55,000ರೂ.ಗಳಿಂದ 60,000 ರೂ.ಗಳ ವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
The Find X launched with a slider design in a bid to achieve a completely bezel-less display. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X