Oppo Find X9 ಸರಣಿ ಆಗಮನಕ್ಕೆ ದಿನಗಣನೆ: Find X8 Pro ಬೆಲೆಯಲ್ಲಿ ಭಾರೀ ಇಳಿಕೆ!
Oppo ತನ್ನ ಮುಂದಿನ ಫ್ಲಾಗ್‌ಶಿಪ್ Oppo Find X9 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಪರಿಚಯಿಸಲು ಸಜ್ಜಾಗಿದೆ. ಅದಕ್ಕೂ ಮುನ್ನವೇ ಕಂಪನಿಯು ತನ್ನ ಹಳೆಯ ಫ್ಲ್ಯಾಗ್‌ಶಿಪ್ ಮಾದರಿ Oppo Find X8 Pro ಮೇಲೆ ಆಕರ್ಷಕ ರಿಯಾಯಿತಿ ನೀಡಿದೆ. ಈ ದರ ಇಳಿಕಯು ಫ್ಲಿಪ್‌ಕಾರ್ಟ್ ನಲ್ಲಿ ಕಂಡುಬಂದಿದ್ದು, ಅದ್ಭುತ ಕ್ಯಾಮೆರಾ ಸಾಮರ್ಥ್ಯ, ಶಕ್ತಿಶಾಲಿ ಬ್ಯಾಟರಿ ಮತ್ತು ತನ್ನ ಸ್ಟೈಲಿಶ್ ವಿನ್ಯಾಸದಿಂದ ಈಗಲೂ ಜನಪ್ರಿಯವಾಗಿರುವ ಪ್ರೀಮಿಯಂ Oppo Find X8 Pro ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.
Oppo Find X8 Pro: ಫ್ಲಿಪ್‌ಕಾರ್ಟ್ ನಲ್ಲಿ ಬೆಲೆ ಇಳಿಕೆ
ದೇಶದಲ್ಲಿ Oppo Find X8 Pro ಸ್ಮಾರ್ಟ್‌ಫೋನ್ ಅನ್ನು ₹99,999 ಬೆಲೆಯಲ್ಲಿ ಪರಿಚಯಿಸಲಾಗಿತ್ತು. ಇದೀಗ ಫ್ಲಿಪ್‌ಕಾರ್ಟ್ ನಲ್ಲಿ ಈ ಫೋನ್ ಕೇವಲ ₹84,999 ಕ್ಕೆ ಲಭ್ಯವಿದೆ. ಅಂದರೆ ಗ್ರಾಹಕರಿಗೆ ನೇರವಾಗಿ ₹15,000 ರಿಯಾಯಿತಿ ದೊರೆಯುತ್ತಿದೆ. ಇದಲ್ಲದೆ, ಗ್ರಾಹಕರು Flipkart Axis Bank ಅಥವಾ SBI ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಿದರೆ ಹೆಚ್ಚುವರಿಯಾಗಿ ₹4,000 ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಜೊತೆಗೆ ಹಳೆಯ ಸ್ಮಾರ್ಟ್‌ಫೋನ್ ವಿನಿಮಯ ಆಯ್ಕೆಯ ಮೂಲಕ ನೀವು ಇನ್ನಷ್ಟು ಉಳಿತಾಯ ಕೂಡ ಮಾಡಬಹುದು.

Oppo Find X8 Pro: ಪ್ರಮುಖ ವೈಶಿಷ್ಟ್ಯಗಳು
ಕಳೆದ ವರ್ಷ ಇದೇ ನವೆಂಬರ್ ತಿಂಗಳಿನಲ್ಲಿ ಈ ಹಿಂದಿನ ಪೀಳಿಗೆಯ Oppo Find X8 Pro ಸ್ಮಾರ್ಟ್‌ಫೋನ್ ಪರಿಚಯವಾಗಿತ್ತು. ಈ ಫೋನ್ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದಕ್ಕೆ 120Hz ರಿಫ್ರೆಶ್ ರೇಟ್ ಮತ್ತು Dolby Vision ಬೆಂಬಲವಿದೆ. ಡಿಸ್‌ಪ್ಲೇ ಗರಿಷ್ಠ 4,500 ನಿಟ್ಸ್ ಬ್ರೈಟ್ನೆಸ್ ನೀಡುತ್ತದೆ. ಕಾರ್ಯಕ್ಷಮತೆಗಾಗಿ, ಈ ಫೋನ್‌ಗೆ MediaTek Dimensity 9400 ಚಿಪ್‌ಸೆಟ್ ಪವರ್ ಒದಗಿಸುತ್ತದೆ. ಬ್ಯಾಟರಿ ವಿಭಾಗದಲ್ಲಿ, 5,910mAh ಸಾಮರ್ಥ್ಯದ ಬ್ಯಾಟರಿ ಇದ್ದು, ಇದು 80W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ.
ಈ ಸ್ಮಾರ್ಟ್‌ಫೋನಿನ ಅತ್ಯಂತ ಪ್ರಮುಖ ವಿಶೇಷತೆ ಎಂದರೆ, ಇದರಲ್ಲಿರುವ ಅತ್ಯಾಧುನಿಕ ಕ್ವಾಡ್ (ಒಟ್ಟು 200MP ಸಾಮರ್ಥ್ಯ) ಪ್ರೀಮಿಯಂ ಕ್ಯಾಮೆರಾ ಸೆಟಪ್.! ಇದರಲ್ಲಿನ,
50MP Sony LYT808 ಮುಖ್ಯ ಸೆನ್ಸರ್ - ಹೆಚ್ಚು ವಿವರ ಹಾಗೂ ಸ್ಪಷ್ಟತೆ ನೀಡುತ್ತದೆ
50MP Sony LYT600 ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ - 3x ಆಪ್ಟಿಕಲ್ ಜೂಮ್
50MP Sony IMX858 ಸೆನ್ಸರ್ - 6x ಆಪ್ಟಿಕಲ್ ಹಾಗೂ 120x ಡಿಜಿಟಲ್ ಜೂಮ್
50MP Samsung ಅಲ್ಟ್ರಾ ವೈಡ್ ಲೆನ್ಸ್ - ವ್ಯಾಪಕ ದೃಶ್ಯ ವ್ಯಾಪ್ತಿ ನೀಡುತ್ತದೆ
ಇನ್ನು ಸೆಲ್ಫಿ ಮತ್ತು ವಿಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ.
Oppo Find X8 Pro: ಖರೀದಿಗೆ ಯೋಗ್ಯವಾಗಿದೆಯೇ?
Oppo Find X9 ಸರಣಿಯ ಬಿಡುಗಡೆಗೂ ಮುನ್ನ Oppo Find X8 Pro ಮೇಲೆ ದೊರೆಯುತ್ತಿರುವ ಈ ಆಫರ್ ಖಂಡಿತ ಉತ್ತಮವಾಗಿ ಕಾಣುತ್ತಿದೆ. ಶಕ್ತಿಶಾಲಿ ಚಿಪ್‌ಸೆಟ್, ಉನ್ನತ ಮಟ್ಟದ 200MP ಕ್ಯಾಮೆರಾ ವ್ಯವಸ್ಥೆ, ವೇಗದ ಚಾರ್ಜಿಂಗ್ ಮತ್ತು ಪ್ರೀಮಿಯಂ ವಿನ್ಯಾಸದಿಂದ ಈ ಫೋನ್ ಗಮನ ಸೆಳೆಯುತ್ತದೆ. ಆದರೆ, Oppo Find X9 ಸರಣಿ ಬಿಡುಗಡೆ ಕುರಿತು ಹೆಚ್ಚು ಕುತೂಹಲ ಹೊಂದಿರುವವರು ಈ ಬಿಡುಗಡೆಗೆ ಕಾಯುವುದು ಒಳಿತು. ಏಕೆಂದರೆ, ದೇಶದ ಮಾರುಕಟ್ಟೆಗೆ ಇದೇ ನವೆಂಬರ್ 18, 2025 ರಂದು Oppo Find X9 ಮತ್ತು ಪ್ರೊ ಮಾದರಿಯ Oppo Find X9 Pro ಎರಡು ಸ್ಮಾರ್ಟ್‌ಫೋನ್‌ಗಳು ಅಧಿಕೃತವಾಗಿ ಬಿಡುಗಡೆಯಾಗುತ್ತಿವೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








