ಶಿಯೋಮಿಗೆ ಟಾಂಗ್ ನೀಡಲು ಬರುತ್ತಿದೆ ಒಪ್ಪೊದ ಹೊಸ ಸ್ಮಾರ್ಟ್‌ಫೋನ್..!

|

ಚೀನಾ ಮೂಲದ ಜನಪ್ರಿಯ ಮೊಬೈಲ್ ತಯಾರಿಕ ಕಂಪನಿ ಒಪ್ಪೊ ತನ್ನ ಮೀಡ್ ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಫೀಚರ್ಸ್‌ಗಳನ್ನು ನೀಡಿ ಭಾರತೀಯ ಗ್ರಾಹಕರನ್ನು ಆಕರ್ಷಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಗಟ್ಟಿಮಾಡಿಕೊಂಡಿರುವ ಒಪ್ಪೊ ಇದೀಗ ಮತ್ತೆ ದೇಶದ ಸ್ಮಾರ್ಟ್‌ಫೋನ್‌ ಗ್ರಾಹಕರನ್ನು ಸೆಳೆಯಲು ಸಕಲ ರೀತಿಯಲ್ಲಿ ಸಿದ್ಧವಾಗಿದ್ದು,. ಶೀಘ್ರವೇ ವಿಶೇಷ ಸ್ಮಾರ್ಟ್‌ಫೋನ್‌ ಒಂದನ್ನು ಲಾಂಚ್ ಮಾಡುತ್ತಿದೆ.

ಶಿಯೋಮಿಗೆ ಟಾಂಗ್ ನೀಡಲು ಬರುತ್ತಿದೆ ಒಪ್ಪೊದ ಹೊಸ ಸ್ಮಾರ್ಟ್‌ಫೋನ್..!

ಹೌದು, ಒಪೊ ಕಂಪನಿ ಇದೇ ಫೆಬ್ರವರಿ 6 ರಂದು ಭಾರತೀಯ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಪೋನ್ ಒಂದನ್ನು ಲಾಂಚ್ ಮಾಡುತ್ತಿದ್ದು, ಮಿಡ್‌ ರೇಂಜ್ ಬೆಲೆಯಲ್ಲಿ ಡಿಸ್‌ಪ್ಲೇಯಲ್ಲಿಯೇ ಯುಪಿಎಸ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರುವ ವಿಶೇಷ ಸ್ಮಾರ್ಟ್‌ಪೋನ್ ಈಗ ಭಾರತೀಯರ ಕೈ ಸೇರಲು ತಯಾರಾಗಿದೆ. ನಿರೀಕ್ಷೆಯಂತೆಯೇ ಇದೇ ಬುಧವಾರದಂದು ಚೀನಾದಲ್ಲಿ ಹೆಚ್ಚು ಹೆಸರುಗಳಿಸಿದ್ದ 'ಒಪೊ ಕೆ1' ಸ್ಮಾರ್ಟ್‌ಫೋನ್‌ ದೇಶದಲ್ಲಿ ಬಿಡುಗಡೆಯಾಗುತ್ತಿದೆ.

ಶಿಯೋಮಿಗೆ ಟಾಂಗ್ ನೀಡಲು ಬರುತ್ತಿದೆ ಒಪ್ಪೊದ ಹೊಸ ಸ್ಮಾರ್ಟ್‌ಫೋನ್..!

ನೂತನ ಫೀಚರ್ಸ್‌ಗಳಿಂದ ಮಿಡ್‌ ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಟಾಂಗ್ ಕೊಡಲು ಬರುತ್ತಿರುವ 'ಒಪೊ ಕೆ1' ಸ್ಮಾರ್ಟ್‌ಫೋನ್‌ ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿದೆ. ಹಾಗಾದರೇ, ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೆ ಕಾಲಿಡುತ್ತಿರುವ ಒಪ್ಪೊ ಕೆ 1 ಇತರೆ ಮಿಡ್‌ ರೇಂಜ್ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುವಂತಹ ಏನೇಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸೈನ್

ಡಿಸೈನ್

ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಸುಂದರ ಬಾಹ್ಯ ನೋಟವನ್ನು ಹೊಂದಿದ್ದು, ಸುತ್ತಲು ಶೈನಿಂಗ್ ನೊಂದಿಗೆ ಗ್ಲಾಸಿ ಲುಕ್‌ ಆಕಾರದಲ್ಲಿ ನೋಡುಗರ ಕಣ್ಮನ ಸೆಳೆಯುವಂತಿದೆ. ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಹೊಂದಿದೆ. ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 3D ಗ್ಲಾಸ್ ಪ್ಯಾನೆಲ್ ನೀಡಲಾಗಿದೆ. ಸೆಲ್ಫೀ ಕ್ಯಾಮೆರಾ ಮುಂಬದಿಯ ಮೇಲ್ಭಾಗದ ಮಧ್ಯದಲ್ಲಿದೆ. ಹಿಂಬದಿಯ ಮೂಲೆಯಲ್ಲಿ ಎರಡು ಬ್ಯಾಕ್ ಕ್ಯಾಮೆರಾ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್ 19.5:9 ಅನುಪಾತದೊಂದಿಗೆ 6.4 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಸ್ಕ್ರೀನ್ ಮತ್ತು ಫೋನಿನ ಬಾಡಿಯ ನಡುವಿನ ಅಂತರ ಶೇ. 91 ರಷ್ಟು ಅನುಪಾತ ವಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸಲ್ ಸಾಮರ್ಥ್ಯದ ರೆಸಲ್ಯೂಶನ್ ಹೊಂದಿರಲಿದೆ. ಡಿಸ್‌ಪ್ಲೇಯು ಕಡಿಮೆ ಅಂಚಿನಿಂದ ಕೂಡಿದ್ದು, ಹೈ ಎಂಡ್‌ ಮಾದರಿಯ ಅಂಚು ರಹಿತ ಡಿಸ್‌ಪ್ಲೇ ತರಹ ಕಾಣಿಸುತ್ತದೆ.

ಪ್ರೊಸೆಸರ್ ಹೇಗಿದೆ.?

ಪ್ರೊಸೆಸರ್ ಹೇಗಿದೆ.?

ಆಕ್ಟಾ ಕೋರ್ ಕ್ಚಾಲ್ಕಂ ಸ್ನಾಪ್‌ಡ್ರಾಗನ್ 660 ಸಾಮರ್ಥ್ಯದ ಉತ್ತಮ ಪ್ರೊಸೆಸರ್ ಅನ್ನು ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, 4GB RAM ಅಥವಾ 6GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ. ಇನ್ನೂ ಬಾಹ್ಯ ಸಂಗ್ರಹಕ್ಕಾಗಿ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಒಟ್ಟು ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾ 16 ಮೆಗಾಪಿಕ್ಸಲ್ ಹೊಂದಿದ್ದರೆ, ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಇನ್ನೂ ಇದರೊಂದಿಗೆ ಮುಂಬದಿಯಲ್ಲಿ ಸೆಲ್ಫೀಗಾಗಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಒಪ್ಪೊ ಮೊದಲಿನಿಂದಲು ಸೆಲ್ಫೀಗಾಗಿ ಹೆಚ್ಚು ಹಮನ ನೀಡುತ್ತಾ ಬಂದಿದೆ.

ಬ್ಯಾಟರಿ ಮತ್ತು ಮಲ್ಟಿಮೀಡಿಯಾ

ಬ್ಯಾಟರಿ ಮತ್ತು ಮಲ್ಟಿಮೀಡಿಯಾ

ಒಪ್ಪೊ ಕೆ1 ಸ್ಮಾರ್ಟ್‌ಫೋನ್‌ 3,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ನಿರಾತಂಕವಾಗಿ ಒಂದು ದಿನದವರೆಗೂ ಬ್ಯಾಟರಿ ಬಾಳಿಕೆ ಬರುತ್ತದೆ. ಇದರೊಂದಿಗೆ ಒಪ್ಪೊ 3.5mm ನ ಆಡಿಯೋ ಜಾಕ್‌ ನೀಡಿದ್ದು, ಹೆಡ್‌ಫೋನಿನಲ್ಲಿ ಆಡಿಯೋ ಕ್ಚಾಲಿಟಿಯೂ ಉತ್ತಮವಾಗಿ ಕೇಳಿಸುತ್ತದೆ.

ಬೆಲೆ?

ಬೆಲೆ?

ಮೊದಲೇ ಹೇಳಿದಂತೆ ಒಪ್ಪೊ ಕೆ1 ಮಿಡ್‌ ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದ್ದು, ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದೆ. 4GB RAM ಸಾಮರ್ಥ್ಯ ಹೊಂದಿರುವ ವೇರಿಯಂಟ್‌ ಬೆಲೆ 16,900ರೂ.ಗಳು ಹಾಗೇ 6GB RAM ಸಾಮರ್ಥ್ಯದ ವೇರಿಯಂಟ್‌ನ ಬೆಲೆಯು. 19,000ರೂ.ಗಳು

Best Mobiles in India

English summary
Oppo K1 is set to be launched in India on February 6.to know more visit to kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X