Home
ಮೊಬೈಲ್

ರಿಲೀಸ್ ಆಯ್ತು 'ಒಪ್ಪೊ K1' ಸ್ಮಾರ್ಟ್‌ಫೋನ್‌: ಇನ್ನು ಶುರುವಾಗಲಿದೆ ಭರ್ಜರಿ ಸೇಲ್!

ಬಹುನಿರೀಕ್ಷಿತ ಒಪ್ಪೊ ಕಂಪನಿಯ 'K1' ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ಸಹಯೋಗದೊಂದಿಗೆ ಇಂದು ಭಾರತದಲ್ಲಿ ರಿಲೀಸ್ ಆಗಿದ್ದು, ನಿರೀಕ್ಷೆಯಂತೆ ಒಪ್ಪೊ K1 ಸ್ಮಾರ್ಟ್‌ಫೋನ್ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ. ಮಿಡ್‌ರೇಂಜ್ ಸ್ಮಾರ್ಟ್‌ಫೋನ್‌ ಆಗಿ ಭಾರತೀಯ ಮಾರುಕಟ್ಟೆಯಲ್ಲಿ ಸೌಂಡ್ ಮಾಡುವ ಸಾಧ್ಯತೆಗಳನ್ನು ಹೊರಹಾರುವ ಈ ಸ್ಮಾರ್ಟ್‌ಫೋನ್‌ ಸೇಲ್ ಇದೇ ಫೆಬ್ರುವರಿ 12 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭ ಆಗಲಿದೆ.

ರಿಲೀಸ್ ಆಯ್ತು 'ಒಪ್ಪೊ K1' ಸ್ಮಾರ್ಟ್‌ಫೋನ್‌: ಇನ್ನು ಶುರುವಾಗಲಿದೆ ಭರ್ಜರಿ ಸೇಲ್!

ಭಾರತದಲ್ಲಿ ಬಿಡುಗಡೆ ಆಗಿರುವ ಒಪ್ಪೊದ K1 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದ್ದು, ಹಿಂಭಾಗದಲ್ಲಿ 3D ಗ್ಲಾಸ್‌ಸಹ ವಿಶಿಷ್ಠ ಲುಕ್ ಅನ್ನು ಹೊಂದಿದೆ ಮತ್ತು ಸೆಲ್ಫೀಗಾಗಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಉತ್ತಮ ಮಾರುಕಟ್ಟೆಯಲ್ಲಿ ಕಂಡುಕೊಳ್ಳುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಹಾಗಾಗಿ, ಸ್ಮಾರ್ಟ್‌ಫೋನ್‌ ಪ್ರಿಯರಂತು ಸೇಲ್ ಆರಂಭದ ದಿನವನ್ನು ಕಾತರದಿಂದ ಕಾಯುತ್ತಿದ್ದಾರೆ.

ರಿಲೀಸ್ ಆಯ್ತು 'ಒಪ್ಪೊ K1' ಸ್ಮಾರ್ಟ್‌ಫೋನ್‌: ಇನ್ನು ಶುರುವಾಗಲಿದೆ ಭರ್ಜರಿ ಸೇಲ್!

ನಿರೀಕ್ಷೆಯಂತೆ ಮಿಡ್‌ ರೇಂಜ್ ಬೆಲೆಯಲ್ಲಿ ವಿಶೇಷ ಫೀಚರ್ಸ್‌ಗಳಿಂದನ್ನು ಹೊಂದಿರುವ ಒಪ್ಪೊ ಕೆ1' ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳ ಮಿಡ್‌ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೇ, ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿರುವ ಒಪ್ಪೊ ಕೆ 1 ಇನ್ನಿತರ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಸೂಪರ್ ಡಿಸೈನ್

ಸೂಪರ್ ಡಿಸೈನ್

ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಸುಂದರ ಬಾಹ್ಯ ನೋಟವನ್ನು ಹೊಂದಿದ್ದು, ಸುತ್ತಲು ಶೈನಿಂಗ್ ನೊಂದಿಗೆ ಗ್ಲಾಸಿ ಲುಕ್‌ ಆಕಾರದಲ್ಲಿ ನೋಡುಗರ ಕಣ್ಮನ ಸೆಳೆಯುವಂತಿದೆ. ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಹೊಂದಿದ್ದು, ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 3D ಗ್ಲಾಸ್ ಪ್ಯಾನೆಲ್ ನೀಡಲಾಗಿದೆ. ಸೆಲ್ಫೀ ಕ್ಯಾಮೆರಾ ಮುಂಬದಿಯ ಮೇಲ್ಭಾಗದ ಮಧ್ಯದಲ್ಲಿದೆ. ಹಿಂಬದಿಯ ಮೂಲೆಯಲ್ಲಿ ಎರಡು ಬ್ಯಾಕ್ ಕ್ಯಾಮೆರಾ ಹೊಂದಿದೆ.

ನೈಸ್ ಡಿಸ್‌ಪ್ಲೇ

ನೈಸ್ ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್ 19.5:9 ಅನುಪಾತದೊಂದಿಗೆ 6.4 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಸ್ಕ್ರೀನ್ ಮತ್ತು ಫೋನಿನ ಬಾಡಿಯ ನಡುವಿನ ಅಂತರ ಶೇ. 91 ರಷ್ಟು ಅನುಪಾತ ವಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸಲ್ ಸಾಮರ್ಥ್ಯದ ರೆಸಲ್ಯೂಶನ್ ಹೊಂದಿರಲಿದೆ. ಅಮೋಎಲ್‌ಇಡಿ ಸಹಿತ ವಾಟರ್ ಡ್ರಾಪ್ ಡಿಸ್‌ಫ್ಲೇಯನ್ನು ಹೊಂದಿದ್ದು, ಕಡಿಮೆ ಅಂಚಿನಿಂದ ಕೂಡಿದೆ.

ಪ್ರೊಸೆಸರ್ ಹೇಗಿದೆ.?

ಪ್ರೊಸೆಸರ್ ಹೇಗಿದೆ.?

ಕ್ವಾಲ್ಕಂ ಸ್ನಾಪ್‌ಡ್ರಾಗನ್ 660 ಸಾಮರ್ಥ್ಯದ ಕೃತಕ್ ಬುದ್ಧಿಮತ್ತೆಯ ಪ್ರೊಸೆಸರ್ ಹೊಂದಿದ್ದು ಜತೆಗೆ ಕಿರಿಯೂ 260 ಸಿಪಿಯು ಉತ್ತಮ ಕಾರ್ಯನಿರ್ವಣೆಗೆ ಸಹಕರಿಸಲಿದೆ. ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನೂ ಬಾಹ್ಯ ಸಂಗ್ರಹಕ್ಕಾಗಿ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಒಟ್ಟು ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾ 16 ಮೆಗಾಪಿಕ್ಸಲ್ ಹೊಂದಿದ್ದರೆ, ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಇನ್ನೂ ಇದರೊಂದಿಗೆ ಮುಂಬದಿಯಲ್ಲಿ ಸೆಲ್ಫೀಗಾಗಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಒಪ್ಪೊ ಮೊದಲಿನಿಂದಲೂ ಸೆಲ್ಫೀಗಾಗಿ ಹೆಚ್ಚು ಗಮನ ನೀಡುತ್ತಾ ಬಂದಿದೆ.

ಪವರ್‌ಫುಲ್ ಬ್ಯಾಟರಿ

ಪವರ್‌ಫುಲ್ ಬ್ಯಾಟರಿ

ಒಪ್ಪೊ ಕೆ1 ಸ್ಮಾರ್ಟ್‌ಫೋನ್‌ 3,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ನಿರಾತಂಕವಾಗಿ ಒಂದು ದಿನದವರೆಗೂ ಬ್ಯಾಟರಿ ಬಾಳಿಕೆ ಬರುತ್ತದೆ. ಇದರೊಂದಿಗೆ ಒಪ್ಪೊ 3.5mm ನ ಆಡಿಯೋ ಜಾಕ್‌ ನೀಡಿದ್ದು, ಹೆಡ್‌ಫೋನಿನಲ್ಲಿ ಆಡಿಯೋ ಕ್ಚಾಲಿಟಿಯೂ ಉತ್ತಮವಾಗಿ ಕೇಳಿಸುತ್ತದೆ.

ಅಗ್ಗದ ಬೆಲೆ

ಅಗ್ಗದ ಬೆಲೆ

ಈ ಮೊದಲೇ ಹೇಳಿದಂತೆ ಒಪ್ಪೊ ಕೆ1 ಮಿಡ್‌ ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದ್ದು, ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇದೇ ಫೆಬ್ರುವರಿ 12 ರಿಂದ ಸೇಲ್ ಆರಂಭಗೊಳ್ಳಲಿದೆ. 4GB RAM ಸಾಮರ್ಥ್ಯ ಹೊಂದಿರುವ ಒಪ್ಪೊ ಕೆ1 ಸ್ಮಾರ್ಟ್‌ಫೋನ್‌ ಬೆಲೆ 16,990 ರೂ.ಗಳು.

Best Mobiles in India

English summary
Oppo K1 will mark its debut in the Indian market as Flipkart-exclusive. The Oppo K1 price in India is likely to be around the China pricing. Here are Oppo K1 specifications and features.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+