ಹೈ ಎಂಡ್‌ ಫೀಚರ್ಸ್‌ಗಳ 'ಒಪ್ಪೊ ಕೆ1' ಸ್ಮಾರ್ಟ್‌ಫೋನ್‌ ರಿಲೀಸ್‌ಗೆ ರೆಡಿ.!!

|

ಮೀಡ್ ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಸೆಲ್ಫೀ ಕ್ಯಾಮೆರಾ ಫೀಚರ್ಸ್ ನೀಡಿ ಭಾರತೀಯ ಗ್ರಾಹಕರನ್ನು ಸೆಳೆಯುತ್ತಿರುವ ಚೀನಾ ಮೂಲದ 'ಸೆಲ್ಫೀ ಎಕ್ಸ್‌ಪರ್ಟ್' ಒಪ್ಪೊ ಇದೀಗ ಮತ್ತೊಂದು ದಾಖಲೆಯೊಂದನ್ನು ಸೃಷ್ಟಿಸಲು ತಯಾರಾಗಿದೆ. ಈಗಾಗಲೇ ದೇಶದ ಸೆಲ್ಫೀ ಮೊಬೈಲ್ ಮಾರುಕಟ್ಟೆಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಒಪ್ಪೊ, ಇದೇ ಫೆಬ್ರುವರಿ 12 ರಂದು ಅಂದರೆ ನಾಳೆ ದೇಶದ ಮೊಬೈಲ್ ಮಾರುಕಟ್ಟೆಗೆ ಮತ್ತೊಂದು ಕೊಡುಗೆಯನ್ನು ನೀಡಲು ತಯಾರಾಗಿದೆ.

ಹೈ ಎಂಡ್‌ ಫೀಚರ್ಸ್‌ಗಳ 'ಒಪ್ಪೊ ಕೆ1' ಸ್ಮಾರ್ಟ್‌ಫೋನ್‌ ರಿಲೀಸ್‌ಗೆ ರೆಡಿ.!!

ಈಗಾಗಲೇ ಚೀನಾದ ಮೊಬೈಲ್ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಕಂಡಿರುವ ಒಪ್ಪೊ ಕೆ1' ಸ್ಮಾರ್ಟ್‌ಫೋನ್‌ ದೇಶದಲ್ಲಿ ಕೇವಲ 16,990 ರೂ.ಗಳಿಗೆ ಬಿಡುಗಡೆ ಮಾಡುವುದಾಗಿ ಒಪ್ಪೊ ಕಂಪೆನಿ ತಿಳಿಸಿದ್ದು, ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 25 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಹೊಂದಿರುವ ಒಪ್ಪೊ ಕೆ1' ಸ್ಮಾರ್ಟ್‌ಫೋನ್ ಒಂದು ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಬೆಲೆಯಲ್ಲಿ ದೇಶದ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.

ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ನಾಳೆ ಬಿಡುಗಡೆಯಾದ ನಂತರದಲ್ಲೇ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ. ಹಾಗಾದರೇ, ನಾಳೆಯೇ ಭಾರತಕ್ಕೆ ಕಾಲಿಡುತ್ತಿರುವ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 25 ಮೆಗಾಪಿಕ್ಸಲ್ ಸಾಮರ್ಥ್ಯದ 'ಒಪ್ಪೊ ಕೆ1' ಸ್ಮಾರ್ಟ್‌ಫೋನ್ ಮೊಬೈಲ್ ಮಾರುಕಟ್ಟೆಗೆ ಏನೆಲ್ಲಾ ವಿಶೇಷತೆಗಳನ್ನು ಹೊತ್ತುಬರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಫಿಂಗರ್‌ಪ್ರಿಂಟ್ ಸೆನ್ಸಾರ್
ಒಪ್ಪೊ ಸ್ಮಾರ್ಟ್‌ಫೋನ್‌ ಕಂಪನಿ ಬಿಡುಗಡೆ ಮಾಡುತ್ತಿರುವ ಹೊಸ ಕೆ1 ಸ್ಮಾರ್ಟ್‌ಫೋನಿನಲ್ಲಿ ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಪರಿಚಯಿಸಲಾಗಿದ್ದು, ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ನೀಡಲಾಗುವ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಒಪ್ಪೊ ತನ್ನ ಕೆ1 ಮಿಡ್‌ ರೇಂಜ್ ಸ್ಮಾರ್ಟ್‌ಫೋನಿನಲ್ಲಿ ನೀಡುತ್ತಿದೆ. ಈ ಮೂಲಕ ಹೊಸ ಹೆಜ್ಜೆಗೆ ಮುಂದಾಗಿರುವುದು ಗ್ರಾಹಕರನ್ನು ಆಕರ್ಷಿಸಲಿದೆ. ಈ ಸ್ಮಾರ್ಟ್‌ಫೋನ್ ಅತ್ಯುತ್ತಮ ಸೆನ್ಸಾರ್ ಹೊಂದಿದ್ದು, ಗ್ರಾಹಕರ ಬಳಕೆ ಸುಲಭವಾಗಿದೆ.

25 ಮೆಗಾಪಿಕ್ಸಲ್ ಸೆಲ್ಫೀ!
ಒಪ್ಪೊ ಮೊದಲಿನಿಂದಲು ಸೆಲ್ಫೀಗಾಗಿ ಹೆಚ್ಚು ಗಮನ ನೀಡುತ್ತಾ ಬಂದಿದ್ದು, ಹೀಗಾಗಿ ಸೆಲ್ಫೀ ಎಕ್ಸ್‌ಪರ್ಟ್ ಎಂಬ ಹೆಸರು ಪಡೆದಿದೆ. ಹೊಸ ಒಪ್ಪೊ ಕೆ1 ಸ್ಮಾರ್ಟ್‌ಫೋನಿನ ಮುಂಬದಿಯಲ್ಲಿ f/2.0 ಆಪರ್ಚರ್ ನೊಂದಿಗೆ ಸೆಲ್ಫೀಗಾಗಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಈ ಕ್ಯಾಮೆರಾ ತನ್ನ ವರ್ಗದಲ್ಲಿಯೇ ಅತ್ಯುತ್ತಮ ಕೃತಕ ಬುದ್ಧಿಮತ್ತೆ ಗ್ರಹಿಕೆಯ ಶಕ್ತಿಯನ್ನು ಹೊಂದಿರುವುದು ವಿಶೇಷ ಮತ್ತು 16 ಸೆಕೆಂಡಗಳಲ್ಲಿ 120 ಸೀನ್ ಗಳನ್ನು ಗ್ರಹಿಸುವ ಶಕ್ತಿ ಇದೆ. ಇದರೊಂದಿಗೆ ಪೊರ್ಟರೇಟ್ ಮತ್ತು ಬ್ಯೂಟಿ ಎಫೆಕ್ಟ್ ಆಯ್ಕೆಗಳನ್ನು ಸಹ ಕಾಣಬಹುದಾಗಿದೆ. ಫೋಟೋಗಳು ಅತ್ಯುತ್ತಮ ಬಣ್ಣಗಳಲ್ಲಿ ಮೂಡಿಬರಲಿವೆ.

3D ಡಿಸೈನ್
ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಸೊಗಸಾದ ಬಾಹ್ಯ ನೋಟವನ್ನು ಹೊಂದಿದ್ದು, ಇದೊಂದು ಒಪ್ಪೊ ಕಂಪನಿಯ ಮಾಸ್ಟರ್ ಪೀಸ್ ರಚನೆಯಾಗಿರುವ ಪ್ರತೀ ಮೂಲೆಯಿಂದಲೂ ಹೊಳೆಯುವ ಆಕಾರವನ್ನು ಹೊಂದಿದೆ ಮತ್ತು ಲೈಟಿಂಗ್ ರಿಫ್ಲೇಕ್ಷನ್ ಸಹ ಕಾಣಬಹುದಾಗಿದೆ. ಸುತ್ತಲು ಶೈನಿಂಗ್ ನೊಂದಿಗೆ ಗ್ಲಾಸಿ ಲುಕ್‌ ಆಕಾರದಲ್ಲಿರುವುದರಿಂದ ಸಹಜವಾಗಿ ನೋಡುಗರ ಕಣ್ಮನ ಸೆಳೆಯಲಿದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 3D ಗ್ಲಾಸ್ ಪ್ಯಾನೆಲ್ ನೀಡಲಾಗಿದ್ದು, ಸೆಲ್ಫೀ ಕ್ಯಾಮೆರಾ ಮುಂಬದಿಯ ಮೇಲ್ಭಾಗದ ಮಧ್ಯದಲ್ಲಿದೆ. ಹಿಂಬದಿಯ ಮೂಲೆಯಲ್ಲಿ ಎರಡು ಬ್ಯಾಕ್ ಕ್ಯಾಮೆರಾ ಹೊಂದಿದೆ. ಪಿಯೊನೊ ಬ್ಲ್ಯಾಕ್ ಮತ್ತು ಆಸ್ಟ್ರಲ್ ಬ್ಲೂ ಬಣ್ಣಗಳಲ್ಲಿ ಲಭ್ಯ.

ಕ್ಯಾಮೆರಾ
ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಒಟ್ಟು ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾ 16 ಮೆಗಾಪಿಕ್ಸಲ್ ಹೊಂದಿದೆ ಮತ್ತು ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಕ್ಯಾಮೆರಾ ಗುಣಮಟ್ಟವು ಉತ್ತಮವಾಗಿದ್ದು, ಫೋಟೋ ಕ್ಲಿಯರಿಟಿ ಮತ್ತು ಬೆಳಕಿನ ಸಹಯೋಗ ಚೆನ್ನಾಗಿದೆ. ಸೆಲ್ಫೀ ಸ್ಪೆಷಲಿಸ್ಟ್ ಒಪ್ಪೊ ಕಂಪನಿಯು ಮೊದಲಿನಿಂದಲು ಸೆಲ್ಫೀಗಾಗಿ ಹೆಚ್ಚು ಗಮನ ನೀಡುತ್ತಾ ಬಂದಿದೆ. ಹಾಗೇ ಈ ಹೊಸ ಕೆ1 ಸ್ಮಾರ್ಟ್‌ಫೋನಿನಲ್ಲಿ ಸೆಲ್ಫೀಗಾಗಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದ್ದು ಸೆಲ್ಫೀ ಗ್ರಾಹಕರ ಮೆಚ್ಚುಗೆ ಪಡೆಯಲಿದೆ.

ಪ್ರೊಸೆಸರ್ ಯಾವುದು
ಆಕ್ಟಾ ಕೋರ್ ಕ್ಚಾಲ್ಕಂ ಸ್ನಾಪ್‌ಡ್ರಾಗನ್ 660 AI CPU ಸಾಮರ್ಥ್ಯದ ಉತ್ತಮ ಪ್ರೊಸೆಸರ್ ಅನ್ನು ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಹೊಂದಿದ್ದು, ಮಲ್ಟಿ ಟಾಸ್ಕ ಕೆಲಸಗಳನ್ನು ನಿರಾಯಾಸವಾಗಿ ನಿರ್ವವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಆಡ್ರಾಂಯ್ಡ್ 8.1 ಓರಿಯೋದಲ್ಲಿ ಕಾರ್ಯನಿರ್ವಹಿಸಲಿರುವ ಒಪ್ಪೊ ಕೆ1 ಕಲರ್ ಓಎಸ್‌ 5.2 ಹೊಂದಿದೆ. ಈ ಫೋನ್ ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, 4GB RAM ಅಥವಾ 6GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ. ಇನ್ನೂ ಬಾಹ್ಯ ಸಂಗ್ರಹಕ್ಕಾಗಿ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ
ಒಪ್ಪೊ ಕೆ1 ಸ್ಮಾರ್ಟ್‌ಫೋನ್ 19.5:9 ಅನುಪಾತದೊಂದಿಗೆ 6.4 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಸ್ಕ್ರೀನ್ ಮತ್ತು ಫೋನಿನ ಬಾಡಿಯ ನಡುವಿನ ಅಂತರ ಶೇ. 91 ರಷ್ಟು ಅನುಪಾತ ವಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸಲ್ ಸಾಮರ್ಥ್ಯದ ರೆಸಲ್ಯೂಶನ್ ಹೊಂದಿರಲಿದೆ. ಡಿಸ್‌ಪ್ಲೇಯು ಕಡಿಮೆ ಅಂಚಿನಿಂದ ಕೂಡಿದ್ದು, ಹೈ ಎಂಡ್‌ ಮಾದರಿಯ ಅಂಚು ರಹಿತ ಡಿಸ್‌ಪ್ಲೇ ತರಹ ಕಾಣಿಸುತ್ತದೆ. ವಾಟರ್ ಡ್ರಾಪ್ ಡಿಸ್‌ಪ್ಲೇ ಇದಾಗಿದ್ದು, ಎಡ್ಜ ನಿಂದ ಎಡ್ಜ್‌ಗೆ ಅಮೋಎಲ್‌ಇಡಿ ಗ್ರಾಹಕರ ವೀಕ್ಷಣೆಯ ಅನುಭವವನ್ನು ಅದ್ಭುತಗೊಳಿಸಲಿದೆ. ಸ್ಕ್ರೀನ್ ರಕ್ಷಣೆಗಾಗಿ ಅತ್ಯುತ್ತಮ ಬಾಳಿಕೆಯ ಗೊರಿಲ್ಲಾ 5 ಗ್ಲಾಸ್ ಇದೆ.

ಹೈ ಎಂಡ್‌ ಫೀಚರ್ಸ್‌ಗಳ 'ಒಪ್ಪೊ ಕೆ1' ಸ್ಮಾರ್ಟ್‌ಫೋನ್‌ ರಿಲೀಸ್‌ಗೆ ರೆಡಿ.!!
Best Mobiles in India

English summary
OPPO K1 is priced at just Rs. 16,990 and will sell on Flipkart from Feb 12, 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X