Subscribe to Gizbot

ಓಪ್ಪೊ ಸ್ಮಾರ್ಟ್‌ಪೋನಿನಲ್ಲಿ 'DSLR' ಕ್ಯಾಮೆರಕ್ಕೆ ಸೆಡ್ಡು ಹೊಡೆಯುವ ಟೆಕ್ನಾಲಜಿ..!

Written By:

ಚೈನಾ ಮೂಲದ ಓಪ್ಪೋ, ಚೈನಾ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿದ ನಂತರ ಈಗ ಭಾರತೀಯ ಮಾರುಕಟ್ಟೆಯಲ್ಲಿಯೂ ಹೆಸರುಗಳಿದ್ದು, ಕ್ಯಾಮೆರಾ ಪೋನ್‌ ಎನ್ನುವ ಹೆಸರಿಗೆ ತಕ್ಕ ಹಾಗೇ ಇದೇ ತಿಂಗಳು ನಡೆಯಲಿರುವ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಫೋಟೋಗ್ರಫಿಗಾಗಿಯೇ ನೂತನ ಪೋನೊಂದನ್ನು ನೀಡಲು ಮುಂದಾಗಿದೆ.

ಓಪ್ಪೊ ಸ್ಮಾರ್ಟ್‌ಪೋನಿನಲ್ಲಿ 'DSLR' ಕ್ಯಾಮೆರಕ್ಕೆ ಸೆಡ್ಡು ಹೊಡೆಯುವ ಟೆಕ್ನಾಲಜಿ

ಓದಿರಿ: 10 ಕೋಟಿ ಗ್ರಾಹಕರನ್ನು ಹೊಂದುವ ಗುರಿ: ಜಿಯೋದಿಂದ ಮತ್ತೊಂದು ಭರ್ಜರಿ ಆಫರ್..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಓಪೋ 5C ಸ್ಮಾರ್ಟ್‌ಪೋನ್

ಓಪೋ 5C ಸ್ಮಾರ್ಟ್‌ಪೋನ್

ಸದ್ಯ ಸ್ಮಾರ್ಟ್‌ಪೋನು ಕ್ಯಾಮೆರಾವಾಗಿಯೂ ಬಳಕೆಯಾಗುತ್ತಿದ್ದು. ಈ ಹಿನ್ನಲೆಯಲ್ಲಿ ತನ್ನ ಪೋನುಗಳಲ್ಲಿ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿರುವ ಓಪ್ಪೋ ಈ ಬಾರಿ ಓಪೋ 5C ಸ್ಮಾರ್ಟ್‌ಪೋನನ್ನು ಫೋಟೋಗ್ರಫಿಗಾಗಿಯೇ ತಯಾರು ಮಾಡಿದ್ದು, ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡಿದೆ ಎನ್ನಲಾಗಿದೆ.

ಹೈಲಿಡಿಟೈಲ್ ಇಮೇಜ್‌

ಹೈಲಿಡಿಟೈಲ್ ಇಮೇಜ್‌

ಪ್ರತಿ ಬಾರಿ ಒಂದಲ್ಲ ಒಂದು ಹೊಸ ತಂತ್ರಜ್ಞಾನವನ್ನು ಪರಿಚಯ ಪಡಿಸುವ ಓಪ್ಪೋ ಈ ಹಿಂದೆ ಫ್ಲಾಫ್ ಚಾರ್ಜಿಂಗ್ ಅನ್ನು ಪರಿಚಯಿಸಿತ್ತು, ಈ ಬಾರಿ ಹೈಲಿಡಿಟೈಲ್ ಇಮೇಜ್‌ಗಳನ್ನು ಸೆರೆಹಿಡಿಯುವ ಪೋನನ್ನು ಪರಿಚಯಿಸುತ್ತಿದೆ. ಮುಂದೆ ತನ್ನ ಪೋನುಗಳಲ್ಲಿ ಇದೇ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಲಿದೆ.

ಕ್ಯಾಮೆರಾ ಇತಿಹಾಸದಲ್ಲಿ ಮೈಲಿಗಲ್ಲು

ಕ್ಯಾಮೆರಾ ಇತಿಹಾಸದಲ್ಲಿ ಮೈಲಿಗಲ್ಲು

ಈ ತಂತ್ರಜ್ಞಾನವನ್ನು ಪ್ರಚಾರ ಪಡಿಸುವ ಸಲುವಾಗಿಯೇ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಇವೆಂಟ್ವೊಂದನ್ನು ಆಯೋಜಿಸಿದೆ. ಇ ಹೊಸ ಟೆಕ್ನಾಲಜಿಯೂ ಸ್ಮಾರ್ಟ್‌ಪೋನ್ ಕ್ಯಾಮೆರಾಗಳ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ ಎನ್ನುವ ಆಶಯವನ್ನು ಓಪ್ಪೋ ವ್ಯಕ್ತಪಡಿಸಿದೆ.

ಕ್ರಾಂತಿಕಾರ ಬದಾಲವಣೆ

ಕ್ರಾಂತಿಕಾರ ಬದಾಲವಣೆ

ಒಟ್ಟಿನಲ್ಲಿ ಸ್ಮಾರ್ಟ್‌ಪೋನುಗಳು ಇಂದಿನ ದಿನದಲ್ಲಿ ಬೇರೆ ಎಲ್ಲಾ ಗ್ಯಾಜೆಟ್‌ಗಳ ಜಾಗವನ್ನು ಅಕ್ರಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಓಪ್ಪೋವಿನ ಈ ಹೊಸ ತಂತ್ರಜ್ಞಾನ ಮತ್ಯಾವ ರೀತಿಯಲ್ಲಿ ಕ್ರಾಂತಿಕಾರವಾಗಲಿದೆ ಎಂಬುದನ್ನು ಕಾದು ನೋಡಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
the company will launch a new smartphone at the event but the invite points out that the company will launch a new photography technology. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot