ಅಗ್ಗದ ಬೆಲೆಯಲ್ಲಿ ಬರುತ್ತಿದೆ ಒಪ್ಪೊವಿನ 'BFM30' ಎಂಬ ವಿಶೇಷ ಫೋನ್!!

|

ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಅಗ್ಗದ ಮೊಬೈಲ್ ಮಾರುಕಟ್ಟೆಯನ್ನು ವಶಪಡಿಕೊಂಡಿರುವ ಶಿಯೋಮಿ ಕಂಪನಿಯಂತೆಯೇ ಇದೀಗ ಒಪ್ಪೊ ಕೂಡ ತನ್ನ ಗುರಿಯನ್ನು ನೆಟ್ಟಿದೆ. ಶಿಯೋಮಿ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡುಹೊಡೆಯುವ ಸಲುವಾಗಿ ಒಪ್ಪೊ ಕಂಪೆನಿ 'BFM30' ಎಂಬ ವಿಶೇಷ ಹೆಸರಿನಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡುತ್ತಿದೆ.

ಅಗ್ಗದ ಬೆಲೆಯಲ್ಲಿ ಬರುತ್ತಿದೆ ಒಪ್ಪೊವಿನ 'BFM30' ಎಂಬ ವಿಶೇಷ ಫೋನ್!!

ಹೌದು, ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಥಾನ ಪಡೆದಿರುವ ಒಪ್ಪೊ ಇದೀಗ ತನ್ನ ಗ್ರಾಹಕರಿಗೆ ಮತ್ತೆ ಗುಡ್‌ ನ್ಯೂಸ್ ನೀಡಿದ್ದು, PBFM30 ಎಂಬ ವಿಶೇಷ ಹೆಸರಿನ ಮಧ್ಯಮ ಶ್ರೇಣಿಯ ದರದಲ್ಲಿ ಸ್ಮಾರ್ಟ್‌ಫೋನ್‌ ಒಂದನ್ನು ಪರಿಚಯಿಸಲು ರೆಡಿಯಾಗಿದೆ. ಈ ನೂತನ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಎಂದು ಹೇಳಲಾಗಿದೆ.

ಅಗ್ಗದ ಬೆಲೆಯಲ್ಲಿ ಬರುತ್ತಿದೆ ಒಪ್ಪೊವಿನ 'BFM30' ಎಂಬ ವಿಶೇಷ ಫೋನ್!!

6.2 ಇಂಚಿನ್ ಡಿಸ್‌ಪ್ಲೇ, 8.1 ಓರಿಯೊ ಆಪರೇಟಿಂಗ್ ಸಿಸ್ಟಮ್ ಮತ್ತು 4,100mAh ಸಾಮರ್ಥ್ಯದ ದೀರ್ಘ ಬಾಳಿಕೆಯಂತಹ ಫೀಚರ್ಸ್ ಹೊತ್ತು ಈ PBFM30 ಸ್ಮಾರ್ಟ್‌ಪೊನ್ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿದೆ. ಹಾಗಾದರೇ ಒಪ್ಪೊದ PBFM30 ಸ್ಮಾರ್ಟ್‌ಫೋನ್ ಹೇಗಿರಲಿದೆ?, ಲೀಕ್ ಆದ ಫೀಚರ್ಸ್‌ಗಳೇನು ಎಂಬುದನ್ನು ತಿಳಿಯಲು ಮುಂದೆ ಓದಿ.

ರಚನೆ

ರಚನೆ

ಇದೊಂದು ಬಜೆಟ್‌ಬೆಲೆಯ ಸ್ಮಾರ್ಟ್‌ಫೋನಾಗಿದ್ದು, 155.9 x 75.4 x 8.1mm ಬಾಹ್ಯ ವಿಸ್ತಿರ್ಣವನ್ನು ಹೊಂದಿದೆ. ಹಗುರ ರಚನೆಯನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನಿನ ತೂಕ ಕೇವಲ 158 ಗ್ರಾಮ್‌ಗಳು ಆಗಿರಲಿದೆ. ಇನ್ನೂ ಬಾಹ್ಯ ದೇಹಾಕೃತಿ ಆಕರ್ಷಣಿಯವಾಗಿರಲಿದೆ. ಪಿಂಕ್ ಮತ್ತು ಬ್ಲೂ ಬಣ್ಣಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಒಪ್ಪೊ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಧ್ಯವಾದಷ್ಟು ದೊಡ್ಡ ಡಿಸ್‌ಪ್ಲೇಯನ್ನೇ ನೀಡುತ್ತಾ ಬಂದಿದ್ದು, ಇದೀಗ ಈ ಬಜೆಟ್ ಸ್ಮಾರ್ಟ್‌ಫೋನಿನಲ್ಲೂ 6.2 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ನೀಡಲಿದೆ. ಇನ್ನೂ ಈ ಸ್ಮಾರ್ಟ್‌ಫೋನ್ 1520 x 720 ಸಾಮರ್ಥ್ಯದ ಡಿಸ್‌ಪ್ಲೇ ರೆಸಲ್ಯೂಶನ್ ಹೊಂದಿರಲಿದೆ ಎನ್ನಲಾಗುತ್ತಿದೆ. ವಿಶಾಲವಾದ ಡಿಸ್‌ಪ್ಲೇ ಗ್ರಾಹಕರನ್ನು ಸೆಳೆಯಲಿದೆ ಎನ್ನಬಹುದು.

ಪ್ರೊಸೆಸರ್

ಪ್ರೊಸೆಸರ್

1.8 ಗಿಗಾಹರ್ಡ್ಸ ಆಕ್ಟಾಕೋರ್ ಪ್ರೊಸೆಸರ್ ಇದರೊಂದಿಗೆ 3 GB ಸಾಮರ್ಥ್ಯದ RAM ಮತ್ತು 64 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಪ್ಪೊ PBFM30 ಸ್ಮಾರ್ಟ್‌ಫೋನ್‌ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಹಾಗೂ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಓರಿಯೊ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿರಲಿದೆ.

ಬ್ಯಾಟರಿ

ಬ್ಯಾಟರಿ

ಒಪ್ಪೊ PBFM30 ಸ್ಮಾರ್ಟ್‌ಫೋನ್‌ 4,100mAh ಸಾಮರ್ಥ್ಯದ ದೀರ್ಘ ಬಾಳಿಕೆಯ ಬ್ಯಾಟರಿಯನ್ನು ಹೊಂದಿರಲಿದ್ದು, ಎರಡು ದಿನಗಳವರೆಗೂ ಬಾಳಿಕೆ ಬರಲಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ನೀಡಲಾಗುವುದು ಎಂದು ತಿಳಿದು ಬಂದಿದ್ದು, ಫಾಸ್ಟ್‌ ಚಾರ್ಜರ್ ಸಹಾಯದಿಂದ ವೇಗವಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಫುಲ್ ಚಾರ್ಜ್ ಪಡೆದುಕೊಳ್ಳಲಿದೆ.

ರಿಲೀಸ್ ಡೇಟ್.?

ರಿಲೀಸ್ ಡೇಟ್.?

ಬಜೆಟ್ ಎಂಬ ಹೆಸರಿನಲ್ಲಿ ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಹುಟ್ಟಿಸಿರುವ ಒಪ್ಪೊ PBFM30 ಈ ವರ್ಷದ ಮೊದಲಾರಂಭದಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಆದರೆ ಮೊದಲು ಚೀನಾ ಮಾರುಕಟ್ಟೆಗೆ ಎಂಟ್ರಿಕೊಡಲಿರುವ ಈ ಫೋನ್ ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ಕೊಡಲಿದೆ ಮತ್ತು ಇದರ ನಿಖರ ಬೆಲೆ ಎಷ್ಟಿರಬಹುದು ಎನ್ನುವ ಬಗ್ಗೆ ಕಂಪನಿ ಮಾಹಿತಿ ಲಭ್ಯವಿಲ್ಲ.

Best Mobiles in India

English summary
new OPPO phone with model number PBFM30 has appeared with full specification on the database of TENAA telecom authority in China.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X