Subscribe to Gizbot

ಮಾರುಕಟ್ಟೆಗೆ ಬಿಗ್ ಸ್ಮಾರ್ಟ್ ಫೋನ್ ಲಾಂಚ್ ಮಾಡಲಿರುವ ಒಪ್ಪೋ.!

Posted By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪೋ ಹಲವು ಸ್ಮಾರ್ಟ್ ಪೋನ್ ಗಳನ್ನು ಪರಿಚಯಿಸುವ ಮೂಲಕ ತನ್ನದೇ ಅಭಿಮಾನಿ ವೃಂದವನ್ನು ಬೆಳೆಸಿಕೊಂಡಿದೆ. ಇದೇ ಮಾದರಿಯಲ್ಲಿ ತನ್ನ ಅಭಿಮಾನಿಗಳಿಗಾಗಿಯೇ ಒಪ್ಪೋ R15 ಲಾಂಚ್ ಮಾಡಲು ಮುಂದಾಗಿದ್ದು, ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಳ್ಳುವ ಈ ಸ್ಮಾರ್ಟ್ ಫೋನ್ ದೊಡ್ಡ RAM, ದೊಡ್ಡ ಸ್ಕ್ರಿನ್ ಸೇರಿದಂತೆ ಬಿಗ್ ಆಯ್ಕೆಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ಬಿಗ್ ಸ್ಮಾರ್ಟ್ ಫೋನ್ ಲಾಂಚ್ ಮಾಡಲಿರುವ ಒಪ್ಪೋ.!

ಮಾರ್ಚ್ 31ರಂದು ಚೀನಾದಲ್ಲಿ ಲಾಂಚ್ ಆಗುವ ಒಪ್ಪೋ R15 ತನ್ನ ವಿಶೇಷತೆಗಳಿಂದಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಗಮನವನ್ನು ಸೆಳೆಯಲು ಮುಂದಾಗಿದೆ. ಒಟ್ಟು ಎರಡು ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ. ಒಪ್ಪೋ R15 ಹಾಗೂ ಒಪ್ಪೋ R15 ಡ್ರೀಮ್ ಮಿರರ್ ಆವೃತ್ತಿಯೂ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Here's how the Face ID of the newly launched Oppo A83 works (KANNADA)
ಈ ಸ್ಮಾರ್ಟ್ ಫೋನಿನಲ್ಲಿ 6.28 ಇಂಚಿನ AMOLED ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸದು ಎನ್ನಲಾಗಿರುವ 19:9 ಅನುಪಾತದ ಡಿಸ್ ಪ್ಲೇಯನ್ನು ಹೊಂದಿರಲಿದೆ. ಈ ದೊಡ್ಡ ಸ್ಕ್ರಿನ್ ನೊಂದಿಗೆ 6GB RAM ಕಾಣಬಹುದಾಗಿದ್ದು, 128GB ಇಂಟರ್ನಲ್ ಮೆಮೊರಿಯೂ ಈ ಸ್ಮಾರ್ಟ್ ಫೋನಿನಲ್ಲಿದೆ.

ಓದಿರಿ: ಐಫೋನ್ X ಅಲ್ಲ, ಟ್ರೆಂಡ್ ಬದಲಾಯಿಸುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್: 19:9 ಡಿಸ್‌ಪ್ಲೇ, ಇನ್‌-ಡಿಸ್‌ಪ್ಲೇ ಸ್ಕ್ಯಾನರ್.!

ಆಂಡ್ರಾಯ್ಡ್ 8.1ನಲ್ಲಿ ಕಾರ್ಯನಿರ್ವಹಿಸಲಿದರುವ ಒಪ್ಪೋ R15 ಸ್ಮಾರ್ಟ್ ಫೋನಿನಲ್ಲಿ ಕಲರ್ಸ್ OS 5.0ವನ್ನು ಕಾಣಬಹುದಾಗಿದೆ. ಇದಲ್ಲದೇ ಕ್ವಾಲ್ಕಮ್ ಸ್ನಾಪ್ಡ್ರಾಗನ್ 660 ಪ್ರೋಸೆಸರ್ ಅನ್ನ ಈ ಸ್ಮಾರ್ಟ್ ಪೋನಿನಲ್ಲಿ ಅಳವಡಿಸಲಾಗಿದ್ದು, ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದ ಹಾಗಿದೆ. ಅಲ್ಲದೇ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ.

16MP + 5MP ಡ್ಯುಯಲ್ ಕ್ಯಾಮೆರಾವನ್ನು ಒಪ್ಪೋ R15 ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಒಪ್ಪೋ R15 ಡ್ರೀಮ್ ಮೀರರ್ ಆವೃತ್ತಿಯಲ್ಲಿ 16MP+ 20MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದು ಬಳಕೆದಾರರಿಗೆ ಉತ್ತಮ ಪೋಟೋಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ. ಈ ಸ್ಮಾರ್ಟ್ ಫೋನ್ ಬೆಲೆ ಕುರಿತು ಇನ್ನು ಮಾಹಿತಿ ಲಭ್ಯವಾಗಿಲ್ಲ.

English summary
Oppo R15 to launch on March 31 with 6.28-inch display, 6GB RAM. to know more visit kannnada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot