ಒಪ್ಪೊದ 'ರೆನೋ' ಸ್ಮಾರ್ಟ್‌ಫೋನ್‌ ಕ್ಯಾಮೆರಾ 10X ಝೂಮ್ ಹೊಂದಿರಲಿದೆ.!

|

ಒಪ್ಪೊ ಕಂಪನಿಯ ಉಪ ಕಂಪನಿ ಎಂದು ಈಗಾಗಲೇ ಗುರುತಿಸಿಕೊಂಡಿರುವ 'ರೆನೋ' ಕಂಪನಿಯು ತನ್ನ ಮೊದಲ ಹೊಸ ಸ್ಮಾರ್ಟ್‌ಫೋನ್ ರಿಲೀಸ್‌ಗೆ ಸಿದ್ಧವಾಗಿದ್ದು, ಇದೇ ಏಪ್ರಲ್ 10 ರಂದು ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ಯುವ ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಈ ಸ್ಮಾರ್ಟ್‌ಫೋನ್ ಹೈ ಎಂಡ್‌ ಮಾದರಿಯ ಕ್ಯಾಮೆರಾವನ್ನು ಹೊಂದಿರಲಿದ್ದು, 10X ಝೂಮ್‌ ಆಯ್ಕೆಯ ತಂತ್ರಜ್ಞಾನವನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

 ಒಪ್ಪೊದ 'ರೆನೋ' ಸ್ಮಾರ್ಟ್‌ಫೋನ್‌ ಕ್ಯಾಮೆರಾ 10X ಝೂಮ್ ಹೊಂದಿರಲಿದೆ.!

ಹೌದು, ರೆನೋ' ಕಂಪನಿ ಸೆಲ್ಫಿ ಕ್ಯಾಮೆರಾ ಮತ್ತು ಸ್ಮಾರ್ಟ್‌ಫೋನ್‌ ವೇಗಕ್ಕೆ ಹೆಚ್ಚಿನ ಮಹತ್ವ ನೀಡಿಲಾಗಿದ್ದು, ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್‌ ಇರಲಿದೆ. ಇದರೊಂದಿಗೆ 48 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗುವುದು ಎನ್ನುವ ಮಾಹಿತಿಗಳು ಲೀಕ್ ಸುದ್ದಿಯಿಂದ ತಿಳಿದು ಬಂದಿದೆ. ಹಾಗಾದರೇ ಒಪ್ಪೊ ಕಂಪನಿಯ ಉಪ ಬ್ರ್ಯಾಂಡ್‌ 'ರೆನೋ' ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದೆ ಮತ್ತು ಲೀಕ್ ವಿಡಿಯೊ ಹೇಗಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ರೆನೋ ಕಂಪನಿಯ ಮೊದಲ ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಹೈ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿರಲಿದೆ. ಈ ಫೋನ್ ಡಿಸ್‌ಪ್ಲೇ ಸುತ್ತಲೂ ಅತೀ ಕಡಿಮೆ ಅಂಚಿನ ಹೊಂದಿರಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಒಪ್ಪೊ ಕಂಪನಿಯ ಬರಲಿರುವ ರೆನೋ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಸ್ತುತ ಚಾಲ್ತಿ ಇರುವ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ ಅನ್ನು ಕಾಣಬಹುದಾಗಿದ್ದು, ಈ ಉನ್ನತ ಪ್ರೊಸೆಸರ್‌ನಲ್ಲಿ ಸ್ಮಾರ್ಟ್‌ಫೋನ್‌ ಕಾರ್ಯದಕ್ಷತೆ ಅದ್ಬುತವಾಗಿರಲಿದೆ. ಅತ್ಯುತ್ತಮ ಪ್ರೊಸೆಸರ್‌ ಸ್ಮಾರ್ಟ್‌ಫೋನ್ ಕಾರ್ಯದ ವೇಗವನ್ನು ಹೆಚ್ಚಿಸುತ್ತದೆ ಹಾಗೂ ಗೇಮ್ಸ್‌ಗೆ ಪೂರಕವಾಗಿರಲಿದೆ.

ಕ್ಯಾಮೆರಾ

ಕ್ಯಾಮೆರಾ

ರೆನೋ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ 48 ಮೆಗಾಪಿಕ್ಸಲ್ ಮತ್ತು 5 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾಗಳನ್ನು ಹೊಂದಿರಲಿದ್ದು, ಇದರೊಂದಿಗೆ 10x ಆಪ್ಟಿಕಲ್ ಝೂಮ್‌ ಆಯ್ಕೆಯನ್ನು ನೀಡುವ ಸಾಧತ್ಯಗಳಿವೆ. ಸೆಲ್ಫಿಗಾಗಿ 16 ಮೆಗಾಪಿಕ್ಸಲ್ ರೈಸಿಂಗ್ ಕ್ಯಾಮೆರಾ ಒದಗಿಸಲಾಗುವುದು ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಮುಕ್ತಾಯವಾದ 2019ರ ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ ಮೇಳದಲ್ಲಿ ಕಂಪನಿ ಆಪ್ಟಿಕಲ್ ಝೂಮ್‌ ಪ್ರದರ್ಶಿಸಲಾಗಿತ್ತು.

ಬ್ಯಾಟರಿ

ಬ್ಯಾಟರಿ

ಮೊದಲಿನಿಂದಲೂ ಅಧಿಕ ಸಾಮರ್ಥ್ಯದ ಬ್ಯಾಟರಿಯನ್ನು ಪರಿಚಯಿಸುತ್ತಿರುವ ಒಪ್ಪೊ ತನ್ನ ಹೊಸ ಸಬ್‌ ಬ್ರ್ಯಾಂಡ್‌ ರೆನೋ ಸ್ಮಾರ್ಟ್‌ಫೋನ್‌ ನಲ್ಲಿ 4,065mAh ಸಾಮರ್ಥ್ಯದ ಬ್ಯಾಟರಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಫಾಸ್ಟ್ ಚಾರ್ಜರ್‌ ಒದಗಿಸಲಾಗುವುದು ಎನ್ನಲಾಗುತ್ತಿದ್ದು, ಕಲರ್‌OS 6.0 ಮತ್ತು ಬ್ಲೂಟೂತ್ 5.0. ಆಯ್ಕೆಗಳು ಇರಲಿದೆ.

Best Mobiles in India

English summary
Oppo’s upcoming phone Reno 10X is coming and surprisingly it will be powered by a Snapdragon 710 SoC coupled with a pack of 4 GB RAM..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X