OPPO Reno 14 Pro: 50MP + 50MP + 50MP ಕ್ಯಾಮೆರಾಗಳು.. 16GB RAM.. ಯಾವಾಗ ಲಾಂಚ್?
ಒಪ್ಪೋ ಪ್ರಿಯರು ಖುಷಿ ಪಡುವ ಸುದ್ದಿ ಇದೆ. ಆದಷ್ಟು ಬೇಗ ಹೊಸ ಮೊಬೈಲ್ ಅಭಿಮಾನಿಗಳ ಕೈ ಸೇರಲಿದೆ. ಹೌದು, ಒಪ್ಪೋ ತನ್ನ 'Reno 13' ಸರಣಿಯನ್ನು 2025ರ ಆರಂಭದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಒಪ್ಪೋ ರೆನೋ 13 ಪ್ರೊ ಸಹ ಪರಿಚಯಿಸಿತ್ತು. ಇದನ್ನು 49,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೀಗ, ಒಪ್ಪೋ ರೆನೋ 14 ಪ್ರೊ (OPPO Reno 14 Pro) ಲಾಂಚ್ ಕಾಲ ಸನ್ನಿಹಿತವಾಗಿದೆ. ಈ ಫೋನಿನ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಟಿಪ್‌ಸ್ಟರ್ ಈ ಒಪ್ಪೋ ರೆನೋ 14 ಪ್ರೊ ಫೋನಿನ ಐಪಿ ರೇಟಿಂಗ್ ಜೊತೆಗೆ ಕ್ಯಾಮೆರಾ ಮತ್ತು ಪ್ರೊಸೆಸರ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಂತೆ, ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಪ್ರೊಸೆಸರ್ ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಒಪ್ಪೋ ಫೋನ್ 16GB RAM ನೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಈ ಮೊಬೈಲ್ 1.5K ರೆಸಲ್ಯೂಶನ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 3D ಸಿಂಗಲ್ ಪಾಯಿಂಟ್ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿರುತ್ತದೆ.

ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳು
ಒಪ್ಪೋ ರೆನೋ 14 ಪ್ರೊ ಫೋನಿನ ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ವರದಿಯ ಪ್ರಕಾರ, ಈ ಒಪ್ಪೋ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಈ ಫೋನಿನಲ್ಲಿ ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಇರುತ್ತವೆ. ಇವುಗಳಲ್ಲಿ ಸೋನಿ IMX882 ಸಂವೇದಕ, ISOCELL JN5 ಹೊಂದಿರುವ 3x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು ಸ್ಯಾಮ್‌ಸಂಗ್ ISOCELL ಸಂವೇದಕ ಇರಲಿವೆ.
ಒಪ್ಪೋ ರೆನೋ 14 ಪ್ರೊ ಬಿಡುಗಡೆ ಯಾವಾಗ?
ಒಪ್ಪೋ ರೆನೋ 14 ಪ್ರೊ ಫೋನಿನಲ್ಲಿ ಕ್ಯಾಮೆರಾ ಕಾರ್ಯಕ್ಕಾಗಿ ಆಪಲ್ ಐಫೋನ್ 16 ನಂತಹ ಕ್ವಿಕ್ ಬಟನ್ ಒದಗಿಸಲಾಗುವುದು. ಈ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ, IP68 + IP69 ರೇಟಿಂಗ್‌ನೊಂದಿಗೆ ಪಡೆದಿರುವ ಸಾಧ್ಯತೆಯಿದೆ. ಇದನ್ನು ಲೋಹದ ಚೌಕಟ್ಟಿನಲ್ಲಿ ತಯಾರಿಸಲಾಗುವುದು. ಈ ಒಪ್ಪೋ 5G ಫೋನ್ ಜೂನ್ (2025) ತಿಂಗಳಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.
ಒಪ್ಪೋ ರೆನೋ 13 ಪ್ರೊ ವೈಶಿಷ್ಟ್ಯಗಳು
ಒಪ್ಪೋ ರೆನೋ 13 ಪ್ರೊ ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರವು 49,999 ರೂ.ಗೆ ಮಾರಾಟವಾಗುತ್ತಿದೆ. ಹಾಗೆಯೇ 12GB RAM + 512GB ಸ್ಟೋರೇಜ್ ವೇರಿಯಂಟ್ 54,999 ರೂ.ಗೆ ಲಭ್ಯವಿದೆ. ಈ ಫೋನಿನ ವಿಶೇಷತೆಗಳು ಈ ಕೆಳಗಿನಂತಿವೆ.
ಡಿಸ್ಪ್ಲೇ ವಿವರ
ಒಪ್ಪೋ ರೆನೋ 13 ಪ್ರೊ ಫೋನ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1.5K ಮೈಕ್ರೋ ಕರ್ವ್ಡ್ OLED ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 1272 × 2800 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ದರ, 1200 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಹೊಂದಿದೆ. ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ರೆನೋ 13 ಪ್ರೊ 5G ಮೊಬೈಲ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಕಲರ್ ಓಎಸ್ 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಒಪ್ಪೋ ರೆನೋ 13 ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ ರೆನೋ 13 ಪ್ರೊ 5G ಫೋನ್ 5,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ.


Click it and Unblock the Notifications








