ಭಾರತಕ್ಕೆ Oppo Reno 15 5G Series ಸರಣಿ ಆಗಮನ: ಅಧಿಕೃತ ಟೀಸರ್ ಔಟ್!
Oppo ತನ್ನ ಜನಪ್ರಿಯ Reno 15 5G Series ಸ್ಮಾರ್ಟ್‌ಫೋನ್‌ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಳೆದ ನವೆಂಬರ್‌ನಲ್ಲಿ ಚೀನಾದಲ್ಲಿ ಪರಿಚಯವಾದ ಈ ಸರಣಿ ಈಗ ಜಾಗತಿಕ ಮಾರುಕಟ್ಟೆ ಕಡೆಗೆ ಎಂಟ್ರಿ ನೀಡಿದ್ದು, ಭಾರತೀಯ ಬಳಕೆದಾರರಿಗೂ ಅಧಿಕೃತವಾಗಿ ಬರಲಿರುವುದು ಖಚಿತವಾಗಿದೆ. Oppo ಕಂಪೆನಿಯ ಅಧಿಕೃತ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಲಾದ ಟೀಸರ್ ಮೂಲಕ Oppo, ಹೊಸ Reno 15 ಸರಣಿಯ ವಿನ್ಯಾಸದ ಮೊದಲ ನೋಟವನ್ನು ಹಂಚಿಕೊಂಡಿದೆ.
ಕಂಪನಿ ಹಂಚಿಕೊಂಡಿರುವ ಟೀಸರ್‌ನಲ್ಲಿ ತನ್ನ ಹೊಸ ಆಗಮನವನ್ನು "Coming Soon" ಎಂದು ಉಲ್ಲೇಖಿಸಿದ್ದು, ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ವಿಡಿಯೋದಲ್ಲಿ ಕಾಣಿಸಿಕೊಂಡ ಬ್ಲೂ ಮತ್ತು ವೈಟ್ ಬಣ್ಣದ ವೇರಿಯಂಟ್‌ಗಳು ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿವೆ. ವಿಶೇಷವಾಗಿ ಬ್ಲೂ ಕಲರ್‌ನಲ್ಲಿ ಔರೋರಾ ಪ್ರೇರಿತ ಗ್ರೇಡಿಯಂಟ್ ಫಿನಿಷ್ ಇದ್ದು, ಪ್ರೀಮಿಯಂ ಲುಕ್ ನೀಡುತ್ತದೆ. ವೈಟ್ ಬಣ್ಣದ ಮಾದರಿಯಲ್ಲಿ ಹಿಂಭಾಗದಲ್ಲಿ ರಿಬನ್ ಶೈಲಿಯ ವಿನ್ಯಾಸ ಅಂಶವನ್ನು ಸೇರಿಸಲಾಗಿದೆ.
ಹಲವಾರು ಪ್ರಮುಖ ಟೆಕ್ ಮಾಧ್ಯಮ ವರದಿಗಳ ಪ್ರಕಾರ, ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಫೋನ್ Oppo Reno 15 Pro mini ಆಗಿರಬಹುದು. ಈ ಮಾದರಿಯನ್ನು "Glacier White" ಬಣ್ಣದಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ಹಿಂಭಾಗದ ಕ್ಯಾಮೆರಾ ಐಲ್ಯಾಂಡ್‌ಗೂ ಹೊಸ ವಿನ್ಯಾಸ ನೀಡಲಾಗಿದ್ದು, ಹಿಂದಿನ iPhone Pro ಮಾದರಿಗಳಂತೆಯೇ ಮೂರು ಪ್ರತ್ಯೇಕ ಲೆನ್ಸ್ ರಿಂಗ್‌ಗಳು ಮತ್ತು LED ಫ್ಲ್ಯಾಶ್ ಅನ್ನು ಒಳಗೊಂಡಿದೆ.
ಪ್ರಸಿದ್ಧ ಟಿಪ್‌ಸ್ಟರ್ ಪರಾಸ್ ಗುಗ್ಲಾನಿ (@passionategeekz) ಅವರ ಮಾಹಿತಿಯಂತೆ, ಭಾರತದಲ್ಲಿ Oppo Reno 15 Series 5G ನಾಲ್ಕು ವಿಭಿನ್ನ ಮಾದರಿಗಳಲ್ಲಿ ಬಿಡುಗಡೆಯಾಗಲಿದೆ. ಈ ಪಟ್ಟಿಯಲ್ಲಿ Reno 15, Reno 15 Pro, Reno 15c ಮತ್ತು Reno 15 Pro mini ಸೇರಿವೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ AI Portrait Camera ತಂತ್ರಜ್ಞಾನ ಇರಲಿದೆ ಎನ್ನಲಾಗಿದೆ.

ಕ್ಯಾಮೆರಾ ಫೀಚರ್‌ಗಳ ವಿಚಾರದಲ್ಲಿ Reno 15 Pro mini ವಿಶೇಷ ಗಮನ ಸೆಳೆಯುವ ಸಾಧ್ಯತೆ ಇದೆ. ಈ ಮಾದರಿಯಲ್ಲಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ಇರಬಹುದು ಎಂಬ ಮಾತು ಕೇಳಿಬರುತ್ತಿದೆ. ಇನ್ನೊಂದೆಡೆ, ಸ್ಟ್ಯಾಂಡರ್ಡ್ Oppo Reno 15 ಮಾದರಿಯಲ್ಲಿ 120x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ದೊರೆಯುವ ನಿರೀಕ್ಷೆ ಇದೆ. ಇದರ ಬೆಲೆ ಭಾರತದಲ್ಲಿ ರೂ.50,000ಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್ ವಿಚಾರದಲ್ಲೂ Oppo ಹೊಸ ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆ ಇದೆ. Reno 15c ಮಾದರಿಯಲ್ಲಿ ದೊಡ್ಡ 7,000mAh ಬ್ಯಾಟರಿ ಇರಬಹುದು ಮತ್ತು ಇದರ ಬೆಲೆ ರೂ.40,000ಕ್ಕಿಂತ ಕಡಿಮೆ ಇರಲಿದೆ ಎನ್ನಲಾಗಿದೆ. ಟಾಪ್-ಎಂಡ್ Oppo Reno 15 Pro ಮಾದರಿಯಲ್ಲಿ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ನೀಡುವ ಸಾಧ್ಯತೆಯೂ ಇದೆ.
ಒಟ್ಟಿರೆಯಾಗಿ, Oppo Reno 15 Series 5G ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಮತ್ತು ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಆಕರ್ಷಕ ವಿನ್ಯಾಸ, ಶಕ್ತಿಶಾಲಿ ಕ್ಯಾಮೆರಾ ಮತ್ತು AI ಆಧಾರಿತ ಹೊಸ ಫೀಚರ್‌ಗಳೊಂದಿಗೆ ಈ ಸರಣಿ, ಟೆಕ್ ಪ್ರಿಯರ ಗಮನ ಸೆಳೆಯುವ ಸಾಧ್ಯತೆ ಹೆಚ್ಚು. ಮುಂದಿನ ದಿನಗಳಲ್ಲಿ ಅಧಿಕೃತ ಬಿಡುಗಡೆ ದಿನಾಂಕ ಮತ್ತು ಸಂಪೂರ್ಣ ಸ್ಪೆಸಿಫಿಕೇಷನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಲಿದೆ. ಇನ್ನು ಇತ್ತೀಚಿಗಷ್ಟೇ Oppo Reno 15 Pro mini ಕುರಿತ ಸುದ್ದಿಯೊಂದು ಹೊರಬಿದ್ದಿತ್ತು. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








