Home
ಮೊಬೈಲ್

ಒಪ್ಪೋ ರೆನೊ 4 ಪ್ರೊ ಫಸ್ಟ್‌ ಲುಕ್: ಜಬರ್ದಸ್ತ್ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌!

ಒಪ್ಪೋ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಪರಿಚಯಿಸಿರುವ 'ಒಪ್ಪೋ ರೆನೋ 4 ಪ್ರೊ' ಸ್ಮಾರ್ಟ್‌ಫೋನ್‌ ಈಗಾಗಲೇ ಹಲವು ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದಿನ ಅಗತ್ಯ ಫೀಚರ್ಸ್‌ಗಳನ್ನು ಹೊಂದಿದೆ. ಮುಖ್ಯವಾಗಿ 48ಎಂಪಿ ಸೆನ್ಸಾರ್ ಕ್ಯಾಮೆರಾ, RAM ಮತ್ತು ಸ್ನಾಪ್‌ಡ್ರಾಗನ್ 720G SoC ಪ್ರೊಸೆಸರ್ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಆಗಿ ಕಾಣಿಸಿಕೊಂಡಿದೆ.

ಒಪ್ಪೋ ರೆನೋ 4 ಪ್ರೊ

ಒಪ್ಪೋ ರೆನೋ 4 ಪ್ರೊ ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್‌ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಹಲವು ಹೈ ಎಂಡ್ ಫೀಚರ್ಸ್‌ಗಳನ್ನು ಪಡೆದಿದೆ. 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ಹೊಂದಿದ್ದು, ಚುರುಕಾದ ಕಾರ್ಯವೈಖರಿ ಕಾಣಬಹುದಾಗಿದೆ. ಜೊತೆಗೆ ಬ್ಯಾಟರಿ ಸಪೋರ್ಟ್‌ಗೆ 65W ಸೂಪರ್ VOOC ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇದರೊಂದಿಗೆ ಡಿವೈಸ್‌ ಸಹ ಗ್ರಾಹಕರ ಕಣ್ಮನಸೆಳೆಯುವಂತಿದೆ. ಹಾಗಾದರೆ ಒಪ್ಪೋ ರೆನೋ 4 ಪ್ರೊ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿವೆ ಎನ್ನುವ ಕುರಿತು ಫಸ್ಟ್‌ ಲುಕ್ ಮಾಹಿತಿ ಇಲ್ಲಿದೆ. ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಒಪ್ಪೋ ರೆನೊ 4 ಪ್ರೊ ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 3D ಬಾರ್ಡರ್‌ಲೆಸ್‌ ಸೆನ್ಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಯನ್ನು ಹೊಂದಿದೆ. ಜೊತೆಗೆ 90Hz ರಿಫ್ರೆಶ್ ರೇಟ್‌ ಮತ್ತು 180Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಹೊಂದಿದೆ. ಕಂಪನಿಯು ಪ್ರಸ್ತುತ ಅಗತ್ಯತೆಗೆ ಅನುಗುಣವಾಗಿ ಡಿಸ್‌ಪ್ಲೇ ಸೌಲಭ್ಯ ನೀಡಿದೆ ಅನಿಸುತ್ತದೆ.

ಪ್ರೊಸೆಸರ್ ಕಾರ್ಯವೈಖರಿ ಹೇಗಿದೆ

ಪ್ರೊಸೆಸರ್ ಕಾರ್ಯವೈಖರಿ ಹೇಗಿದೆ

ಒಪ್ಪೋ ರೆನೊ 4 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 720G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ ಕಲರ್ಓಎಸ್ 7.2 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 8GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಿಕೊಳ್ಳಬಹುದಾಗಿದೆ. ಅಲ್ಲದೆ ಇದು ಮಲ್ಟಿ-ಕೂಲಿಂಗ್ ಸಿಸ್ಟ್‌ಮ್‌ ಅನ್ನು ಹೊಂದಿದೆ. RAM ಸಾಮರ್ಥ್ಯ ಅಧಿಕವಾಗಿರುವುದರಿಂದ ಕಾರ್ಯವೈಖರಿ ವೇಗದಲ್ಲಿರಲಿದೆ. ಗೇಮ್ ಮೋಡ್ ಆಯ್ಕೆ ಸಹ ಪಡೆದಿದೆ.

ಕ್ಯಾಮೆರಾ ವಿಶೇಷತೆ ಏನು

ಕ್ಯಾಮೆರಾ ವಿಶೇಷತೆ ಏನು

ಒಪ್ಪೋ ರೆನೊ 4 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX 586 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊ ಶೂಟರ್ ಅನ್ನು ಸಹ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೋನಿ IMX 616 ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಎಐ ಕಲರ್ ಪೋರ್ಟ್ರೇಟ್, ನೈಟ್ ಫ್ಲೇರ್ ಪೋರ್ಟ್ರೇಟ್ ಮತ್ತು ಅಲ್ಟ್ರಾ ಡಾರ್ಕ್ ಮೋಡ್ ಸೇರಿದಂತೆ ಅನೇಕ ಕ್ಯಾಮೆರಾ ಫೀಚರ್ಸ್‌ಗಳನ್ನು ಒದಗಿಸಿದೆ. ಜೊತೆಗೆ 720p ರೆಸಲ್ಯೂಶನ್‌ನಲ್ಲಿ 960fps AI ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ಆಯ್ಕೆಯೂ ಇದೆ. ಕ್ಯಾಮೆರಾ ಸೆನ್ಸಾರ್‌ ಹಾಗೂ ಕ್ಯಾಮೆರಾ ಆಯ್ಕೆಗಳು ಉತ್ತಮ ಅನಿಸುತ್ತವೆ.

ಬ್ಯಾಟರಿ ಲೈಫ್ ಉತ್ತಮವೇ?

ಬ್ಯಾಟರಿ ಲೈಫ್ ಉತ್ತಮವೇ?

ಒಪ್ಪೋ ರೆನೊ 4 ಪ್ರೊ ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದು 65W ಸೂಪರ್ ವೂಕ್ 2.0 ಮೂಲಕ ವೇಗವಾಗಿ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಪ್ರಿ ಲೋಡೆಡ್‌ ಮಾಡಲಾದ ಸೂಪರ್ ಪವರ್ ಸೇವಿಂಗ್ ಮೋಡ್ ಅನ್ನು ಸಹ ನೀಡಲಾಗಿದೆ. ಇದು ಬಳಕೆದಾರರಿಗೆ 1.5 ಗಂಟೆಗಳ ಕಾಲ ವಾಟ್ಸಾಪ್‌ನಲ್ಲಿ ಚಾಟ್ ಮಾಡಲು ಅಥವಾ ಕೇವಲ ಐದು ಪ್ರತಿಶತದಷ್ಟು ಬ್ಯಾಟರಿ ಶಕ್ತಿಯೊಂದಿಗೆ 77 ನಿಮಿಷಗಳ ಕಾಲ ಕರೆ ಮಾಡಲು ಅವಕಾಶ ನೀಡುತ್ತದೆ. ಆದರೆ ಈ ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿ ಸಾಮರ್ಥ್ಯವನ್ನು ಇನ್ನಷ್ಟು ಅಧಿಕಗೊಳಿಸಬಹುದಾಗಿತ್ತು.

ಬೆಲೆ ಲಭ್ಯತೆ?

ಬೆಲೆ ಲಭ್ಯತೆ?

ಭಾರತದಲ್ಲಿ ಒಪ್ಪೋ ರೆನೊ 4 ಪ್ರೊ ಬೆಲೆ ಆರಂಭಿಕ ದರ 34,990, ರೂ ಆಗಿದೆ. ಈ ಫೋನ್ ಸ್ಟಾರ್ರಿ ನೈಟ್ ಮತ್ತು ಸಿಲ್ಕಿ ವೈಟ್ ಎಂಬ ಎರಡು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಬರಲಿದೆ. ಇದು ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಪೇಟಿಎಂ ಮಾಲ್, ಮತ್ತು ಟಾಟಾ ಕ್ಲಿಕ್ ಸೇರಿದಂತೆ ಪ್ರಮುಖ ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯ.

ಕೊನೆಯ ಮಾತು

ಕೊನೆಯ ಮಾತು

ಒಪ್ಪೋ ರೆನೊ 4 ಪ್ರೊ ಸ್ಮಾರ್ಟ್‌ಫೋನ್ ಫಾಸ್ಟ್‌ ಚಾರ್ಜಿಂಗ್ ಸೇರಿದಂತೆ ಹಲವು ಫೀಚರ್ಸ್‌ಗಳು ಆಕರ್ಷಕವಾಗಿವೆ. ಬ್ಯಾಟರಿ ಸಾಮರ್ಥ್ಯವನ್ನು 5000mAh ಅದಕ್ಕಿಂತಲೂ ಅಧಿಕ ಸಾಮರ್ಥ್ಯದಲ್ಲಿ ನೀಡಬೇಕಿತ್ತು ಅನಿಸುತ್ತದೆ. ಮತ್ತು ಮುಖ್ಯ ರಿಯರ್‌ ಕ್ಯಾಮೆರಾವನ್ನು 64ಎಂಪಿ ಸೆನ್ಸಾರ್‌ ಒದಗಿಸಬೇಕಿತ್ತು. ಇವುಗಳನ್ನು ಹೊರತುಪಡಿಸಿದರೇ ಒಪ್ಪೋ ರೆನೊ 4 ಪ್ರೊ ಫೋನ್ ಒಂದು ಪವರ್‌ಫುಲ್ ಸ್ಮಾರ್ಟ್‌ಫೋನ್ ಎಂದು ಹೇಳಬಹುದು.

Best Mobiles in India

English summary
Oppo Reno 4 Pro comes at a premium price tag of Rs. 34,990.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+