ಬೆರಗು ಮೂಡಿಸುವಂತಿವೆ 'ಒಪ್ಪೊ ರೆನೋ' ಸ್ಮಾರ್ಟ್‌ಫೋನಿನ ಆಕರ್ಷಕ ಫೀಚರ್ಸ್‌ಗಳು!

|

ಸೆಲ್ಫಿ ಎಕ್ಸ್‌ಪರ್ಟ್‌ ಎಂದೇ ಹೆಸರುವಾಸಿಯಾಗಿರುವ ಒಪ್ಪೊ ಕಂಪನಿಯ ಸಬ್‌ ಬ್ಯ್ರಾಂಡ್‌ 'ರೆನೋ'ದ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ ಸರಣಿಯ ಫೀಚರ್ಸ್‌ಗಳನ್ನು ಅಧಿಕೃತವಾಗಿ ಬಿಡುಗಡೆಮಾಡಿದ್ದು, ನಿರೀಕ್ಷೆಯಂತೆ ತ್ರಿವಳಿ ಕ್ಯಾಮೆರಾ ಜೊತೆಗೆ 10x ಹೈಬ್ರಿಡ್ ಝೂಮ್ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಯುವಸಮೂಹವನ್ನು ಸೆಳೆಯಲು ಮುಂದಾಗಿರುವ ಕಂಪನಿಯು ಮಾರುಕಟ್ಟೆಯಲ್ಲಿ ನೂತನ ಟ್ರೆಂಡ್‌ ಹುಟ್ಟುಹಾಕಲಿದೆ.

ಬೆರಗು ಮೂಡಿಸುವಂತಿವೆ 'ಒಪ್ಪೊ ರೆನೋ' ಸ್ಮಾರ್ಟ್‌ಫೋನಿನ ಆಕರ್ಷಕ ಫೀಚರ್ಸ್‌ಗಳು!

ಬಿಡುಗಡೆಗೂ ಮುನ್ನವೇ ಬಾರಿ ಸೌಂಡ್‌ ಮಾಡಿದ್ದ ರೆನೋದ ಸ್ಮಾರ್ಟ್‌ಫೋನ್ ಚೀನಾದಲ್ಲಿ ಅನಾವರಣಗೊಳಿಸಲಾಗಿದ್ದು, ಕಂಪನಿ ಇದೇ ಏಪ್ರಿಲ್ 24 ರಂದು ಬಿಡುಗಡೆ ಮಾಡಲಿದೆ. 'ಸ್ಟ್ಯಾಂಡರ್ಡ್' ಮತ್ತು 'ರೆನೋ 10x ಝೂಮ್‌' ಎಂಬ ಎರಡು ಮಾದರಿಯ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಮತ್ತು ಪ್ರೊಸೆಸರ್‌ ಫೀಚರ್ಸ್‌ಗಳಿಂದ ಯುವಸಮೂಹವನ್ನು ಸೆಳೆದಿದೆ.

ಬೆರಗು ಮೂಡಿಸುವಂತಿವೆ 'ಒಪ್ಪೊ ರೆನೋ' ಸ್ಮಾರ್ಟ್‌ಫೋನಿನ ಆಕರ್ಷಕ ಫೀಚರ್ಸ್‌ಗಳು!

ಶಾರ್ಕ್‌ ಫಿನ್‌ ಡಿಸೈನ್‌ ರಚನೆಯನ್ನು ಹೊಂದಿರುವ ರೆನೋ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ 48ಎಂಪಿ ಕ್ಯಾಮೆರಾದೊಂದಿಗೆ ಸೋನಿ IMX586 ಸೆನ್ಸಾರ್‌ ಅನ್ನು ಹೊಂದಿದ್ದು, ಇದರೊಂದಿಗೆ 16ಎಂಪಿ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. ಹಾಗಾದರೇ ಒಪ್ಪೊದ ರೆನೋ ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸೈನ್

ಡಿಸೈನ್

ಕಡಿಮೆ ಅಂಚಿನ ಡಿಸ್‌ಪ್ಲೇಯು ಫೋನಿನ ಸೌಂದರ್ಯ ವರ್ಧಿಸಿದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ರಿಡರ್‌ ಅನ್ನು ಹೊಂದಿದ್ದು, ವಿಶಾಲವಾದ ಡಿಸ್‌ಪ್ಲೇ ಇದ್ದು, ಆರು ಲೆಯರ್‌ಗಳನ್ನು ಹೊಂದಿದ ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಪಡೆದಿದೆ. ಸುಮಾರು 210 ಗ್ರಾಂ ತೂಕವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್, ಅಲ್ಯುಮಿನಿಯಮ್ ಅಲಾಯ್ ಫ್ರೇಮ್‌ ನಿಂದ ರಚನೆ ಆಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

2340 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.65 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಕಡಿಮೆ ಅಂಚಿನಿಂದ ಕೂಡಿದೆ. ಸ್ಕ್ರೀನ್‌ನಿಂದ ಫೋನಿನ ಬಾಹ್ಯರಚನೆಯ ನಡುವಿನ ಅನುಪಾತವು ಶೇ. 91.3 ರಷ್ಟು ಆಗಿದ್ದು, ಆರನೇ ತಲೆಮಾರಿನ ಫಿಂಗರ್‌ಪ್ರಿಂಟ್ ರಿಡರ್‌ ಸೌಲಭ್ಯವನ್ನು ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಒಪ್ಪೊ ರೆನೋ 10x ಝೂಮ್‌ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್‌ ಅನ್ನು ಒಳಗೊಂಡಿರಲಿದ್ದು, ಹಾಗೇ 'ಸ್ಟ್ಯಾಂಡರ್ಡ್' ಮಾದರಿಯ ಸ್ಮಾರ್ಟ್‌ಫೋನ್ ವೇರಿಯಂಟ್ ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿರಲಿದೆ. ಇವುಗಳ ಜೊತೆಗೆ ಆಂಡ್ರಾಯ್ಡ್‌ 9.0 ಪೈ ಆಪರೇಟಿಂಗ್ ಸಿಸ್ಟಮ್ ಫೋನಿನ ವೇಗಕ್ಕೆ ಬಲ ಒದಗಿಸಲಿದೆ.

ಮೆಮೊರಿ

ಮೆಮೊರಿ

ರೆನೋ ಸ್ಮಾರ್ಟ್‌ಫೋನ್ 8 GB RAM ಮತ್ತು 6GB RAM ಸಾಮರ್ಥ್ಯದ ಜೊತೆಗೆ 256 GB ಮತ್ತು 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿದೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ರೆನೋ ಪ್ರಾಥಮಿಕ ಕ್ಯಾಮೆರಾವು ಸೋನಿಯ IMX586 ಸೆನ್ಸಾರ್‌ ನೊಂದಿಗೆ 48ಎಂಪಿ ಕ್ಯಾಮೆರಾವನ್ನು ಹೊಂದಿದೆ. ಅದರ ಅಪರ್ಚರ್ f/1.7 ಆಗಿದ್ದು, ಇನ್ನೂ ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್‌ನಲ್ಲಿ 8ಎಂಪಿ ಸಾಮರ್ಥ್ಯವನ್ನು ಹೊಂದಿದೆ. ಮತ್ತು ತೃತೀಯ ಕ್ಯಾಮೆರಾವು 13ಎಂಪಿ ಸಾಮರ್ಥ್ಯದಲ್ಲಿದ್ದು, ಟೆಲಿಸ್ಕೋಪಿಕ್ ಲೆನ್ಸ್‌ ಅನ್ನು ಹೊಂದಿದೆ. ಎಲ್‌ಇಡಿ ಫ್ಲ್ಯಾಶ್ ಸಹ ಇದೆ.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

ರೆನೋ ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಈ ಕ್ಯಾಮೆರಾವು ಶಾರ್ಕ್‌ ಫಿನ್ ಮಾದರಿಯ ಡಿಸೈನಿನ ರಚನೆಯನ್ನು ಹೊಂದಿದೆ. ಇದರ ಅಪರ್ಚರ್ f/2.0 ಆಗಿದ್ದು, ಎಲ್‌ಇಡಿ ಫ್ಲ್ಯಾಶ್ ಒಳಗೊಂಡಿದೆ. ಆಟೋಫೋಕಸ್‌ ಆಯ್ಕೆ ಸೇರಿದಂತೆ ಹಲವು ಫೋಟೊ ಆಯ್ಕೆಗಳನ್ನು ನೀಡಲಾಗಿದೆ.

ಬ್ಯಾಟರಿ

ಬ್ಯಾಟರಿ

4,065mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿಯನ್ನು ಒಳಗೊಂಡಿದ್ದು, ದೀರ್ಘಕಾಲ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ VOOC 3.0 ತಂತ್ರಜ್ಞಾನದ ಚಾರ್ಜಿಂಗ್ ಸೌಲಭ್ಯವನ್ನು ಇದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್‌ ಬೇಗನೆ ಚಾರ್ಜ್‌ ಪಡೆದುಕೊಳ್ಳಲಿದೆ. ಕಾಪರ್‌ ಟ್ಯೂಬ್ ಲಿಕ್ವಿಡ್ ಟೆಕ್ನೊಲಜಿ ಇದ್ದು, ಸ್ಮಾರ್ಟ್‌ಫೋನ್‌ ಬಿಸಿ ಆಗುವುದನ್ನು ತಡೆಯಲು ಸಹಕರಿಸಲಿದೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ನಿಖರ ಲೊಕೇಶನ್ ತಿಳಿಯಲು ಡ್ಯುಯಲ್ ಬ್ಯಾಂಡ್ ಜಿಪಿಎಸ್‌ ಟೆಕ್ನೊಲಜಿ ಅಳವಡಿಸಲಾಗಿದೆ. NFC and 3.5mm ಆಡಿಯೊ ಜಾಕ್ ನೀಡಲಾಗಿದೆ. ಇದರಲ್ಲಿ ಬ್ರೂನೋ ಅಸಿಸ್ಟಂಟ್ ಪರಿಚಯಿಸಲಾಗಿದ್ದು, ಬಳಕೆದಾರರ ಹವ್ಯಾಸಗಳನ್ನು ಗುರುತಿಸಲು ಇದು ನೆರವಾಗಲಿದೆ. ಗೇಮಿಂಗ್‌ಗಾಗಿ 2.0 ಆಕ್ಸ್‌ಲರೇಟರ್ ಇಂಜಿನ್ ತಂತ್ರಜ್ಞಾನ್ ಇದ್ದು, ಡಾಲ್ಬಿ ಸೌಂಡ್ ಸೌಲಭ್ಯವನ್ನು ನೀಡಲಾಗಿದೆ.

ವೇರಿಯಂಟ್ ಮತ್ತು ಕಲರ್ಸ್‌

ವೇರಿಯಂಟ್ ಮತ್ತು ಕಲರ್ಸ್‌

ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಒಪ್ಪೊದ ರೆನೋ ಸ್ಮಾರ್ಟ್‌ಫೋನ್ ಎರಡು ಮಾದರಿಗಳನ್ನು ಹೊಂದಿದೆ. 'ಸ್ಟ್ಯಾಂಡರ್ಡ್ ರೆನೋ ಸ್ಮಾರ್ಟ್‌ಫೋನ್‌' ಮತ್ತು 'ರೆನೋ 10x ಝೂಮ್‌' ಸ್ಮಾರ್ಟ್‌ಫೋನ್ ಆಗಿವೆ. ಈ ಎರಡು ಮಾದರಿಗಳು 6GB RAM ಮತ್ತು 8GB RAM ಸಾಮರ್ಥ್ಯದ ಎರಡು ವೇರಿಯಂಟ್ ಗಳನ್ನು ಹೊಂದಿವೆ. ಗ್ರೀನ್, ಪಿಂಕ್ ಮಿಸ್ಟ್, ಬ್ಯ್ಲಾಕ್, ಮತ್ತು ಪರ್ಪಲ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಟ್ಯಾಂಡರ್ಡ್ ರೆನೋ ಸ್ಮಾರ್ಟ್‌ಫೋನ್‌ 6GB RAM ವೇರಿಯಂಟ್ ಬೆಲೆಯು 3,299 Yuan ಆಗಿದೆ.(ಅಂದಾಜು 33,960ರೂ.ಗಳು). 8GB RAM ವೇರಿಯಂಟ್ 3,599 Yuan ಆಗಿದೆ.(ಅಂದಾಜು-37,100ರೂ.ಗಳು). ಇನ್ನೂ ರೆನೋ 10x ಝೂಮ್‌ ಮಾದರಿಯ 6GB RAM ವೇರಿಯಂಟ್ ಬೆಲೆಯು 4,499 Yuan (ಅಂದಾಜು 46,350ರೂ.ಗಳು) ಹಾಗೇ 8GB RAM ವೇರಿಯಂಟ್ 4,799 Yuan ಆಗಿದೆ (ಅಂದಾಜು-49,450ರೂ.ಗಳು) ಮೊದಲು ಚೀನಾದಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ.

Best Mobiles in India

English summary
OPPO Reno and Reno 10x Zoom unveiled in China: Specifications, features and price.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X