ಬಂತು ಹೊಸ OPPO ಫೋನ್; 50MP + 50MP ಕ್ಯಾಮೆರಾ.. ಬಿಗ್ ಬ್ಯಾಟರಿ.. ಕಡಿಮೆ ಬೆಲೆಗೆ ಸಿಗುತ್ತೆ!
ಒಪ್ಪೋ ತನ್ನ ಗ್ರಾಹಕರು ಖುಷಿ ಪಡುವ ಸುದ್ದಿ ನೀಡಿದೆ. ಜನ ಮೆಚ್ಚಿದ ಒಪ್ಪೋ ರೆನೋ13 5G (OPPO Reno13 5G) ಫೋನನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಹೌದು, ಒಪ್ಪೋ ಫೋನ್‌ಗಳಲ್ಲಿ OPPO Reno13 ಸರಣಿಯು ಅತ್ಯಂತ ದುಬಾರಿ ಮತ್ತು ಅಲ್ಟ್ರಾ ಪ್ರೀಮಿಯಂ ಮಾದರಿಯಾಗಿದೆ. ಈ ಫೋನ್ ಕೇವಲ ಎರಡು ಬಣ್ಣಗಳಲ್ಲಿ ಮಾತ್ರ ಲಭ್ಯವಿತ್ತು. ಇದೀಗ, ಸ್ಕೈ ಬ್ಲೂ ಬಣ್ಣದ (OPPO Reno13 SkyBlue) ರೂಪಾಂತರವನ್ನು ಪರಿಚಯಿಸಲಾಗಿದೆ. ಈ ಹೊಸ ಬಣ್ಣದ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕಂಪನಿಯು ಹೋಳಿ ಹಬ್ಬಕ್ಕೂ ಮೊದಲೇ ಒಪ್ಪೋ ರೆನೋ13 ಫೋನನ್ನು ಹೊಸ ಬಣ್ಣದಲ್ಲಿ ಪರಿಚಯಿಸಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 8350 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 6.59 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಹಾಗೆಯೇ 5600mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಆಫರ್ ತಿಳಿಯಲು ಮುಂದೆ ಓದಿ.

ಒಪ್ಪೋ ರೆನೋ13 5G ಬೆಲೆ ಮತ್ತು ಆಫರ್
ಒಪ್ಪೋ ರೆನೋ13 5G ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ 12GB RAM + 512GB ಸ್ಟೋರೇಜ್ ರೂಪಾಂತರವನ್ನು 43,999 ರೂ.ಗೆ ಖರೀದಿಸಬಹುದು. ಹಾಗೆಯೇ 8GB RAM + 256GB ಸ್ಟೋರೇಜ್ ವೇರಿಯಂಟ್ 39,999 ರೂ.ಗೆ ಬಿಡುಗಡೆಯಾಗಿದೆ. ಕಂಪನಿಯು ಈ ಫೋನಿನ ಖರೀದಿ ಮೇಲೆ 3,750 ರೂ. ಬ್ಯಾಂಕ್ ರಿಯಾಯಿತಿ ಘೋಷಿಸಿದೆ. ಈ ಸ್ಕೈ ಬ್ಲೂ ಬಣ್ಣದ ರೂಪಾಂತರವು ಇದೇ ಮಾರ್ಚ್ 20 ರಿಂದ ಒಪ್ಪೋ ಇ-ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಇತರೆ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.
ಈ ಸುದ್ದಿ ಓದಿದ್ದೀರಾ?: ಮನಸೋತ ಗ್ರಾಹಕರು! ಕೇವಲ 10,999 ಸಾಕು.. 108MP ಕ್ಯಾಮೆರಾ ಇರುವ 5G ಫೋನ್.. ಆಫರ್ ಏನಿದೆ?
ಒಪ್ಪೋ ರೆನೋ13 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ ರೆನೋ13 5G ಸ್ಮಾರ್ಟ್‌ಫೋನ್ 6.59 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2,760 x 1,256 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 12,00 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ರೆನೋ13 5G ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 8350 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ColorOS 15.0 ಜೊತೆಗೆ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್
ಒಪ್ಪೋ ರೆನೋ13 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS ಮತ್ತು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ ರೆನೋ13 5G ಫೋನ್ 5,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್ ನೀರು, ಅಧಿಕ ಒತ್ತಡ, ಧೂಳು ಮತ್ತು ಸ್ಪ್ಲಾಶ್ ವಿರುದ್ಧ ರಕ್ಷಣೆ ಹೊಂದಿದೆ. IP69, IP68 ಮತ್ತು IP66 ರೇಟಿಂಗ್ ಪಡೆದಿದೆ.


Click it and Unblock the Notifications








