Home
ಮೊಬೈಲ್

ಹೊಸ OPPO ಫೋನಿನ ಸೇಲ್ ಶುರು; 3000 ರಿಯಾಯಿತಿ.. 10% ಕ್ಯಾಶ್‌ಬ್ಯಾಕ್.. ಬೆಲೆ, ವಿಶೇಷತೆಗಳೇನು?

ಒಪ್ಪೋ ಇತ್ತೀಚೆಗೆ ಒಪ್ಪೋ ರೆನೋ13 5G (OPPO Reno13 5G) ಫೋನನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಿತ್ತು. ಇದು ಸ್ಕೈ ಬ್ಲೂ ಬಣ್ಣದ ರೂಪಾಂತರದಲ್ಲಿ (OPPO Reno13 5G Sky Blue Color Variant) ಬರುತ್ತದೆ. ಅಂದಹಾಗೆ, ಈ ಮೊಬೈಲ್ ಇಂದಿನಿಂದ (ಮಾರ್ಚ್ 20) ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಿದೆ. ಕಂಪನಿಯು ಈ ಹೊಸ ಫೋನಿಗೆ ಯಾವೆಲ್ಲ ಆಫರ್ ನೀಡುತ್ತಿದೆ, ಬೆಲೆ ಮತ್ತು ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಒಪ್ಪೋ ತನ್ನ Reno13 ಸರಣಿಯಲ್ಲಿ ಒಪ್ಪೋ ರೆನೋ13 5G ಅನ್ನು ಪರಿಚಯಿಸಿದೆ. ಇದು ಅತ್ಯಂತ ದುಬಾರಿ ಮತ್ತು ಅಲ್ಟ್ರಾ ಪ್ರೀಮಿಯಂ ಮಾದರಿಯಾಗಿದೆ. ಈ ಫೋನ್ ಕೇವಲ ಎರಡು ಬಣ್ಣಗಳಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಇದೀಗ, ಸ್ಕೈ ಬ್ಲೂ ಬಣ್ಣದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ, ತನ್ನ ಗ್ರಾಹಕರಿಗೆ 3,000 ಎಕ್ಸ್‌ಚೇಂಜ್ ಬೋನಸ್, ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಶೇ.10 ರಷ್ಟು ತ್ವರಿತ ಕ್ಯಾಶ್‌ಬ್ಯಾಕ್ ಮತ್ತು ನೋ ಕಾಸ್ಟ್ ಇಎಂಐ ಆಯ್ಕೆ ಸೇರಿದಂತೆ ಹಲವು ಆಫರ್ ನೀಡುತ್ತಿದೆ. ಈ ರಿಯಾಯಿತಿ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

OPPO Reno13 ಸೇಲ್ ಶುರು; 3000 ರಿಯಾಯಿತಿ, 10% ಕ್ಯಾಶ್‌ಬ್ಯಾಕ್.. ಬೆಲೆ ನೋಡಿ

ಒಪ್ಪೋ ರೆನೋ13 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಒಪ್ಪೋ ರೆನೋ13 5G ಸ್ಕೈ ಬ್ಲೂ ಬಣ್ಣದ ಮೊಬೈಲ್ 6.59 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,760 x 1,256 ಪಿಕ್ಸೆಲ್ ರೆಸಲ್ಯೂಶನ್‌ ಬೆಂಬಲ, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 12,00 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಯಾವುದು

ಒಪ್ಪೋ ರೆನೋ13 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 8350 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ColorOS 15.0 ಜೊತೆಗೆ ಕೆಲಸ ಮಾಡುತ್ತದೆ. ಈ ಫೋನ್ 12GB RAM + 512GB ಸ್ಟೋರೇಜ್ ಮತ್ತು 8GB RAM + 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

Take a Poll

ಡ್ಯುಯಲ್ ಕ್ಯಾಮೆರಾ ಸೆಟಪ್

ಒಪ್ಪೋ ರೆನೋ13 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಒಳಗೊಂಡಿದೆ. ಇದರಲ್ಲಿ ಎಲ್‌ಇಡಿ ಫ್ಲ್ಯಾಷ್‌ ಇದೆ. ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಎರಡನೇ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 50 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಒಳಗೊಂಡಿದೆ.

ದೊಡ್ಡ ಬ್ಯಾಟರಿ

ಒಪ್ಪೋ ರೆನೋ13 5G ಸ್ಮಾರ್ಟ್‌ಫೋನ್ 5600mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಮೊಬೈಲ್ ನೀರು, ಧೂಳು ಮತ್ತು ಸ್ಪ್ಲಾಶ್ ವಿರುದ್ಧ ರಕ್ಷಣೆಗಾಗಿ IP69, IP68 ಮತ್ತು IP66 ರೇಟಿಂಗ್ ಪಡೆದಿದೆ.

ಒಪ್ಪೋ ರೆನೋ13 5G ಬೆಲೆ ಮತ್ತು ಆಫರ್

ಒಪ್ಪೋ ರೆನೋ13 5G ಸ್ಕೈ ಬ್ಲೂ ಬಣ್ಣದ ರೂಪಾಂತರವು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ 12GB RAM + 512GB ಸ್ಟೋರೇಜ್ ರೂಪಾಂತರವನ್ನು 43,999 ರೂ.ಗೆ ಖರೀದಿಸಬಹುದು. ಹಾಗೆಯೇ 8GB RAM + 256GB ಸ್ಟೋರೇಜ್ ವೇರಿಯಂಟ್ 39,999 ರೂ. ಇದೆ. ಕಂಪನಿಯು ಈ ಫೋನಿನ ಖರೀದಿ ಮೇಲೆ 3,000 ರೂ. ಎಕ್ಸ್‌ಚೇಂಜ್ ಬೋನಸ್ ಘೋಷಿಸಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಶೇ.10 ರಷ್ಟು ತ್ವರಿತ ಕ್ಯಾಶ್‌ಬ್ಯಾಕ್ ಲಭ್ಯವಿದೆ. ಜೊತೆಗೆ 6 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆ ನೀಡಲಾಗುವುದು. ಈ ಸ್ಕೈ ಬ್ಲೂ ಬಣ್ಣದ ರೂಪಾಂತರವು ಪ್ರಸ್ತುತ ಒಪ್ಪೋ ಇ-ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಇತರೆ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಿದೆ.

Best Mobiles in India

English summary
OPPO Reno13 Sky Blue Variant Now Available for Purchase in India: Check Price, Specs, Availability and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+