ದೇಶದ ಮೊಬೈಲ್‌ ಮಾರುಕಟ್ಟೆಯಿಂದ 41 ಸ್ಮಾರ್ಟ್‌ಫೋನ್‌ ಕಂಪನಿಗಳು ಹೊರನಡೆದಿವೆ.!! ಯಾಕೆ ಗೊತ್ತಾ?

|

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯುತ್ತಿದ್ದು, ಅನೇಕ ಹೊಸ ಹೊಸ ಸ್ಮಾರ್ಟ್‌ಫೋನ್‌ ಕಂಪನಿಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೇ ಇರುತ್ತವೆ. ಆದರೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಥಾನ ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೇ ತೀವ್ರ ಪೈಪೋಟಿಯಿಂದ ಕೂಡಿದ್ದು, 2018 ರಲ್ಲಿ ಸುಮಾರು 41 ಸ್ಮಾರ್ಟ್‌ಫೋನ್‌ ಕಂಪನಿಗಳು ಭಾರತೀಯ ಮಾರುಕಟ್ಟೆಯಿಂದ ಹೊರನಡೆದಿವೆ.!

ದೇಶದ ಮೊಬೈಲ್‌ ಮಾರುಕಟ್ಟೆಯಿಂದ 41 ಸ್ಮಾರ್ಟ್‌ಫೋನ್‌ ಕಂಪನಿಗಳು ಹೊರನಡೆದಿವೆ.!!

ಹೌದು, ಸೈಬರ್ ಮೀಡಿಯಾ ಸಂಶೋಧನೆ ವರದಿ ಪ್ರಕಾರ ಭಾರತೀಯ ಮೊಬೈಲ್ ಮಾರುಕಟ್ಟೆಗೆ 2018 ರಲ್ಲಿ ಹೊಸದಾಗಿ 15 ಸ್ಮಾರ್ಟ್‌ಫೋನ್‌ ಕಂಪನಿಗಳು ಎಂಟ್ರಿ ಕೊಟ್ಟಿದ್ದವು. ಆದರೆ ಈಗಾಗಲೇ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿಕೊಂಡಿರುವ ಸ್ಮಾರ್ಟ್‌ಫೋನ್‌ ಕಂಪನಿಗಳಾದ ಸ್ಯಾಮ್‌ಸಂಗ್, ಶಿಯೀಮಿ, ವೀವೊ, ಒಪ್ಪೊ, ಸೇರಿದಂತೆ ಕೆಲವು ಪ್ರಮುಖ ಬ್ರ್ಯಾಂಡ್‌ಗಳ ಎದುರು ಪೈಪೋಟಿ ನೀಡಲಾಗದೇ ಒಟ್ಟು 41 ಸ್ಮಾರ್ಟ್‌ಫೋನ್ ಕಂಪನಿಗಳು ಮಾರುಕಟ್ಟೆಯಿಂದ ಹಿಂದೆ ಸರಿದಿವೆ.

ದೇಶದ ಮೊಬೈಲ್‌ ಮಾರುಕಟ್ಟೆಯಿಂದ 41 ಸ್ಮಾರ್ಟ್‌ಫೋನ್‌ ಕಂಪನಿಗಳು ಹೊರನಡೆದಿವೆ.!!

2017 ರಲ್ಲಿ 13 ಸ್ಮಾರ್ಟ್‌ಫೋನ್‌ ಕಂಪನಿಗಳು ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿದ್ದವು. 2017 ನೇ ವರ್ಷಕ್ಕೆ ಹೋಲಿಸಿದರೇ 2018 ರಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿಯೇ ಸ್ಮಾರ್ಟ್‌ಫೋನ್‌ ಕಂಪನಿಗಳು ಹೊರನಡೆದಿರುವುದು ಇಲ್ಲಿಯ ಮಾರುಕಟ್ಟೆಯಲ್ಲಿರುವ ಪೈಪೋಟಿಯ ತೀವ್ರತೆಯನ್ನು ತೋರಿಸುತ್ತದೆ. ಕಳೆದ ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಸ್ಮಾರ್ಟ್‌ಫೋನ್‌ ಕಂಪನಿಗಳ ಎದುರು ಪೈಪೋಟಿ ನೀಡುವುದು ಹೊಸದಾಗಿ ಬರುವ ಕಂಪನಿಗಳಿಗೆ ದೊಡ್ಡ ಸವಾಲು ಎನ್ನಬಹುದು. ಹೊಸದಾಗಿ ಬರುವ ಕಂಪನಿಗಳ ಮುಂದೆ ಯಾವೆಲ್ಲಾ ಸವಾಲುಗಳಿವೆ ಎಂಬುದನ್ನು ನೋಡೋಣ ಬನ್ನಿ.

ಮಾರುಕಟ್ಟೆಯಲ್ಲಿ ಪೈಪೋಟಿ

ಮಾರುಕಟ್ಟೆಯಲ್ಲಿ ಪೈಪೋಟಿ

ಭಾರತದಲ್ಲಿ ಮೊಬೈಲ್ ಮಾರುಕಟ್ಟೆ ವೇಗದ ಗತಿಯಲ್ಲಿ ಬೆಳೆಯುತ್ತಿದ್ದು, ಅನೇಕ ಸ್ಮಾರ್ಟ್‌ಫೋನ್‌ ಕಂಪನಿಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೆ ಇವೆ. ಆದರೆ ಈಗಾಗಲೇ ಕೇಲವು ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಪ್ರಬಲ್ಯವನ್ನು ಹೊಂದಿದ್ದು, ಅವುಗಳ ವಿರುದ್ಧವಾಗಿ ಹೊಸ ಸ್ಮಾರ್ಟ್‌ಫೋನ್‌ ಕಂಪನಿಗಳು ಸೆಣಸುವುದು ಕಷ್ಟಸಾಧ್ಯವಾಗಿದೆ.

ಕಂಪನಿಗಳು ಹಿಂದೆಟು ಹಾಕಿರುವುದಕ್ಕೆ ಕಾರಣಗಳು

ಕಂಪನಿಗಳು ಹಿಂದೆಟು ಹಾಕಿರುವುದಕ್ಕೆ ಕಾರಣಗಳು

ಇಲ್ಲಿಯ ಗ್ರಾಹಕರು ಕಡಿಮೆ ಬೆಲೆಯೊಂದನ್ನೆ ನೋಡಿ ಮೊಬೈಲ್ ಖರೀದಿಸುವುದಿಲ್ಲ, ಗುಣಮಟ್ಟ ಮತ್ತು ಕಂಪನಿಯ ಹೆಸರು ಸಹ ಗಮನಿಸುತ್ತಾರೆ. ಇದರೊಂದಿಗೆ ಮಾರುಕಟ್ಟೆಯನ್ನು ಆಳುತ್ತಿರುವ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ವಿವಿಧ ಬೆಲೆಯ ಅತ್ಯುತ್ತಮ ಫೀಚರ್ಸ್‌ಗಳಿರುವ ಫೋನ್‌ ಶ್ರೇಣಯನ್ನೇ ಪರಿಚಯಿಸುತ್ತಾರೆ. ಹೀಗಾಗಿ ಹೊಸ ಕಂಪನಿಗಳು ನೆಲೆ ನಿಲ್ಲಲೂ ಕಷ್ಟ.

ಭಾರತೀಯ ಗ್ರಾಹಕರ ಮನಸ್ಥಿತಿ

ಭಾರತೀಯ ಗ್ರಾಹಕರ ಮನಸ್ಥಿತಿ

ಭಾರತವು ಹೆಚ್ಚು ಮಧ್ಯಮ ವರ್ಗದ ಕುಟುಂಬಗಳಿಂದ ಕೂಡಿದ ದೇಶವಾಗಿದೆ. ಇಲ್ಲಿಯ ಬಹುತೇಕರು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸಲು ನೋಡುತ್ತಾರೆ. ಅದರೊಂದಿಗೆ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಮತ್ತು ಅದರ ಬಾಳಕೆಯನ್ನು ಹೇಗಿದೆ ಎಂಬ ಅಂಶಗಳನ್ನು ಗಮನಿಸಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಾರೆ.

ಚೀನಾ ಕಂಪನಿಗಳಿಗೆ ಮಾರುಕಟ್ಟೆ

ಚೀನಾ ಕಂಪನಿಗಳಿಗೆ ಮಾರುಕಟ್ಟೆ

ಮಾರುಕಟ್ಟೆಗೆ ಎಂಟ್ರಿಕೊಡುವ ಬಹುತೇಕ ಹೊಸ ಸ್ಮಾರ್ಟ್‌ಫೋನ್‌ಗಳು ಚೀನಾ ಮೂಲದ ಕಂಪನಿಗಳೇ ಆಗಿರುತ್ತವೇ. ಭಾರತೀಯರು ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ ಖರೀದಿಸಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎನ್ನುವುದನ್ನು ಮನಗಂಡಿರುವ ಚೀನಾ ಕಂಪನಿಗಳು ದೇಶದ ಮಾರುಕಟ್ಟೆಯಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯನ್ನು ಕಂಡುಕೊಳ್ಳಬಯಸುತ್ತಾರೆ.

ಇ ಕಾಮರ್ಸ್ ತಾಣಗಳ ಬೆಂಬಲ

ಇ ಕಾಮರ್ಸ್ ತಾಣಗಳ ಬೆಂಬಲ

ಹೊಸ ಸ್ಮಾರ್ಟ್‌ಫೋನ್‌ಗಳು ದೇಶದ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಬೇರೂರ ಬೇಕೆಂದರೇ ಇ ಕಾಮರ್ಸ್ ಜಾಲತಾಣಗಳ ಪಾತ್ರವು ಪ್ರಮುಖವಾಗಿದೆ. ಇ ಕಾಮರ್ಸ್ ತಾಣಗಳಲ್ಲಿ ಏನಾದರೊಂದು ಆಫರ್ ನೀಡಿರುತ್ತಾರೆ ಎಂಬ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರ ಸಂಖ್ಯೆಯು ಏರುತ್ತಲೇ ಇದೆ. ಹೀಗಾಗಿ ಇ ಕಾಮರ್ಸ್ ತಾಣಗಳು ಹೊಸ ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ಸಹಾಯಕವಾಗಿವೆ.

ಜಾಹಿರಾತು ಸಹಕಾರಿ

ಜಾಹಿರಾತು ಸಹಕಾರಿ

ಮಾರುಕಟ್ಟೆಯಲ್ಲಿ ನೆಲೆನಿಲ್ಲಲೂ ಹೊಸ ಸ್ಮಾರ್ಟ್‌ಫೋನ್‌ ಕಂಪನಿಗಳು ಗ್ರಾಹಕರಿಗೆ ಅನೇಕ ಶ್ರೇಣಿಯಲ್ಲಿ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಇರಬೇಕು ಇದರೊಂದಿಗೆ ತಮ್ಮ ಕಂಪನಿಯ ಉತ್ಪನ್ನಗಳ ಬಗ್ಗೆ ಹೆಚ್ಚು ಜಾಹಿರಾತಿಗಳನ್ನು ಮಾಡುವುದರ ಮೂಲಕ ಗ್ರಾಹಕರನ್ನು ತಲುಪಬೇಕಾದ ಅನಿವಾರ್ಯತೆ ಇದೆ. ಆದರೆ ಸಣ್ಣ ಕಂಪನಿಗಳಿಗೆ ಜಾಹಿರಾತಿಗಾಗಿ ಹೆಚ್ಚಿನ ಹಣ ವ್ಯಯಿಸುವುದು ಕಷ್ಟ.

ಜನಪ್ರಿಯ ಕಂಪನಿಗಳು

ಜನಪ್ರಿಯ ಕಂಪನಿಗಳು

ದೇಶದ ಮೊಬೈಲ್‌ ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್ ಕಂಪನಿಯೊಂದಿಗೆ ಚೀನಾ ಮೂಲದ ಶಿಯೋಮಿ, ಒನ್‌ಪ್ಲಸ್‌, ಹಾನರ್, ವೀವೊ, ಒಪ್ಪೊ ಈ ಮೊಬೈಲ್ ಕಂಪನಿಗಳು ಸಹ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಇವುಗಳನ್ನು ಎದುರಿಸುವುದು ಹೊಸ ಕಂಪನಿಗಳಿಗೆ ಸವಾಲಾಗಿದೆ.

2019 ರಲ್ಲಿ ಎಂಟ್ರಿ ಕೊಡಲಿರುವ ಕಂಪನಿಗಳು

2019 ರಲ್ಲಿ ಎಂಟ್ರಿ ಕೊಡಲಿರುವ ಕಂಪನಿಗಳು

ದೇಶದ ಮಾರುಕಟ್ಟೆಯಲ್ಲಿ ಪೈಪೋಟಿ ಇದೆ ಎಂದು ಹೊಸ ಸ್ಮಾರ್ಟ್‌ಫೋನ್‌ ಕಂಪನಿಗಳು ಎಂಟ್ರಿ ಕೊಡಲು ಹಿಂದೇಟು ಹಾಕುತ್ತಿಲ್ಲ. ಈ ವರ್ಷ್‌ದಲ್ಲಿ ಮೀಡಿಯಾಕಾಮ್, ಫೋರ್‌ಸ್ಟಾರ್‌, ಸೆಂಟ್ರಿಕ್, ಲಿಚಿ ಮೊಬೈಲ್ ಕಂಪನಿಗಳು ಸೇರಿದಂತೆ ಸುಮಾರು 8 ಕಂಪನಿಗಳು ನೂತನ ಫೀವರ್ಸ್‌ನ ಸ್ಮಾರ್ಟ್‌ಫೋನ್‌ಗಳೊಂದಿಗೆ ಬರಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.

ಹೊಸ ಕಂಪನಿಗಳಿಗೆ ಎದುರಾಗುವ ಸವಾಲುಗಳು

ಹೊಸ ಕಂಪನಿಗಳಿಗೆ ಎದುರಾಗುವ ಸವಾಲುಗಳು

ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಬೇಕೆಂದರೇ ಹೊಸ ಕಂಪನಿಗಳು ಸವಾಲುಗಳನ್ನು ಎದುರಿಸಲೇಬೇಕು. ಅವುಗಳೆಂದರೇ ಜನಪ್ರಿಯ ಸ್ಮಾರ್ಟ್‌ಫೋನ್‌ ಸಂಸ್ಥೆಗಳ ಎದುರು ಸೆಣಸುವುದು. ಗ್ರಾಹಕರ ವಿಶ್ವಾಸ ಗಳಿಸಲು ಶ್ರಮಿಸಬೇಕು. ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆ ಎರಡರಲ್ಲೂ ದೊಡ್ಡ ಮಟ್ಟದ ಜಾಹಿರಾತು ನೀಡುವುದು ಸಹ ಸವಾಲಾಗಿರುತ್ತದೆ.

ಹೊಸತನ ಪರಿಚಯಿಸಬೇಕು

ಹೊಸತನ ಪರಿಚಯಿಸಬೇಕು

ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರು ಫೋನ್‌ಗಳಲ್ಲಿ ಹೊಸತನವನ್ನು ನಿರೀಕ್ಷಿಸುತ್ತಾರೆ. ಈಗಾಗಲೇ ಕಂಪನಿಗಳು ಅಳವಡಿಸಿರುವ ಫೀಚರ್ಸ್‌ಗಳನ್ನು ಹೊರೆತುಪಡಿಸಿ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ವಿನೂತನ ಫೀಚರ್ಸ್‌ಗಳನ್ನು ಗ್ರಾಹಕರು ನಿರೀಕ್ಷಿಸುತ್ತಾರೆ. ಗ್ರಾಹಕರ ಮನ ಗೆದ್ದರೇ ಮಾರುಕಟ್ಟೆಯಲ್ಲಿ ಸ್ಥಾನ ಸಿಕ್ಕಂತೆ.

Best Mobiles in India

English summary
As many as 41 smartphone brands exited the India smartphone market in 2018 owing to hyper-competition, while 15 brands entered the market eyeing growth prospects.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X