ಬಜೆಟ್‌ ಬೆಲೆಯಲ್ಲಿ ಲಾಂಚ್‌ ಆಗಿದೆ 'ಪ್ಯಾನಸಾನಿಕ್ ಎಲುಗಾ 800' ಸ್ಮಾರ್ಟ್‌ಫೋನ್.!!

|

ಜನಪ್ರಿಯ ಎಲೆಕ್ಟ್ರಾನಿಕ್ ಕಂಪನಿ 'ಪ್ಯಾನಸಾನಿಕ್' ತನ್ನ ಎಲುಗಾ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿತ್ತು. ಆದರೆ ಇತ್ತೀಚಿಗೆ ಸ್ಮಾರ್ಟ್‌ಫೋನ್ ತಯಾರಿಕೆಯಿಂದ ದೂರಸರಿದಿದ್ದ ಕಂಪನಿ ಇದೀಗ ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದೆ. ಆ ಮೂಲಕ ಮತ್ತೆ ಸ್ಮಾರ್ಟ್‌ಫೋನ್‌ ತಯಾರಿಕೆಯತ್ತ ಆಸಕ್ತಿ ವ್ಯಕ್ತಪಡಿಸಿದೆ.

ಬಜೆಟ್‌ ಬೆಲೆಯಲ್ಲಿ ಲಾಂಚ್‌ ಆಗಿದೆ 'ಪ್ಯಾನಸಾನಿಕ್ ಎಲುಗಾ 800' ಸ್ಮಾರ್ಟ್‌ಫೋನ್.!!

ಹೌದು, ಪ್ಯಾನಸಾನಿಕ್‌ ಕಂಪನಿ 'ಎಲುಗಾ ರೇ 800' ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ನೆನ್ನೆ (ಫೆ.5 ರಂದು) ಭಾರತದಲ್ಲಿ ರಿಲೀಸ್‌ ಮಾಡಿದೆ. ಇದೊಂದು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದ್ದು, ಗ್ರಾಹಕರನ್ನು ಬಹುಬೇಗ ಸೆಳೆಯಲಿದೆ. ಗೋಲ್ಡ್ ಬಣ್ಣದಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್ ಪ್ರಮುಖ ಇ ಕಾಮರ್ಸ್‌ ಜಾಲತಾಣಗಳಲ್ಲಿ ಮತ್ತು ರಿಟೇಲ್‌ ಅಂಗಡಿಗಳಲ್ಲಿ ದೊರೆಯಲಿದೆ.

ಬಜೆಟ್‌ ಬೆಲೆಯಲ್ಲಿ ಲಾಂಚ್‌ ಆಗಿದೆ 'ಪ್ಯಾನಸಾನಿಕ್ ಎಲುಗಾ 800' ಸ್ಮಾರ್ಟ್‌ಫೋನ್.!!

ಎಲುಗಾ ರೇ 800 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯು 16:9 ಅನುಪಾತದಲ್ಲಿ ಇದ್ದು, ಪೂರ್ಣಡಿಸ್‌ಪ್ಲೇ ರಚನೆ ಹೊಂದಿರುವುದರಿಂದ ಅತ್ಯುತ್ತಮ ವೀಕ್ಷಣೆಯ ಅನುಭವ ನೀಡಲಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ 3 ಯನ್ನು ಒಳಗೊಂಡಿದೆ. ಇದರೊಂದಿಗೆ 'ಪ್ಯಾನಸಾನಿಕ್ ಎಲುಗಾ ರೇ 800' ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್

ಡಿಸೈನ್

ಸ್ಮಾರ್ಟ್‌ಫೋನ್ ಬಾಹ್ಯ ಭಾಗ ಗೋಲ್ಡ್‌ ಬಣ್ಣದ ರಚನೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಶೈನಿಂಗ್‌ಅನ್ನು ಪಡೆದಿದ್ದು, ಆಕರ್ಷಕವಾಗಿ ಕಾಣಿಸುತ್ತದೆ. ಹಿಂಬದಿ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್‌ ಅನ್ನು ಹೊಂದಿದ್ದು, ಇದರೊಟ್ಟಿಗೆ ಸೆನ್ಸಾರ್‌ ಸಹ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 152.8x75.3x8.6mm ಸುತ್ತಳತೆಯನ್ನು ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಪ್ಯಾನಾಸಾನಿಕ್ ಎಲುಗಾ ರೇ 800 ಸ್ಮಾರ್ಟ್‌ಫೋನ್ 1080x1920 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.5 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಜೊತೆಗೆ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ 3 ನಿಂದ ರಕ್ಷಣೆಯನ್ನು ಪಡೆದಿದೆ. 16:9 ಡಿಸ್‌ಪ್ಲೇ ಅನುಪಾತವ ಆಗಿದೆ.

ಪ್ರೊಸೆಸರ್

ಪ್ರೊಸೆಸರ್

1.8GHz ಆಕ್ಟಾಕೋರ್‌ SoC ಪ್ರೊಸೆಸರ್‌ ಅನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 7.0 Nougat ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 128GB ವರೆಗೂ ಹೆಚ್ಚಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಪ್ಯಾನಾಸಾನಿಕ್‌ನ ಈ ಹೊಸ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಂದು 13 ಮೆಗಾಪಿಕ್ಸಲ್ ಸಾಮರ್ಥ್ಯದ ರೇರ್ ಕ್ಯಾಮೆರಾವನ್ನು ನೀಡಲಾಗಿದ್ದು ಈ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಲೈಟ್‌ನೊಂದಿಗೆ ಸೆನ್ಸಾರ್‌ ಅನ್ನು ಹೊಂದಿದೆ. ಮುಂಬದಿಯಲ್ಲಿ ಸೆಲ್ಫಿಗಾಗಿ 8 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ.

ಬ್ಯಾಟರಿ

ಬ್ಯಾಟರಿ

ಪ್ಯಾನಾಸಾನಿಕ್ ಎಲುಗಾ ರೇ 800 ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ದೀರ್ಘಕಾಲ ಬಾಳಕೆ ಬರುವ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಸುಮಾರು ಎರಡು ದಿನಗಳ ಕಾಲ ಸ್ಮಾರ್ಟ್‌ಫೋನಿಗೆ ಚಾರ್ಜ್‌ ಒದಗಿಸಬಲ್ಲ ಶಕ್ತಿಯನ್ನು ಬ್ಯಾಟರಿ ಹೊಂದಿದೆ. ಜೊತೆಗೆ 4G LTE, Wi-Fi 802.11 b/g/n, ಬ್ಲೂಟೂತ್ v4.2, GPS/ A-GPS ಆಯ್ಕೆಗಳು ಇರಲಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ಮೊದಲೇ ತಿಳಿಸಿದಂತೆ ಪ್ಯಾನಾಸಾನಿಕ್ ಎಲುಗಾ ರೇ 800 ಸ್ಮಾರ್ಟ್‌ಫೋನ್ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, ಇದರ ಬೆಲೆಯು 9,999ರೂ.ಗಳು ಆಗಿದೆ. ಪ್ರಮುಖ ಇ ಕಾಮರ್ಸ ಜಾಲತಾಣಗಳಲ್ಲಿ ದೊರೆಯಲಿದೆ.

Best Mobiles in India

English summary
Panasonic Eluga Ray 800 was launched in India on Tuesday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X