Home
ಮೊಬೈಲ್

9,290 ರೂಗೆ 3LED ಫ್ಲ್ಯಾಶ್ ಸಫೋರ್ಟ್‌ನ 'ಪೆನಾಸೋನಿಕ್ ಪಿ88' ಲಾಂಚ್‌: ಇತರೆ ವಿಶೇಷತೆಗಳೇನು?

3LED ಫ್ಲ್ಯಾಶ್, 4G VoLTE ಸಫೋರ್ಟ್ ಮಾಡುವ 'ಪೆನಾಸೋನಿಕ್ ಪಿ88' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌ ಆಗಿದೆ.

By Suneel

ಪೆನಾಸೋನಿಕ್ ಬುಧವಾರ ಪಿ88(P88) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಬಜೆಟ್ ಬೆಲೆ ರೂ.9290 ಕ್ಕೆ ಸ್ಮಾರ್ಟ್‌ಫೋನ್‌ ಖರೀದಿಸಬಹುದು. ಭಾರತದ ಎಲ್ಲಾ ರೀಟೇಲ್‌ ಮಳಿಗೆಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯ ಎಂದು ಕಂಪನಿ ಹೇಳಿದೆ.

ಪೆನಾಸೋನಿಕ್ ಪಿ88(Panasonic P88) ಸ್ಮಾರ್ಟ್‌ಫೋನ್‌ನ ಬಿಗ್‌ ಹೈಲೈಟ್ ಎಂದರೇ ಮೂರು ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ. ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ನ ಇತರೆ ಫೀಚರ್‌ಗಳೇನು ಎಂಬುದನ್ನು ಮುಂದೆ ಓದಿರಿ.

ರೂ.10,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್‌ಗಳಿವು..!

ಮೂರು ಎಲ್‌ಇಡಿ ಫ್ಲ್ಯಾಶ್‌ ಮತ್ತು ಕ್ಯಾಮೆರಾ

ಮೂರು ಎಲ್‌ಇಡಿ ಫ್ಲ್ಯಾಶ್‌ ಮತ್ತು ಕ್ಯಾಮೆರಾ

ಪೆನಾಸೋನಿಕ್ ಪಿ88(Panasonic P88) ಪ್ರಮುಖವಾಗಿ ಮೂರು ಎಲ್‌ಇಡಿ ಫ್ಲ್ಯಾಶ್‌ ಅನ್ನು 13MP ಹಿಂಭಾಗ ಕ್ಯಾಮೆರಾ ಭಾಗದಲ್ಲಿ ಹೊಂದಿದ್ದು, ಒಂದು ಎಲ್‌ಇಡಿ ಫ್ಲ್ಯಾಶ್‌ ಅನ್ನು 5MP ಸೆಲ್ಫಿ ಕ್ಯಾಮೆರಾದೊಂದಿಗೆ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸ್‌ಪ್ಲೇ

ಡಿಸ್‌ಪ್ಲೇ

ಸ್ಮಾರ್ಟ್‌ಫೋನ್ 5.3 ಇಂಚಿನ ಎಚ್‌ಡಿ (720*1280p) ಐಪಿಎಸ್ ಡಿಸ್‌ಪ್ಲೇ ಜೊತೆಗೆ 2.5D ವಕ್ರ ಗಾಜು ಹೊಂದಿದೆ.

ಓಎಸ್‌ ಮತ್ತು ಪ್ರೊಸೆಸರ್

ಓಎಸ್‌ ಮತ್ತು ಪ್ರೊಸೆಸರ್

ಪಿ88 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್ ಚಾಲಿತವಾಗಿದ್ದು, ಆಂಡ್ರಾಯ್ಡ್ ವರ್ಕ್‌ ಸುರಕ್ಷತೆ ಹೊಂದಿದೆ. 1.25GHz ಕ್ವಾಡ್-ಕೋರ್ ಪ್ರೊಸೆಸರ್ ಪ್ರಾಯೋಜಿತವಾಗಿದ್ದು, ಜೊತೆಗೆ 2GB RAM ಹೊಂದಿದೆ.

ಮೆಮೊರಿ ಮತ್ತು ಬ್ಯಾಟರಿ

ಮೆಮೊರಿ ಮತ್ತು ಬ್ಯಾಟರಿ

16GB ಆಂತರಿಕ ಮೆಮೊರಿಯೊಂದಿಗೆ ಬಂದಿದ್ದು, ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ 128GB ವರೆಗೆ ಮೆಮೊರಿ ಸಾಮರ್ಥ್ಯ ವಿಸ್ತರಿಸಬಹುದು. 2600mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಸಂಪರ್ಕಗಳು

ಸಂಪರ್ಕಗಳು

ಪೆನಾಸೋನಿಕ್ ಪಿ88 ಸ್ಮಾರ್ಟ್‌ಫೋನ್ 4G VoLTE, ವೈಫೈ 802.11 b/g/n, ಜಿಪಿಎಸ್, ಎಫ್‌ಎಂ ರೇಡಿಯೊ, 3G ಮತ್ತು 4G ಸಂಪರ್ಕ ಫೀಚರ್‌ಗಳನ್ನು ಹೊಂದಿದೆ.

ಅಕ್ಸೆಲೆರೊಮೀಟರ್, ವ್ಯಾಪಕ ಬೆಳಕಿನ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್ ಹೊಂದಿದೆ. 8.35mm ದಪ್ಪವಾಗಿದ್ದು, 156 ಗ್ರಾಂ ತೂಕವಿದೆ.

ಬಜೆಟ್‌ ಬೆಲೆ ರೂ.10,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ 4G ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಸಹ ಒಂದು. ಆದರೆ ಪಿ88 ಫೋನ್‌ ಬೆಲೆ ರೂ.9,290. ಫೋನ್ ಧೂಳು ನಿರೋಧಕ ಫೀಚರ್ ಹೊಂದಿದ್ದು, ಧೀರ್ಘಕಾಲ ಬಾಳಿಕೆಗೆ ಸಹಾಯಕವಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Panasonic P88 With Triple LED Flash, 4G VoLTE Support Launched at Rs. 9,290. To know Feature about this handset visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+