ಚೀನಾದಲ್ಲೇ ಚೀನಾ ಫೋನ್‌ಗಳಿಗೆ ಕಂಟಕ: ಬಂದಿದೆ ಪಿಲಿಪ್ಸ್ ಸ್ಮಾರ್ಟ್‌ಫೋನ್...!
ಪಿಲಿಪ್ಸ್ ತನ್ನ ಫೋನಿಗೆ ಪಿಲಿಪ್ಸ್ X596 ಎಂದು ನಾಮಕರಣ ಮಾಡಿದೆ ಎನ್ನಲಾಗಿದೆ. ಇದು ಅಲ್ಯುಮಿನಿಯಮ್ ಬಾಡಿಯನ್ನು ಹೊಂದಿದೆ ಎನ್ನಲಾಗಿದೆ. ನೋಡಲು ಸುಂದರ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಸದ್ದು ಮಾಡುವ ಲಕ್ಷಣಗಳನ್ನು ಹೊಂದ
ನೆದರ್‌ಲ್ಯಾಂಡ್ ಮೂಲದ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಕ ಕಂಪನಿ ಪಿಲಿಪ್ಸ್ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಅನ್ನು ಚೀನಾ ಮಾರುಕಟ್ಟೆಗೆ ಪರಿಚಯಿಸಿದೆ. ಶೀಘ್ರವೇ ಈ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಓದಿರಿ: ವೊಡಾಫೋನ್ ಬಜೆಟ್ ಆಫರ್: ಬೇರೆಲ್ಲೂ ಇಲ್ಲ ಈ ಮಾದರಿಯ ಆಫರ್...!
ಪಿಲಿಪ್ಸ್ ತನ್ನ ಫೋನಿಗೆ ಪಿಲಿಪ್ಸ್ X596 ಎಂದು ನಾಮಕರಣ ಮಾಡಿದೆ ಎನ್ನಲಾಗಿದೆ. ಇದು ಅಲ್ಯುಮಿನಿಯಮ್ ಬಾಡಿಯನ್ನು ಹೊಂದಿದೆ ಎನ್ನಲಾಗಿದೆ. ನೋಡಲು ಸುಂದರ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಸದ್ದು ಮಾಡುವ ಲಕ್ಷಣಗಳನ್ನು ಹೊಂದಿದೆ. ರೂ. 1000ದ ಅಸುಪಾಸಿನಲ್ಲಿ ದೊರೆಯಲಿದೆ.

5.5 ಇಂಚಿನ FHD ಡಿಸ್‌ಪ್ಲೇ:
ಪಿಲಿಪ್ಸ್ X596 ಫೋನಿನಲ್ಲಿ 5.5 ಇಂಚಿನ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಇದರಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 435 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:
ಪಿಲಿಪ್ಸ್ X596 ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದೆ. 4GB RAM ಮತ್ತು 32GB ಇಲ್ಲವೇ 64 GB ಇಂಟರ್ನಲ್ ಮೆಮೊರಿಯಲ್ಲಿ ಲಭ್ಯವಿದೆ ಎನ್ನಲಾಗಿದೆ.

16 MP ಕ್ಯಾಮೆರಾ:
ಇದಲ್ಲದೇ ಪಿಲಿಪ್ಸ್ X596 ಫೋನಿನ ಹಿಂಭಾಗ ಮತ್ತು ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ನಾವು ಕಾಣಬಹುದಾಗಿದೆ. ಅಲ್ಲದೇ ಹಿಂಭಾಗದಲ್ಲಿ LED ಫ್ಲಾಷ್ ಲೈಟ್ ಅನ್ನು ಸಹ ನೀಡಲಾಗಿದೆ.

4000mAh ಬ್ಯಾಟರಿ ಇದರಲ್ಲಿದೆ:
ಇನ್ನು ಪಿಲಿಪ್ಸ್ X596 ಫೋನಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ 4000mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಸಹ ಲಭ್ಯವಿದೆ. ಅಲ್ಲದೇ ಆಂಡ್ರಾಯ್ಡ್ ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆ.


Click it and Unblock the Notifications








