ವೊಡಾಫೋನ್ ಬಜೆಟ್ ಆಫರ್: ಬೇರೆಲ್ಲೂ ಇಲ್ಲ ಈ ಮಾದರಿಯ ಆಫರ್...!
ವೊಡಾಫೋನ್ ತನ್ನ ಬಳಕೆದಾರರಿಗೆ ಸೂಪರ್ ವೀಕ್ ಆಫರ್ ಘೋಷಣೆ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಕರೆ ಮಾಡುವ ಅವಕಾಶ ಮತ್ತು ಡೇಟಾ ಬಳಕೆ ಮಾಡಿಕೊಳ್ಳುವ ಕಾಂಬೋ ಆಫರ್ ನೀಡಲು ಮುಂದಾಗಿದೆ.
ವೊಡಾಪೋನ್ ಇಂಡಿಯಾ ಹೊಸದೊಂದು ಆಫರ್ ಅನ್ನು ನೀಡಲು ಮುಂದಾಗಿದೆ. ದೇಶದ ಎರಡನೇ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಇದಕ್ಕಾಗಿ ಹೊಸ ಮಾದರಿಯ ಆಫರ್ ತನ್ನ ಬಳಕೆದಾರರಿಗೆ ನೀಡಲಿದೆ.

ಓದಿರಿ: ವಿಮಾನದಲ್ಲಿ ಇನ್ನು ಮುಂದೆ ಲ್ಯಾಪ್‌ಟ್ಯಾಪ್ ಬ್ಯಾನ್!?
ವೊಡಾಫೋನ್ ತನ್ನ ಬಳಕೆದಾರರಿಗೆ ಸೂಪರ್ ವೀಕ್ ಆಫರ್ ಘೋಷಣೆ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಕರೆ ಮಾಡುವ ಅವಕಾಶ ಮತ್ತು ಡೇಟಾ ಬಳಕೆ ಮಾಡಿಕೊಳ್ಳುವ ಕಾಂಬೋ ಆಫರ್ ನೀಡಲು ಮುಂದಾಗಿದೆ.

ವೊಡಾಫೋನ್ ಸೂಪರ್ ವೀಕ್ ಆಫರ್:
ಇಲ್ಲಿ ವೊಡಾಫೋನ್ ಅನ್‌ಲಿಮಿಟೆಡ್ ಲೋಕಲ್ ಮತ್ತು STD ಕರೆಗಳನ್ನು ಮಾಡುವ ಅವಕಾಶವನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಅದುವೇ ರೂ.69ಕ್ಕೆ ಎನ್ನಲಾಗಿದೆ. ಇದು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ.

ಪ್ರಿಪೇಯ್ಡ್ ಗ್ರಾಹಕರಿಗೆ ಈ ಆಫರ್:
ಈ ವೊಡಾಫೋನ್ ಸೂಪರ್ ವೀಕ್ ಆಫರ್ ಕೇವಲ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರವೇ ದೊರೆಯುತ್ತಿದೆ ಎನ್ನಲಾಗಿದೆ. ಬೇರೆ ಟೆಲಿಕಾಂ ಕಂಪನಿಗಳು ಒಂದು ತಿಂಗಳ ಆಫರ್ ನೀಡುತ್ತಿದ್ದರೇ ಇದು ವಾರದ ಆಫರ್ ನೀಡಲು ಮುಂದಾಗಿದೆ.

ಪ್ರತಿ ವಾರ ಪಡೆದುಕೊಳ್ಳಬಹುದು:
ಈ ಆಫರ್ ಅನ್ನು ವೊಡಾಫೋನ್ ಬಳಕೆದಾರರು ಒಂದು ವಾರದ ಹಿಂದೆ ಮತ್ತೊಂದು ವಾರವು ಈ ಆಫರ್ ಅನ್ನು ಪಡೆದುಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ಬೇರೆಲ್ಲೂ ಆಫರ್ ಇಲ್ಲ:
ಈ ಆಫರ್ ಏರ್‌ಟೆಲ್, ಜಿಯೋ, BSNL ನಲ್ಲೂ ಈ ಮಾದರಿಯ ಆಫರ್ ಇಲ್ಲ ಎನ್ನಲಾಗಿದೆ. ಈ ಆಫರ್ ಅನ್ನು ಯಾವಗ ಬೇಕಾದರು ಬಳಕೆ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








