ಇಂದು Poco C61 ಫೋನಿನ ಫಸ್ಟ್ ಸೇಲ್: ಬೆಲೆ 5,999 ರೂ.. 50GB ಡೇಟಾ ಫ್ರೀ..!
ಶಿಯೋಮಿ (Xiaomi) ಕಂಪನಿಯ ಉಪ-ಬ್ರಾಂಡ್ ಪೊಕೊ (Poco) ಇತ್ತೀಚೆಗೆ ಸದ್ದಿಲ್ಲದೇ ಹೊಸ ಅಗ್ಗದ ಫೋನನ್ನು ಬಿಡುಗಡೆ ಮಾಡಿದೆ. Poco C61 ಹೆಸರಿನ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ಬೆಲೆ ಕೇವಲ 5,999 ರೂಪಾಯಿ. ಇದು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, ಗ್ರಾಹಕರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿದೆ. ಅಂದಹಾಗೆ, ಈ ಮೊಬೈಲ್ ಇಂದು (ಜುಲೈ 17) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನ್ ಖರೀದಿ ಮೇಲೆ ಭರ್ಜರಿ ಆಫರ್ ಮತ್ತು 50GB ಡೇಟಾವನ್ನು ಉಚಿತವಾಗಿ ನೀಡಲಾಗುತ್ತದೆ. ಈ ಫೋನಿನ ವಿಶೇಷತೆಗಳೇನು? ಎನ್ನುವುದನ್ನು ತಿಳಿಯೋಣ ಬನ್ನಿ.
ಪೊಕೊ ಸಿ61 ಸ್ಮಾರ್ಟ್‌ಫೋನ್ 6.71 ಇಂಚಿನ HD+ 90Hz ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ ಜಿ36 ಚಿಪ್‌ಸೆಟ್ ಅನ್ನು ಪಡೆದಿದೆ. 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಹೊಂದಿದೆ. ಇದು 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ವಾಸ್ತವವಾಗಿ ಏರ್‌ಟೆಲ್ ವಿಶೇಷ ಆವೃತ್ತಿಯಾಗಿದೆ. ಇದರೊಂದಿಗೆ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಸಂಪರ್ಕವೂ ಲಭ್ಯವಿರುತ್ತದೆ.

5,999 ರೂ.ಗೆ ಪೊಕೊ ಸಿ61 ಫೋನ್ ಖರೀದಿಸಿ
ಪೊಕೊ ಕಂಪನಿಯ ಪೊಕೊ ಸಿ61 ಸ್ಮಾರ್ಟ್‌ಫೋನ್ ಇಂದು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಮೊದಲ ಮಾರಾಟ ಶುರು ಮಾಡಲಿದೆ. ಪೊಕೊ ಸಿ61 ಏರ್‌ಟೆಲ್ ವಿಶೇಷ ಮೊಬೈಲ್ ಫೋನ್ ಅನ್ನು 5,999 ರೂ.ಗಳಲ್ಲಿ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ನೀವು ಎಥೆರಿಯಲ್ ಬ್ಲೂ, ಡೈಮಂಡ್ ಬಸ್ಟ್ ಬ್ಲಾಕ್ ಮತ್ತು ಮಿಸ್ಟಿಕಲ್ ಗ್ರೀನ್ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು.
ಮೊದಲ ದಿನವೇ ಬಂಪರ್ ಆಫರ್ ಲಭ್ಯ!
ಈ ಪೊಕೊ ಸಿ61 ಫೋನ್ ಏರ್‌ಟೆಲ್ ಪ್ರಿಪೇಯ್ಡ್ ಸಂಪರ್ಕದೊಂದಿಗೆ ಬರುತ್ತದೆ. ಇದು 18 ತಿಂಗಳವರೆಗೆ ಏರ್‌ಟೆಲ್ ಸಿಮ್ ಲಾಕ್ ಆಗಿರುತ್ತದೆ. ಈ ಅವಧಿಯಲ್ಲಿ ನೀವು ಮೊಬೈಲ್‌ನಲ್ಲಿ ಏರ್‌ಟೆಲ್ ಸಿಮ್ ಅನ್ನು ಮಾತ್ರ ಬಳಸಬೇಕಿದೆ. ಇನ್ನೂ ಕಂಪನಿಯು 50GB ಡೇಟಾವನ್ನು ಫ್ರೀಯಾಗಿ ನೀಡುತ್ತದೆ. ಏರ್‌ಟೆಲ್ ಬಳಕೆದಾರರಿಗೆ ಕಂಪನಿಯು 7.5% ಅಥವಾ 750 ರೂ. ವರೆಗೆ ಡಿಸ್ಕೌಂಟ್ ಅನ್ನು ನೀಡುತ್ತದೆ. ಈ ಪ್ರಯೋಜನವನ್ನು ಪಡೆಯಲು, ನೀವು ಪ್ರತಿ ತಿಂಗಳು ಕನಿಷ್ಠ 199 ರೂ. ಅಥವಾ ಅದಕ್ಕಿಂತ ಹೆಚ್ಚು ರೀಚಾರ್ಜ್ ಮಾಡಿಕೊಳ್ಳಬೇಕಿದೆ.
ಪೊಕೊ ಸಿ61 ಸ್ಮಾರ್ಟ್‌ಫೋನಿನ ವಿಶೇಷತೆಗಳು
ಪೊಕೊ ಸಿ61 ಸ್ಮಾರ್ಟ್‌ಫೋನ್ 6.71 ಇಂಚಿನ HD + ಡಿಸ್ಪ್ಲೇಯನ್ನು ಹೊಂದಿದೆ. ಇದು IPS LCD ಡಿಸ್ಲ್ಪೇ ಆಗಿದ್ದು, 1650x720 ಪಿಕ್ಸೆಲ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರವನ್ನು ಪಡೆದಿದೆ. ಇದು 500nits ಗರಿಷ್ಠ ಬ್ರೈಟ್‌ನೆಸ್ ಮತ್ತು ಗೊರಿಲ್ಲಾ ಗ್ಲಾಸ್ 3ನಿಂದ ರಕ್ಷಣೆಯನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ MediaTek Helio G36 ಚಿಪ್‌ಸೆಟ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ ಎಐ (AI) ತಂತ್ರಜ್ಞಾನದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪಡೆದಿದೆ. ಇದು 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿದೆ.
5,000mAh ಬ್ಯಾಟರಿ, 10W ಸ್ಫೀಡ್ ಚಾರ್ಜಿಂಗ್
ಈ ಫೋನಿನ ಬ್ಯಾಟರಿ ಬಗ್ಗೆ ನೋಡುವುದಾದರೆ, ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಚಾರ್ಜಿಂಗ್‌ಗಾಗಿ, ಇದು USB ಟೈಪ್-C ಪೋರ್ಟ್ ಮತ್ತು 10W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಭದ್ರತೆಗಾಗಿ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಆಡಿಯೋಗಾಗಿ 3.5mm ಹೆಡ್‌ಫೋನ್ ಜ್ಯಾಕ್, ಸ್ಪೀಕರ್, ಡ್ಯುಯಲ್ ಸಿಮ್ 4G, ಬ್ಲೂಟೂತ್ 5.3 ಮತ್ತು ಸಂಪರ್ಕಕ್ಕಾಗಿ Wi-Fi 5 ಅನ್ನು ಹೊಂದಿದೆ.


Click it and Unblock the Notifications








